ಅಯೋಧ್ಯೆಯ ಅಭಿವೃದ್ಧಿ ಕಂಡು ಮೋದಿ-ಯೋಗಿಯನ್ನು ಹೊಗಳಿದ 19 ವರ್ಷದ ಪತ್ನಿಗೆ ತಲಾಖ್ ಕೊಟ್ಟ ಗಂಡ!

Published : Aug 24, 2024, 09:13 PM IST
ಅಯೋಧ್ಯೆಯ ಅಭಿವೃದ್ಧಿ ಕಂಡು ಮೋದಿ-ಯೋಗಿಯನ್ನು ಹೊಗಳಿದ 19 ವರ್ಷದ ಪತ್ನಿಗೆ ತಲಾಖ್ ಕೊಟ್ಟ ಗಂಡ!

ಸಾರಾಂಶ

ಮದುವೆಯಾಗಿ ಅಯೋಧ್ಯೆದಲ್ಲಿರುವ ಗಂಡನ ಮನೆಗೆ ಬಂದ ಮಹಿಳೆ, ಇಲ್ಲಿಯ ಅಭಿವೃದ್ಧಿ ಕೆಲಸಗಳನ್ನು ಕಂಡು ಮೆಚ್ಚಿಕೊಂಡಿದ್ದಾರೆ. ಇದನ್ನ ಗಂಡನ ಮುಂದೆ ಹೇಳಿದ್ದಕ್ಕೆ ಆತ ತಲಾಖ್ ನೀಡಿದ್ದಾನೆ.

ಲಕ್ನೋ: ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಅವರನ್ನು ಹೊಗಳಿದ್ದ 19 ವರ್ಷದ ಪತ್ನಿಗೆ ಗಂಡ ತಲಾಖ್ ನೀಡಿದ್ದಾನೆ. ಉತ್ತರ ಪ್ರದೇಶದ ಬಹ್ರೂಚ್ ಎಂಬಲ್ಲಿ ಈ ಘಟನೆ ನಡೆದಿದೆ. ಮಹಿಳೆ ಅಯೋಧ್ಯೆಯಲ್ಲಾದ ಅಭಿವೃದ್ಧಿ ಕೆಲಸಗಳ ಕುರಿತು ಪಿಎಂ ಮೋದಿ ಮತ್ತು ಸಿಎಂ ಮೋದಿಯವರನ್ನು ಹೊಗಳಿದ್ದರು. ಇದರಿಂದ ಕೋಪಗೊಂಡ ಪತಿ ತಲಾಖ್ ನೀಡಿದ್ದು, ಸಂತ್ರಸ್ತೆ ಗಂಡ ಹಾಗೂ ಆತನ ಕುಟುಂಬಸ್ಥರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. 

ಆಗಸ್ಟ್ 5ರಂದು ಮಹಿಳೆ ಹಾಗೂ ಆಕೆಯ ಗಂಡನ ಎರಡೂ ಕುಟುಂಬಗಳ ನಡುವೆ  ರಾಜಿ ಪಂಚಾಯ್ತಿ ನಡೆದಿತ್ತು. ಈ ರಾಜಿ ಪಂಚಾಯ್ತಿಯಲ್ಲಿ ಆರೋಪ -ಪ್ರತ್ಯಾರೋಪ ನಡೆದಿದೆ. ಈ ಸಭೆಯಲ್ಲಿಯೇ ತಲಾಖ್ ಮತ್ತು ಕೊಲೆ ಮಾಡುವ  ಬೆದರಿಕೆಯನ್ನು ಗಂಡ ಹಾಕಿದ್ದಾನೆ. ಅದೇ ದಿನ ಮಹಿಳೆ ಅಯೋಧ್ಯೆಯ ಠಾಣೆಗೆ ತೆರಳಿ ದೂರಿ ನೀಡಿದ್ದಾರೆ. ಪೊಲೀಸರು ಯಾವುದೇ ಪ್ರಕರಣ ದಾಖಲಿಸಿಕೊಂಡಿಲ್ಲ. ಅಯೋಧ್ಯೆ ಠಾಣೆಯ ಪೊಲೀಸರು ಯಾಕೆ ಪ್ರಕರಣ ದಾಖಲಿಸಿಕೊಂಡಿಲ್ಲ ಎಂಬುದರ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ ಎಂದು ಜವರಲ್ ರಸ್ತೆ ಠಾಣೆಯ ಎಸ್‌ಹೆಚ್‌ಓ ಬೃಜರಾಜ್ ಪ್ರಸಾದ್ ಮಾಹಿತಿ ನೀಡಿದ್ದಾರೆ. 

ಮಹಿಳೆಯ ತವರು ಮನೆ ಜವರಲ್ ರಸ್ತೆಯ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುತ್ತದೆ. ಹಾಗಾಗಿ ತವರಿಗೆ ಬಂದ ಬಳಿಕ ಗುರುವಾರ ಠಾಣೆಗೆ ಬಂದ ಮಹಿಳೆ, ಗಂಡ ಅರ್ಷದ್, ಮಾವ ಇಸ್ಲಾಂ, ಅತ್ತೆ ರೈಯಿಶಾ, ನಾದಿನಿ ಕುಲುಸುಮ್, ಮೈದುನ ಫರ್ಹಾನ್, ಓರಗಿತ್ತಿ ಸಿಮ್ರನ್ ಸೇರಿದಂತೆ ಎಂಟು ಜನರ ವಿರುದ್ಧ ವರದಕ್ಷಿಣೆ ಕಿರುಕುಳ ಸೇರಿದಂತೆ ಹಲವು ಆರೋಪಗಳನ್ನು ಮಾಡಿ ದೂರು ಸಲ್ಲಿಕೆ ಮಾಡಿದ್ದಾರೆ ಎಂದು ಬೃಜರಾಜ್ ಪ್ರಸಾದ್ ಹೇಳಿದ್ದಾರೆ. ಹಲ್ಲೆ, ದೌರ್ಜನ್ಯ, ಬೆದರಿಕೆ ಮತ್ತು ವರದಕ್ಷಿಣೆ ನಿಷೇಧ ಕಾಯ್ದೆ ಮತ್ತು ಮುಸ್ಲಿಂ ಮಹಿಳೆಯರ ವಿವಾಹ ಹಕ್ಕುಗಳ ಸಂರಕ್ಷಣಾ ಕಾಯ್ದೆಯಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಎಡವಿ ಬಿದ್ದವಳ ಅವಮಾನಿಸಿದ ಗಂಡ: ಮದುವೆಯಾದ ಮೂರೇ ನಿಮಿಷಕ್ಕೆ ತಲಾಖ್ ನೀಡಿದ ವಧು

ಈ ಘಟನೆ ಮಹಿಳೆ ಹೇಳಿಕೆಯ ವಿಡಿಯೋವೊಂದು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಈ ವಿಡಿಯೋದಲ್ಲಿ ಮಹಿಳೆಯ ಪ್ರಕಾರ, 13ನೇ ಡಿಸೆಂಬರ್ 2023ರಂದು ಅಯೋಧ್ಯೆಯ ನಿವಾಸಿಯಾಗಿರುವ ಇಸ್ಲಾಂ ಎಂಬವರ ಮಗ ಅರ್ಷದ್ ಜೊತೆ ಮಹಿಳೆಯೆ ಮದುವೆಯಾಗುತ್ತದೆ. ಎರಡೂ ಕುಟುಂಬಗಳ ಸಮ್ಮುಖದಲ್ಲಿಯೇ  ಮದುವೆ ನಡೆಯಿತು. ಮದುವೆ ಬಳಿಕ ಅಯೋಧ್ಯೆಗೆ ತೆರಳಿದ್ದಾಗ ಅಲ್ಲಿಯ ರಸ್ತೆಗಳು, ಲತಾ ಚೌಕ ಸೇರಿದಂತೆ ಅಲ್ಲಿಯ ಅಭಿವೃದ್ಧಿಯ ಕೆಲಸಗಳು ಮಹಿಳೆಗೆ ಇಷ್ಟವಾಗಿದೆ. ಹಾಗಾಗಿ ಪತಿ ಮುಂದೆ ಪ್ರಧಾನಿ ಮೋದಿ ಮತ್ತು ಸಿಎಂ ಯೋಗಿಯವರ ಕೆಲಸದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾಳೆ. ಆದರೆ ಇದಕ್ಕೆ ಪತಿ ಆಕ್ಷೇಪ ವ್ಯಕ್ತಪಡಿಸಿ ಪತ್ನಿಯನ್ನು ತವರಿಗೆ ಕಳುಹಿಸಿದ್ದಾನೆ. ನಂತರ ಪೋಷಕರು ತಿಳಿ ಹೇಳಿದ ಬಳಿಕ ಮಹಿಳೆ ಮತ್ತೆ ಗಂಡನ ಮನೆಗೆ ಬಂದಿದ್ದಾಳೆ. 

ಮನೆಗೆ ಬಂದ ಬಳಿಕ ಪತಿ, ನಿಮ್ಮೆಲ್ಲರ ಬುದ್ದಿ ಹಾಳಾಗಿದೆ. ಪೊಲೀಸ್ ಠಾಣೆ, ರಾಜಿ ಪಂಚಾಯ್ತಿ ತುಂಬಾ ಆಯ್ತು. ನೀವು ಎಷ್ಟೇ ಕಾನೂನೂಗಳನ್ನು  ತರಬಹುದು. ಆದ್ರೆ ನಾನು ನಿನಗೆ ತಲಾಖ್ ನೀಡುತ್ತೇನೆ ಎಂದು ಮೂರು ಬಾರಿ ಉಚ್ಚರಿಸಿದ್ದಾನೆ ಎಂದು ಮಹಿಳೆ ಹೇಳಿದ್ದಾರೆ. ಗಂಡ  ತನ್ನ ಮೇಲೆ  ಬಿಸಿ ಸಾಂಬರ್ ಎಸೆದ ಪರಿಣಾಮ ಮುಖವೆಲ್ಲಾ ಕೆಂಪಾಗಿದೆ ಎಂದು ಮಹಿಳೆ ಆರೋಪಿಸಿದ್ದಾರೆ.

ಭಾರತೀಯ ಪತ್ನಿಗೆ ಫೋನ್‌ನಲ್ಲೇ ತಲಾಖ್ ನೀಡಿ ಪಾಕಿಸ್ತಾನ ಮಹಿಳೆಯ ಮದುವೆಯಾದ ವ್ಯಕ್ತಿಯ ಬಂಧನ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ವಂದೇ ಮಾತರಂ ಚರ್ಚೆ ವೇಳೆ ಶಾ ವರ್ಸಸ್‌ ಖರ್ಗೆ
25 ಜನರು ಸಾವನ್ನಪ್ಪಿದ ಪಬ್‌ ಮಾಲೀಕರ ರೆಸಾರ್ಟ್‌ ಧ್ವಂಸ