ಹೊಸ ನಿಯಮ, ಈ ಬ್ಯಾಂಕ್‌ನ ಕ್ರೆಡಿಟ್ ಕಾರ್ಡ್‌ ಬಳಕೆದಾರರಿಗೆ ಶಾಕಿಂಗ್ ನ್ಯೂಸ್

Published : Oct 31, 2026, 07:15 PM IST
Credit Card Loan

ಸಾರಾಂಶ

ಎಸ್‌ಬಿಐ ಕ್ರೆಡಿಟ್ ಕಾರ್ಡ್ ನಿಯಮಗಳು ಬದಲಾಗುತ್ತಿದ್ದು, 30 ಸಾವಿರಕ್ಕಿಂತ ಹೆಚ್ಚಿನ ಸಾರಿಗೆ ಮತ್ತು 50 ಸಾವಿರಕ್ಕಿಂತ ಹೆಚ್ಚಿನ ಇಂಧನ ವಹಿವಾಟುಗಳಿಗೆ ಶೇ.1ರಷ್ಟು ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ. ಈ ಹೊಸ ನಿಯಮವು ಡಿಸೆಂಬರ್ 1 ರಿಂದ ಜಾರಿಗೆ ಬರಲಿದ್ದು, ಗ್ರಾಹಕರು ತಮ್ಮ ಖರ್ಚುಗಳ ಮೇಲೆ ನಿಗಾ ಇಡುವುದು ಅಗತ್ಯವಾಗಿದೆ.

ನವದೆಹಲಿ: ನೀವೇನಾದರೂ ಎಸ್‌ಬಿಐ ಕ್ರೆಡಿಟ್ ಕಾರ್ಡ್ ಬಳಸುತ್ತಿದ್ದಿರಾ? ಹಾಗಿದ್ದರೆ ನಿಮಗೆ ಶಾಕಿಂಗ್ ನ್ಯೂಸ್ ಒಂದು ಕಾದಿದೆ. ಡಿಸೆಂಬರ್ 1, 2026 ರಿಂದ ನಿಯಮ ಬದಲಾಗುತ್ತಿದ್ದು, ನಿಮ್ಮ ಜೇಬಿಗೆ ಕತ್ತರಿ ಬೀಳೋದು ಪಕ್ಕಾ ಆಗಿದೆ. ವಿಷಯ ಏನು ಗೊತ್ತಾ?

ಏನಿದು ಹೊಸ ನಿಯಮ?

ಅಕ್ಟೋಬರ್ 27 ರಂದು ಎಸ್‌ಬಿಐ ಕಡೆಯಿಂದ ಸೂಚನೆಯೊಂದು ಹೊರಬಿದ್ದಿದೆ. ಎಸ್‌ಬಿಐ ಕಾರ್ಡ್‌ಗಳ ವೆಬ್‌ಸೈಟ್‌ನಲ್ಲಿ ನೀಡಲಾದ ಮಾಹಿತಿ ಪ್ರಕಾರ.. ಕೆಲವೊಂದು ಸಾರಿಗೆ ಮತ್ತು ಇಂಧನ ವಹಿವಾಟುಗಳಿಗೆ ಹೆಚ್ಚುವರಿ ಶುಲ್ಕ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ. ಅಂದರೆ.. ಪರಿಷ್ಕೃತ ಶುಲ್ಕವು ಒಂದೇ ಬಿಲ್‌ನಲ್ಲಿ 30 ಸಾವಿರಕ್ಕಿಂತ ಹೆಚ್ಚಿನ ಸಾರಿಗೆ ವಹಿವಾಟುಗಳಿಗೆ ಹಾಗೂ 50 ಸಾವಿರಕ್ಕಿಂತ ಹೆಚ್ಚಿನ ಒಟ್ಟು ಇಂಧನ ವೆಚ್ಚಗಳಿಗೆ ಅನ್ವಯಿಸುತ್ತದೆ.

ಎಸ್‌ಬಿಐ ಕಾರ್ಡ್‌ 30 ಸಾವಿರಕ್ಕಿಂತ ಹೆಚ್ಚಿನ ಪ್ರತಿಯೊಂದು ಅರ್ಹ ಸಾರಿಗೆ ವಹಿವಾಟಿಗೆ ಶೇಕಡಾ 1 ರಷ್ಟು ಶುಲ್ಕವನ್ನು ವಿಧಿಸಲಾಗುತ್ತದೆ. ಅಂದರೆ ಇದು ನಿರ್ದಿಷ್ಟ ಸಾರಿಗೆ ಸೇವೆಗಳಿಗೆ ಸಂಬಂಧಿಸಿದ್ದಾಗಿದೆ. ಉದಾಹರಣೆಗೆ ಕಾರ್ಡ್‌ದಾರರು ₹35,000 ಅರ್ಹ ಸಾರಿಗೆ ಪಾವತಿಯನ್ನು ಮಾಡಿದರೆ.. ಅವರು ₹350 ಹೆಚ್ಚುವರಿ ಶುಲ್ಕವನ್ನು ವಿಧಿಸುತ್ತಾರೆ. ₹50,000 ವಹಿವಾಟಿಗೆ ₹500 ಶುಲ್ಕ ವಿಧಿಸಲಾಗುತ್ತದೆ. ಇನ್ನು 30 ಸಾವಿರಕ್ಕಿಂತ ಕೆಳಗೆ ವಹಿವಾಟು ನಡೆಸಿದ್ರೆ ಯಾವುದೇ ಶುಲ್ಕವನ್ನು ವಿಧಿಸಲಾಗುವುದಿಲ್ಲ.

ಇಂಧನದ ಮೇಲೆ ಶುಲ್ಕ ಹೇಗೆ?

SBI ಕಾರ್ಡ್ ಬಳಕೆದಾರರು ಪ್ರತಿ ಬಿಲ್ಲಿಂಗ್ ಚಕ್ರದಲ್ಲಿ ತಮ್ಮ ಒಟ್ಟು ಇಂಧನ ವೆಚ್ಚವನ್ನು ಮೇಲ್ವಿಚಾರಣೆ ಮಾಡಬೇಕಾಗುತ್ತದೆ. ಅರ್ಹ ಇಂಧನ ವಹಿವಾಟುಗಳ ಒಟ್ಟು ಮೌಲ್ಯ ₹50,000 ಮೀರಿದರೆ.. ಆ ಬಿಲ್ಲಿಂಗ್ ಚಕ್ರಕ್ಕೆ ಒಟ್ಟು ಇಂಧನ ವೆಚ್ಚದ ಮೇಲೆ 1% ಶುಲ್ಕವನ್ನು ವಿಧಿಸಲಾಗುತ್ತದೆ. ಉದಾಹರಣೆಗೆ ಬಿಲ್ಲಿಂಗ್ ಸೈಕಲ್‌ನಲ್ಲಿ ಅರ್ಹ ಇಂಧನ ವಹಿವಾಟುಗಳ ಒಟ್ಟು ಮೊತ್ತವು 55 ಸಾವಿರ ರೂಪಾಯಿ ಆಗಿದ್ದರೆ.. ಶೇಕಡಾ 1 ರಷ್ಟು ಶುಲ್ಕ ವಿಧಿಸುತ್ತಾರೆ. ನೀವು 550 ರೂಪಾಯಿ ಹೆಚ್ಚುವರಿಯಾಗಿ ನೀಡಬೇಕಾಗುತ್ತದೆ. ಅದಕ್ಕಾಗಿ ನೀವು ನಿಮ್ಮ ಕ್ರೆಡಿಟ್ ಕಾರ್ಡ್ ಖರ್ಚು ವೆಚ್ಚದ ಬಗ್ಗೆ ಆಗಾಗ ಟ್ರಾಕ್ ಮಾಡುತ್ತಿರಬೇಕಾಗುತ್ತದೆ.

ಇದರಿಂದ ತಪ್ಪಿಸಿಕೊಳ್ಳಲು ಏನು ಮಾಡಬೇಕು?

ಎಸ್‌ಬಿಐ ಕಾರ್ಡ್‌ ಬಳಕೆದಾರರು ಈ ಎರಡು ಬಿಲ್‌ಗಳ ಬಗ್ಗೆ ನೀವು ಎಚ್ಚರದಿಂದ ಇರಬೇಕಾಗತ್ತದೆ. ನಿಮ್ಮ ಸಾರಿಗೆ ವೆಚ್ಚದ ವಹಿವಾಟು 30 ಸಾವಿರಕ್ಕಿಂತ ಹೆಚ್ಚು ದಾಟದಂತೆ ನೋಡಿಕೊಳ್ಳಬೇಕು. ಅಂದರೆ ಬಿಲ್ಲಿಂಗ್ ಸೈಕಲ್‌ನಲ್ಲಿ ಎಷ್ಟು ಮೊತ್ತ ಆಗಿದೆ ಎಂದು ಆಗಾಗ ನೀವು ಚೆಕ್ ಮಾಡುತ್ತಿರಬೇಕು. ಅದೇ ರೀತಿ ಇಂಧನ ವಹಿವಾಟಿನ ಮೇಲೂ ಶುಲ್ಕದ ಮೇಲೆ ನಿಗಾ ಇಟ್ಟಿರಬೇಕಾಗುತ್ತದೆ. ಸಣ್ಣಪುಟ್ಟ ಕಾರ್ಡ್ ಬಳಕೆದಾರರಿಗೆ ಯಾವುದೇ ಸಮಸ್ಯೆ ಆಗಲ್ಲ. ದೊಡ್ಡ ದೊಡ್ಡ ವ್ಯವಹಾರ ನಡೆಸೋರ ಮೇಲೆ ಶೇಕಡಾ 1 ರಷ್ಟು ಶುಲ್ಕ ಬೀಳಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಬೀದಿ ನಾಯಿಗಳ ಹಿಂಡಿನಿಂದ ಬಚಾವಾಗಲು 'ಸತ್ತಂತೆ' ನಟಿಸಿದ ಚಾಲಾಕಿ ನಾಯಿ! ಆಸ್ಕರ್ ಲೆವೆಲ್ ನಟನೆಗೆ ನೆಟ್ಟಿಗರು ಫಿದಾ
IMD: ಹವಾಮಾನ ಇಲಾಖೆಯ ಲೇಟೆಸ್ಟ್ ಅಲರ್ಟ್: ಏನಾಗಲಿದೆ ನವೆಂಬರ್‌ನಲ್ಲಿ?