ಕೋವಿಡ್‌ ಸನ್ನದ್ಧತೆ ಪರೀಕ್ಷೆಗೆ ಇಂದು, ನಾಳೆ ಅಣಕು ಕಾರ್ಯಾಚರಣೆ: ದೇಶದಲ್ಲಿ 5357 ಹೊಸ ಕೋವಿಡ್‌ ಕೇಸ್‌, 11 ಸಾವು

By Kannadaprabha News  |  First Published Apr 10, 2023, 8:55 AM IST

ದೇಶದಲ್ಲಿನ ಕೋವಿಡ್‌ ಪರಿಸ್ಥಿತಿಯ ಅವಲೋಕನಕ್ಕಾಗಿ ಎಲ್ಲಾ ರಾಜ್ಯಗಳ ಜೊತೆಗೆ ಏಪ್ರಿಲ್‌ 7ರಂದು ಸಭೆ ನಡೆಸಿದ್ದ ಮನ್‌ಸುಖ್‌ ಮಾಂಡವೀಯ, ಎಲ್ಲಾ ಆರೋಗ್ಯ ಸಚಿವರು ಆಸ್ಪತ್ರೆಗಳಿಗೆ ಭೇಟಿ ನೀಡಿ ಅಣಕು ಕಾರ್ಯಾಚರಣೆ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು. ಅಲ್ಲದೆ ಜಿಲ್ಲಾ ಆಡಳಿತಗಳ ಜೊತೆಗೆ ಸಭೆ ನಡೆಸಿ ಸನ್ನದ್ಧತೆಯ ಮಾಹಿತಿ ಸಂಗ್ರಹಿಸುವಂತೆಯೂ ಕೋರಿದ್ದರು.


ನವದೆಹಲಿ (ಏಪ್ರಿಲ್ 10, 2023): ದೇಶಾದ್ಯಂತ ಹೊಸ ಕೋವಿಡ್‌ ಪ್ರಕರಣಗಳು ಹಾಗೂ ಜ್ವರಪೀಡಿತರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿರುವ ಹಿನ್ನೆಲೆಯಲ್ಲಿ, ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಆಸ್ಪತ್ರೆಗಳ ಸನ್ನದ್ಧತೆ ಮತ್ತು ಮೂಲಸೌಕರ್ಯ ಸನ್ನದ್ಧತೆ ಪರೀಕ್ಷಿಸಲು ಏಪ್ರಿಲ್‌ 10 ಮತ್ತು 11 ರಂದು ರಾಷ್ಟ್ರವ್ಯಾಪಿ ಅಣಕು ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿದೆ.

ಸರ್ಕಾರಿ (Government) ಹಾಗೂ ಖಾಸಗಿ ಆಸ್ಪತ್ರೆಗಳು (Private Hospitals) ಈ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು, ಆಸ್ಪತ್ರೆಗಳಲ್ಲಿ ಔಷಧ (Medicine), ಹಾಸಿಗೆ (Bed), ವೈದ್ಯಕೀಯ ಉಪಕರಣ (Medical Equipment) ಹಾಗೂ ವೈದ್ಯಕೀಯ ಆಕ್ಸಿಜನ್‌ (Medical Oxygen) ಲಭ್ಯತೆ ಕುರಿತು ಪರಿಶೀಲನೆ ನಡೆಸಲಾಗುತ್ತದೆ. ಕೇಂದ್ರ ಆರೋಗ್ಯ ಖಾತೆ ಸಚಿವ ಮನ್‌ಸುಖ್‌ ಮಾಂಡವೀಯ (Union Health Minister Mansukh Mandaviya) ದೆಹಲಿ ಏಮ್ಸ್‌ (Delhi AIIMS) ಮತ್ತು ಝಾಜ್ಜರ್‌ಗೆ ಭೇಟಿ ನೀಡಿ ಕಾರ್ಯಾಚರಣೆ ವೀಕ್ಷಿಸಲಿದ್ದಾರೆ.

Latest Videos

ಇದನ್ನು ಓದಿ: ಭಾರತದಲ್ಲಿ ಕೋವಿಡ್‌ನ ಮತ್ತಷ್ಟು ರೂಪಾಂತರ, ಸೋಂಕು ಹೆಚ್ಚಳ ಸಾಧ್ಯತೆ: WHO

ದೇಶದಲ್ಲಿನ ಕೋವಿಡ್‌ ಪರಿಸ್ಥಿತಿಯ (COVID Situation) ಅವಲೋಕನಕ್ಕಾಗಿ ಎಲ್ಲಾ ರಾಜ್ಯಗಳ ಜೊತೆಗೆ ಏಪ್ರಿಲ್‌ 7ರಂದು ಸಭೆ ನಡೆಸಿದ್ದ ಮನ್‌ಸುಖ್‌ ಮಾಂಡವೀಯ, ಎಲ್ಲಾ ಆರೋಗ್ಯ ಸಚಿವರು (Health Ministers) ಆಸ್ಪತ್ರೆಗಳಿಗೆ ಭೇಟಿ ನೀಡಿ ಅಣಕು ಕಾರ್ಯಾಚರಣೆ ಪರಿಶೀಲಿಸಬೇಕು ಎಂದು ಮನವಿ ಮಾಡಿದ್ದರು. ಅಲ್ಲದೆ ಜಿಲ್ಲಾ ಆಡಳಿತಗಳ ಜೊತೆಗೆ ಸಭೆ ನಡೆಸಿ ಸನ್ನದ್ಧತೆಯ ಮಾಹಿತಿ ಸಂಗ್ರಹಿಸುವಂತೆಯೂ ಕೋರಿದ್ದರು.

ಭಾರತದಲ್ಲಿ (India) ಕಳೆದ ತಿಂಗಳು ಸೋಂಕು ಏರಿಕೆಗೆ ಕಾರಣವಾಗಿತ್ತು ಎನ್ನಲಾದ ಎಕ್ಸ್‌ಬಿಬಿ.1.16 ಕೋವಿಡ್‌ ವೈರಾಣು ಮತ್ತಷ್ಟು ರೂಪಾಂತರಗೊಂಡಿದೆ. ಅದು ಸೋಂಕಿನ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸುವ ಸಾಧ್ಯತೆ ಇದೆ ಎಂದು ವಿಶ್ವ ಆರೋಗ್ಯ ಸಂಸ್ಥೆ (World Health Organization) ಎಚ್ಚರಿಸಿದ ಬೆನ್ನಲ್ಲೇ ಈ ಕಾರ್ಯಾಚರಣೆ ಆಯೋಜನೆಗೊಂಡಿದೆ.

ಇದನ್ನೂ ಓದಿ: Covid Cases: ಕೋವಿಡ್‌ ಎದುರಿಸಲು ಸಿದ್ಧರಾಗಿ, ರಾಜ್ಯಗಳಿಗೆ ಕೇಂದ್ರ ಸೂಚನೆ

5357 ಹೊಸ ಕೋವಿಡ್‌ ಕೇಸ್‌, 11 ಸಾವು
ದೇಶದಲ್ಲಿ ಕೋವಿಡ್‌ ಏರಿಕೆ ಮುಂದುವರೆಯುತ್ತಲೇ ಇದ್ದು ಭಾನುವಾರ ಮುಂಜಾನೆ 8 ಗಂಟೆಗೆ ಮುಕ್ತಾಯವಾದ 24 ಗಂಟೆಗಳ ಅವಧಿಯಲ್ಲಿ ಒಟ್ಟು 5,357 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ. ಗುಣಮುಖರ ಪ್ರಮಾಣ ಇಳಿಕೆ ಹಾಗೂ ಕೋವಿಡ್‌ ಪ್ರಕರಣಗಳ ಏರಿಕೆ ಹಿನ್ನೆಲೆ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ 32,814 ಕ್ಕೆ ಏರಿಕೆಯಾಗಿದೆ. ಇದೇ ವೇಳೆ ಒಟ್ಟು 11 ಸೋಂಕಿತರು ಸಾವನ್ನಪ್ಪಿದ್ದಾರೆ. ಚೇತರಿಕೆಯ ಪ್ರಮಾಣವು 98.74ರಷ್ಟು ದಾಖಲಾಗಿದ್ದು ದೇಶದಲ್ಲಿ ಈವರೆಗೆ ಒಟ್ಟು 4.47 ಕೋಟಿ ಜನರು ಕೋವಿಡ್‌ ಸೋಂಕಿಗೆ ತುತ್ತಾಗಿದ್ದಾರೆ. ಇನ್ನು ಈವರೆಗೆ ಒಟ್ಟು 220.66 ಕೋಟಿ ಡೋಸ್‌ ಲಸಿಕೆಗಳ ವಿತರಣೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ (Health Ministry) ತಿಳಿಸಿದೆ.

ಇದನ್ನು ಓದಿ: ಇನ್ನು 15-20 ದಿನಕ್ಕೆ ದೇಶದಲ್ಲಿ ಕೋವಿಡ್‌ ತುತ್ತ ತುದಿಗೆ: ತಜ್ಞರು

click me!