
ಜೈಪುರ (ಏಪ್ರಿಲ್ 10, 2023): ರಾಜಸ್ಥಾನ ಕಾಂಗ್ರೆಸ್‌ನಲ್ಲಿ ಮತ್ತೆ ಪೈಲಟ್ ವರ್ಸಸ್ ಗೆಹ್ಲೋಟ್ ಕದನ ಆರಂಭವಾಗಿದೆ. ತಮ್ಮ ಕಡು ವಿರೋಧಿ, ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ವಿರುದ್ಧ ಹೊಸದಾಗಿ ಗಂಭೀರ ಆರೋಪ ಮಾಡಿರುವ ಕಾಂಗ್ರೆಸ್ ನಾಯಕ ಸಚಿನ್ ಪೈಲಟ್, ‘ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ನಾಯಕಿ ವಸುಂಧರಾ ರಾಜೆ ಜೊತೆ ಗೆಹ್ಲೋಟ್ ‘ಡೀಲ್’ ಮಾಡಿಕೊಂಡಿದ್ದಾರೆ. ಹೀಗಾಗಿ ಅವರ ಅವಧಿಯ ಭ್ರಷ್ಟಾಚಾರ ತನಿಖೆಗೆ ರಾಜ್ಯ ಸರ್ಕಾರ ಮುಂದಾಗುತ್ತಿಲ್ಲ. ಇದರ ವಿರುದ್ಧ ಮಂಗಳವಾರ ಉಪವಾಸ ಸತ್ಯಾಗ್ರಹ ಮಾಡಲಿದ್ದೇನೆ’ ಎಂದು ಘೋಷಿಸಿದ್ದಾರೆ.
ಭಾನುವಾರ ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿನ್ ಪೈಲಟ್ (Sachin Pilot) ‘ಹಿಂದೆ ನಾವು ವಿಪಕ್ಷದಲ್ಲಿದ್ದಾಗ ಬಿಜೆಪಿ (BJP) ಸರ್ಕಾರದ ಭ್ರಷ್ಟಾಚಾರದ (Corruption) ವಿರುದ್ಧ ಧ್ವನಿ ಎತ್ತಿದ್ದೆವು. ನಾವು ಅಧಿಕಾರಕ್ಕೆ ಬಂದರೆ ಈ ಬಗ್ಗೆ ತನಿಖೆಯ (Investigation) ಭರವಸೆಯನ್ನೂ ನೀಡಿದ್ದೆವು. ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಹಲವು ವರ್ಷ ಕಳೆದರೂ ತನಿಖೆ ಗೋಜಿಗೆ ಹೋಗಿಲ್ಲ. ಇದನ್ನೆಲ್ಲಾ ನೋಡಿದರೆ ನಮ್ಮ ವಿರೋಧಿಗಳು, ನಾವು ಭ್ರಷ್ಟರ ಜೊತೆ ಕೈಜೋಡಿಸಿರುವ ಶಂಕೆ ವ್ಯಕ್ತಪಡಿಸಬಹುದು. ಭ್ರಷ್ಟಾಚಾರದ ಪ್ರಕರಣದ ತನಿಖೆ ಕೋರಿ ಕಳೆದ ವರ್ಷ 2 ಬಾರಿ ಮುಖ್ಯಮಂತ್ರಿಗೆ (Chief Minister) ಪತ್ರ ಬರೆದಿದ್ದೆ. ಆದರೆ ಅದಕ್ಕೆ ಉತ್ತರ ಬರಲಿಲ್ಲ. ಹೀಗಾಗಿ ಈ ವಿಷಯದಲ್ಲಿ ಸರ್ಕಾರದ ಗಮನ ಸೆಳೆಯಲು ಏಪ್ರಿಲ್ 11ರಂದು ಒಂದು ದಿನದ ಉಪವಾಸ ಸತ್ಯಾಗ್ರಹ ನಡೆಸಲು ನಿರ್ಧರಿಸಿರುವೆ’ ಎಂದು ಹೇಳಿದರು.
ಇದನ್ನು ಓದಿ: ರಾಜಸ್ಥಾನದಲ್ಲಿ ಎಲ್‌ಪಿಜಿ ಸಿಲಿಂಡರ್ ಬೆಲೆ ಶೇ. 50 ರಷ್ಟು ಇಳಿಕೆ ಮಾಡಿದ ಅಶೋಕ್ ಗೆಹ್ಲೋಟ್..!
ಈ ಹಿಂದೆಯೂ ಸಿಎಂ ಹುದ್ದೆ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಚಿನ್ ಪೈಲಟ್ - ಅಶೋಕ್ ಗೆಹ್ಲೋಟ್ ನಡುವೆ ಸಂಘರ್ಷ ನಡೆದಿತ್ತು.
ಅಶೋಕ್ ಗೆಹ್ಲೋಟ್ ಬೆಂಬಲಕ್ಕೆ ಕಾಂಗ್ರೆಸ್ ಹೈಕಮಾಂಡ್
ನವದೆಹಲಿ: ಅಶೋಕ್ ಗೆಹ್ಲೋಟ್ (Ashok Gehlot) - ಸಚಿನ್ ಪೈಲಟ್ ಸಂಘರ್ಷದ ಬೆನ್ನಲ್ಲೇ ಗೆಹ್ಲೋಟ್ ಬೆಂಬಲಕ್ಕೆ ಹೈಕಮಾಂಡ್ ಧಾವಿಸಿದೆ. ‘ಅಶೋಕ್ ಗೆಹ್ಲೋಟ್ ಮುಖ್ಯಮಂತ್ರಿಯಾದ ಬಳಿಕ ರಾಜಸ್ಥಾನದಲ್ಲಿ ಕಾಂಗ್ರೆಸ್ ಸರ್ಕಾರವು ಹೆಚ್ಚಿನ ಸಂಖ್ಯೆಯ ಯೋಜನೆಗಳನ್ನು ಜಾರಿಗೆ ತಂದಿದೆ ಮತ್ತು ಅನೇಕ ಹೊಸ ಉಪಕ್ರಮಗಳನ್ನು ಕ್ರಗೊಂಡಿದ್ದು ಅದು ಜನರನ್ನು ಗಾಢವಾಗಿ ಪ್ರಭಾವಿಸಿದೆ. ಇದು ನಮ್ಮ ದೇಶದಲ್ಲಿ ಆಡಳಿತದಲ್ಲಿ ರಾಜ್ಯಕ್ಕೆ ನಾಯಕತ್ವದ ಸ್ಥಾನವನ್ನು ನೀಡಿದೆ’ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ, ಸಂವಹನ ಉಸ್ತುವಾರಿ ಜೈರಾಮ್ ರಮೇಶ್ ಹೇಳಿದ್ದಾರೆ. ಸಚಿನ್ ಪೈಲಟ್ ಬಗ್ಗೆ ಅವರು ನೇರವಾಗಿ ಹೇಳದಿದ್ದರೂ ಪರೋಕ್ಷವಾಗಿ ಅಶೋಕ್ ಗೆಹ್ಲೋಟ್‌ರನ್ನು ಬೆಂಬಲಿಸಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಸಿಎಂಗೆ ಮುಖಭಂಗ: ಸಚಿನ್ ಪೈಲಟ್ ಪರ ಬ್ಯಾಟ್ ಬೀಸಿದ ಗೆಹ್ಲೋಟ್ ಸರ್ಕಾರದ ಸಚಿವ..!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ