ನೈಟ್ ಕ್ಲಬ್‌ಗೆ ಪ್ರವೇಶ ನಿರಾಕರಿಸಿದ್ದಕ್ಕೆ ಯುವತಿಯ ಹೈಡ್ರಾಮಾ: ಬಟ್ಟೆ ಕಿತ್ತೆಸೆದು ಗಲಾಟೆ

Published : Apr 09, 2023, 05:41 PM ISTUpdated : Apr 09, 2023, 05:47 PM IST
ನೈಟ್ ಕ್ಲಬ್‌ಗೆ ಪ್ರವೇಶ ನಿರಾಕರಿಸಿದ್ದಕ್ಕೆ ಯುವತಿಯ ಹೈಡ್ರಾಮಾ:  ಬಟ್ಟೆ  ಕಿತ್ತೆಸೆದು ಗಲಾಟೆ

ಸಾರಾಂಶ

ನೈಟ್‌ ಕ್ಲಬ್‌ಗೆ ಪ್ರವೇಶ ನೀಡಿಲ್ಲ ಎಂದು ಸಿಟ್ಟಿಗೆದ್ದ 20 ರ ಹರೆಯದ ಅಪರಿಚಿತ ಯುವತಿಯೊಬ್ಬಳು ಬಟ್ಟೆ ಕಿತ್ತೆಸೆದು ಕ್ಲಬ್ ಬೌನ್ಸರ್‌ಗಳನ್ನು ಪೇಚಿಗೆ ಸಿಲುಕಿಸಿದ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ.

ನೈಟ್‌ ಕ್ಲಬ್‌ಗೆ ಪ್ರವೇಶ ನೀಡಿಲ್ಲ ಎಂದು ಸಿಟ್ಟಿಗೆದ್ದ 20 ರ ಹರೆಯದ ಅಪರಿಚಿತ ಯುವತಿಯೊಬ್ಬಳು ಬಟ್ಟೆ ಕಿತ್ತೆಸೆದು ಕ್ಲಬ್ ಬೌನ್ಸರ್‌ಗಳನ್ನು ಪೇಚಿಗೆ ಸಿಲುಕಿಸಿದ ಘಟನೆ ಮಹಾರಾಷ್ಟ್ರದ ನಾಗಪುರದಲ್ಲಿ ನಡೆದಿದೆ. ಇದರ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಆಗಪುರದ ವರ್ಧಾ ರೋಡ್‌ನಲ್ಲಿರುವ ಕ್ಲಬ್ ಒಂದರ ಮುಂದೆ ಈ ಘಟನೆ ನಡೆದಿದೆ.  ಕ್ಲಬ್ ಒಳ ಪ್ರವೇಶಿಸಲು ನಿರಾಕರಿಸಿದ್ದಕ್ಕೆ ಆಕೆ ತನ್ನ ಟಾಪ್‌ ಕಿತ್ತೆಸೆದು ಕೇವಲ ಬ್ರಾ ಹಾಗೂ ಚಡ್ಡಿಯಲ್ಲಿ ನಿಂತುಕೊಂಡು ಕ್ಲಬ್‌ನ ಬೌನ್ಸರ್‌ಗಳನ್ನು ಅಸಭ್ಯವಾಗಿ ನಿಂದಿಸುತ್ತಿರುವ ದೃಶ್ಯ ವಿಡಿಯೋದಲ್ಲಿ ಸೆರೆ ಆಗಿದೆ.  ಮಾರ್ಚ್‌ 24 ರಂದು ಘಟನೆ ನಡೆದಿದೆ ಎನ್ನಲಾಗುತ್ತಿದ್ದು, ಈಗ ವಿಡಿಯೋ ವೈರಲ್ ಆಗಿದೆ. 

ಕ್ಲಬ್‌ಗೆ (Night club)ಪ್ರವೇಶ ನಿರಾಕರಿಸಿದ್ದಕ್ಕೆ ಆಕೆ ಮೊದಲಿಗೆ ಬಟ್ಟೆ ಕಿತ್ತೆಸೆಯುವುದಾಗಿ (Strip) ಬೆದರಿಕೆಯೊಡ್ಡಿದ್ದಾಳೆ. ಆದರೆ ಇದಕ್ಕೆ ಕ್ಯಾರೆ ಮಾಡದ ಬೌನ್ಸರ್‌ಗಳು ಆಕೆಗೆ ಪ್ರವೇಶ ನೀಡದೇ ಕ್ಲಬ್‌ನಿಂದ ಹೊರಗೆ ಹಾಕಿದ್ದಾರೆ. ಈ ವೇಳೆ ಸಿಟ್ಟಿಗೆದ್ದ ಆಕೆ ತನ್ನ ಟಾಪ್ ಕಿತ್ತೆಸೆದು ಡೆನಿಮ್ ಚಡ್ಡಿ ಹಾಗೂ ಬ್ರಾದಲ್ಲಿ ನಿಂತುಕೊಂಡು ಬೌನ್ಸರ್‌ಗಳನ್ನು ನಿಂದಿಸಿದ್ದಾಳೆ.  ಅಲ್ಲದೇ ಆಕೆ ವೀಡಿಯೋ ಮಾಡುತ್ತಿರುವುದಕ್ಕೂ ಆಕ್ರೋಶ ವ್ಯಕ್ತಪಡಿಸಿದ್ದಾಳೆ. 

ಸಲ್ಮಾನ್ ಖಾನ್ ಬೆತ್ತಲೆ ಫೋಟೋ ವೈರಲ್; ನಮ್ಗೂ ಬದುಕೋಕೆ ಬಿಡಪ್ಪ ಎಂದ ಹುಡುಗರು

ಘಟನೆಗೆ  ಸಂಬಂಧಿಸಿದಂತೆ ನಾಗಪುರದ (Nagapur) ಸೊನೇಗಾಂವ್ ಪೊಲೀಸ್ ಠಾಣೆ ಅಧಿಕಾರಿಯೊಬ್ಬರು ಪ್ರತಿಕ್ರಿಯಿಸಿದ್ದು, ನೈಟ್‌ ಕ್ಲಬ್ ಮಾಲೀಕ ಕರನ್ ಥಕ್ಕರ್ ಅವರು ಹುಡುಗಿಯೊಬ್ಬಳು ಬಟ್ಟೆ ಕಿತ್ತೆಸೆಯುವುದಾಗಿ ಬೆದರಿಕೆಯೊಡ್ಡಿ ನಂತರ ನೈಟ್‌ ಕ್ಲಬ್‌ನ  ಮಹಿಳಾ ಹಾಗೂ ಪುರುಷ ಬೌನ್ಸರ್‌ಗಳನ್ನು (Bouncers) ಅಸಭ್ಯವಾಗಿ ನಿಂದಿಸಿದ್ದಾಳೆ ಎಂದು ಪೊಲೀಸರಿಗೆ ಮಾಹಿತಿ ನೀಡಿದರು ಎಂದರು. ಅಲ್ಲದೇ ತನಗೆ ಗೊತ್ತಿರುವವರು ಎಂದು ಹೇಳಿ ಆಕೆ ಕ್ಲಬ್‌ಗೆ ಬಂದ ಅತಿಥಿಗಳಿಗೆ ತನ್ನ ವೈಯಕ್ತಿಕ ಫೋನ್ ನಂಬರ್ ನೀಡುತ್ತಿದ್ದಳು ಎಂದು ಅವರು ಪೊಲೀಸರ ಬಳಿ ದೂರಿದ್ದಾರೆ. 

ಅವಳು ನಮ್ಮ ಪಬ್‌ಗೆ ಹೇಗೆ ಬಂದಳು ಎಂಬುದರ ಬಗ್ಗೆ ನಮಗೆ ಯಾವುದೇ ಸುಳಿವು ಇಲ್ಲ. ಆದರೆ ಪೊಲೀಸರು ಸ್ಥಳಕ್ಕೆ ತಲುಪುತ್ತಿದ್ದಂತೆಯೇ ಬೇರೊಬ್ಬರು ಚಾಲನೆ ಮಾಡುತ್ತಿದ್ದ ಕಾರಿನಲ್ಲಿ ಸ್ಥಳದಿಂದ ತರಾತುರಿಯಿಂದ ಹೊರಟು ಹೋಗಿದ್ದನ್ನು ಗಮನಿಸಿದ್ದೇವೆ. ಆದರೆ ಅವಳು ಸಾಮಾನ್ಯಳಂತೆ ಕಾಣಲಿಲ್ಲ ಎಂದು ಕ್ಲಬ್ ಮಾಲೀಕ ಹೇಳಿದ್ದಾರೆ. 

ಅನ್ಯ ಗ್ರಹ ಜೀವಿ ಅಂತ ಹೇಳ್ಕೊಂಡು ಬೆತ್ತಲೆ ಓಡಾಡ್ತಿದ್ದ ಭೂಪ ಅರೆಸ್ಟ್..!

ಪೊಲೀಸರ ಎಂಟ್ರಿಯಾಗುತ್ತಿದ್ದಂತೆ ಕುರುಹು ಇಲ್ಲದೆ ಕಣ್ಮರೆಯಾದ ಆಕೆಯ ಬಗ್ಗೆ ಸಂಶಯ ಮೂಡಿದೆ. ಪೊಲೀಸರು ಮಾಹಿತಿ ಬಂದ ಕೂಡಲೇ ಸ್ಥಳಕ್ಕೆ ತೆರಳಿದ್ದರೂ, ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಆಕೆಯನ್ನು ಬಂಧಿಸಲಾಗಲಿಲ್ಲ ಎಂದು ವಲಯ ಡಿಸಿಪಿ ಅನುರಾಗ್ ಜೈನ್ (DCP Anurag Jain) ಹೇಳಿಕೊಂಡಿದ್ದಾರೆ.  ಇತ್ತ ಕ್ಲಬ್ ಮಾಲೀಕ ತಕ್ಕರ್ ಈ ಬೆತ್ತಲಾಗಲು ಮುಂದಾದ ಮಹಿಳೆಯ ವಿರುದ್ಧ ಪ್ರಕರಣ ದಾಖಲಿಸುವಂತೆ ಅಧಿಕಾರಿಗಳನ್ನು ಕೇಳಿದ್ದಾರೆ. 


 

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ಇನ್ನೂ 10 ದಿನಗಳ ಕಾಲ ಇಂಡಿಗೋಳು
ಧಾರ್ಮಿಕ ಪ್ರಾರ್ಥನೆಗೆ ಧ್ವನಿವರ್ಧಕ ಕಡ್ಡಾಯವಲ್ಲ : ಹೈಕೋರ್ಟ್‌