
ಪುಣೆ (ಫೆ.20): ಕೊರೋನಾ ದ್ವಿತೀಯ ಅಲೆಯ ಆತಂಕಕ್ಕೆ ಒಳಗಾಗಿರುವ ಮಹಾರಾಷ್ಟ್ರದಿಂದ ಇನ್ನೊಂದು ಆತಂಕಕಾರಿ ಸಮಾಚಾರ ಹೊರಬಿದ್ದಿದೆ. ರಾಜ್ಯದ ಯವತ್ಮಾಳ್ ಹಾಗೂ ಅಮರಾವತಿ ಜಿಲ್ಲೆಗಳಲ್ಲಿ ಕೊರೋನಾದ 2 ಹೊಸ ರೂಪಾಂತರಿ ಪ್ರಭೇದಗಳು ಪತ್ತೆಯಾಗಿವೆ.
ಕೊರೋನಾ ಪ್ರತಿಕಾಯ ಶಕ್ತಿಗಳನ್ನೂ ಭೇದಿಸಿ ಹೋಗುವ ಸಾಮರ್ಥ್ಯ ಈ ಹೊಸ ತಳಿಗೆ ಇವೆ. ಇದು ಆತಂಕಕಾರಿ ವಿಷಯವಾಗಿದೆ.
ಕೊರೊನಾ ಹೋಯ್ತು ಅಂತ ಮೈಮರೆಯಬೇಡಿ, 2 ನೇ ಅಲೆ ಶುರುವಾಗಬಹುದು: ಸುಧಾಕರ್ ಎಚ್ಚರಿಕೆ ..
ಆದರೆ ಇವುಗಳ ಜೆನೆಟಿಕ್ ಸೀಕ್ವೆನ್ಸಿಂಗ್ ಮಾಡಿದಾಗ ಇವು ಬ್ರಿಟನ್, ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾದ ಥರದ ಹೊಸ ಕೊರೋನಾ ವೈರಸ್ ತಳಿಗಳಲ್ಲ ಎಂದು ತಜ್ಞರು ಸ್ಪಷ್ಟಪಡಿಸಿದ್ದಾರೆ.
ಎಲ್ಲಿ ಪತ್ತೆ?: ಅಮರಾವತಿ ಹಾಗೂ ಯವತ್ಮಾಳ್‌ಗಳಲ್ಲಿ ಇತ್ತೀಚೆಗೆ ಕೊರೋನಾ ಪ್ರಕರಣಗಳು ದಿಢೀರ್ ಹೆಚ್ಚಾಗಿವೆ. ಈ ಹಿನ್ನೆಲೆಯಲ್ಲಿ 24 ಸ್ಯಾಂಪಲ್‌ಗಳನ್ನು ತಪಾಸಣೆ ಮಾಡಲಾಯಿತು. ಇವುಗಳಲ್ಲಿ ಅಮರಾವತಿ, ಯವತ್ಮಾಳ್, ಸತಾರಾ ಜಿಲ್ಲೆಗಳಲ್ಲಿ ತಲಾ 4 ಹಾಗೂ ಪುಣೆಯಲ್ಲಿನ 12 ಸ್ಯಾಂಪಲ್‌ಗಳು ಸೇರಿದ್ದವು ಎಂದು ಪುಣೆ ಬಿಜೆ ಮೆಡಿಕಲ್ ಕಾಲೇಜಿನ ಮೈಕ್ರೋಬಯಾಲಜಿ ವಿಭಾಗದ ಮುಖ್ಯಸ್ಥ ಡಾ.ರಾಜೇಶ್ ಕಾರ್ಯಕರ್ತೆ ಹೇಳಿದ್ದಾರೆ.
ತಪಾಸಣೆ ಬಳಿಕ ಎಲ್ಲ ಸ್ಯಾಂಪಲ್‌ಗಳಲ್ಲಿ ಡಿ614ಜಿ ಎಂಬ ಸಾಮಾನ್ಯ ಕೊರೋನಾ ಪ್ರಭೇದ ಪತ್ತೆಯಾಗಿದೆ. ಆದರೆ ಅಮರಾವತಿಯಲ್ಲಿ ಇ484ಕೆ ಪ್ರಭೇದ ಪತ್ತೆಯಾಗಿದೆ. ಇದೂ ಕೂಡ ಸಾಮಾನ್ಯ ಪ್ರಭೇದ. ಆದರೂ, ಈ ಪ್ರಭೇದಕ್ಕೆ ಪ್ರತಿಕಾಯ ಶಕ್ತಿಗಳಲ್ಲೂ ಹಾದು ಹೋಗುವ ತಾಕತ್ತು ಇದೆ ಎಂಬ ಅಂಶ ದೃಢಪಟ್ಟಿದೆ.
‘ಯವತ್ಮಾಳ್‌ನಲ್ಲಿ ಎನ್440ಕೆ ಪ್ರಭೇದ ಸಿಕ್ಕಿದ್ದು, ಇದು ಆಂಧ್ರಪ್ರದೇಶದಲ್ಲಿನ ಸಾಮಾನ್ಯ ಪ್ರಭೇದ. ಆದರೂ ದಿಲ್ಲಿಯಲ್ಲಿ ಮರುಸೋಂಕು ಸೃಷ್ಟಿಸಿದ್ದು ಇದೇ ಪ್ರಭೇದವಾಗಿದ್ದು, ಇದರಿಂದ ಒಮ್ಮೆ ಗುಣಮುಖರಾದವರೂ ಪುನಃ ಸೋಂಕಿಗೆ ಒಳಗಾಗಬಹುದು ಎಂದು ಕಂಡುಬಂದಿದೆ’ ಎಂದು ಡಾ.ಕಾರ್ಯಕರ್ತೆ ಹೇಳಿದ್ದಾರೆ.
ಸತಾರಾದಲ್ಲಿ ವಿ911ಐ ಎಂಬ ಪ್ರಭೇದಗಳು ಲಭಿಸಿದೆ. ಆದರೆ ಈ ಕುರಿತು ಹೆಚ್ಚಿನ ವೈಜ್ಞಾನಿಕ ಮಾಹಿತಿ ಲಭ್ಯವಾಗಿಲ್ಲ ಎಂದು ಅವರು ಹೇಳಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ