ರಾಜ್ಯದಲ್ಲಿ ಪತ್ತೆಯಾಯ್ತು ಹೊಸ ಕೊರೋನಾ, ಟೀಂ ಇಂಡಿಯಾ ಸೋಲಿಗೆ ಇದೆ ಕಾರಣ; ಅ.26ರ ಟಾಪ್ 10 ಸುದ್ದಿ!

By Suvarna NewsFirst Published Oct 26, 2021, 4:59 PM IST
Highlights

ಬ್ರಿಟನ್, ರಷ್ಯಾದಲ್ಲಿ ಪತ್ತೆಯಾಗಿರುವ AY 4.2 ವೈರಸ್  ಇದೀಗ ರಾಜ್ಯ ರಾಜಧಾನಿಯಲ್ಲಿ ಮೂವರಿಗೆ  ತಗುಲಿದ್ದು ಅಲರ್ಟ್ ನೀಡಲಾಗಿದೆ. ಸಮೀರ್ ವಾಂಖೆಡೆ ಮೇಲಿನ ಆರೋಪಗಳಿಗೆ ಪತ್ನಿ ಮದುವೆ ಫೋಟೋ ಶೇರ್ ಮಾಡಿದ್ದಾರೆ. ಸಾವಿರ ಕೋಟಿ ರೂಪಾಯಿ ಹಿಂದಿ ಸಿನಿಮಾ ಯಶ್ ರಿಜೆಕ್ಟ್ ಮಾಡಿದ್ದಾರೆ. ನವೆಂಬರ್‌ನಲ್ಲಿ 17 ದಿನ ಬ್ಯಾಂಕ್ ರಜೆ, ಟೀಂ ಇಂಡಿಯಾ ಸೋಲಿಗೆ ಕಾರಣ ಹೇಳಿದ ಇಂಜಮಾಮ್ ಸೇರಿದಂತೆ ಅಕ್ಟೋಬರ್ 26ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

ಭಾರತ ವಿರುದ್ಧ ಘೋಷಣೆ, ಪಾಕ್ ಗೆಲುವಿಗೆ ಸಂಭ್ರಮ; ಕಾಶ್ಮೀರ ವಿದ್ಯಾರ್ಥಿ, ರಾಜಸ್ಥಾನ ಶಿಕ್ಷಕಿ ಮೇಲೆ ಕೇಸ್!

ಭಾರತದಲ್ಲಿದ್ದುಕೊಂಡೆ ಪಾಕಿಸ್ತಾನ(Pakistan) ಪರ ಒಲವು ತೋರುತ್ತಿರುವ ಕೆಲವರು ಭಾರತ ವಿರುದ್ಧ ಪಾಕಿಸ್ತಾನ ಗೆಲವನ್ನು ಸಂಭ್ರಮಿಸಿದ್ದಾರೆ. ಇಷ್ಟೇ ಆಗಿದ್ದರೆ ಪರ್ವಾಗಿಲ್ಲ, ಭಾರತ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಹೀಗೆ ಕಾನೂನು ಬಾಹಿರ ಚಟುವಟಿಕೆ(UAPA)ಕಾಯ್ದಿಯಡಿ ವಿದ್ಯಾರ್ಥಿಗಳು, ವಾರ್ಡನ್ ಮೇಲೆ ಪ್ರಕರಣ ದಾಖಲಾಗಿದೆ.

ನವೆಂಬರ್‌ನಲ್ಲಿ 17 ದಿನ ಮುಚ್ಚಿರುತ್ತೆ ಬ್ಯಾಂಕ್: ಈ ದಿನಾಂಕ ನೋಟ್ ಮಾಡ್ಕೊಳ್ಳಿ!

 ನವೆಂಬರ್‌ ತಿಂಗಳಲ್ಲಿ ಒಂದಾದ ಬಳಿಕ ಮತ್ತೊಂದರಂತೆ ಸಾಲು ಸಾಲು ಹಬ್ಬಗಳಿವೆ. ಹೀಗಿರುವಾಗ ತುಂಬಾ ಅಗತ್ಯದ ಕೆಲಸದಿಂದ ಬ್ಯಾಂಕ್‌ಗೆ ತೆರಳಲು ಸಿದ್ಧತೆ ನಡೆಸಿರುವವರು ಸರ್ಕಾರಿ ಹಾಗೂ ಖಾಸಗಿ ರಜಾ ದಿನಗಳ ಬಗ್ಗೆ ತಪ್ಪದೇ ತಿಳಿದುಕೊಳ್ಳಿ. ಈ ಮೂಲಕ ಬ್ಯಾಂಕ್ ಕೆಲಸ ಯಾವುದೇ ಅಡೆ ತಡೆ ಇಲ್ಲದೇ ನಡೆಯಲಿದೆ.

ಮದುವೆ ಫೋಟೋ ಶೇರ್ ಮಾಡಿ ಸತ್ಯ ಬಹಿರಂಗಪಡಿಸಿದ ವಾಂಖೇಡೆ ಪತ್ನಿ, ಎಲ್ಲರ ಬಾಯಿಗೆ ಬೀಗ!

ಆರ್ಯನ್ ಖಾನ್ ಡ್ರಗ್ಸ್ ಪ್ರಕರಣದ ತನಿಖೆ ನಡೆಸುತ್ತಿರುವ ಮುಂಬೈ ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೇಡೆ ಸದ್ಯ ಸಂಕಷ್ಟಕ್ಕೆ ಸಿಲುಕಿದ್ದಾರೆ. ಎನ್‌ಸಿಪಿ ನಾಯಕ ಮತ್ತು ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರ ವಿರುದ್ಧ ವೈಯುಕ್ತಿಕ ದಾಳಿ ಮಾಡುವ ಮೂಲಕ ಅವರ ವಿರುದ್ಧ ಹಲವು ಗಂಭೀರ ಆರೋಪಗಳನ್ನು ಮಾಡಿದ್ದಾರೆ

ಪಾಕ್ ವಿರುದ್ದ ಭಾರತ ಸೋಲಿಗೆ ಕೊಹ್ಲಿ ಮಾಡಿದ ಒಂದು ತಪ್ಪು ಕಾರಣ ಎಂದ ಇಂಜಮಾಮ್!

T20 World Cup 2021 ಟೂರ್ನಿಯಲ್ಲಿ ಪಾಕಿಸ್ತಾನ ವಿರುದ್ಧ ಭಾರತದ(Team India) ಸೋಲನ್ನು ಮಾಜಿ ಕ್ರಿಕೆಟಿಗರು, ಕ್ರಿಕೆಟ್ ಪಂಡಿತರು ವಿಶ್ಲೇಷಣೆ ನಡೆಸುತ್ತಿದ್ದಾರೆ. ಇದುವರೆಗೆ ಐಸಿಸಿ ವಿಶ್ವಕಪ್ ಟೂರ್ನಿಗಳಲ್ಲಿ ಪಾಕಿಸ್ತಾನ(Pakistan) ವಿರುದ್ಧ ಸೋಲದ ಭಾರತ ಇದೇ ಮೊದಲ ಬಾರಿಗೆ ಸೋಲಿನ ಕಹಿ ಅನುಭವಿಸಿದೆ.

ನರಕ ಕೂಪವಾದ ಅಪ್ಘಾನಿಸ್ತಾನದಲ್ಲಿ ಎಲ್ಲೆಲ್ಲೂ ಸೂಸೈಡ್‌ ಬಾಂಬರ್ಸ್‌!

ಕಂಡ ಕಂಡಲ್ಲಿ ಎಕೆ 47 ಗುಡುಗು. ಗ್ರೆನೇಡ್‌ಗಳ ಆರ್ಭಟ. ಇದು ಅಪ್ಘಾನಿಸ್ತಾನದ ಪ್ರಸ್ತುತ ಚಿತ್ರಣ. ಇದನ್ನೇ ಅಸ್ತ್ರವಾಗಿಟ್ಟುಕೊಂಡು ತಾಲಿಬಾನ್‌ನಲ್ಲಿ ತಾಂಡವವಾಡುತ್ತಿದ್ದಾರೆ ನರರಕ್ಕಸರು.

ಸಾವಿರ ಕೋಟಿಯ ಹಿಂದಿ ಸಿನಿಮಾ ರಿಜೆಕ್ಟ್ ಮಾಡಿದ ಕನ್ನಡಿಗ ಯಶ್!

ಚಿತ್ರದ ಮೂಲಕ ಪ್ಯಾನ್ ಇಂಡಿಯಾ ನಟನಾಗಿ ಗುರುತಿಸಿಕೊಂಡಿರುವ ಕನ್ನಡಿಗ ಯಶ್‌ಗೆ (Yash) ಈಗ ಬಾಲಿವುಡ್ ನಿರ್ದೇಶಕರು ಮತ್ತು ನಿರ್ಮಾಪಕರು ನೂರಾರು ಕೋಟಿಯ ಬಜೆಟ್ ಚಿತ್ರಕಥೆ ಹಿಡಿದುಕೊಂಡು ಬರುತ್ತಿದ್ದಾರಂತೆ. ಕನ್ನಡಿಗರು ಕೊಟ್ಟ ಪ್ರೀತಿಯನ್ನು ತೀರಸ್ಕರಿಸಬಾರದು ಎಂದು ಯಶ್ ಹಿಂದಿ ಸಿನಿಮಾಗಳನ್ನು (Bollywood) ರೆಜೆಕ್ಟ್ ಮಾಡಿದ್ದಾರೆ. 

ರಾಜ್ಯ ರಾಜಧಾನಿಯಲ್ಲಿ ಮೂವರಿಗೆ AY 4.2 ವೈರಸ್, ಸೋಂಕಿತರ ಪತ್ತೆ ಕಾರ್ಯ ಆರಂಭ!

ಡೆಲ್ಟಾಗಿಂತ ವೇಗವಾಗಿ ಹರಡಬಲ್ಲ ಕೊರೋನಾ ರೂಪಾಂತರಿ AY 4.2 ಸದ್ಯ ಇಡೀ ವಿಶ್ವದ ನಿದ್ದೆಗೆಡಿಸಿದೆ. ಬ್ರಿಟನ್, ಯೂರಪ್, ರಷ್ಯಾ ಅಮೇರಿಕಾದಲ್ಲಿ ಕೊರೋನಾ ಏರಿಕೆಗೆ ಕಾರಣವಾಗಿರುವ AY 4.2 ಸದ್ಯ ರಾಜ್ಯಕ್ಕೂ ದಾಪುಗಾಲು ಇಟ್ಟಿದೆ. ಹೌದು ಉದ್ಯಾನನಗರಿ ಬೆಂಗಳೂರಿನಲ್ಲಿ ಮೂವರಲ್ಲಿ ಈ ಹೊಸ ಮಾದರಿಯ ಸೋಂಕು ಕಾಣಿಸಿಕೊಂಡಿದೆ.

ಅಮೆರಿಕ ಅಧ್ಯಕ್ಷೀಯ ಚುನಾವಣೆಗೆ ರಾಕ್ ಜಾನ್ಸನ್ ಸ್ಪರ್ಧೆ ?

ಹಾಲಿವುಡ್ ನಟ ಡ್ವೇನ್ ಜಾನ್ಸನ್ ಅವರು ತಮ್ಮ ರಾಜಕೀಯ ಆಕಾಂಕ್ಷೆಗಳನ್ನು ತೆರೆದಿಟ್ಟಿದ್ದಾರೆ. ಅವರು ಇನ್ನೂ ಅಧ್ಯಕ್ಷರಾಗಿ ಏಕೆ ಸ್ಪರ್ಧಿಸಿಲ್ಲ ಎಂಬುದನ್ನು ನಟ ರಿವೀಲ್ ಮಾಡಿದ್ದಾರೆ.

ರಷ್ಯಾ ನಿರ್ಮಿತ ಫೈಟರ್ ಜೆಟ್‌ಗೆ ಹೊಸ ರೂಪ ಕೊಟ್ಟ HAL: ಇದು ಸ್ವದೇಶೀ ಸುಖೋಯ್ ಕಥೆ!

ರಷ್ಯಾ ನಿರ್ಮಿತ ಫೈಟರ್ ಜೆಟ್‌ನ್ನು, ಭಾರತದ ಸರ್ಕಾರಿ ಸ್ವಾಮ್ಯದ ಹಿಂದೂಸ್ತಾನ್ ಏರೋನಾಟಿಕಲ್ ಲಿಮಿಟೆಡ್ (ಎಚ್ಎಎಲ್) ಅದನ್ನು ಹೇಗೆ ಜೋಡಿಸಿ ಮರುವಿನ್ಯಾಸಗೊಳಿಸಿತೆಂದರೆ, ಅದನ್ನೀಗ ಬಹುತೇಕ ಭಾರತದ ದೇಶೀಯ ಫೈಟರ್ ಜೆಟ್ ಎಂದೇ ಪರಿಗಣಿಸಲಾಗಿದೆ. ಇದು ಸುಖೋಯ್ ಅಥವಾ Su 30MKI ಕಥೆ ಇದೆ. 

click me!