ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಭಾರತೀಯ ಸೇನೆಗೆ ಒಂದರ ಮೇಲೊಂದರಂತೆ ಮಿಸೈಲ್, ಯುದ್ಧ ಶಸ್ತಾಸ್ತ್ರಗಳನ್ನು ಅಭಿವೃದ್ಧಿ ಪಡಿಸುತ್ತಿದೆ. ಇಷ್ಟೇ ಅಲ್ಲ ಯಶಸ್ವಿ ಪ್ರಯೋಗದ ಮೂಲಕ ಭಾರತೀಯ ಸೇನೆಗೆ ಸೇರ್ಪಡೆಗೊಳ್ಳುತ್ತಿದೆ. ಇದೀಗ ಯುದ್ಧ ಟ್ಯಾಂಕರ್ ಧ್ವಂಸಗೊಳಿಸಬಲ್ಲ ಮಿಸೈಲ್ ಯಶಸ್ವಿ ಪ್ರಯೋಗ ಮಾಡಲಾಗಿದೆ. ಈ ಕುರಿತ ವಿವರ ಇಲ್ಲಿದೆ.
ನವದೆಹಲಿ(ಫೆ.19): ಭಾರತೀಯ ಸೇನೆ ಇದೀಗ ಅತ್ಯಾಧುನಿಕ ಶಸ್ತ್ರಾಸ್ತ್ರಗಳು ಸೇರಿಕೊಂಡಿದೆ. ಫ್ರಾನ್ಸ್‌ನಿಂದ ರಾಫೆಲ್ ಯುದ್ಧ ವಿಮಾನ, ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(DRDO) ಅಭಿವೃದ್ಧಿ ಪಡಿಸಿದಿ ಮಿಸೈಲ್ ಸೇರಿದಂತೆ ಶಸ್ತಾಸ್ತ್ರಗಳು ಸೇನೆ ಸೇರಿಕೊಂಡಿದೆ. ಕಳೆದ ಕೆಲ ತಿಂಗಳುಗಳಿಂದ DRDO ದೇಶದ ರಕ್ಷಣಾ ವ್ಯವಸ್ಥೆಯಲ್ಲಿ ಮಹತ್ತರ ಬದಲಾವಣೆ ತಂದಿದೆ. ಇದೀಗ ಹೊಸ ಸೇರ್ಪಡೆ ಹೆಲಿನಾ ಮಿಸೈಲ್.
ಶತ್ರು ರಾಷ್ಟ್ರದಲ್ಲಿ ನಡುಕ: 2 ತಿಂಗಳಲ್ಲಿ ಭಾರತ ಯಶಸ್ವಿಯಾಗಿ ಪರೀಕ್ಷಿಸಿದ ಕ್ಷಿಪಣಿ ಲಿಸ್ಟ್!.
ಹೆಲಿನಾ ಆ್ಯಂಟಿ ಟ್ಯಾಂಕ್ ಮಿಸೈಲ್ ಪ್ರಯೋಗ ಯಶಸ್ವಿಯಾಗಿದೆ. ಹೆಲಿಕಾಪ್ಟರ್ ಮೂಲಕ ಆ್ಯಂಟಿ ಟ್ಯಾಂಕ್ ಮಿಸೈಲ್ ಪರಿಕ್ಷೆ ಮಾಡಲಾಗಿದ್ದು, ಡಿಆರ್‌ಡಿಒ ವಿಡಿಯೋವೊಂದು ಬಹಿರಂಗ ಮಾಡಿದೆ.
Helina Trial Video pic.twitter.com/06kHn21XNE
— DRDO (@DRDO_India)ಚಲಿಸುತ್ತಿರುವ ಗುರಿ ವಿರುದ್ಧ ಪ್ರಯೋಗ ಮಾಡಲಾಗಿದೆ. ಕ್ಷಿಪಣಿಯ ಸಾಮರ್ಥ್ಯಗಳನ್ನು ಕನಿಷ್ಠ ಮತ್ತು ಗರಿಷ್ಠ ವ್ಯಾಪ್ತಿಯಲ್ಲಿ ಮೌಲ್ಯಮಾಪನ ಮಾಡಲು ಐದು ಕಾರ್ಯಾಚರಣೆಗಳನ್ನು ನಡೆಸಲಾಯಿತು ಎಂದು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಹೇಳಿದೆ.
ಭಾರತೀಯ ವಾಯುಸೇನೆಗೆ ಮತ್ತಷ್ಟು ಬಲ: ರುದ್ರಂ ಆ್ಯಂಟಿ ರೇಡಿಯೇಶನ್ ಕ್ಷಿಪಣಿ ಪರೀಕ್ಷೆ ಯಶಸ್ವಿ!
ಅತ್ಯಾಧುನಿಕ ತಂತ್ರಜ್ಞಾನದ ಆ್ಯಂಟಿ ಟ್ಯಾಂಕ್ ಮಿಸೈಲ್ ಇದಾಗಿದ್ದು, ಇದು ಭಾರತೀಯ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲಿದೆ.