NEET Paper scam: ಮಗನಿಗಾಗಿ ₹10 ಲಕ್ಷ ಕೊಟ್ಟುತಂದೆ ನೀಟ್‌ ಖರೀದಿ: ಮಗಪಡೆದದ್ದು ಬರೀ 107 ಅಂಕ!

Kannadaprabha News   | Kannada Prabha
Published : May 17, 2026, 05:05 AM IST
Father Pays Rs 10 Lakh to Buy NEET Paper for Son; Student Scores Only 107 Marks

ಸಾರಾಂಶ

Sikar man buys NEET paper for son ನೀಟ್ ಪರೀಕ್ಷೆಯಲ್ಲಿ ಮಗನಿಗೆ ಹೆಚ್ಚು ಅಂಕ ಬರಲೆಂದು ತಂದೆಯೊಬ್ಬ 10 ಲಕ್ಷ ರೂ. ಕೊಟ್ಟು ಪ್ರಶ್ನೆಪತ್ರಿಕೆ ಖರೀದಿಸಿದ್ದಾನೆ. ಆದರೆ, ಮಗ ಪರೀಕ್ಷೆಯಲ್ಲಿ 720ಕ್ಕೆ ಕೇವಲ 107 ಅಂಕ ಪಡೆದಿದ್ದು, ಈ ಅಕ್ರಮ ಸಂಬಂಧ ಸಿಬಿಐ ತಂದೆ ಸೇರಿದಂತೆ ಮೂವರನ್ನು ಬಂಧಿಸಿದೆ.

-ಅಕ್ರಮ ನಡೆಸಿದ್ದ ತಂದೆ ಸೇರಿ ಮೂವರ ಸೆರೆ । ಮಗನಿಗೆ ಹುಡುಕಾಟ

ಸೀಕರ್‌: ಇತ್ತೀಚೆಗೆ ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ, ತಂದೆಯೊಬ್ಬ ತನ್ನ ಮಗ ಒಳ್ಳೆಯ ಅಂಕ ಪಡೆಯಲಿ ಎಂಬ ಉದ್ದೇಶದಿಂದ 10 ಲಕ್ಷ ರು. ಕೊಟ್ಟು ಪ್ರಶ್ನೆಪತ್ರಿಕೆ ಖರೀದಿಸಿದ್ದ. ಆದಾಗ್ಯೂ ಆತನ ಮಗ ಪಡೆದಿದ್ದು 720 ಅಂಕಗಳಿಗೆ ಕೇವಲ 107 ಅಂಕಗಳು ಎಂಬ ಅಚ್ಚರಿಯ ಮಾಹಿತಿ ಬೆಳಕಿಗೆ ಬಂದಿದೆ.

ಪ್ರಕರಣದ ಬೆನ್ನು ಹತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ), ರಾಜಸ್ಥಾನದ ಸೀಕರ್‌ ಜಿಲ್ಲೆಯಲ್ಲಿ ಒಂದೇ ಕುಟುಂಬದ ಮೂವರನ್ನು ಬಂಧಿಸಿದೆ. ದಿನೇಶ್‌ ಬಿವಾಲ್‌, ಮಂಗಿಲಾಲ್‌ ಬಿವಾಲ್‌ ಎಂಬ ಸಹೋದರರು ಹಾಗೂ ಮಂಗಿಲಾಲ್‌ನ ಹಿರಿಯ ಮಗ ವಿಕಾಸ್‌ನನ್ನು ಬಂಧಿಸಲಾಗಿದೆ. ದಿನೇಶ್‌ನ ಮಗ ರಿಷಿಗಾಗಿ ಹುಡುಕಾಟ ನಡೆದಿದೆ.

ಈತನಿಗಾಗಿಯೇ ತಂದೆ ದಿನೇಶ್‌ 10 ಲಕ್ಷ ರು. ಕೊಟ್ಟು ನೀಟ್‌ ಪ್ರಶ್ನೆಪತ್ರಿಕೆ ಖರೀದಿಸಿದ್ದ. ಆದರೂ ರಿಷಿ ಪರೀಕ್ಷೆಯಲ್ಲಿ 720 ಅಂಕಗಳಲ್ಲಿ ಕೇವಲ 107 ಅಂಕಗಳನ್ನು ಪಡೆದಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ. ಅಕ್ರಮ ನಡೆಸಿದ್ದನ್ನು ದಿನೇಶ್‌ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

PM Modi warning on global crises: ಮೊದಲು ಕೊರೋನಾ ಬಂತು, ಬಳಿಕ ಯುದ್ಧ, ಈಗ ಇಂಧನ ಬಿಕ್ಕಟ್ಟು! ಮತ್ತೆ ಬಡತನ ಬರುತ್ತೆ ಹುಷಾರ್‌: ಮೋದಿ ಎಚ್ಚರಿಕೆ
Photos: ಪ್ರಧಾನಿ ಮೋದಿಗೆ ಚೋಳರ ಕಾಲದ ತಾಮ್ರ ಫಲಕ ಹಸ್ತಾಂತರಿಸಿದ ನೆದರ್ಲೆಂಡ್ಸ್‌! ಅವರ ಕೈಗೆ ಸಿಕ್ಕಿದ್ದು ಹೇಗೆ?