
ಮುಂಬೈ(ನ.09): ಬಿಹಾರ ಚುನಾವಣೆ ಫಲಿತಾಂಶದತ್ತ ಎಲ್ಲರ ಚಿತ್ತ ನೆಟ್ಟಿದೆ. ಯಾರು ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದಾರೆ ಅನ್ನೋ ಕುತೂಹಲ ಮನೆ ಮಾಡಿದೆ. ಫಲಿತಾಂಶ ಹೊರಬೀಳುವ ಮೊದಲೇ ಹಲವು ಭವಿಷ್ಯಗಳು ಹೊರಬಿದ್ದಿದೆ. ಇದೀಗ ಶಿವಸೇನಾ, ಬಿಹಾರ ಚುನಾವಣೆಯಲ್ಲಿ ನಿತೀಶ್ ಕುಮಾರ್ ನೇತೃತ್ವದ ಎನ್‌ಡಿಎ(National Democratic Alliance)ಸೋಲು ಕಾಣಲಿದೆ ಎಂದಿದೆ.
ಬಿಹಾರ ಚುನಾವಣೋತ್ತರ ಸಮೀಕ್ಷೆ ಪ್ರಕಟ; ನಿತೀಶ್‌ಗಿಂತ ಮಹಾಘಟಬಂಧನದತ್ತ ಜನರ ಒಲವು?
ಶಿವಸೇನಾ ತನ್ನ ಸಾಮ್ನಾ ಪತ್ರಿಕೆಯಲ್ಲಿ ಬಿಜೆಪಿ ವಿರುದ್ಧ ಹರಿಹಾಯ್ದಿದೆ. ಅಮೆರಿಕ ಚುನಾವಣೆಯಲ್ಲಿ ಡೋನಾಲ್ಡ್ ಟ್ರಂಪ್ ಸೋತ ರೀತಿ, ಬಿಹಾರದಲ್ಲಿ NDA ನೆಲಕಚ್ಚಲಿದೆ ಎಂದು ಶಿವಸೇನೆ ಹೇಳಿದೆ. ಅಮೆರಿದಲ್ಲಿ ಟ್ರಂಪ್ ಟ್ರಂಪ್ ಘೋಷವಾಕ್ಯ ಎಲ್ಲೆಡೆ ಮೊಳಗಿತ್ತು. ಆದರೆ ಜನರು ತಕ್ಕಪಾಠ ಕಲಿಸಿದ್ದಾರೆ. ಜೋ ಬೈಡೆನ್‌ಗೆ ಅಧಿಕಾರ ನೀಡಿದ್ದಾರೆ. ಬಿಹಾರದಲ್ಲೂ ಇದೇ ರೀತಿ ಜನರು ಬದಲಾವಣೆ ಬಯಸಿದ್ದಾರೆ ಎಂದು ಶಿವಸೇನಾ ಹೇಳಿದೆ.
ಬಿಹಾರ ವಿಧಾನಸಭಾ ಚುನಾವಣೆ ಕಡೆ ಅಮಿತ್ ಶಾ ತಲೆಹಾಕದಿರುವ ಗುಟ್ಟೇನು?.
ಭಾರತದಲ್ಲಿ ನಮಸ್ತೆ ಟ್ರಂಪ್ ಎಂದು ಜನರನ್ನು ಮರಳು ಮಾಡುವ ಕೆಲಸ ಮಾಡಲಾಗಿತ್ತು. ಆದರೆ ಅಮೆರಿಕದಲ್ಲಿ ಬೈ ಬೈ ಟ್ರಂಪ್ ಹೇಳಿದ್ದಾರೆ. ಟ್ರಂಪ್ ಮುಂದಿನ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ಎಂದು ನಂಬಿಸಲಾಗಿತ್ತು. ಆದರೆ ಜನರು ಸರಿಯಾದ ವ್ಯಕ್ತಿಯನ್ನು ಆಯ್ಕೆಮಾಡಿದ್ದಾರೆ. ಬಿಹಾರದಲ್ಲಿ ಬಿಜೆಪಿ, ನಿತೀಶ್ ಕುಮಾರ್, ಯುವ ತೇಜಸ್ವಿ ಯಾದವ್ ಮುಂದೆ ನಿಲ್ಲಲು ಅನರ್ಹರು ಎಂದು ಶಿವಸೇನಾ ಹೇಳಿದೆ.
ಇದೇ ವೇಳೆ ಶಿವಸೇನಾ ಭಾರತದಲ್ಲಿ ಕೇಂದ್ರ ಸರ್ಕಾರ ಆಯೋಜಿಸಿದ ನಮಸ್ತೆ ಕಾರ್ಯಕ್ರಮದ ವಿರುದ್ಧ ಹರಿಹಾಯ್ದಿದೆ. ಕೋಟಿ ಕೋಟಿ ರೂಪಾಯಿ ವೆಚ್ಚ ಮಾಡಿ ನಮಸ್ತೆ ಟ್ರಂಪ್ ಕಾರ್ಯಕ್ರಮ ಮಾಡಲಾಗಿತ್ತು. ಇದರಿಂದ ಸುಖಾಸುಮ್ಮನೆ ಹಣ ವ್ಯರ್ಥ ಮಾಡಲಾಯಿತು. ಇಷ್ಟೇ ಅಲ್ಲ ಅಮೆರಿಕದಲ್ಲಿದ್ದ ಕೊರೋನಾ ವೈರಸ್ ಭಾರತಕ್ಕೂ ಹರಡಿತೂ ಎಂದು ಶಿವ ಸೇನಾ ಹೇಳಿದೆ.
ಬಿಹಾರ ಚುನಾವಣೆ ಕುರಿತು ಚುನಾವಣೋತ್ತರ ಸಮೀಕ್ಷೆಗಳು ತೇಜಸ್ವಿ ಯಾದವ್ ನೇತೃತ್ವದದ ಮಹಾಘಟಬಂಧನಕ್ಕೆ ಹೆಚ್ಚಿನ ಸ್ಥಾನಗಳು ಲಭಿಸಲಿದೆ ಎಂದಿವೆ. ಇದರ ಬೆನ್ನಲ್ಲೇ ಶಿವಸೇನೆ ಕೂಡ ಟ್ರಂಪ್ ಅಮೆರಿಕದಲ್ಲಿ ಸೋತ ರೀತಿ, ಬಿಹಾರದಲ್ಲಿ ನಿತೀಶ್ ಕುಮಾರ್ ಸೋಲಲಿದ್ದಾರೆ ಅನ್ನೋ ಹೇಳಿಕೆ ಬಿಜೆಪಿ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ