ಸಭೆಗೆ ಬಾರದೆ 2ನೇ ಅಲೆಗೆ ಕೇಂದ್ರವೇ ಕಾರಣ ಅನ್ನುವರಿಗೆ ಬಿಜೆಪಿ ದಾಖಲೆ ಉತ್ತರ

By Suvarna NewsFirst Published May 14, 2021, 3:33 PM IST
Highlights

* ಕೊರೋನಾದ ಎರಡನೇ ಅಲೆಗೆ ಕೇಂದ್ರ  ಸರ್ಕಾರವೇ ಕಾರಣ ಎನ್ನುವ ವಿಪಕ್ಷಗಳಿಗೆ ಉತ್ತರ
* ಮೋದಿ ಆರು ಸಾರಿ ಸಿಎಂಗಳ ಸಭೆ ನಡೆಸಿದ್ದಾರೆ
*  ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಸಭೆಗೆ  ಹಾಜರಾಗಲಿಲ್ಲ
* ಎರಡನೇ ಅಲೆಯ ಆತಂಕದ ಬಗ್ಗೆ ಕೇಂದ್ರ ಸರ್ಕಾರ ರಾಜ್ಯಗಳನ್ನು ಮೊದಲೇ ಎಚ್ಚರಿಸಿತ್ತು 

ನವದೆಹಲಿ(ಮೇ 14)  ಕೊರೋನಾ ಎರಡನೇ ಅಲೆ ದೇಶದ ನಾಗರಿಕರನ್ನು ಹಿಂಡಿ ಹಿಪ್ಪೆ ಮಾಡುತ್ತಿದೆ. ಈ ನಡುವೆ ಹಲವಾರು ಕಡೆಯಿಂದ ಕೇಂದ್ರ ಸರ್ಕಾರದ ಮೇಲೆ ಟೀಕೆಗಳು ವ್ಯಕ್ತವಾಗಿವೆ. ವಿರೋಧ ಪಕ್ಷಗಳು ಎರಡನೇ ಅಲೆ ಹೆಚ್ಚಾಗಲು ಬಿಜೆಪಿ ಸರ್ಕಾರವೇ ಕಾರಣ ಎಂದು ಆರೋಪಿಸುತ್ತಿದೆ.

ಆದರೆ ಇದೆಲ್ಲದಕ್ಕೆ ಸಮರ್ಪಕ ಉತ್ತರ ನೀಡುರುವ ಬಿಜೆಪಿ ಕೆಲ ಅಂಶಗಳನ್ನು ಸ್ಪಷ್ಟಮಾಡಿದೆ. ಎರಡನೇ ಅಲೆಯ ಆತಂಕದ ಬಗ್ಗೆ ಕೇಂದ್ರ ಸರ್ಕಾರ ರಾಜ್ಯಗಳನ್ನು ಮೊದಲೇ ಎಚ್ಚರಿಸಿತ್ತು ಎಂಬುದನ್ನು ದಾಖಲೆಗಳ ಮೂಲಕ ನೀಡಿದೆ.

ಪ್ರಧಾನಿ  ನರೇಂದ್ರ ಮೋದಿ ರಾಜ್ಯಗಳ ಸಿಎಂಗಳ ಜತೆ ನಿರಂತರ ಸಭೆ ನಡೆಸಿ ಎಚ್ಚರಿಕೆ ನೀಡುತ್ತಲೇ ಬಂದಿದ್ದರು.  ಮಾರ್ಚ್  17 ರಂದು ಸಿಎಂಗಳ ಜತೆ ಮೋದಿ ನಡೆಸಿದ ಸಭೆಯ ವಿಡಿಯೋ ತುಣುಕೊಂದನ್ನು ಬಿಜೆಪಿ ಬಿಡುಗಡೆ ಮಾಡಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿರುದ್ಧ ಕುಮಾರಸ್ವಾಮಿ ಗುಡುಗು

ಕೊರೋನಾ ನಿಯಂತ್ರಣಕ್ಕೆ ಆತ್ಮವಿಶ್ವಾಸ ಒಳ್ಳೆಯದು ಆದರೆ ಅತಿಯಾದ ಆತ್ಮವಿಶ್ವಾಸ  ಮಾರಕವಾಗಬಹುದು ಎಂಬ ವಿಚಾರವನ್ನು ಮೋದಿ ಸಿಎಂಗಳಿಗೆ ತಿಳಿಹೇಳಿದ್ದರು. ರಾಜ್ಯಗಳು ಎಚ್ಚರಿಕೆ ಹೆಜ್ಜೆ ಇಡಬೇಕು ಎಂಬುದನ್ನು ತಿಳಿಸಿದ್ದರು.

2020ರ ಸೆಪ್ಟೆಂಬರ್  23  ರಿಂದ 2021ರ ಏಪ್ರಿಲ್   23ರ ವರೆಗೆ ಮೋದಿ ಆರು ಸಾರಿ ಸಿಎಂಗಳ ಸಭೆ ನಡೆಸಿದ್ದಾರೆ.  ಕೊರೋನಾ ಪೀಡಿತ  60  ಜಿಲ್ಲೆಗಳ ಮೇಲೆ ತೀವ್ರ ನಿಗಾ ವಹಿಸಿ ಎಂದು ಪ್ರಧಾನಿ ಕಳೆದ ವರ್ಷವೇ ತಿಳಿಸಿದ್ದರು.  ಮಾರ್ಚ್ 17  ರಂದು ಮೋದಿ ಸಭೆ ನಡೆಸಿದಾಗ  ದೇಶದಲ್ಲಿ ಪ್ರತಿದಿನ  30  ಸಾವಿರ ಹೊಸ ಪ್ರಕರಣ ಬರುವ ಸ್ಥಿತಿಯಿತ್ತು ಎಂಬುದನ್ನು ತಿಳಿಸಿದೆ.

ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ, ಛತ್ತೀಸ್ ಘಡದ ಭೂಪೇಶ್ ಬಘೇಲ್ ಸಿಎಂಗಳ ಸಭೆಗೆ  ಹಾಜರಾಗಲಿಲ್ಲ, ಭೂಪೇಶ್ ಅಸ್ಸಾಂ ಚುನಾವಣಾ ಪ್ರಚಾರದಲ್ಲಿ ಬ್ಯುಸಿಯಾಗಿದ್ದರು ಎಂದು ಬಿಜೆಪಿ ಹೇಳಿದೆ.

ಮಹಾರಾಷ್ಟ್ರ ಮತ್ತು ಕೇರಳಕ್ಕೆ ಕೇಂದ್ರ ಸರ್ಕಾರವೇ ಮುಂದಾಗಿ ಸಿಬ್ಬಂದಿಯನ್ನು ಕಳಿಸಿಕೊಟ್ಟಿತು. ಅಲ್ಲಿ ಟೆಸ್ಟಿಂಗ್ ಸಂಖ್ಯೆ ಏರಿಕೆ ಮಾಡಲು ಕ್ರಮ ಕೈಗೊಳ್ಳಲಾಯಿತು.

ಭಾರತದಲ್ಲಿ ತಯಾರಾದ ಲಸಿಕೆ ಬಗ್ಗೆ ಕಾಂಗ್ರೆಸ್ ನಾಯಕರು ಸಲ್ಲದ ಟೀಕೆ ಮಾಡಿಕೊಂಡೆ ಬಂದರು. ಮನೀಶ್ ತಿವಾರಿ, ರಣದೀಪ್ ಸುರ್ಜೇವಾಲಾ, ಟಿಎಸ್ ಸಿಂಗ್ ಡಿಯೋ, ಬನಾ ಗುಪ್ತಾ ಕೋವಾಕ್ಸಿನ್ ನಂಬಿಕೆಗೆ ಯೋಗ್ಯವಲ್ಲ ಎಂಬಂತೆ ಮಾತನಾಡಿದರು.

ಯುರೋಪ್ ಮತ್ತು  ಉತ್ತರ ಅಮೆರಿಕಕ್ಕೆ ಹೋಲಿಕೆ ಮಾಡಿದರೆ ನಮ್ಮ ಜನಸಂಖ್ಯೆ ಅಗಾಧವಾಗಿದೆ. ಇದೇ ಕಾರಣದಿಂದ ಕೇಸ್ ಗಳ ಸಂಖ್ಯೆ ಹೆಚ್ಚು ಬರುತ್ತಿದೆ. ಸಾವಿನ ಸಂಖ್ಯೆ ಕಡಿಮೆ ಇದ್ದು ದೇಶ 110ನೇ ಸ್ಥಾನದಲ್ಲಿದೆ ಎಂದು ಬಿಜೆಪಿ ಐಟಿ ಸೆಲ್  ಮಾಹಿತಿ ನೀಡಿದೆ. 

 

देश का प्रधानसेवक होने के नाते आपकी हर भावना का मैं सहभागी हूं।

कोरोना की सेकंड वेव से मुकाबले में संसाधनों से जुड़े जो भी गतिरोध थे वो तेजी से दूर किये जा रहे हैं, युद्ध स्तर पर काम करने का प्रयास हो रहा है।

- प्रधान मंत्री श्री नरेंद्र मोदी pic.twitter.com/thyMrvKISE

— Amit Malviya (@amitmalviya)
click me!