ಮೇ 1ರಿಂದ ಜಾರಿಗೆ ಬರುವ ಹೊಸ ನಿಯಮಗಳು: ನಿಮ್ಮ ಜೇಬಿಗೆ ಪರಿಣಾಮ ಬೀರುತ್ತದೆಯೇ?

Published : May 01, 2025, 06:28 AM ISTUpdated : May 01, 2025, 06:29 AM IST
ಮೇ 1ರಿಂದ ಜಾರಿಗೆ ಬರುವ ಹೊಸ ನಿಯಮಗಳು: ನಿಮ್ಮ ಜೇಬಿಗೆ ಪರಿಣಾಮ ಬೀರುತ್ತದೆಯೇ?

ಸಾರಾಂಶ

 ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ ಆಗಲಿವೆ. ಇವುಗಳಲ್ಲಿ ಕೆಲವು ಜನರ ಜೇಬು ಸುಡಲಿವೆ. ಇನ್ನು ಕೆಲವು ನಿರ್ಧಾರ ಗ್ರಾಹಕರಿಗೆ ಅನುಕೂಲವಾಗಲಿವೆ. ಇವುಗಳ ಕಿರು ಮಾಹಿತಿ ಇಲ್ಲಿದೆ.

 ಮೇ 1ರಿಂದ ಆರ್ಥಿಕ ಹಾಗೂ ವಿವಿಧ ವಲಯಗಳಲ್ಲಿ ಹಲವು ಬದಲಾವಣೆ ಆಗಲಿವೆ. ಇವುಗಳಲ್ಲಿ ಕೆಲವು ಜನರ ಜೇಬು ಸುಡಲಿವೆ. ಇನ್ನು ಕೆಲವು ನಿರ್ಧಾರ ಗ್ರಾಹಕರಿಗೆ ಅನುಕೂಲವಾಗಲಿವೆ. ಇವುಗಳ ಕಿರು ಮಾಹಿತಿ ಇಲ್ಲಿದೆ.

ಬ್ಯಾಂಕ್‌ ಬಡ್ಡಿ ಇಳಿಕೆ, ಠೇವಣಿ ದರ ಏರಿಕೆ

ಆರ್‌ಬಿಐ ಇತ್ತೀಚೆಗೆ ರೆಪೋದರವನ್ನು ಶೇ.0.25 ಇಳಿಸಿತ್ತು. ಪರಿಣಾಮ ಬ್ಯಾಂಕ್‌ಗಳು ಸಾಲದ ಬಡ್ಡಿದರ ಮತ್ತು ಠೇವಣಿಗಳ ಮೇಲಿನ ಬಡ್ಡಿದರ ಕಡಿತ ಮಾಡಿವೆ. ಇದು ಮೇ.1ರಿಂದ ಜಾರಿಗೆ ಬರಲಿದೆ.

ರಾಜ್ಯದಲ್ಲಿ ವಾಣಿಜ್ಯ, ವಾಹನ ಬೆಲೆ ಏರಿಕೆ

10 ಲಕ್ಷ ರು. ಒಳಗಿನ ವಾಣಿಜ್ಯ ವಾಹನಗಳ ಮೇಲೆ ಕರ್ನಾಟಕ ಸರ್ಕಾರ ಶೇ.5ರ ಜೀವಿತಾವಧಿ ತೆರಿಗೆ ಹಾಕಿದೆ. 25 ಲಕ್ಷ ರು.ಗಿಂತ ಅಧಿಕ ಮೌಲ್ಯದ ಎಲೆಕ್ಟ್ರಿಕ್‌ ವಾಣಿಜ್ಯ ವಾಹನಕ್ಕೆ ಶೇ.10 ತೆರಿಗೆ ಇರಲಿದೆ.

ಇದನ್ನೂ ಓದಿ: ರೈಲ್ವೆ ಪ್ರಯಾಣಕ್ಕೆ ಹೊಸ ನಿಯಮಗಳು: ಮೇ 1ರಿಂದ ಭಾರೀ ಬದಲಾವಣೆ

ಎಟಿಎಂ ವಿತ್‌ಡ್ರಾ ಶುಲ್ಕದಲ್ಲಿ ಹೆಚ್ಚಳ

ಎಟಿಎಂಗಳಲ್ಲಿ ವಿತ್‌ ಡ್ರಾ ಮಿತಿ ಶುಲ್ಕ ಹೆಚ್ಚಿಸಿರುವ ನಿಯಮ ಮೇ 1ರಿಂದ ಜಾರಿಗೆ ಬರಲಿದೆ. ಉಚಿತ ಮಿತಿಯನ್ನು ಮೀರಿದ ನಂತರ ಪ್ರತಿ ವಹಿವಾಟಿಗೆ 2 ರು. ಹೆಚ್ಚಳದೊಂದಿಗೆ 23 ರು. ಶುಲ್ಕವಿಧಿಸಲಾಗುತ್ತದೆ.

ಒಂದು ರಾಜ್ಯ ಒಂದು ಪ್ರಾದೇಶಿಕ ಬ್ಯಾಂಕ್

ಮೇ 1ರಿಂದ ದೇಶಾದ್ಯಂತ 1 ರಾಜ್ಯ 1 ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ ನೀತಿ ಜಾರಿಗೆ ಬರಲಿದೆ. ಇದರಿಂದ, ಪ್ರಸ್ತುತ 43 ಇರುವ ಪ್ರಾದೇಶಿಕ ಗ್ರಾಮೀಣ ಬ್ಯಾಂಕ್‌ಗಳ ಸಂಖ್ಯೆ 28ಕ್ಕೆ ಇಳಿಕೆಯಾಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

Suvarna Special: ಸಂನ್ಯಾಸಿ ಸಿಂಹಾಸನ.. ಸಂಘ ಸಪ್ತಕೋಟಿ..! ಯೋಗಿ ಪಟ್ಟಕ್ಕೆ ಏಳು ಸುತ್ತಿನ ಕೋಟೆ ಕಟ್ಟುತ್ತಿದೆ RSS..!
ರಾಷ್ಟ್ರಪತಿಯೂ ಅಲ್ಲ, ಪ್ರಧಾನಿಯೂ ಅಲ್ಲ.. ಕಾರ್‌ನಿಂದ ಇಳಿದ ಬಳಿಕ ಪುಟಿನ್‌ ಶೇಕ್‌ಹ್ಯಾಂಡ್‌ ಮಾಡಿದ್ದು ಇವರಿಗೆ..