ಮುಂಬೈ(ಜೂ.22): ಮಹಾರಾಷ್ಟ್ರದ ಅಘಾಡಿ ಸರ್ಕಾರದ ಬುಡ ಅಲುಗಾಡುತ್ತಿದೆ. ಶಿವಸೇನಾ ನಾಯಕ ಏಕನಾಥ್ ಶಿಂದೆ ನೇತೃತ್ವದ ಶಾಸಕರು ಪಕ್ಷದ ವಿರುದ್ಧವೇ ಬಂಡಯ ಎದ್ದಿದ್ದಾರೆ. ಇದರಿಂದ ಉದ್ದವ್ ಠಾಕ್ರೆ ನೇತೃತ್ವದ ಮೈತ್ರಿ ಸರ್ಕಾರ ಪತನದತ್ತ ಸಾಗುತ್ತಿದೆ. ಇದರ ನಡುವೆ ಸಿಎಂ ಉದ್ಧವ್ ಠಾಕ್ರೆ ಭಾಷಣದಲ್ಲಿ ರಾಜೀನಾಮೆ ಸುಳಿವು ನೀಡಿದ್ದಾರೆ. ಈ ಎಲ್ಲಾ ಬೆಳವಣಿಗೆ ನಡುವೆ ಉದ್ಧವ್ ಠಾಕ್ರೆಗೆ ಮತ್ತೊಂದು ಶಾಕ್ ಎದುರಾಗಿದೆ. ಆಲಿಬಾಗ್‌ನಲ್ಲಿರುವ ಠಾಕ್ರೆ ಪತ್ನಿ ಹಸೆರಿನ ಆಸ್ತಿ ಹಾಗೂ ಕಟ್ಟಡ ಅಕ್ರಮ. ಈ ಕುರಿತು ತನಿಖೆ ನಡೆಸಬೇಕು ಎಂದು ಬಿಜೆಪಿ ನಾಯಕ ಬಾಂಬೆ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಉದ್ಧವ್ ಠಾಕ್ರೆ ಪತ್ನಿ ರಶ್ಮಿ ಹೆಸರಿನಲ್ಲಿ ಆಲಿಬಾಗ್ ಕರಾವಳಿ ತೀರದಲ್ಲಿರುವ ಆಸ್ತಿ ಹಾಗೂ ಕಟ್ಟವಿದೆ. ಈ ಆಸ್ತಿ ವಿವರವನ್ನು ಉದ್ಧವ್ ಠಾಕ್ರೆ ಬಹಿರಂಗ ಪಡಿಸಿಲ್ಲ. ಇಷ್ಟೇ ಅಲ್ಲ ಈ ಕಟ್ಟಡವನ್ನೂ ಅಕ್ರಮವಾಗಿ ನಿರ್ಮಾಣ ಮಾಡಲಾಗಿದೆ. ಹೀಗಾಗಿ ನ್ಯಾಯಾಲಯದ ಉಸ್ತುವಾರಿಯಲ್ಲಿ ತನಿಖೆ ನಡಯೆಬೇಕು ಎಂದು ಬಿಜೆಪಿ ನಾಯಕ ಕಿರೀಟ್ ಸೋಮೈಯ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ.
ರಾಜೀನಾಮೆ ಪತ್ರ ರೆಡಿ ಇದೆ, ಶಾಸಕರು ಬಯಸಿದರೆ ಸ್ಥಾನ ತ್ಯಜಿಸಲು ಸಿದ್ಧ, ಉದ್ಧವ್ ಠಾಕ್ರೆ ಭಾಷಣ!
ಮಹಾರಾಷ್ಟ್ರದ ಕರಾವಳಿ ಭಾಗವಾಗಿರುವ ಆಲಿಬಾಗ್‌ನಲ್ಲಿ ಆಸ್ತಿ ಹಾಗೂ ಕಟ್ಟಡದಲ್ಲಿ ಅವ್ಯವಹಾರ ನಡೆದಿದೆ. ಇದನ್ನು ಅಧಿಕಾರ ಬಳಸಿ ಮುಚ್ಚಿಡುವ ಪ್ರಯತ್ನ ಮಾಡಲಾಗಿದೆ. ಹೀಗಾಗಿ ನ್ಯಾಯಾಲಯ ಮಧ್ಯಪ್ರವೇಶಿಸಬೇಕು. ನ್ಯಾಯಾಲದಯ ಸುಪರ್ದಿಯಲ್ಲೇ ತನಿಖೆ ನಡೆದರೆ ಮಾತ್ರ ಸತ್ಯ ಹೊರಬರಲಿದೆ ಎಂದು ಕಿರೀಟ್ ಸೋಮೈಯ ಆಗ್ರಹಿಸಿದ್ದಾರೆ.
ಸಿಎಂ ಉದ್ಧವ್ ಠಾಕ್ರೆ, ಪತ್ನಿ ರಶ್ನಿ, ರಾಜ್ಯಸಭಾ ಸದಸ್ಯ ರವೀಂದ್ರ ವೈಕರ್ ಹಾಗೂ ಅವರ ಪತ್ನಿ ಮನಿಶಾ ವೈಕರ್ ವಿರುದ್ಧ ಪ್ರಕರಣ ದಾಖಲಾಗಿದೆ. ಉದ್ಧವ್ ಠಾಕ್ರೆ ಹಾಗೂ ರಾಜ್ಯಸಭಾ ಸದಸ್ಯ ವೈಕರ್ ತಮ್ಮ ಕೆಲ ಆಸ್ತಿ ವಿವರಗಳನ್ನು ಮುಚ್ಚಿಟ್ಟಿದ್ದಾರೆ. ಇದು ಜನಪ್ರತಿನಿಧಿ ಕಾಯ್ದೆ ಉಲ್ಲಂಘನೆಯಾಗಿದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ.
ಸರ್ಕಾರದ ಜೊತೆ ಉದ್ಧವ್ ಠಾಕ್ರೆಯ ಪಕ್ಷವನ್ನೂ ವಶಪಡಿಸ್ಕೊಳ್ತಾರಾ ಏಕನಾಥ್ ಶಿಂಧೆ? ಹೀಗಿದೆ ನಿಯಮ
ಆಲಿಬಾಗ್ ಆಸ್ತಿಯಲ್ಲಿನ ಕಟ್ಟಡ ನಿರ್ಮಾಣಕ್ಕೆ ಯಾವುದೇ ಇಲಾಖೆಯ ಅನುಮತಿ ಪಡೆದಿಲ್ಲ. ಕಾರಣ ಸಮುದ್ರ ತೀರದಿಂದ 100 ಮೀಟರ್ ಒಳಗಡೆ ಈ ಕಟ್ಟಡವಿದೆ. ಹೀಗಾಗಿ ಕರಾವಳಿ ನಿಯಂತ್ರಣ ವಲಯ ಸೇರಿದಂತೆ ಹಲವು ಇಲಾಖೆಗಳ ಅನುಮತಿ ಕಡ್ಡಾಯವಾಗಿದೆ. ಆದರೆ ಸಿಎಂ ಠಾಕ್ರೆ ತಮ್ಮ ಅಧಿಕಾರ ಬಳಸಿ ಅಕ್ರಮವಾಗಿ ಈ ಕಟ್ಟಡ ನಿರ್ಮಿಸಿದ್ದಾರೆ ಎಂದು ಬಿಜೆಪಿ ನಾಯಕ ಆರೋಪಿಸಿದ್ದಾರೆ.
ಠಾಕ್ರೆ ಸೇರಿದಂತೆ ಇತರರ ವಿರುದ್ಧ ದೂರು ನೀಡಿದರೂ ಇದುವರೆಗೂ ಯಾವುದೇ ಕ್ರಮಗಳು ಆಗಿಲ್ಲ, ತನಿಖೆಯೂ ನಡೆದಿಲ್ಲ. ಹೀಗಾಗಿ ಕೋರ್ಟ್ ಬಳಿ ಮನವಿ ಮಾಡುತ್ತಿರುವುದಾಗಿ ಬಿಜೆಪಿ ನಾಯಕ ಬಾಂಬೈ ಹೈಕೋರ್ಟ್‌ಗೆ ಮನವಿ ಮಾಡಿದ್ದಾರೆ.