ಡಿಎಂಕೆ ಲೀಡರ್‌ ಈಗ ಇಂಟರ್‌ನ್ಯಾಷನಲ್ ಡ್ರಗ್ ಪೆಡ್ಲರ್: ಜಾಫರ್ ಸಾದಿಕ್‌ ಹೆಡೆಮುರಿಕಟ್ಟಿದ ಎನ್‌ಸಿಬಿ

Published : Mar 09, 2024, 04:33 PM ISTUpdated : Mar 09, 2024, 04:35 PM IST
ಡಿಎಂಕೆ ಲೀಡರ್‌ ಈಗ ಇಂಟರ್‌ನ್ಯಾಷನಲ್ ಡ್ರಗ್ ಪೆಡ್ಲರ್:  ಜಾಫರ್ ಸಾದಿಕ್‌ ಹೆಡೆಮುರಿಕಟ್ಟಿದ ಎನ್‌ಸಿಬಿ

ಸಾರಾಂಶ

ಬಂಧಿತ ಜಾಫರ್ ಸಾದಿಕ್, ಅಂತಾರಾಷ್ಟ್ರೀಯ ಡ್ರಗ್ ದಂಧೆಯಿಂದ ಸಾವಿರಾರು ಕೋಟಿ ಗಳಿಸಿದ್ದ ಹಣವನ್ನು ಬೇರೆ ಬೇರೆ ವ್ಯವಹಾರದಲ್ಲಿ ಹೂಡಿಕೆ ಮಾಡಿದ್ದ, ಇತ್ತೀಚೆಗೆ ಚೆನ್ನೈಗೆ ಮೈಚುಂಗ್ ಚಂಡಮಾರುತ ಅಪ್ಪಳಿಸಿದಾಗ ಈತನೂ ಸಿಎಂ ಪರಿಹಾರ ನಿಧಿಗೆ ಪರಿಹಾರ ಚೆಕ್ ನೀಡಿದ, ಆಡಳಿತದಲ್ಲಿರುವ ಡಿಎಂಕೆ ನಾಯಕರೊಂದಿಗೆ ಉತ್ತಮ ಒಡನಾಟ ಹೊಂದಿದ್ದ.

ನವದೆಹಲಿ: ತಮಿಳುನಾಡಿನಲ್ಲಿ ಪ್ರಸ್ತುತ ಅಧಿಕಾರದಲ್ಲಿರುವ ಡಿಎಂಕೆ ಪಕ್ಷದಲ್ಲಿ ಒಮ್ಮೆ ಸಕ್ರಿಯನಾಗಿದ್ದು ಬಳಿಕ ಅಂತಾರಾಷ್ಟ್ರೀಯ ಡ್ರಗ್ ಡೀಲರ್ ಆಗಿ ಬೆಳೆದ ಖತರ್ನಾಕ್ ಖದೀಮನೋರ್ವನನ್ನು ಮಾದಕ ದ್ರವ್ಯ ನಿಯಂತ್ರಣ ದಳ( ನಾರ್ಕೋಟಿಕಕ್ಸ್ ಕಂಟ್ರೋಲ್ ಬ್ಯುರೋ(NCB)ಕಡೆಗೂ ಬಂಧಿಸಿ ಜೈಲಿಗಟ್ಟಿದೆ.  ಈತ ಕೇವಲ ಭಾರತ ಮಾತ್ರವಲ್ಲದೇ ನ್ಯೂಜಿಲ್ಯಾಂಡ್, ಮಲೇಷ್ಯಾ, ಆಸ್ಟ್ರೇಲಿಯಾದಲ್ಲಿ ಡ್ರಗ್‌ ಡೀಲಿಂಗ್ ವ್ಯವಹಾರ ನಡೆಸುತ್ತಿದ್ದು,  ಈ ವ್ಯವಹಾರದಲ್ಲಿ ಕೋಟ್ಯಾಂತರ ಮೊತ್ತದ ಹಣವನ್ನು ಸಂಗ್ರಹಿಸಿದ್ದ ಇದೇ ಅಕ್ರಮ ಹಣವನ್ನೇ ಸಿನಿಮಾ, ಕಟ್ಟಡ ನಿರ್ಮಾಣ ಕಾರ್ಯ, ಆಸ್ಪತ್ರೆ ಮುಂತಾದ ಉದ್ಯಮಗಳಲ್ಲಿ ತೊಡಗಿಸಿದ್ದ.

ಸಿನಿಮಾ ನಿರ್ಮಾಪಕನೂ ಆಗಿರುವ ಈತ ದಕ್ಷಿಣ ಭಾರತದ ಹಲವು ಸಿನಿಮಾಗಳಿಗೆ ಹಣ ಹೂಡಿಕೆ ಮಾಡಿದ್ದ ಎಂದು ತಿಳಿದು ಬಂದಿದೆ. ಈ ಬಗ್ಗೆ ದೆಹಲಿಯಲ್ಲಿ  ಮಾದಕ ದ್ರವ್ಯ ನಿಯಂತ್ರಣ ದಳ ಎನ್‌ಸಿಬಿಯ ಉಪ ಮಹಾನಿರ್ದೇಶಕ ಜ್ಞಾನೇಶ್ವರ್‌ ಸಿಂಗ್, ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ. ಜಾಫರ್ ಸಾಧಿಕ್ ಅಂತಾರಾಷ್ಟ್ರೀಯ ಮಾದಕ ದ್ರವ್ಯ ಕಳ್ಳಸಾಗಣೆ ವ್ಯವಹಾರ ನಡೆಸುತ್ತಿದ್ದ. ಇವನ ಈ ಅಕ್ರಮ ವ್ಯವಹಾರವೂ ಭಾರತದಿಂದ ನ್ಯೂಜಿಲ್ಯಾಂಡ್ವರೆಗೂ, ಆಸ್ಟ್ರೇಲಿಯಾ ಮಲೇಷ್ಯಾದವರೆಗೂ ಹಬ್ಬಿತ್ತು.  ಡ್ರಗ್ ದಂಧೆಯಲ್ಲಿ ಕೋಟ್ಯಾಂತರ ವ್ಯವಹಾರ ನಡೆಸಿರುವ ಈತ ಇದರಿಂದ ಗಳಿಸಿದ ಹಣವನ್ನು ಸಿನಿಮಾ, ನಿರ್ಮಾಣ ಕಾಮಗಾರಿ, ಆಸ್ಪತ್ರೆ ಮುಂತಾದ ವ್ಯವಹಾರದಲ್ಲಿ ತೊಡಗಿಸಿ ಅದನ್ನೇ ತನ್ನ ಪ್ರಮುಖ ವ್ಯವಹಾರವೆಂಬಂತೆ ತೋರಿಸಿ ಈ ಡ್ರಗ್ ವ್ಯವಹಾರವನ್ನು ಮರೆ ಮಾಚಿದ್ದ. ನಿರ್ದಿಷ್ಠ ಗುಪ್ತಚರ ಮಾಹಿತಿಯ ಮೇರೆಗೆ ಕಾರ್ಯಾಚರಣೆ ನಡೆಸಿ ಈತನನ್ನು ಬಂಧಿಸುವಲ್ಲಿ ಎನ್‌ಬಿಸಿ ಯಶಸ್ವಿಯಾಗಿದೆ ಎಂದು ಆವರು ಮಾಹಿತಿ ನೀಡಿದ್ದಾರೆ. 

ಈತ ತಮಿಳು ಮೂಲದ ಸಿನಿಮಾ ನಿರ್ಮಾಪಕನಾಗಿದ್ದು, ಜೆಎಸ್ಎಂ ಸಿನಿಮಾ ಬ್ಯಾನರ್‌ನಡಿ ಈತ ಮಂಗೈ ಎಂಬ ತಮಿಳು ಸಿನಿಮಾವನ್ನು ನಿರ್ಮಾಣ ಮಾಡಿದ್ದ, ಕಳೆದ ಮೂರು ವರ್ಷಗಳಿಂದ ಈತ ಡ್ರಗ್ ವ್ಯವಹಾರ ನಡೆಸುತ್ತಿದ್ದು, ಈತ ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನ ಹಲವು ವಿಳಾಸಗಳಿಗೆ 3 ಸಾವಿರ ಕಿಲೋಗ್ರಾಂ ಸೂಡೊಫೆಡ್ರಿನ್ ಎಂಬ ಡ್ರಗ್‌ನ್ನು ಪೂರೈಕೆ ಮಾಡಿದ್ದ.  

ಜೈ ಶ್ರೀರಾಮ್, ಭಾರತ ಮಾತೆ ತಮಿಳುನಾಡು ಒಪ್ಪಲ್ಲ, ಛೀ ಥೂ; ಕ್ಯಾಕರಿಸಿ ಉಗಿದ ಡಿಎಂಕೆ ನಾಯಕ ಎ ರಾಜಾ!

ಎಫ್‌ಬಿಐ, ಆಸ್ಟ್ರೇಲಿಯಾ ಹಾಗೂ ನ್ಯೂಜಿಲ್ಯಾಂಡ್‌ನ ತನಿಖಾ ಸಂಸ್ಥೆಗಳ ಸಹಕಾರ ಪಡೆದು ಭಾರತದ ಮಾದಕ ದ್ರವ್ಯ ನಿಯಂತ್ರಣ ದಳ ಈತನನ್ನು ಬಂಧಿಸಿದೆ. ಈತ ಇಂಟರ್‌ನ್ಯಾಷನಲ್ ಡ್ರಗ್ ಡೀಲಿಂಗ್‌ನ ಮಾಸ್ಟರ್ ಮೈಂಡ್ ಆಗಿದ್ದ. ಕಳೆದ ತಿಂಗಳು ಫೆಡರಲ್ ಆಂಟಿ-ನಾರ್ಕೋಟಿಕ್ಸ್ ಏಜೆನ್ಸಿಯೂ ಮೂವರನ್ನು ಬಂಧಿಸಿತ್ತು ಜೊತೆಗೆ ದೆಹಲಿ ಗೋದಾಮೊಂದರ ಮೇಲೆ ದಾಳಿ ಮಾಡಿ 50 ಕೆಜಿ ಸೂಡೊಫೆಡ್ರಿನ್ ಡ್ರಗ್ ಅನ್ನು ವಶಕ್ಕೆ ಪಡೆದಿತ್ತು. ಇದಾದ ನಂತರ ಎನ್‌ಸಿಬಿ ಈ ಪ್ರಕರಣದ ಕಿಂಗ್ಫಿನ್ ಜಾಫರ್ ಸಾದಿಕ್‌ಗೆ ಬಲೆ ಬೀಸಿತ್ತು. 

ಡಿಎಂಕೆ ಕಾರ್ಯಕರ್ತರ ಎಡವಟ್ಟು: ಸ್ಟಾಲಿನ್‌ಗೆ ಪ್ರೈಡ್ ಬದಲು ಬ್ರೈಡ್ ಆಫ್ ತಮಿಳುನಾಡು ಎಂದು ವಿಶ್

ಈತ ಡಿಎಂಕೆಯ ಅನಿವಾಸಿ ಭಾರತೀಯ ಘಟಕದ ಸಂಘಟಕನಾಗಿ ಕೆಲಸ ಮಾಡಿದ್ದ. ಈತನನ್ನು ಇತ್ತೀಚೆಗಷ್ಟೇ ಪಕ್ಷ ಉಚ್ಚಾಟನೆ ಮಾಡಿತ್ತು.  ಈ ಬಗ್ಗೆ ತಮಿಳುನಾಡು ಬಿಜೆಪಿ ಅಧಯಕ್ಷ ಅಣ್ಣಾಮಲೈ ಕೂಡ ಟ್ವಿಟ್‌ ಮಾಡಿದ್ದು, ತಮಿಳುನಾಡು ಸಿಎಂ ಸ್ಟಾಲಿನ್ ಹಾಗೂ ಸ್ಟಾಲಿನ್ ಪುತ್ರ ಉದಯನಿಧಿ ಸ್ಟಾಲಿನ್ ಜೊತೆಗೆ ಈ ಆರೋಪಿ ಜಾಫರ್ ಸಾದಿಕ್ ಇರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

 

 

 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಕರ್ನಾಟಕ ಸಂಸದರ ಬಗ್ಗೆ ಪ್ರಧಾನಿ ಮೋದಿ ಅಸಮಾಧಾನ, ತೀವ್ರ ಕ್ಲಾಸ್, ಆ 45 ನಿಮಿಷ ಸಭೆಯಲ್ಲಿ ಹೇಳಿದ್ದೇನು?
ಚೈನೀಸ್ ಮಾಂಜಾಗೆ ಮತ್ತೊಂದು ಬಲಿ: ಮಗಳನ್ನು ಶಾಲೆಗೆ ಬಿಟ್ಟು ವಾಪಸಾಗುತ್ತಿದ್ದ ತಂದೆ ಸಾವು