ದೆಹಲಿ(ಮೇ.14): ಇತ್ತೀಚೆಗೆ ಕೊರೋನಾ ಸೋಂಕಿತ ಯುವತಿಯೊಬ್ಬಳು ಲವ್ ಯೂ ಝಿಂದಗೀ ಹಾಡು ಕೇಳುತ್ತಾ ನಾನು ಮತ್ತೆ ಬದುಕಿಗೆ ಮರಳುತ್ತೇನೆ ಎಂದು ಧೈರ್ಯವಾಗಿದ್ದ ವಿಡಿಯೋ ವೈರಲ್ ಆಗಿತ್ತು. ಅದಕ್ಕೂ ಹೆಚ್ಚಾಗಿ ಕೊರೋನಾ ಜೊತೆ ಹೋರಾಡುತ್ತಿರುವವರಿಗೆ ಸ್ಫೂರ್ಥಿಯಾಗಿತ್ತು. ಆದರೆ ಕೊರೋನಾ ಕ್ರೂರತೆ ಮಾತ್ರ ಈಕೆಯನ್ನು ಬದುಕಲು ಬಿಟ್ಟಿಲ್ಲ.
'ಲವ್ ಯು ಜಿಂದಗಿ' ವೈರಲ್ ವಿಡಿಯೋದಲ್ಲಿ ಕಾಣಿಸಿಕೊಂಡ 30 ವರ್ಷದ ಕೊರೋನಾ ಸೋಂಕಿತೆ ಸಾವನ್ನಪ್ಪಿದ್ದಾರೆ. ದಿಟ್ಟತನದಿಂದ ವೈರಸ್ ಜೊತೆ ಹೋರಾಡಿದ ಯುವತಿ ಸಾವನ್ನಪ್ಪಿರುವುದಾಗಿ ಚಿಕಿತ್ಸೆ ನೀಡುತ್ತಿದ್ದ ಡಾ ಮೋನಿಕಾ ಲಂಗೆ ಟ್ವೀಟ್ ಮಾಡಿದ್ದಾರೆ.
undefined
BP, ಶುಗರ್ ಇದ್ರೂ ಮನೆಯಲ್ಲೇ ಕೊರೋನಾ ಸೋಲಿಸಿದ 100ರ ವೃದ್ಧೆ
ಕೋವಿಡ್ ತುರ್ತು ವಾರ್ಡ್‌ನಲ್ಲಿದ್ದ ಯುವತಿ ಶಾರುಖ್ ಖಾನ್ ಮತ್ತು ಆಲಿಯಾ ಭಟ್ ಅಭಿನಯದ ಡಿಯರ್ ಜಿಂದಗಿ ಸಿನಿಮಾದ 'ಲವ್ ಯು ಜಿಂದಗಿ' ಹಾಡನ್ನು ಖುಷಿ ಖುಷಿಯಾಗಿ ವಿಶ್ವಾಸದಿಂದ ಆಸ್ವಾದಿಸಿದ ವಿಡಿಯೋ ವೈರಲ್ ಆಗಿತ್ತು.
ಬೇಸರದ ಸಂಗತಿ..ನಾವು ಧೈರ್ಯಶಾಲಿ ಯುವತಿಯನ್ನು ಕಳೆದುಕೊಂಡೆವು .. ಓಂ ಶಾಂತಿ. ದಯವಿಟ್ಟು ಕುಟುಂಬ ಮತ್ತು ಮಗು ಈ ನಷ್ಟವನ್ನು ಭರಿಸಲು ಸಾಧ್ಯವಾಗಲಿ ಎಂದು ಪ್ರಾರ್ಥಿಸಿ ಎಂದು ಆಕೆಗೆ ಚಿಕಿತ್ಸೆ ನೀಡಿದ್ದ ಮೋನಿಕಾ ಟ್ವೀಟ್ ಮಾಡಿದ್ದಾರೆ.
ವೈದ್ಯರ ಸಲಹೆ, ಪ್ರೋನಿಂಗ್ ಮೂಲಕ ಮನೆಯಲ್ಲೇ ಕೊರೋನಾ ಸೋಲಿಸಿದ 82ರ ವೃದ್ಧೆ
ಮೇ 8 ರಂದು ಆಕೆಯ ವಿಡಿಯೋ ವೈರಲ್ ಆದಾಗ ಮಹಿಳೆ ಕೋವಿಡ್ ತುರ್ತು ವಾರ್ಡ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಳು. ಅವಳು ವೆಂಟಿಲೇಟರ್ ಬೆಂಬಲದಲ್ಲಿದ್ದಳು .ಪ್ಲಾಸ್ಮಾ ಚಿಕಿತ್ಸೆಯನ್ನು ಪಡೆದಿದ್ದಳು. ತನ್ನ ಉತ್ಸಾಹವನ್ನು ಹೆಚ್ಚಿಸಲು ತುರ್ತು ವಾರ್ಡ್ನಲ್ಲಿ ಸ್ವಲ್ಪ ಸಾಂಗ್ ಪ್ಲೇ ಮಾಡಲೇ ಎಂದು ಕೇಳಿದ್ದರು.
ಮೇ 10 ರಂದು, ರೋಗಿಗೆ ಐಸಿಯು ಬೆಡ್ ವ್ಯವಸ್ಥೆ ಮಾಡಲಾಗಿದೆ. ಆದರೆ ಸ್ಥಿತಿ ಸ್ಥಿರವಾಗಿಲ್ಲ. ದಯವಿಟ್ಟು ಈ ಧೈರ್ಯಶಾಲಿ ಹುಡುಗಿಗಾಗಿ ಪ್ರಾರ್ಥಿಸಿ. ಕೆಲವೊಮ್ಮೆ ನಾನು ತುಂಬಾ ಅಸಹಾಯಕಳಾಗಿರುತ್ತೇನೆ. ಅದೆಲ್ಲವೂ ಸರ್ವಶಕ್ತನ ಕೈಯಲ್ಲಿದೆ, ನಮ್ಮ ಕೈಯಲ್ಲಿಲ್ಲ. ಆಕೆಗಾಗಿ ಒಂದು ಪುಟ್ಟ ಮಗು ಮನೆಯಲ್ಲಿ ಕಾಯುತ್ತಿದೆ. ದಯವಿಟ್ಟು ಪ್ರಾರ್ಥಿಸಿ ಡಾ. ಲಂಗೆ ಹೇಳಿದ್ದರು.
She is just 30yrs old & She didn't get icu bed we managing her in the Covid emergency since last 10days.She is on NIVsupport,received remedesvir,plasmatherapy etc.She is a strong girl with strong will power asked me to play some music & I allowed her.
Lesson:"Never lose the Hope" pic.twitter.com/A3rMU7BjnG
ಯುವತಿ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಂಬನಿ ಮಿಡಿದಿದ್ದಾರೆ ನೆಟ್ಟಿಗರು. ಒಬ್ಬರು ಭವಿಷ್ಯದಲ್ಲಿ ನನ್ನ ಜೀವನದಲ್ಲಿ ನಾನು ಆ ಹಾಡನ್ನು ಕೇಳಿದಾಗಲೆಲ್ಲಾ ಆಕೆ ನೆನಪಿಗೆ ಬರುತ್ತಾಳೆ. ಅವಳು ಯಾರೆಂದು ಮತ್ತು ಅವಳ ಕುಟುಂಬ ಯಾರೆಂದು ತಿಳಿದಿಲ್ಲ - ಆದರೆ ಅದು ದೊಡ್ಡ ವಿಚಾರವಲ್ಲ. ಆ ಹಾಡು ಈಗ ಅವಳದು. ಅವಳ ಕುಟುಂಬಕ್ಕೆ ನೋವು ಭರಿಸುವ ಶಕ್ತಿ ದೇವರು ನೀಡಲಿ ಎಂದಿದ್ದಾರೆ.