ಪಹಲ್ಗಾಮ್ ದಾಳಿಯಲ್ಲಿ ಮಡಿದ ಯೋಧನ ಪತ್ನಿಯ ಟ್ರೋಲ್ : ಮಹಿಳಾ ಆಯೋಗ ಮಧ್ಯಪ್ರವೇಶ

Published : May 05, 2025, 05:02 PM ISTUpdated : May 06, 2025, 10:15 AM IST
ಪಹಲ್ಗಾಮ್ ದಾಳಿಯಲ್ಲಿ ಮಡಿದ ಯೋಧನ ಪತ್ನಿಯ ಟ್ರೋಲ್ : ಮಹಿಳಾ ಆಯೋಗ ಮಧ್ಯಪ್ರವೇಶ

ಸಾರಾಂಶ

ಪಹಲ್ಗಾಮ್ ದಾಳಿಯಲ್ಲಿ ಮಡಿದ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಟ್ರೋಲ್ ಮಾಡಿದ್ದಕ್ಕೆ ಮಹಿಳಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಪಹಲ್ಗಾಮ್‌ ದಾಳಿಯ ವೇಳೆ ಮಡಿದ ನೌಕಾಪಡೆಯ ಲೆಫ್ಟಿನೆಂಟ್ ವಿನಯ್ ನರ್ವಾಲ್ ಅವರ ಪತ್ನಿಯನ್ನು ಪಹಲ್ಗಾಮ್ ದಾಳಿಯ ನಂತರ ಅವರು ನೀಡಿದ ಹೇಳಿಕೆಗಳಿಗಾಗಿ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಟ್ರೋಲ್ ಮಾಡಲಾಗುತ್ತಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ಮಹಿಳಾ ಆಯೋಗ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.

ಹಿಮಾಂಶಿ ನರ್ವಾಲ್ ಹೇಳಿಕೆ ಏನು?
ಕಳೆದ ಗುರುವಾರ ವಿನಯ್ ನರ್ವಾಲ್ (Vinay Narwal) ಪತ್ನಿ ಹಿಮಾಂಶಿ ನರ್ವಾಲ್(Himanshi) ಅವರು ಜನರಲ್ಲಿ ಭಾವುಕವಾದ ಮನವಿಯೊಂದನ್ನು ಮಾಡಿದ್ದರು. ನಾನು ಇಡೀ ದೇಶದ ಜನರಲ್ಲಿ ವಿನಯ್ ಅವರು ಎಲ್ಲಿದ್ದಾರೋ ಅಲ್ಲಿ ಶಾಂತಿಯಿಂದ ಇರಲಿ ಎಂದು ಇಡೀ ದೇಶದ ಜನ ಪ್ರಾರ್ಥನೆ ಮಾಡಬೇಕು ಅದೊಂದೇ ವಿಚಾರ ನಾನು ಎಲ್ಲರಿಂದ ಬಯಸುವುದು. ಹಾ ಮತ್ತೊಂದು ವಿಚಾರ ನಾನು ಹೇಳುತ್ತೇನೆ. ಯಾರ ಬಗ್ಗೆಯೂ ದ್ವೇಷ ಹರಡಬಾರದು, ಮುಸ್ಲಿಮರು ಹಾಗೂ ಕಾಶ್ಮೀರದ ವಿಚಾರವಾಗಿ ಜನ ದ್ವೇಷ ಕಾರುತ್ತಿರುವುದನ್ನು ನಾನು ನೋಡುತ್ತಿದ್ದೇನೆ. ನಾವು ಇದನ್ನು ಬಯಸುವುದಿಲ್ಲ, ನಾವು ಕೇವಲ ಶಾಂತಿಯನ್ನು ಬಯಸುತ್ತೇವೆ ಹಾಗೂ ಶಾಂತಿಯನ್ನು ಮಾತ್ರ ಬಯಸುತ್ತೇವೆ ಎಂದು ಅವರು ಹೇಳಿದ್ದರು. 

ಟ್ರೋಲ್‌ಗೆ ಕಾರಣ ಏನು? 
ಇವರ ಈ ಹೇಳಿಕೆಯ ನಂತರ ಸಾಮಾಜಿಕ ಜಾಲತಾಣದಲ್ಲಿ ಅವರನ್ನು ವಿಪರೀತ ಎಂಬಂತೆ ಟ್ರೋಲ್ ಮಾಡಲಾಯ್ತು. ಅವರ ಹೇಳಿಕೆಯನ್ನು ಆಧರಿಸಿ ಅನೇಕರು ಆಕೆಯನ್ನು ಟ್ರೋಲ್ ಮಾಡಿದ್ದಾರೆ. ಇದು ರಾಷ್ಟ್ರೀಯ ಮಹಿಳಾ ಆಯೋಗದ ಗಮನಕ್ಕೂ ಬಂದಿದ್ದು, ಈ ಬಗ್ಗೆ ಎಕ್ಸ್‌ನಲ್ಲಿ ರಾಷ್ಟ್ರೀಯ ಮಹಿಳಾ ಆಯೋಗವೂ ಪೋಸ್ಟೊಂದನ್ನು ಮಾಡಿದ್ದು, ವಿನಯ್ ನರ್ವಾಲ್ ಪತ್ನಿ ಹಿಮಾಂಶಿ ನರ್ವಾಲ್ ಬೆಂಬಲಕ್ಕೆ ನಿಂತಿದೆ. 

ಮಹಿಳಾ ಆಯೋಗದ ಮಧ್ಯಪ್ರವೇಶ:
ಪಹಲ್ಗಾಮ್ ದಾಳಿಯಲ್ಲಿ ಲೆಪ್ಟಿನೆಂಟ್ ವಿನಯ್ ನರ್ವಾಲ್ ಸಾವಿಗೀಡಾದ ನಂತರ ಅವರ ಪತ್ನಿ ಹಿಮಾಂಶಿ ನರ್ವಾಲ್ ಅವರನ್ನು ಸಾಮಾಜಿಕ ಜಾಲತಾಣದಲ್ಲಿ ಅವರ ಹೇಳಿಕೆಯನ್ನು ಆಧರಿಸಿ ಟ್ರೋಲ್ ಮಾಡಲಾಗುತ್ತಿದೆ. ಇದು ಅತ್ಯಂತ ಖಂಡನೀಯ ಹಾಗೂ ದುರಾದೃಷ್ಟಕರ ವಿಚಾರ. ಮಹಿಳೆಯೊಬ್ಬರನ್ನು ಅವರ ಸಿದ್ದಾಂತಗಳನ್ನು ಹೇಳಿಕೊಂಡಿದ್ದಕ್ಕಾಗಿ ವೈಯಕ್ತಿಕವಾಗಿ ಜೀವನದ ಬಗ್ಗೆ ಟ್ರೋಲ್ ಮಾಡುತ್ತಿರುವುದನ್ನು ಯಾವುದೇ ಕಾರಣಕ್ಕೂ ಒಪ್ಪಲಾಗದು. ಒಪ್ಪಿಗೆ ಅಥವಾ ಭಿನ್ನಾಭಿಪ್ರಾಯವನ್ನು ಸಭ್ಯ ರೀತಿಯಲ್ಲಿಯೇ ವ್ಯಕ್ತಪಡಿಸಬೇಕು. ರಾಷ್ಟ್ರೀಯ ಮಹಿಳಾ ಆಯೋಗವೂ ಪ್ರತಿಯೊಬ್ಬ ಮಹಿಳೆಯ ಘನತೆ ಹಾಗೂ ಗೌರವದ ರಕ್ಷಣೆಗೆ ಬದ್ಧವಾಗಿದೆ ಎಂದು ಮಹಿಳಾ ಆಯೋಗ ಹೇಳಿದೆ.

ಹುತಾತ್ಮ ಯೋಧನ ಪತ್ನಿಯ ಟ್ರೋಲ್ ಎಷ್ಟು ಸರಿ
ಇಂದು ದೇಶದ ಯುವ ಸಮೂಹ ಎಡಪಂಥೀಯ (Left-wing ideology) ಹಾಗೂ ಬಲಪಂಥೀಯ(right-wing ideology)ಎಂಬ ಎರಡು ಸಿದ್ದಾಂತಗಳ ಮಧ್ಯೆ ಒಡೆದು ಹೋಗಿದ್ದು, ದೇಶದ ಪ್ರಮುಖ ವಿಚಾರಗಳಲ್ಲಿಯೂ ಇದು ಕಾಣುತ್ತಿದೆ. ಅದೇ ರೀತಿ ಈಗ ಪಹಲ್ಗಾಮ್‌ ದಾಳಿಯನ್ನು ಕೂಡ ಎಡಪಂಥೀಯ ಸಮುದಾಯ ಒಂದು ರೀತಿ ವಿಶ್ಲೇಷಿಸುತ್ತಿದ್ದರೆ ಬಲಪಂಥೀಯ ಸಮುದಾಯ ಇನ್ನೊಂದು ರೀತಿ ವಿಶ್ಲೇಷಣೆ ಮಾಡುತ್ತಿದೆ. ಒಬ್ಬೊಬ್ಬರ ಸಿದ್ದಾಂತ ಒಂದೊಂದು ರೀತಿ, ಸಿದ್ದಾಂತಗಳಲ್ಲಿ ಬದಲಾವಣೆ ಇರುವುದು ಸಾಮಾನ್ಯ. ಹಾಗಂತ ಯೋಧನೋರ್ವನ ಪತ್ನಿಯನ್ನು ಟ್ರೋಲ್ ಮಾಡುವುದು ಎಷ್ಟು ಸರಿ. 

ನೌಕಾಪಡೆಯ ಅಧಿಕಾರಿ ವಿನಯ್ ನರ್ವಾಲ್ ಹಾಗೂ ಒಟ್ಟು 26 ಪ್ರವಾಸಿಗರು ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಯಲ್ಲಿ (Pahalgam terror attack) ಪ್ರಾಣ ಬಿಟ್ಟಿದ್ದರು. ಪಾಕಿಸ್ತಾನ ಬೆಂಬಲಿತ ಭಯೋತ್ಪಾದಕರಿಂದಲೇ ಈ ದಾಳಿ ನಡೆದಿದೆ ಎಂಬುದಕ್ಕೆ ಎನ್‌ಐಎ ತನಿಖೆ ಪುರಾವೆ ನೀಡಿದೆ. ಹೀಗಾಗಿ ಈ ಘಟನೆ ಭಾರತ ಹಾಗೂ ಪಾಕಿಸ್ತಾನದ ನಡುವೆ ಯುದ್ಧದ ಆತಂಕ ಸೃಷ್ಟಿಸಿದೆ. 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಇಂಡಿಗೋ ಸಮಸ್ಯೆ : ಏರ್‌ಲೈನ್‌ಗಳಿಗೆ ವಿಧಿಸಿದ್ದ ಕಠಿಣ ಆದೇಶ ರದ್ದು
ಮದುವೆ ವಯಸ್ಸಾಗದಿದ್ರೂ ವಯಸ್ಕರು ಲಿವ್‌ ಇನ್‌ನಲ್ಲಿ ಇರಬಹುದು: ಕೋರ್ಟ್‌