ಭಾರತವಲ್ಲದೇ 12 ವಿದೇಶಗಳಲ್ಲೂ ಈ ವರ್ಷ ನೀಟ್‌ ಪರೀಕ್ಷೆ ಆಯೋಜನೆ: ಎನ್‌ಟಿಎ

By Kannadaprabha News  |  First Published Feb 22, 2024, 9:59 AM IST

 ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕಲ್ಪಿಸಲು ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಯನ್ನು ಇದೇ ಮೊದಲ ಬಾರಿಗೆ ವಿದೇಶಗಳಲ್ಲೂ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(ಎನ್‌ಟಿಎ) ತಿಳಿಸಿದೆ.


ನವದೆಹಲಿ: ದೇಶಾದ್ಯಂತ ವೈದ್ಯಕೀಯ ಕಾಲೇಜುಗಳಿಗೆ ಪ್ರವೇಶ ಕಲ್ಪಿಸಲು ನಡೆಸುವ ರಾಷ್ಟ್ರೀಯ ಅರ್ಹತಾ ಪ್ರವೇಶ ಪರೀಕ್ಷೆ (ನೀಟ್‌) ಯನ್ನು ಇದೇ ಮೊದಲ ಬಾರಿಗೆ ವಿದೇಶಗಳಲ್ಲೂ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ(ಎನ್‌ಟಿಎ) ತಿಳಿಸಿದೆ.

ಮೇ.5ರಂದು ನಡೆಯುವ ಪರೀಕ್ಷೆಗೆ ಅಧಿಸೂಚನೆ ಹೊರಡಿಸಿದ ನಂತರ ವಿದೇಶಗಳಲ್ಲೂ ಪರೀಕ್ಷಾ ಕೇಂದ್ರಗಳನ್ನು ತೆರೆಯುವಂತೆ ಬೇಡಿಕೆ ಬಂದ ಹಿನ್ನೆಲೆಯಲ್ಲಿ 12 ರಾಷ್ಟ್ರಗಳ 14 ನಗರಗಳಲ್ಲಿ ಪರೀಕ್ಷಾ ಕೇಂದ್ರ ತೆರೆಯಲು ತೀರ್ಮಾನಿಸಲಾಗಿದೆ’ ಎಂದು ಪ್ರಕಟಿಸಿದೆ. ದುಬೈ, ಅಬುಧಾಬಿ, ಶಾರ್ಜಾ, ಕುವೈತ್‌, ಬ್ಯಾಂಕಾಕ್‌, ಕೊಲಂಬೋ, ಕಾಠ್ಮಂಡು, ದೋಹಾ, ಕೌಲಾಲಂಪುರ, ಲಾಗೋಸ್‌, ಮನಾಮಾ, ಮಸ್ಕತ್‌, ರಿಯಾದ್‌, ಸಿಂಗಾಪುರ ನಗರಗಳಲ್ಲಿ ಪರೀಕ್ಷೆ ನಡೆಯಲಿದೆ.

Tap to resize

Latest Videos

undefined

ರೈತರಿಗೆ ಕೇಂದ್ರದ ಸಿಹಿ ಸುದ್ದಿ: ಕಬ್ಬು ಖರೀದಿ ದರ ಕ್ವಿಂಟಲ್‌ಗೆ 340ಕ್ಕೇರಿಕೆ

ದೆಹಲಿ ಅಬಕಾರಿ ಕೇಸ್‌: ಕೆಸಿಆರ್‌ ಪುತ್ರಿ ಕವಿತಾಗೆ ಸಿಬಿಐ ಸಮನ್ಸ್‌ ಜಾರಿ

ನವದೆಹಲಿ: ದೆಹಲಿಯ ಹಿಂದಿನ ಅಬಕಾರಿ ನೀತಿ ಹಗರಣದ ತನಿಖೆಗಾಗಿ ವಿಚಾರಣೆ ಹಾಜರಾಗುವಂತೆ ತೆಲಂಗಾಣದ ಮಾಜಿ ಮುಖ್ಯಮಂತ್ರಿ ಕೆ.ಚಂದ್ರಶೇಖರ್ ರಾವ್‌ ಅವರ ಪುತ್ರಿ ಹಾಗೂ ಶಾಸಕಿ ಕೆ. ಕವಿತಾ ಅವರಿಗೆ ಸಿಬಿಐ ಸಮನ್ಸ್‌ ಜಾರಿ ಮಾಡಿದೆ. ಫೆ.26ನೇ ತಾರೀಖಿನಂದು ದೆಹಲಿಯಲ್ಲಿರುವ ಸಿಬಿಐ ಕಚೇರಿಗೆ ಹಾಜರಾಗುವಂತೆ ಕವಿತಾ ಅವರಿಗೆ ಬುಧವಾರ ಸೂಚಿಸಲಾಗಿದೆ. ಕಳೆದ ಡಿಸೆಂಬರ್‌ನಲ್ಲಿ ಹೈದರಾಬಾದ್‌ನಲ್ಲಿರುವ ತಮ್ಮ ಮನೆಯಲ್ಲಿಯೇ ಕವಿತಾ ಸಿಬಿಐ ಅವರ ಹೇಳಿಕೆಗಳನ್ನು ದಾಖಲಿಸಿಕೊಂಡಿತ್ತು. 

ಈ ಹಿಂದೆ ದೆಹಲಿಯಲ್ಲಿ ಮದ್ಯ ಮಾರಾಟಗಾರರಿಗೆ ಪರವಾನಗಿ ನೀಡಲು ಭಾರೀ ಲಂಚ ಪಡೆದಿರುವ ಆರೋಪ ದೆಹಲಿಯ ಆಪ್‌ ಸರ್ಕಾರದ ಮೇಲಿದೆ. ಇದೇ ಹಗರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಕೆಲ ಆಪ್‌ ಶಾಸಕರು ಜೈಲು ಪಾಲಾಗಿದ್ದಾರೆ. ಈ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಸೇರಿದಂತೆ ಕವಿತಾ ಅವರ ವಿಚಾರಣೆಗೆ ಸಿಬಿಐ ಸಮನ್ಸ್‌ ಜಾರಿ ಮಾಡಿದೆ.

ಮದುವೆ ಕಾರಣಕ್ಕೆ ಮಹಿಳೆಯನ್ನು ಕೆಲಸದಿಂದ ತೆಗೆವಂತಿಲ್ಲ: ಸುಪ್ರೀಂಕೋರ್ಟ್

ಲಡಾಖ್‌ ಗಡೀಲಿ ಶಾಂತಿಗೆ ಭಾರತ- ಚೀನಾ ಸಮ್ಮತಿ

ನವದೆಹಲಿ: ಲಡಾಖ್‌ ಗಡಿಯಲ್ಲಿರುವ ವಾಸ್ತವ ಗಡಿ ನಿಯಂತ್ರಣಾ ರೇಖೆಯಲ್ಲಿ ಶಾಂತಿ ಸೌಹಾರ್ದತೆಯನ್ನು ಕಾಪಾಡಲು ಭಾರತ ಮತ್ತು ಚೀನಾ ಸಮ್ಮತಿ ವ್ಯಕ್ತಪಡಿಸಿವೆ. ಫೆ.19ರಂದು ಲಡಾಖನ್‌ ಚುಶೂಲ್‌- ಮೋಲ್ಡೋ ಗಡಿ ಪ್ರದೇಶದಲ್ಲಿ ಉಭಯ ದೇಶಗಳ ಕಮಾಂಡರ್‌ ಹಂತದ ಮಾತುಕತೆ ನಡೆಯಿತು. ಹಿಂದಿನ ಸಭೆಗಳಲ್ಲಿ ಒಪ್ಪಿಕೊಂಡ ಅಂಶಗಳ ಆಧಾರದಲ್ಲೇ ಈ ಸಭೆ ಸೌಹಾರ್ದಯುತ ವಾತಾವರಣದಲ್ಲಿ ನಡೆಯಿತು. ಈ ವೇಳೆ ವಿವಾದಿತ ಪ್ರದೇಶದಲ್ಲಿ ಶಾಂತಿ ಕಾಪಾಡಲು ಸಮ್ಮತಿ ವ್ಯಕ್ತಪಡಿಸಿದವು. ಈ ಪ್ರದೇಶದಿಂದ ಪೂರ್ಣ ಪ್ರಮಾಣದಲ್ಲಿ ಸೇನಾ ವಾಪಾಸಾತಿ ಮಾತುಕತೆಯ ಉದ್ದೇಶವಾಗಿತ್ತು ಎಂದು ಭಾರತೀಯ ವಿದೇಶಾಂಗ ಇಲಾಖೆ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ಮುಸ್ಲಿಮರ ಸೆಳೆಯಲು ಬಿಜೆಪಿ ಹೊಸ ತಂತ್ರ: ಉರ್ದು, ಅರೇಬಿಕ್‌ ಭಾಷೆಗಳಲ್ಲಿ ಪ್ರಚಾರ

2020ರಲ್ಲಿ ಚೀನಾ ಈ ಪ್ರದೇಶದಲ್ಲಿ ಅತಿಕ್ರಮಣಕ್ಕೆ ಯತ್ನಿಸಿ ಭಾರತೀಯರ ಯೋಧರ ಮೇಲೆ ಕಲ್ಲು, ಮೊಳೆ, ದೊಣ್ಣೆ ಮುಂತಾದವುಗಳ ಮೂಲಕ ಹಲ್ಲೆಗೆ ಯತ್ನಿಸಿತ್ತು. ಇದಕ್ಕೆ ಭಾರತೀಯ ಯೋಧರು ಸೂಕ್ತ ಪ್ರತ್ಯುತ್ತರ ನೀಡಿದ್ದರು. ಅದಾದ ಬಳಿಕ ಈ ಪ್ರದೇಶದಲ್ಲಿ ಸಂಘರ್ಷಮಯ ವಾತಾವರಣ ನಿರ್ಮಾಣವಾಗಿದೆ.

click me!