ಬಸವ ಜಯಂತಿ ಲಿಂಗಾಯಿತರಿಗೆ ಸೀಮಿತ, ರಂಜಾನ್ ಇಡೀ ದೇಶದ ಹಬ್ಬ, ಕಿರಣ್‌ ಮಜುಂದಾರ್‌ ವಿವಾದ!

By Kannadaprabha NewsFirst Published May 4, 2022, 4:15 AM IST
Highlights
  • ಕಿರಣ್‌ ಮಜುಂದಾರ್‌ ಶಾ ಟ್ವೀಟ್‌ ವಿವಾದ
  • ಬಸವಣ್ಣನನ್ನು ಲಿಂಗಾಯತರಿಗೆ ಸೀಮಿತಗೊಳಿಸಿ ಟ್ವೀಟ್‌
  • ರಂಜಾನ್‌ ಇಡೀ ದೇಶ ಆಚರಿಸುತ್ತದೆ ಎಂದು ಹೇಳಿಕೆ

ಬೆಂಗಳೂರು(ಮೇ.04): ಬಸವ ಜಯಂತಿ’ಯನ್ನು ಲಿಂಗಾಯತ ಸಮುದಾಯಕ್ಕೆ ಸೀಮಿತಗೊಳಿಸಿ ಹಾಗೂ ಮುಸ್ಲಿಮರ ಪವಿತ್ರ ಹಬ್ಬ ‘ರಂಜಾನ್‌’ ಅನ್ನು ಇಡೀ ದೇಶ ಆಚರಿಸುತ್ತದೆ ಎಂದು ಶುಭ ಕೋರಿದ ಬಯೋಕಾನ್‌ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ವಿರುದ್ಧ ಸಾಮಾಜಿಕ ಜಾಲತಾಣದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ.

ಕಿರಣ್‌ ಮಜುಂದಾರ್‌ ಶಾ ಅವರು ಬಸವ ಜಯಂತಿ ಹಾಗೂ ರಂಜಾನ್‌ ಹಬ್ಬಕ್ಕೆ ಮಂಗಳವಾರ ಶುಭ ಕೋರಿ ಎರಡು ಪ್ರತ್ಯೇಕ ಟ್ವೀಟ್‌ ಮಾಡಿದ್ದಾರೆ. ಮೊದಲ ಟ್ವೀಟ್‌ನಲ್ಲಿ ‘ಇಂದು ಬಸವ ಜಯಂತಿಯನ್ನು ಆಚರಿಸುತ್ತಿರುವ ಲಿಂಗಾಯತ ಸಮುದಾಯಕ್ಕೆ ನನ್ನ ಶುಭಾಶಯಗಳು’ ಎಂದು ತಿಳಿಸಿದ್ದಾರೆ. ಮತ್ತೊಂದು ಟ್ವೀಟ್‌ನಲ್ಲಿ ‘ಭಾರತ ಇಂದು ಈದ್‌ ಉಲ್‌ ಫಿತರ್‌ ಆಚರಿಸುತ್ತಿದೆ- ಈ ಮಂಗಳಕರ ದಿನದ ಆಚರಣೆಗೆ ನನ್ನ ಶುಭಾಶಯಗಳು’ ಎಂದು ಹೇಳಿದ್ದಾರೆ.

Halal Row: 'ಕೋಮು ತಿಕ್ಕಾಟ ನಿಲ್ಲಿಸಿ, ಐಟಿ ಬಿಟಿಗೆ ಬಂದ್ರೆ ಕಷ್ಟ'

ಕಿರಣ್‌ ಮಜುಂದಾರ್‌ ಶಾ ಅವರ ಈ ಎರಡೂ ಟ್ವೀಟ್‌ಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆಗಳು ವ್ಯಕ್ತವಾಗಿವೆ. ಕೆಲವರು ಬಸವ ಜಯಂತಿಯನ್ನು ಲಿಂಗಾಯತ ಸಮುದಾಯಕ್ಕೆ ಏಕೆ ಸೀಮಿತಗೊಳಿಸಿದ್ದೀರಿ ಎಂದು ಪ್ರಶ್ನಿಸಿದ್ದಾರೆ. ಇನ್ನು ಕೆಲವರು ಸಾಮಾಜಿಕ ಸುಧಾರಣೆಯ ಹರಿಕಾರ ಬಸವಣ್ಣನವರ ಜನ್ಮದಿನವನ್ನು ಬಸವ ಜಯಂತಿಯಾಗಿ ಆಚರಿಸಲಾಗುತ್ತದೆ. ಇದು ಇಡೀ ಕನ್ನಡಿಗರ ಹಬ್ಬ. ಯಾವುದೇ ಒಂದು ಸಮುದಾಯ, ಧರ್ಮಕ್ಕೆ ಸೀಮಿತವಲ್ಲ. ಬಸವಣ್ಣ ಎಲ್ಲ ವರ್ಗಗಳ ಉದ್ಧಾರಕರು. ಜಾತಿ ನಿರ್ಮೂಲನೆಯೇ ಅವರ ಧ್ಯೇಯ ಎಂದು ವಿವರಿಸಿ ತಮ್ಮ ಟ್ವೀಟ್‌ ಡಿಲೀಟ್‌ ಮಾಡುವಂತೆ ಸಲಹೆ ನೀಡಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಕಿರಣ್‌ ಮಜುಂದಾರ್‌ ಶಾ ತಮ್ಮ ಟ್ವೀಟ್‌ ಸಮರ್ಥಿಸಿಕೊಂಡಿದ್ದಾರೆ. ನೀವು ಹೇಳುತ್ತಿರುವುದು ನಿಜ ಆದರೆ, ಬಸವಣ್ಣ ಲಿಂಗಾಯತ ಸಮುದಾಯದ ಸಂಸ್ಥಾಪಕ. ಪ್ರತಿಯೊಬ್ಬ ಧಾರ್ಮಿಕ ಗುರುವೂ ಸಮಾಜದ ಎಲ್ಲಾ ಪಂಗಡಗಳಿಂದೂ ಗೌರವಿಸಲ್ಪಡುತ್ತಾರೆ. ಆದರೆ, ನಾವು ಆ ಗುರುವಿನ ಮೂಲವನ್ನು ಗೌರವವಿಸಲೇಬೇಕು ಎಂದು ಹೇಳಿದ್ದಾರೆ.

ಹಾಗೆಯೇ ರಂಜಾನ್‌ ಹಬ್ಬದ ಕುರಿತ ಅವರ ಟ್ವೀಟ್‌ಗೆ, ರಂಜಾನ್‌ ಮುಸ್ಲಿಮರು ಮಾತ್ರ ಆಚರಿಸುವ ಹಬ್ಬ. ಇಡೀ ದೇಶದ ಎಲ್ಲ ಜನರೂ ಆಚರಿಸುವುದಿಲ್ಲ. ಹಿಂದೂಗಳು ಇಂದು ಅಕ್ಷಯ ತೃತೀಯ ಮತ್ತು ಬಸವ ಜಯಂತಿ ಆಚರಿಸುತ್ತಿದ್ದಾರೆ ಎಂದು ಕೆಲವರು ತಿಳಿಸಿದ್ದಾರೆ. ಆದರೆ, ಇದಕ್ಕೆ ಕಿರಣ್‌ ಮಜುಂದಾರ್‌ ಶಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇ-ಸಿಗರೇಟ್ ಬ್ಯಾನ್ ಘೋಷಣೆ ನಿಮ್ಮಿಂದೇಕೆ?: ಕಿರಣ್ ಬೆರಗಾದರು ನಿರ್ಮಲಾ ಉತ್ತರಕ್ಕೆ!

ಕಿರಣ್‌ ಮಜುಂದಾರ್‌ ವಿರುದ್ಧ ಬಿಜೆಪಿ ಆಕ್ರೋಶ
ಕರ್ನಾಟಕದಲ್ಲಿ ಧರ್ಮಾಧರಿತ ವಿಭಜನೆ ಬೆಳೆಯದಂತೆ ತಡೆಯಬೇಕು. ಇಂಥ ಬೆಳವಣಿಗೆ ಆರ್ಥಿಕ ಅಭಿವೃದ್ಧಿಗೆ ಅಡ್ಡಿಯಾಗುವುದನ್ನು ನನಗೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಸರ್ಕಾರಕ್ಕೆ ಪರೋಕ್ಷವಾಗಿ ಎಚ್ಚರಿಕೆ ಸಂದೇಶ ರವಾನಿಸಿದ್ದ ಬಯೋಕಾನ್‌ ಸಂಸ್ಥೆ ಮುಖ್ಯಸ್ಥೆ ಕಿರಣ್‌ ಮಜುಂದಾರ್‌ ಶಾ ವಿರುದ್ಧ ಬಿಜೆಪಿ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಬಯೋಕಾನ್‌ ಮುಖ್ಯಸ್ಥರು ರಾಜಕೀಯ ತಾರತಮ್ಯ ಮಾಡುತ್ತಿದ್ದಾರೆ. ಈ ಹಿಂದೆ ಅಲ್ಪಸಂಖ್ಯಾತರ ಗುಂಪು ಶಿಕ್ಷಣಕ್ಕಿಂತ ತಮಗೆ ಹಿಜಾಬೇ ಮುಖ್ಯ ಎಂದಾಗ ಅಥವಾ ಹಿಂದು ಸಂಸ್ಥೆಗಳಿಂದ ಹಿಂದುಯೇತರರನ್ನು ಹೊರಗಿರಿಸಲು ಕಾಂಗ್ರೆಸ್‌ ಪಕ್ಷ ನಿಯಮ ರೂಪಿಸಿದ್ದಾಗ ಅವರು ಮಾತನಾಡಿದ್ದರಾ? ಎಂದು ಪಕ್ಷ ಪ್ರಶ್ನಿಸಿದೆ.

ಇನ್ನು ನೇರವಾಗಿ ತಮ್ಮನ್ನು ಉದ್ದೇಶಿಸಿಯೇ ಟ್ವೀಟ್‌ ಮಾಡಿದ್ದ ಕಿರಣ್‌ ಮಂಜುದಾರ್‌ ಅವರಿಗೆ ಅಲ್ಲೇ ತೀಕ್ಷ$್ಣ ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ‘ಕರ್ನಾಟಕ ಶಾಂತಿ ಹಾಗೂ ಪ್ರಗತಿಗೆ ಹೆಸರಾದ ರಾಜ್ಯ. ಅದನ್ನು ಕಾಪಾಡಿಕೊಳ್ಳಲು ಪ್ರತಿಯೊಬ್ಬರ ಸಹಕಾರ ಕೋರುತ್ತೇನೆ. ಸಾಮಾಜಿಕ ವಿಷಯಗಳ ಬಗ್ಗೆ ಬಹಿರಂಗವಾಗಿ ಚರ್ಚೆ ಮಾಡುವ ಮುನ್ನ ತಾಳ್ಮೆ ವಹಿಸಿ, ಮಾತುಕತೆ ಮೂಲಕ ಎಲ್ಲವನ್ನೂ ಬಗೆಹರಿಸಿಕೊಳ್ಳಬಹುದು’ ಎಂದು ಹೇಳಿದ್ದಾರೆ.

click me!