
ನವದೆಹಲಿ(ಸೆ.07): ಮಾದಕವಸ್ತು ಕಳ್ಳಸಾಗಣೆ ಜಾಲವೊಂದನ್ನು ಬಯಲಿಗೆಳೆದಿರುವ ದೆಹಲಿಯ ಎನ್‌ಸಿಬಿ ಅಧಿಕಾರಿಗಳು, 7 ಜನರನ್ನು ಬಂಧಿಸಿ ಅವರಿಂದ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 48 ಕೋಟಿ ರು. ಬೆಲೆಬಾಳುವ ಹೆರಾಯಿನ್ ಅನ್ನು ವಶಪಡಿಸಿಕೊಂಡಿದ್ದಾರೆ.
ಬಂಧಿತರಲ್ಲಿ ಓರ್ವ ಆಫ್ರಿಕನ್ ಪುರುಷ ಮತ್ತು ಮ್ಯಾನ್ಮಾರ್ ಮೂಲದ ಓರ್ವ ಮಹಿಳೆ ಸೇರಿದ್ದಾಳೆ. ಅಂತಾರಾಷ್ಟ್ರೀಯ ಕೊರಿಯರ್ ಸೇವೆಗಳ ಮೂಲಕ ವಿದೇಶದಿಂದ ಈ ಮಾದಕ ವಸ್ತುಗಳನ್ನು ಭಾರತಕ್ಕೆ ತರಲಾಗುತ್ತಿತ್ತು ಎಂಬ ಸುಳಿವಿನ ಹಿನ್ನೆಲೆಯಲ್ಲಿ ದಾಳಿ ಮಾಡಿದ ಅಧಿಕಾರಿಗಳು 7 ಜನರನ್ನು ಬಂಧಿಸಿದ್ದಾರೆ.
ಆಗಸ್ಟ್ ಮೊದಲ ವಾರದಲ್ಲಿ ದಕ್ಷಿಣ ಆಫ್ರಿಕಾದಿಂದ ಬಂದಿದ್ದ 970 ಗ್ರಾಂ ತೂಕದ ಹೆರಾಯಿನ್ ಅನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದರು. ಆದರೆ ಇಡೀ ಜಾಲವನ್ನು ಬಯಲಿಗೆಳೆಯುವ ನಿಟ್ಟಿನಲ್ಲಿ ಹೆರಾಯಿನ್ ಪ್ಯಾಕೆಟ್ ಅನ್ನು ನಕಲಿ ಪ್ಯಾಕ್‌ನೊಂದಿಗೆ ಬದಲಾಯಿಸಿ ಹಾಗೆಯೇ ಬಿಟ್ಟಿದ್ದರು.
ಬಳಿಕ ಅದನ್ನು ಪಡೆದುಕೊಳ್ಳುವವರ ಮೇಲೆ ನಿಗಾ ಇರಿಸಿದ್ದ ಅಧಿಕಾರಿಗಳ ತಂಡ, ಮನೆಯೊಂದರ ಮೇಲೆ ದಾಳಿ ನಡೆಸಿ ಇಡೀ ಜಾಲವನ್ನು ಬಯಲಿಗೆಳೆದಿದೆ. ಜೊತೆಗೆ 48 ಕೋಟಿ ರು. ಮೌಲ್ಯದ ಹೆರಾಯಿನ್ ಅನ್ನು ವಶಪಡಿಸಿಕೊಂಡಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ