ಜಾಹೀರಾತು ಡಿಸ್‌ಕ್ಲೇಮರ್‌ ಸ್ಪಷ್ಟವಾಗಿರಬೇಕು, ತಪ್ಪಿದ್ರೆ ಕ್ರಮ: ಕೇಂದ್ರ

Published : Sep 07, 2020, 10:24 AM IST
ಜಾಹೀರಾತು ಡಿಸ್‌ಕ್ಲೇಮರ್‌ ಸ್ಪಷ್ಟವಾಗಿರಬೇಕು, ತಪ್ಪಿದ್ರೆ ಕ್ರಮ: ಕೇಂದ್ರ

ಸಾರಾಂಶ

ಜಾಹೀರಾತು ಡಿಸ್‌ಕ್ಲೇಮರ್‌ ಸ್ಪಷ್ಟವಾಗಿರಬೇಕು: ಕೇಂದ್ರ| ಕಾಟಾಚಾರಕ್ಕೆ ಅಸ್ಪಷ್ಟರೂಪದಲ್ಲಿ ಇರಬಾರದು| ಸಾಮಾನ್ಯ ಗ್ರಾಹಕನಿಗೂ ಅರ್ಥವಾಗುವಂತಿರಬೇಕು| ಡಿಸ್‌ಕ್ಲೇಮರ್‌ ಸ್ಪಷ್ಟವಾಗಿ ಪ್ರದರ್ಶನವಾಗದಿದ್ದರೆ ಕ್ರಮ| ಕೇಂದ್ರ ಸರ್ಕಾರದಿಂದ ಕರಡು ನಿಯಮಾವಳಿ ಸಿದ್ಧ

ನವದೆಹಲಿ(ಸೆ.07): ಜಾಹೀರಾತಿನಲ್ಲಿ ಹಾಕುವ ‘ಡಿಸ್‌ಕ್ಲೇಮರ್‌’ಗಳು ಹಾಗೂ ‘ಷರತ್ತು’ಗಳು ಜಾಹೀರಾತಿನಲ್ಲಿ ಸ್ಪಷ್ಟವಾಗಿ ಪ್ರದರ್ಶನವಾಗಬೇಕು. ಸಾಮಾನ್ಯ ಗ್ರಾಹಕ ಕೂಡ ಅದನ್ನು ಅರ್ಥ ಮಾಡಿಕೊಳ್ಳುವಂತಿರಬೇಕು. ಇಲ್ಲದೇ ಹೋದರೆ ಆ ಜಾಹೀರಾತನ್ನು ಗ್ರಾಹಕರ ದಿಕ್ಕು ತಪ್ಪಿಸುವ ಜಾಹೀರಾತು ಎಂದು ಗ್ರಾಹಕ ರಕ್ಷಣಾ ಕಾಯ್ದೆಯಡಿ ಪರಿಗಣಿಸಬೇಕಾಗುತ್ತದೆ ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.

ಈ ಸಂಬಂಧ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯ ಕರಡು ನಿಯಮಗಳನ್ನು ಬಿಡುಗಡೆ ಮಾಡಿದ್ದು, ಸಾರ್ವಜನಿಕರು ಸೆಪ್ಟೆಂಬರ್‌ 18ರೊಳಗೆ ಇದರ ಬಗ್ಗೆ ಅಭಿಪ್ರಾಯಗಳನ್ನು ತಿಳಿಸಬಹುದಾಗಿದೆ.

ಜಾಹೀರಾತು ಪ್ರದರ್ಶನಗೊಳ್ಳುವಾಗ ಉತ್ಪನ್ನ ಕುರಿತಾದ ಅಕ್ಷರಗಳನ್ನು ಎಷ್ಟುದೊಡ್ಡ ಗಾತ್ರ ಹಾಕಲಾಗುತ್ತದೋ ಅಷ್ಟೇ ಗಾತ್ರದಲ್ಲಿ ಡಿಸ್‌ಕ್ಲೇಮರ್‌ಗಳನ್ನೂ ಪ್ರಕಟಿಸಬೇಕು. ಟೀವಿ ಜಾಹೀರಾತಿನಲ್ಲಿ ಡಿಸ್‌ಕ್ಲೇಮರ್‌ ವಾಯ್‌್ಸ ಓವರ್‌ (ಧ್ವನಿ) ರೂಪದಲ್ಲಿದ್ದರೆ, ಅದೇ ವೇಳೆ ಲಿಖಿತ ರೂಪದ ಡಿಸ್‌ಕ್ಲೇಮರ್‌ ಕೂಡ ಏಕಕಾಲಕ್ಕೆ ಪ್ರದರ್ಶನಗೊಳ್ಳಬೇಕು. ಡಿಸ್‌ಕ್ಲೇಮರ್‌ ನೋಡಲು ಹಾಗೂ ಕೇಳಲು ಸ್ಪಷ್ಟವಾಗಿರಬೇಕು ಎಂದು ತಿಳಿಸಲಾಗಿದೆ.

ಟೀವಿಯಲ್ಲಿ ಜಾಹೀರಾತು ಪ್ರದರ್ಶನಗೊಳ್ಳುವಾಗ ಕಾಟಾಚಾರಕ್ಕೆ, ಸಣ್ಣ ಅಕ್ಷರಗಳಲ್ಲಿ ಹಾಗೂ ಸರಿಯಾಗಿ ಕೇಳದಂತೆ ಡಿಸ್‌ಕ್ಲೇಮರ್‌ ಹಾಕಲಾಗುತ್ತದೆ. ಈ ಬಗ್ಗೆ ಗ್ರಾಹಕರಿಂದ ವ್ಯಾಪಕ ದೂರುಗಳು ಕೇಳಿಬಂದಿದ್ದವು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ
India Latest News Live: ಸಿನಿಮೀಯ ಶೈಲಿಯಲ್ಲಿ ಹಿಮಾಲಯದ ಮೈನಸ್ ತಾಪಮಾನದಲ್ಲಿ ಅಂತಾರಾಷ್ಟ್ರೀಯ ಮಹಿಳಾ ಸ್ಮಗ್ಲರ್‌ ಬಂಧನ