ಸಿಧು ವಿವಾದ ಕಾಂಗ್ರೆಸ್‌ಗೆ ಮುಜುಗರ, ಮಳೆ ಪ್ರವಾಹಕ್ಕೆ ದಕ್ಷಿಣ ತತ್ತರ; ನ.20ರ ಟಾಪ್ 10 ಸುದ್ದಿ!

By Suvarna News  |  First Published Nov 20, 2021, 6:30 PM IST

ಇಮ್ರಾನ್ ಖಾನ್ ಹೊಗಳಿದ ನವಜೋತ್ ಸಿಂಗ್ ಮತ್ತೊಂದು ವಿವಾದಲ್ಲಿ ಸಿಲುಕಿದ್ದಾರೆ. ಇದು ಕಾಂಗ್ರೆಸ್‌ಗೆ ತೀವ್ರ ಮುಜುಗರ ತಂದಿದೆ. ಪೊಲೀಸ್ ಅಧಿಕಾರಿಗಳ ಸಮ್ಮೇಳನದಲ್ಲಿ ಮೋದಿ, ದೋವಲ್, ಶಾ ಭಾಗಿ. ಸಯ್ಯದ್ ಮುಷ್ತಾಕ್ ಅಲಿ ಟೂರ್ನಿಯಲ್ಲಿ ಫೈನಲ್ ತಲುಪಿದ ಕರ್ನಾಟಕ, ಮಳೆ ಹಾಗೂ ಪ್ರವಾಹದಿಂದ ಕೊಚ್ಚಿ ಹೋಯ್ತು50 ಮಂದಿ ಪ್ರಯಾಣಿಕರಿದ್ದ ಬಸ್ ಸೇರಿದಂತೆ ನವೆಂಬರ್ 20ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.


Navjot singh sidhu:ಇಮ್ರಾನ್ ಖಾನ್ ನನ್ನ ಅಣ್ಣ, ನಮಗೆ ಗಡಿ ಯಾಕಣ್ಣ; ಸಿಧು ಮತ್ತೊಂದು ವಿವಾದ!

Latest Videos

undefined

ಪಂಜಾಬ್ ಕಾಂಗ್ರೆಸ್ ಅಧ್ಯಕ್ಷ ನವಜೋತ್ ಸಿಂಗ್ ಸಿಧು(navjot singh sidhu) ಹಾಗೂ ವಿವಾದಕ್ಕೂ(controversy) ಅವಿನಾಭಾವ ಸಂಬಂಧವಿದೆ. ಕಳೆದ ಕೆಲ ತಿಂಗಳುಗಳಿಂದ ಪಂಜಾಬ್ ಕಾಂಗ್ರೆಸ್‌ನಲ್ಲಿ(Punjab Congress) ಕೋಲಾಹಲ ಎಬ್ಬಿಸಿದ ಸಿಧು ಸೈಲೆಂಟ್ ಆಗಿದ್ದಾರೆ ಅನ್ನುವಷ್ಟರಲ್ಲೇ ಮತ್ತೆ ಬಹುದೊಡ್ಡ ವಿವಾದ ಮೈಮೇಲೆ ಎಳೆದುಕೊಂಡಿದ್ದಾರೆ. ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್(Imran Khan) ನನ್ನ ಅಣ್ಣ ಎಂದು ಹೊಸ ವಿವಾದ ಸೃಷ್ಟಿಸಿದ್ದಾರೆ. ಸಿಧು ಪಾಕಿಸ್ತಾನ ಪ್ರೀತಿಯನ್ನು ಬಿಜೆಪಿ ಟೀಕಿಸಿದೆ.

PM Modi in Lucknow: ಹಿರಿಯ ಪೋಲಿಸ್‌ ಅಧಿಕಾರಿಗಳ ಸಮ್ಮೇಳನದಲ್ಲಿ ಮೋದಿ, ಅಮಿತ್ ಶಾ, ದೋವಲ್ ಭಾಗಿ

ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi), ಗೃಹ ಸಚಿವ ಅಮಿತ್ ಶಾ (Amith shah) ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ (Ajit Doval) ಇಂದು (ಶನಿವಾರ ನ.20)  ಲಕ್ನೋದಲ್ಲಿನ ಪೊಲೀಸ್ ಪ್ರಧಾನ ಕಚೇರಿಯಲ್ಲಿ ಪೊಲೀಸ್ ಮಹಾನಿರ್ದೇಶಕರು (DGP) ಮತ್ತು ಪೊಲೀಸ್ ಮಹಾನಿರೀಕ್ಷಕರ (IGP) 56 ನೇ ಸಮ್ಮೇಳನದಲ್ಲಿ ಭಾಗವಹಿಸಿದರು. ಇಂದು ಮತ್ತು ನಾಳೆ ಸಭೆ ಈ  ನಡೆಯಲಿದ್ದು ಪ್ರಧಾನಿ, ಗ್ರಹ ಸಚಿವ ಹಾಗೂ ಭದ್ರತಾ ಸಲಹೆಗಾರ ಎಲ್ಲ ರಾಜ್ಯಗಳ ಹಿರಿಯ ಪೋಲಿಸ್‌ ಅಧಿಕಾರಿಗಳನ್ನು ಭೇಟಿಯಾಗಲಿದ್ದಾರೆ. 

Andhra Pradesh Rains: ಅಣೆಕಟ್ಟು ಒಡೆದು ಕೊಚ್ಚಿ ಹೋಯ್ತು 50 ಪ್ರಯಾಣಿಕರಿದ್ದ ಬಸ್!

ಮಳೆ ಅವಾಂತರ ಸೃಷ್ಟಿಸಿದೆ. ನವೆಂಬರ್ 19 ರಂದು ರಾಯಲಸೀಮಾದ ಮೂರು ಜಿಲ್ಲೆಗಳು ಮತ್ತು ದಕ್ಷಿಣ ಕರಾವಳಿ (South Coastal) ಜಿಲ್ಲೆಯ ಒಂದು ಜಿಲ್ಲೆಗಳಲ್ಲಿ 20 ಸೆಂ.ಮೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿತ್ತು. ಕಡಪ ಜಿಲ್ಲೆಯಲ್ಲಿ ಗರಿಷ್ಠ ಪ್ರಮಾಣದ ಮಳೆಯಾಗಿದೆ.

Syed Mushtaq Ali Trophy: ವಿದರ್ಭ ಬಗ್ಗುಬಡಿದು ಫೈನಲ್‌ಗೆ ಲಗ್ಗೆಯಿಟ್ಟ ಕರ್ನಾಟಕದ ಹುಡುಗರು..!

ಮತ್ತೊಮ್ಮೆ ಕ್ರಿಕೆಟ್ ಅಭಿಮಾನಿಗಳನ್ನು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿ ಪಂದ್ಯ ಗೆಲ್ಲುವಲ್ಲಿ ಕರ್ನಾಟಕ ತಂಡವು ಯಶಸ್ವಿಯಾಗಿದೆ. ಸಯ್ಯದ್ ಮುಷ್ತಾಕ್ ಅಲಿ ಟಿ20 ಟೂರ್ನಿಯ ಸೆಮಿಫೈನಲ್‌ನಲ್ಲಿ ಬಲಿಷ್ಠ ವಿದರ್ಭ ತಂಡದ ಎದುರು 4 ರನ್‌ಗಳ ರೋಚಕ ಜಯ ಸಾಧಿಸಿ ಫೈನಲ್‌ಗೆ ಲಗ್ಗೆಯಿಟ್ಟಿದೆ. ಇದೀಗ ಫೈನಲ್‌ನಲ್ಲಿ ದಕ್ಷಿಣ ಭಾರತದ ಎರಡು ಬಲಿಷ್ಠ ತಂಡಗಳಾದ ಕರ್ನಾಟಕ ಹಾಗೂ ತಮಿಳುನಾಡು ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿವೆ. 

Jahnvi Kapoor: ಪೋಸ್ ಕೊಡಮ್ಮಾ ಅಂದ್ರೆ ಹಿಂಗಾ ಮಾಡೋದು ?

ಬಾಲಿವುಡ್(Bollywood) ನಟಿ ಜಾಹ್ನವಿ ಕಪೂರ್(Janhvi Kapoor) ಅಂದ್ರೆ ಸುಮ್ನೇನಾ ? ಸಖತ್ ಡಿಮ್ಯಾಂಡ್‌ನಲ್ಲಿರೋ ಯುವ ನಟಿ ಆಕೆ. ಆದ್ರೆ ಪೋಸ್ ಕೊಡಮ್ಮಾ ಅಂದ್ರೆ ಎಷ್ಟು ತುಂಟಿಯಾಗ್ತಾರೆ ನೋಡಿ ಶ್ರೀದೇವಿ(Sridevi) ಪುತ್ರಿ. 

Internet Connection ಶೇ.50 ರಷ್ಟು ಭಾರತೀಯರಿಗಿಲ್ಲ ಇಂಟರ್‌ ನೆಟ್‌ ಸಂಪರ್ಕ

ಭಾರತ (india) ಕೃಷಿ ರಂಗದಲ್ಲಿ ಕೃತಕ ಬುದ್ಧಿ ಮತ್ತೆ ಅಳವಡಿಸಿಕೊಂಡರೆ ಪ್ರಬಲ ಆರ್ಥಿಕ ಶಕ್ತಿಯಾಗಿ ಬೆಳೆಯಬಹುದು, ಜಗತ್ತಿನಲ್ಲಿ ಈಗ ನಡೆಯುತ್ತಿರುವ ನಾಲ್ಕನೇ ಕೈಗಾರಿಕಾ  ಕ್ರಾಂತಿಯಲ್ಲಿ (Industrial revolution) ವೇಗದಿಂದ ಕೆಲಸ ಮಾಡಲು ಅಂತರ್ಜಾಲ (Internet) ಲಭ್ಯತೆ ಪ್ರಮುಖ ಪಾತ್ರ ವಹಿಸುತ್ತಿದೆ. ಆದರೆ ಭಾರತದಲ್ಲಿ ಶೇ.50 ರಷ್ಟು ಜನರಿಗೆ ಅಂತರ್ಜಾಲ ಸೌಲಭ್ಯ ಸಿಕ್ಕುತ್ತಿಲ್ಲ. ಹಾಗಾಗಿ ಈ ‘ಡಿಜಿಟಲ್ ಅಂತರ’ (Digital gap) ಪರಿಹರಿಸಲು ಸರ್ಕಾರಗಳು ಆದ್ಯತೆ ನೀಡಬೇಕು ಎಂದು ವಿಶ್ವ ಆರ್ಥಿಕ ವೇದಿಕೆಯ (ಡಬ್ಲ್ಯೂಇಎಫ್‌ WEF) ಸಂಸ್ಥಾಪಕ ಪ್ರೊ. ಕ್ಲಾಸ್‌ ಶ್ವಾಬ್‌ ಸಲಹೆ ನೀಡಿದ್ದಾರೆ.

Apple Electric Car: 2025ಕ್ಕೆ ಸ್ಟೀರಿಂಗ್ ಇಲ್ಲದ, ಸ್ವಯಂಚಾಲಿತ ಕಾರ್?!

ಸ್ಮಾರ್ಟ್‌ಫೋನ್ ಉತ್ಪಾದನೆ ಸೇರಿದಂತೆ ಎಲೆಕ್ಟ್ರಾನಿಕ್ಸ್ ಸಾಧನಗಳ ಉತ್ಪಾದನೆಯಲ್ಲಿ ಅಗ್ರಗಣ್ಯವಾಗಿರುವ ಆಪಲ್ ಕಂಪನಿಯು, ತನ್ನ ಎಲೆಕ್ಟ್ರಿಕ್ ಕಾರನ್ನು 2025ರಲ್ಲಿ ಅನಾವರಣ ಮಾಡುವ ಸಾಧ್ಯತೆ ಇದೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಅತ್ಯಾಧುನಿಕ ತಂತ್ರಜ್ಞಾನ ಆಧರಿತವಾಗಿರಲಿದೆ ಈ ಕಾರ್ ಎನ್ನಲಾಗಿದೆ. ಮತ್ತೊಂದೆಡೆ ಶಿಯೋಮಿ ಕೂಡ ಎಲೆಕ್ಟ್ರಿಕ್ ಕಾರ್ ಬಿಡುಗಡೆ ಮಾಡಲಿದೆ.

Farm Laws| ಮುಂದಿಡೋ ಹೆಜ್ಜೆ ಹಿಂದಿಡೋ ಮಾತೇ ಇಲ್ಲ ಎಂದ ಮೋದಿ ಕೃಷಿ ಕಾಯ್ದೆ ಹಿಂಪಡೆದಿದ್ದೇಕೆ?

ರಾತ್ರೋ ರಾತ್ರಿ ನಿರ್ಧಾರ, ಬೆಳ್ಳಂ ಬೆಳಗ್ಗೆ ಘೋಷಣೆ. ವಿವಾದಾತ್ಮಕ ಮೂರು ಕೃಷಿ ಕಾಯ್ದೆಗಳನ್ನು ದಿಢೀರ್ ಅಂತ ವಾಪಾಸ್‌ ಪಡೆದ್ರು ಪ್ರಧಾನಿ ಮೋದಿ. ಮುಂದಿಟ್ಟ ಹೆಜ್ಜೆ ಹಿಂದಿಡೋ ಮಾತೇ ಇಲ್ಲ ಎಂದಿದ್ದ ಮೋದಿ ಇದ್ದಕ್ಕಿದ್ದಂತೆ ರಿವರ್ಸ್‌ ಗೇರ್‌ ಹಾಕಿದ್ದೇಕೆ? ಮೋದಿ ಮಾಸ್ಟರ್‌ ಸ್ಟ್ರೋಕ್ ನಿರ್ಧಾರದ ಹಿಂದಿದ್ಯಾ ಉತ್ತರ ಗೆಲ್ಲುವ ರಣತಂತ್ರ?

click me!