ಸಾವಿನ ನಾಟಕವಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ವಾಂಟೆಡ್‌ ನಕ್ಸಲ್ 26 ವರ್ಷದ ಬಳಿಕ ಅರೆಸ್ಟ್‌!

Published : Apr 11, 2022, 09:31 AM ISTUpdated : Apr 11, 2022, 09:33 AM IST
ಸಾವಿನ ನಾಟಕವಾಡಿ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿದ್ದ ವಾಂಟೆಡ್‌ ನಕ್ಸಲ್ 26 ವರ್ಷದ ಬಳಿಕ ಅರೆಸ್ಟ್‌!

ಸಾರಾಂಶ

* 26 ವರ್ಷಗಳಿಂದ ನಾಪತ್ತೆಯಾಗಿದ್ದ ನಕ್ಸಲ್ ಪೊಲೀಸರ ಬಲೆಗೆ * ಬಿಹಾರ ಪೊಲೀಸ್ ಸಿಬ್ಬಂದಿಯನ್ನು ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಿದ್ದ ಆರೋಪಿ * ಸಾವಿನ ನಾಟಕವಾಡಿ ಹೊಸ ಗುರುತಿನೊಂದಿಗೆ ಜೀವನ ಸಾಗಿಸುತ್ತಿದ್ದ ಆರೋಪಿ

ಪಾಟ್ನಾ(ಏ.11): 26 ವರ್ಷಗಳಿಂದ ನಾಪತ್ತೆಯಾಗಿದ್ದ ಮತ್ತು ಬಿಹಾರ ಪೊಲೀಸ್ ಸಿಬ್ಬಂದಿಯನ್ನು ಹಾಡಹಗಲೇ ಭೀಕರವಾಗಿ ಹತ್ಯೆ ಮಾಡಿದ ಆರೋಪ ಹೊತ್ತಿದ್ದ ಮಾವೋವಾದಿ ನಾಯಕನನ್ನು ದೆಹಲಿ ಪೊಲೀಸರ ಅಪರಾಧ ವಿಭಾಗ ಶುಕ್ರವಾರ ಬಂಧಿಸಿದೆ. 90ರ ದಶಕದಲ್ಲಿ ಬಿಹಾರದಲ್ಲಿ ಕಾರ್ಯಾಚರಿಸುತ್ತಿರುವ ನಕ್ಸಲೀಯ ಸಂಘಟನೆಯಾದ ಐಪಿಎಫ್-ಎಂಎಲ್‌ನ ನಾಯಕರಾಗಿದ್ದ 60 ವರ್ಷದ ವ್ಯಕ್ತಿಯೊಬ್ಬರು ಹರಿಯಾಣದ ಫರಿದಾಬಾದ್‌ನಲ್ಲಿ ನಕಲಿ ಗುರುತಿನೊಂದಿಗೆ ವಾಸಿಸುತ್ತಿದ್ದ. ಈವರೆಗೂ ಆತ ಮೃತಪಟ್ಟಿದ್ದಾನೆಂದೇ ಪೊಲೀಸರು ಭಾವಿಸಿದ್ದರು.

ನಕ್ಸಲ್ ನಾಯಕ ಹಲವು ದಿನಗಳಿಂದ ಸಕ್ರಿಯವಾಗಿರುವ ಬಗ್ಗೆ ಪೊಲೀಸ್ ತಂಡ ಮಾಹಿತಿ ಪಡೆಯುತ್ತಿತ್ತು ಎಂದು ಅಪರಾಧ ವಿಭಾಗದ ಡಿಸಿಪಿ ರೋಹಿತ್ ಮೀನಾ ಬಹಿರಂಗಪಡಿಸಿದ್ದಾರೆ. ಇದಾದ ಬಳಿಕ ಎಸಿಪಿ ಅಭಿನೇಂದ್ರ ಜೈನ್ ಮಾರ್ಗದರ್ಶನದಲ್ಲಿ ಇನ್ಸ್ ಪೆಕ್ಟರ್ ಎನ್.ಕೆ.ಲಾಂಬಾ ತಂಡ ಕಿಶುನ್ ಪಂಡಿತ್ ಎಂಬ ವ್ಯಕ್ತಿಗಾಗಿ ಬಲೆ ಬೀಸಿದೆ. ಅವರನ್ನು ದೆಹಲಿಯ ಪುಲ್ ಪ್ರಹ್ಲಾದ್‌ಪುರದಲ್ಲಿ ಬಂಧಿಸಲಾಗಿದೆ.

ನಮ್ಮ ಪಿಜಿಯಲ್ಲಿದ್ದ ಹೆಣ್ಮಗಳು ಹೂವಿ; 'ಬೆಟ್ಟದ ಹೂ' ನಟಿಯ ಹಿನ್ನಲೆ ಬಹಿರಂಗ ಪಡಿಸಿದ ಶಂಕರ್ ಅಶ್ವಥ್

ಬಂಧಿತ ಆರೋಪಿಯು ತನ್ನ ಹೆಸರನ್ನು ಸೋಲೇಂದ್ರ ಪಂಡಿತ್ ಎಂದು ತಿಳಿಸಿ ನಕಲಿ ಗುರುತಿನ ಚೀಟಿಯೊಂದಿಗೆ ಪೊಲೀಸರನ್ನು ದಾರಿತಪ್ಪಿಸಲು ಯತ್ನಿಸಿದ್ದ. ಆದರೆ, ಪೊಲೀಸರ ವಿಚಾರಣೆ ವೇಳೆ ಸತ್ಯಾಂಶ ಬೆಳಕಿಗೆ ಬಂದಿದೆ.

ಈ ನಕ್ಸಲ್ ನಾಯಕ ಸಿನೀಮೀಯ ಶೈಲಿಯ ಕಥೆಯನ್ನು ಪೊಲೀಸರಿಗೆ ವಿವರಿಸಿದ್ದಾನೆ. 1996ರಲ್ಲಿ ಬಿಹಾರದ ಪನ್‌ಪುನ್‌ ಪ್ರದೇಶದಲ್ಲಿ ಹಿರಿಯ ನಕ್ಸಲೀಯ ನಾಯಕ ದೇವೇಂದ್ರ ಸಿಂಗ್‌ ಅವರನ್ನು ಅಪರಿಚಿತ ವ್ಯಕ್ತಿಗಳು ಕೊಂದು ಶವವನ್ನು ಪೊಲೀಸರು ತೆಗೆದುಕೊಂಡು ಹೋಗಿದ್ದರು ಎಂದು ಅವರು ಹೇಳಿದ್ದಾರೆ. ಪಂಡಿತ್ ತನ್ನ ತಂಡದ ಸದಸ್ಯರೊಂದಿಗೆ ಪೋಲೀಸ್ ಸಿಬ್ಬಂದಿ ಮೇಲೆ ದಾಳಿ ಮಾಡಿದ್ದ, ಈ ದಾಳಿಯಲ್ಲಿ ಒಬ್ಬ ಪೋಲೀಸ್ ಸಾವನ್ನಪ್ಪಿದ್ದರೆ, ಮೂವರು ಗಾಯಗೊಂಡಿದ್ದರು. ನಕ್ಸಲೀಯರು ತಮ್ಮ ನಾಯಕನ ಶವವನ್ನು ತೆಗೆದುಕೊಂಡು ಹೋಗಿದ್ದರು. ಅವರು ಪೊಲೀಸ್ ರೈಫಲ್ ಮತ್ತು 40 ಕಾರ್ಟ್ರಿಡ್ಜ್‌ಗಳನ್ನು ದೋಚಿದ್ದಾರೆ.

ಈ ಘಟನೆ ಬೆನ್ನಲ್ಲೇ ಬಿಹಾರ ಪೊಲೀಸರು ಕಾರ್ಯಾಚರಣೆ ನಡೆಸಿ 31 ಜನರನ್ನು ಬಂಧಿಸಿದ್ದರು ಆದರೆ ಪಂಡಿತ್ ಸೇರಿದಂತೆ ನಾಲ್ವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು. 1997 ರಲ್ಲಿ, ಮುಂದಿನ ವರ್ಷ ಘೋಷಿಸಲಾದ ನಗದು ಬಹುಮಾನದೊಂದಿಗೆ ಪೊಲೀಸರು ಸಾರ್ವಜನಿಕ ಅಪರಾಧಿ ಎಂದು ಘೋಷಿಸಿದರು. ಅಂದಿನಿಂದ ತಲೆಮರೆಸಿಕೊಂಡಿದ್ದ ಆರೋಪಿ ಶುಕ್ರವಾರ ಸಿಕ್ಕಿಬಿದ್ದಿದ್ದಾನೆ.

PM Modi on Congress ನಗರ ನಕ್ಸಲರ ಕಪಿಮುಷ್ಟಿಯಲ್ಲಿ ಕಾಂಗ್ರೆಸ್‌, ಸತತ 2ನೆ ದಿನವೂ ಮೋದಿ ವಾಗ್ದಾಳಿ!

ಆರೋಪಿಗಳು ಪೊಲೀಸರಿಂದ ತಪ್ಪಿಸಿಕೊಳ್ಳಲು ವಿಸ್ತೃತ ಯೋಜನೆ ರೂಪಿಸಿದ್ದರು ಎಂದು ಮೂಲಗಳು ತಿಳಿಸಿವೆ. ಆತ ತನ್ನ ಕುಟುಂಬ ಸದಸ್ಯರೊಂದಿಗೆ ಸೇರಿ ತನ್ನ ನಕಲಿ ಕೊಲೆಗೆ ಸಂಚು ರೂಪಿಸಿದ್ದ, ಬಿಹಾರದಲ್ಲಿ ರೈಲ್ವೆ ದುರಂತದಲ್ಲಿ ಪತ್ತೆಯಾದ ಮೃತ ದೇಹವನ್ನು ಕಿಶುನ್ ಪಂಡಿತ್ ಎಂದು ಗುರುತಿಸಿ ಸುಟ್ಟುಹಾಕಿದ್ದರು. ಇದು ಹೊಸ ಗುರುತಿನೊಂದಿಗೆ ಬದುಕುವ ಮಾರ್ಗವನ್ನು ತೆರೆದಿತ್ತು. ಅಲ್ಲದೇ ಆರೋಪಿ ಸತ್ತಿದ್ದಾನೆ ಎಂದು ಪೊಲೀಸರಿಗೆ ನಂಬಿಸುವಲ್ಲಿ ಆರೋಪಿಗಳು ಯಶಸ್ವಿಯಾಗಿದ್ದರು. 

ನಕ್ಸಲರನ್ನು ಪರಿವರ್ತಿಸುವುದು ನಮ್ಮ ಜವಾಬ್ದಾರಿ: ಗೆಹ್ಲೋತ್‌

ಸಮಾಜ ವಿರೋಧಿ ಮತ್ತು ಅಮಾನವೀಯ ಚಟುವಟಿಕೆಗಳಲ್ಲಿ ತೊಡಗಿಕೊಂಡು ದೇಶದ ಪ್ರಗತಿಗೆ ಅಡ್ಡಿಪಡಿಸುತ್ತಿರುವ ಅತೃಪ್ತರನ್ನು ಪರಿವರ್ತಿಸಿ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದು ರಾಜ್ಯಪಾಲ ಥಾವರ್‌ ಚಂದ್‌ ಗೆಹ್ಲೋಟ್‌ ಹೇಳಿದರು.

ಕೇಂದ್ರ ಯುವ ವ್ಯವಹಾರಗಳು ಮತ್ತು ಕ್ರೀಡಾ ಸಚಿವಾಲಯ, ಕರ್ನಾಟಕ ರಾಜ್ಯ ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ನೆಹರು ಯುವ ಕೇಂದ್ರ ಸಂಘಟನೆ ಸಹಯೋಗದಲ್ಲಿ ನಗರದ ಯವನಿಕದಲ್ಲಿ ಗುರುವಾರ ಆಯೋಜಿಸಲಾಗಿದ್ದ ‘13ನೇ ಬುಡಕಟ್ಟು ಯುವ ವಿನಿಮಯ’ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

Karnataka Assembly Session: 20 ವರ್ಷ ಬಳಿಕ ಮೆಟ್ಟಿಲು ಬಳಸಿ ವಿಧಾನಸೌಧಕ್ಕೆ ಬಂದ ರಾಜ್ಯಪಾಲ

ಛತ್ತೀಸ್‌ಗಢ, ಜಾರ್ಖಂಡ್‌ ಮತ್ತು ಆಂಧ್ರಪ್ರದೇಶದ ಬುಡಕಟ್ಟು ಪ್ರದೇಶಗಳ ಯುವಕರು ಬುಡಕಟ್ಟು ಯುವ ವಿನಿಮಯ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ಈ ರಾಜ್ಯಗಳ ಕೆಲವು ಪ್ರದೇಶಗಳು ನಕ್ಸಲ್‌ ಪೀಡಿತ ಪ್ರದೇಶಗಳಾಗಿವೆ. ದೇಶ ಹಾಗೂ ಸಮಾಜದ ವಿರೋಧಿ ಚಟುವಟಿಗಳಲ್ಲಿ ಭಾಗವಹಿಸಿರುವ ಅತೃಪ್ತರನ್ನು ಪರಿವರ್ತಿಸಿ ಸಮಾಜದ ಮುಖ್ಯವಾಹಿನಿಗೆ ತರುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದರು.

ಬುಡಕಟ್ಟು ಸಮುದಾಯದ ಶೈಕ್ಷಣಿಕ, ಆರ್ಥಿಕ ಅಭಿವೃದ್ಧಿ ಮತ್ತು ಸಬಲೀಕರಣಕ್ಕಾಗಿ ಭಾರತ ಸರ್ಕಾರ ಬದ್ಧವಾಗಿದೆ. ಆದಿವಾಸಿಗಳು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ, ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಅಭಿವೃದ್ಧಿಯಾಗಬೇಕಿದೆ. ಈಗಾಗಲೇ ಈ ಸಮುದಾಯಗಳ ಅಭಿವೃದ್ಧಿಗಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಅನೇಕ ಯೋಜನೆಗಳನ್ನು ಜಾರಿಗೊಳಿಸಿವೆ ಎಂದರು.
ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ.ಕೆ.ಸಿ ನಾರಾಯಣ ಗೌಡ ಮಾತನಾಡಿದರು. ಯುವಜನ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ಡಾ. ಶಾಲಿನಿ ರಜನೀಶ್‌, ಆಯುಕ್ತ ಡಾ. ಎನ್‌.ಎನ್‌.ಗೋಪಾಲ್‌ ಕೃಷ್ಣ ಉಪಸ್ಥಿತರಿದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ದಿನಕ್ಕೆರಡು ಬಾರಿ ಠಾಣೆಗೆ ಹಾಜರಾಗಲು ಸೂಚನೆ, ಆದೇಶ ಪ್ರಶ್ನಿಸಿದ ಆರೋಪಿಗೆ 1 ಲಕ್ಷ ರೂ ಪರಿಹಾರ
Suvarna Special: ಮಮತಾ ಬತ್ತಳಿಕೆ ಹೊಸ ಅಸ್ತ್ರ ಯಾವುದು ? ಮೋದಿ ವಿರುದ್ಧ ಹಿಂದೂ ಅಸ್ತ್ರ ಹಿಡಿದ ದೀದಿ..!