
ಸ್ಥಳೀಯವಾಗಿ ಎಲ್ಲೇ ಕಾರ್ಯಕ್ರಮ ನಡೆದರೂ ಡ್ಯಾನ್ಸ್ ಕಾರ್ಯಕ್ರಮ ಕೊಡಲು ಹೋಗುತ್ತಿದ್ದ ನವ ವಿವಾಹಿತ ಯುವಕನನ್ನು ದ್ವೇಷದ ಹಿನ್ನೆಲೆಯಲ್ಲಿ ಎಳೆದೊಯ್ದ ಲೈಂಗಿಕ ಅಲ್ಪಸಂಖ್ಯಾತರು ಮಾದಕ ಪಾನೀಯ ಕುಡಿಸಿ ಅವನ ಖಾಸಗಿ ಅಂಗವನ್ನು ಕತ್ತರಿಸಿದ್ದಾರೆ.
ಈ ಘಟನೆ ಉತ್ತರ ಪ್ರದೇಶದ ರಾಂಪುರದಲ್ಲಿ ಭಯಾನಕವಾಗಿ ನಡೆದಿದೆ. ಇಲ್ಲಿನ ಪಟ್ವಾಯಿ ಪ್ರದೇಶದ ವಿವಾಹಿತ ಯುವಕ ಸ್ಥಳೀಯವಾಗಿ ನಡೆಯುವ ಕಾರ್ಯಕ್ರಮಗಳಲ್ಲಿ ಡ್ಯಾನ್ಸ್ ಪ್ರದರ್ಶನ ನೀಡುತ್ತಿದ್ದನು. ಆದರೆ, ಡ್ಯಾನ್ಸರ್‌ಗೆ ಪರಿಚಿತವಿದ್ದ ಐವರು ಲೈಂಗಿಕ ಅಲ್ಪಸಂಖ್ಯಾತರು ಆತನನ್ನು ಎಳೆದುಕೊಂಡು ಹೋಗಿ ಖಾಸಗಿ ಭಾಗ ಕತ್ತರಿಸಿದ್ದಾರೆ. ರಸ್ತೆಯಲ್ಲಿ ತೀವ್ರ ನರಳಾಡುತ್ತಿದ್ದ ಯುವಕನನ್ನು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ. ಈ ಘಟನೆಯ ಬೆನ್ನಲ್ಲಿಯೇ ಸಂತ್ರಸ್ತ ಯುವಕನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಅವರು ಪೊಲೀಸರನ್ನು ಒತ್ತಾಯಿಸಿದ್ದಾರೆ. ಈ ಪ್ರಕರಣ ಪೊಲೀಸರ ಗಮನಕ್ಕೆ ಬಂದಿದ್ದು, ತನಿಖೆ ನಡೆಸುತ್ತಿದ್ದಾರೆ.
ಸಂತ್ರಸ್ತ ಯುವಕನ ಹೇಳಿಕೆ:
ನಾನು ಬದಾಯೂಂನ ಬಿಸೌಲಿಗೆ ಒಂದು ಕಾರ್ಯಕ್ರಮಕ್ಕೆ ಹೋಗುತ್ತಿದ್ದೆ. ಈ ವೇಳೆ ಶಹಾಬಾದ್‌ನಲ್ಲಿ ಇಬ್ಬರು ಲೈಂಗಿಕ ಅಲ್ಪಸಂಖ್ಯಾತರು ನನ್ನನ್ನು ಭೇಟಿಯಾದರು. ಅವರ ಜೊತೆಗೆ ಇನ್ನೂ ಮೂರು ಜನರಿದ್ದರು. ಇವರೆಲ್ಲರೂ ನನಗೆ ಪರಿಚಿತರಾಗಿದ್ದರು. ಎಲ್ಲರೂ ಸುಖಾ ಸುಮ್ಮನೇ ನನ್ನ ಜೊತೆಗೆ ಜಗಳ ಮಾಡಿದರು. ನಂತರ ಬಲವಂತವಾಗಿ ಶಹಾಬಾದ್ ಪ್ರದೇಶದ ಒಂದು ಹಳ್ಳಿಗೆ ಕರೆದೊಯ್ದರು. ಅಲ್ಲಿ ಐವರು ಸೇರಿಕೊಂಡು ಕೋಲ್ಡ್ ಡ್ರಿಂಕ್ ಕುಡಿಸಿದ್ದಾರೆ. ಕೋಲ್ಡ್ ಡ್ರಿಂಕ್ ಕುಡಿದ ನಂತರ ಅವನ ಕಣ್ಣು ಮಂಜು ಮಂಜಾಗಿ ಪ್ರಜ್ಞೆ ತಪ್ಪಿ ಹೋಯಿತು. ಎಚ್ಚರವಾದಾಗ ನನಗೆ ಖಾಸಗಿ ಭಾಗದಲ್ಲಿ ನೋವು ಕಾಣಿಸಿಕೊಂಡಿತು. ಆಗ ಏನೆಂದು ನೋಡಿಕೊಂಡರೆ ನ್ನ ಖಾಸಗಿ ಅಂಗವನ್ನೇ ಕತ್ತರಿಸಲಾಗಿತ್ತು ಎಂದು ಆರೋಪ ಮಾಡಿದ್ದಾನೆ.
ಇದಾದ ನಂತರ ಸ್ಥಳೀಯರು ಆತನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ನಂತರ ಆತನಿಗೆ ಸಹಾಯ ಮಾಡಿದವರು ಈ ಘಟನೆಯನ್ನು ಸಂತ್ರಸ್ತನ ಕುಟುಂಬಸ್ಥರಿಗೆ ತಿಳಿಸಿದರು. ತಕ್ಷಣ ಕೆಲವು ಕುಟುಂಬಸ್ಥರು ಸ್ಥಳಕ್ಕೆ ಆಗಮಿಸಿ ಯುವಕನಿರುವ ಹತ್ತಿರದ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದರು. ಕುಟುಂಬಸ್ಥರು ಬಂದ ಕೂಡಲೇ ಯುವಕನಿಗೆ ಸ್ಥಳೀಯ ಆಸ್ಪತ್ರೆ ವೈದ್ಯರು ಪ್ರಥಮ ಚಿಕಿತ್ಸೆ ನೀಡಿ, ಉನ್ನತ ಆಸ್ಪತ್ರೆಗೆ ಕಳುಹಿಸಿದರು.
ಪೊಲೀಸ್ ಅಧಿಕಾರಿ ಹೇಳಿಕೆ
ಈ ಘಟನೆ ಕುರಿತು ಸ್ಥಳೀಯ ಪೊಲೀಸ್ ಠಾಣಾಧಿಕಾರಿ ಮಾತನಾಡಿ, ಯುವಕನಿಂದ ಇನ್ನೂ ಯಾವುದೇ ದೂರು ಬಂದಿಲ್ಲ ಎಂದು ತಿಳಿಸಿದ್ದಾರೆ. ಯುವಕನನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಪೊಲೀಸರು ಪ್ರಕರಣದ ತನಿಖೆ ನಡೆಸುತ್ತಿದ್ದಾರೆ. ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಾಹಿತಿ ನೀಡಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ