Published : Jul 25, 2025, 07:49 AM ISTUpdated : Jul 25, 2025, 09:28 PM IST

India Latest News Live: India-UK FTA - ಬ್ರಿಟಿಷರು ಈಗ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನೇ ಹೆಚ್ಚು ಖರೀದಿಸುತ್ತಾರೆ!

ಸಾರಾಂಶ

ಬೆಂಗಳೂರು (ಜುಲೈ 25): ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಶುಕ್ರವಾರ 4,078 ದಿನಗಳು ಪೂರ್ಣಗೊಳ್ಳುತ್ತಿದ್ದು, 4,077 ದಿನಗಳ ಕಾಲ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿಯಲಿದ್ದಾರೆ. 1966ರ ಜ.24ರಿಂದ 1977ರ ಮಾ.24ರವರೆಗೆ ಇಂದಿರಾ ಗಾಂಧಿ ನಿರಂತರವಾಗಿ ಪ್ರಧಾನಿ ಹುದ್ದೆಯಲ್ಲಿದ್ದರು. ಅತಿ ದೀರ್ಘಕಾಲ ಸೇವೆ ಸಲ್ಲಿಸಿದ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಇದೀಗ ಆ ಹೆಗ್ಗಳಿಕೆ ಮೋದಿಯವರ ಪಾಲಾಗಲಿದೆ. ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

 

09:28 PM (IST) Jul 25

India-UK FTA - ಬ್ರಿಟಿಷರು ಈಗ 'ಮೇಡ್ ಇನ್ ಇಂಡಿಯಾ' ಉತ್ಪನ್ನಗಳನ್ನೇ ಹೆಚ್ಚು ಖರೀದಿಸುತ್ತಾರೆ!

ಭಾರತ ಮತ್ತು ಯುಕೆ ನಡುವಿನ ಮುಕ್ತ ವ್ಯಾಪಾರ ಒಪ್ಪಂದವು ದೇಶೀಯ ಉತ್ಪನ್ನಗಳಿಗೆ ಜಾಗತಿಕ ಮಾರುಕಟ್ಟೆ ತೆರೆಯಲಿದೆ. ಕೊಲ್ಹಾಪುರಿ ಚಪ್ಪಲಿ, ಹಲಸಿನ ಹಣ್ಣು, ಫೇಣಿ, ಟಾಡಿ ಮುಂತಾದವು ಯುಕೆಗೆ ರಫ್ತಾಗಲಿವೆ. ಈ ಒಪ್ಪಂದವು ದ್ವಿಪಕ್ಷೀಯ ವ್ಯಾಪಾರವನ್ನು $120 ಬಿಲಿಯನ್‌ಗೆ ಹೆಚ್ಚಿಸುವ ಗುರಿ ಹೊಂದಿದೆ.
Read Full Story

06:44 PM (IST) Jul 25

ಹಿಂದೂ ಹುಡುಗಿಯರಿಗೆ ಕಲ್ಮಾ ಪಠಿಸುವಂತೆ ಮಾಡಿದ್ದು ಇದೇ ಕಾರಣಕ್ಕೆ; ಮದುವೆ ನಂತರ ಅಸಹ್ಯ ಕೃತ್ಯ, ಮತಾಂತರದ ಕರಾಳ ಮುಖ ಬಯಲು!

ಏಳು ರಾಜ್ಯಗಳಲ್ಲಿ ಹರಡಿರುವ ಅಕ್ರಮ ಮತಾಂತರ ಗ್ಯಾಂಗ್ ಬೆಳಕಿಗೆ ಬಂದಿದೆ. ದೆಹಲಿಯ ಮಾಸ್ಟರ್‌ಮೈಂಡ್‌ನಿಂದ ಹಲವು ಯುವತಿಯರು ಬಲಿಪಶುಗಳಾಗಿದ್ದಾರೆ. ಈ ಗ್ಯಾಂಗ್‌ನಲ್ಲಿ ಕೆಲವು ಯುವತಿಯರು ಸ್ವತಃ ಮತಾಂತರಗೊಂಡು ಇತರರನ್ನು ಬಲೆಗೆ ಬೀಳಿಸುತ್ತಿದ್ದಾರೆ.
Read Full Story

06:14 PM (IST) Jul 25

ಕಿಟಕಿ ಪಕ್ಕದಲ್ಲಿ ಕೂರಿಸಿದ್ದ ಮಗು 12ನೇ ಮಹಡಿಯಿಂದ ಬಿದ್ದು ಸಾವು - ಮತ್ತೊಂದೆಡೆ ಅಪ್ಪನ ಕೈ ಜಾರಿ 21 ತಿಂಗಳ ಕಂದ ಸಾವು

ಮುಂಬೈನಲ್ಲಿ ನಡೆದ ಘಟನೆಯಲ್ಲಿ ತಾಯಿ ಮಗುವನ್ನು ಶೂ ರ್ಯಾಕ್ ಮೇಲೆ ಕೂರಿಸಿದ್ದ ವೇಳೆ ಕಿಟಕಿಯಿಂದ ಬಿದ್ದು ಮಗು ಸಾವನ್ನಪ್ಪಿದೆ. ಮತ್ತೊಂದು ಪ್ರಕರಣದಲ್ಲಿ ವಾಟರ್ ಪಾರ್ಕ್ ನಲ್ಲಿ ಅಪ್ಪನ ತೋಳಿನಿಂದ ಜಾರಿ ಬಿದ್ದ ಮಗುವೊಂದು ಸಾವನ್ನಪ್ಪಿದೆ.

Read Full Story

05:26 PM (IST) Jul 25

ಭಾರಿ ಮಳೆಗೆ ಕುಸಿದ ಇತಿಹಾಸ ಪ್ರಸಿದ್ಧಬಾಲಾಪುರ ಕೋಟೆ - ನದಿಯಲ್ಲಿ ಕೊಚ್ಚಿ ಹೋದ ಟ್ರಾಕ್ಟರ್‌

ಮಹಾರಾಷ್ಟ್ರದ ಅಕೋಲಾದಲ್ಲಿ ಭಾರೀ ಮಳೆಯಿಂದಾಗಿ ಶತಮಾನಗಳಷ್ಟು ಹಳೆಯದಾದ ಬಾಲಾಪುರ ಕೋಟೆ ಕುಸಿದಿದೆ. ಮಳೆಯಿಂದಾಗಿ ದೇಶದ ಹಲವು ಭಾಗಗಳಲ್ಲಿ ಗುಡ್ಡ ಕುಸಿತ ಸೇರಿದಂತೆ ಹಲವು ಅವಾಂತರಗಳು ನಡೆದಿವೆ.

Read Full Story

04:12 PM (IST) Jul 25

ಬರೋಬ್ಬರಿ 25 OTT ಫ್ಲಾಟ್‌ಫಾರ್ಮ್ ಗಳಿಗೆ ನಿಷೇಧ ಹೇರಿದ ಕೇಂದ್ರ

ಅಶ್ಲೀಲ ವಿಷಯ ಪ್ರಸಾರದ ಆರೋಪದ ಮೇಲೆ ೨೫ OTT ವೇದಿಕೆಗಳನ್ನು ಕೇಂದ್ರ ಸರ್ಕಾರ ನಿಷೇಧಿಸಿದೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸೇರಿದಂತೆ ಹಲವು ಇಲಾಖೆಗಳ ಸಮಾಲೋಚನೆಯ ಬಳಿಕ ಈ ಕ್ರಮ ಕೈಗೊಳ್ಳಲಾಗಿದೆ. ಅಪ್ರಾಪ್ತ ವಯಸ್ಕರಿಗೆ ಅಶ್ಲೀಲ ವಿಷಯ ತಲುಪದಂತೆ ತಡೆಯುವುದು ಇದರ ಉದ್ದೇಶ.
Read Full Story

03:43 PM (IST) Jul 25

Prime Video ಒಟಿಟಿಯಲ್ಲಿ ಸಿನಿಮಾಗಳನ್ನು ರೆಂಟ್‌ಗೆ ಪಡೆದುಕೊಳ್ಳೋದು ಹೇಗೆ?

ಹಿತವಾದ ರೊಮ್ಯಾಂಟಿಕ್ ಹಾಸ್ಯಗಳಿಂದ ಹಿಡಿದು ಅದ್ಭುತವಾದ ಆಕ್ಷನ್ ಥ್ರಿಲ್ಲರ್‌ಗಳವರೆಗೆ ಎಲ್ಲಾ ಸಿನಿಮಾಗಳನ್ನೂ ನೀವು ರೆಂಟ್‌ನಲ್ಲಿ ಬಹಳ ಸುಲಭವಾಗಿ ವೀಕ್ಷಿಸಬಹುದು.

 

Read Full Story

03:19 PM (IST) Jul 25

ಸಂವಿಧಾನದ ಪೀಠಿಕೆಯಿಂದ 'ಸಮಾಜವಾದಿ' ಮತ್ತು 'ಜಾತ್ಯಾತೀತ' ಪದಗಳನ್ನು ತೆಗೆದುಹಾಕುವ ಯೋಚನೆ ಸದ್ಯ ಇಲ್ಲ ಎಂದ ಕೇಂದ್ರ!

ಪೀಠಿಕೆಯಲ್ಲಿ ಎರಡು ಪದಗಳನ್ನು ಪರಿಚಯಿಸುವ 42 ನೇ ತಿದ್ದುಪಡಿಯನ್ನು ಪ್ರಶ್ನಿಸಿದ ಸವಾಲನ್ನು ತಿರಸ್ಕರಿಸಿದ ಸುಪ್ರೀಂ ಕೋರ್ಟ್‌ನ ನವೆಂಬರ್ 2024 ರ ತೀರ್ಪನ್ನು ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಉಲ್ಲೇಖಿಸಿದರು.

 

Read Full Story

02:55 PM (IST) Jul 25

ಕನಿಷ್ಠ ವೇತನ 30 ಸಾವಿರಕ್ಕೆ ಏರಿಕೆಯಾಗುವ 8ನೇ ವೇತನ ಆಯೋಗ ಜಾರಿ ವಿಳಂಬ!

ಕನಿಷ್ಠ ವೇತನ ಮಟ್ಟವು ತಿಂಗಳಿಗೆ ₹18,000 ರಿಂದ ₹30,000 ಕ್ಕೆ ಏರಿಕೆಯಾಗಬಹುದು ಎಂದು ಕೋಟಕ್ ಮುನ್ಸೂಚನೆ ನೀಡಿದೆ, ಇದು ಸುಮಾರು 1.8 ರಷ್ಟು ಫಿಟ್‌ಮೆಂಟ್ ಅಂಶ ಮತ್ತು ಸುಮಾರು 13% ರಷ್ಟು ನಿಜವಾದ ವೇತನ ಹೆಚ್ಚಳವನ್ನು ಸೂಚಿಸುತ್ತದೆ.

 

Read Full Story

01:59 PM (IST) Jul 25

ITR Filing 2025 - ಎಲ್ಲರಿಗೂ ಒಂದೇ ಡೆಡ್‌ಲೈನ್‌ ಅಲ್ಲ, ಸಂಬಳದಾರರು, ಉದ್ಯಮಿಗಳಿಗೆ ಇರೋ ಲಾಸ್ಟ್‌ ಡೇಟ್‌ ಇದು

ITR Filing Last Date 2025: ವೈಯಕ್ತಿಕ ಮತ್ತು ಹಿಂದೂ ಕುಟುಂಬಗಳಿಗೆ (HUF) ಆದಾಯ ತೆರಿಗೆ ಇಲಾಖೆಯು 2024-25ನೇ ಹಣಕಾಸು ವರ್ಷದ ಐಟಿಆರ್ ಸಲ್ಲಿಕೆಯ ಗಡುವನ್ನು ಸೆಪ್ಟೆಂಬರ್ 15, 2025 ರವರೆಗೆ ವಿಸ್ತರಿಸಿದೆ.

 

Read Full Story

01:16 PM (IST) Jul 25

ತುರ್ತು ಲ್ಯಾಂಡಿಂಗ್‌ಗೆ ಯತ್ನಿಸುತ್ತಿದ್ದಾಗಲೇ ಹೆದ್ದಾರಿಯಲ್ಲಿ ವಿಮಾನ ಪತನ - ಹಲವು ವಾಹನಗಳು ಜಸ್ಟ್ ಮಿಸ್

ಇಟಲಿಯ ಬ್ರೆಸಿಕಾದಲ್ಲಿ ಪುಟ್ಟ ವಿಮಾನವೊಂದು ತುರ್ತು ಲ್ಯಾಂಡಿಂಗ್‌ಗೆ ಯತ್ನಿಸುತ್ತಿದ್ದ ವೇಳೆ ಹೆದ್ದಾರಿಯಲ್ಲೇ ಪತನಗೊಂಡಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ.

Read Full Story

12:58 PM (IST) Jul 25

Cheating Capital Of India - ಇಬ್ಬರಲ್ಲಿ ಒಬ್ಬರಿಗೆ ಅಕ್ರಮ ಸಂಬಂಧ! ಟಾಪ್ ​20 ಊರುಗಳ ಶಾಕಿಂಗ್​ ಪಟ್ಟಿ ಬಿಡುಗಡೆ

ಅಕ್ರಮ ಸಂಬಂಧಗಳು ಹೆಚ್ಚುತ್ತಿರುವ ಇತ್ತೀಚಿನ ದಿನಗಳಲ್ಲಿ ಭಾರತದ ಮೋಸದ ರಾಜಧಾನಿಯ ಪಟ್ಟಿ ಬಿಡುಗಡೆಯಾಗಿದೆ. ಬೆಂಗಳೂರಿಗೆ ಎಷ್ಟನೇ ಸ್ಥಾನ? ಶಾಕಿಂಗ್​ ವರದಿ ಬಿಡುಗಡೆ

 

Read Full Story

12:04 PM (IST) Jul 25

ಥಾಯ್ಲೆಂಡ್, ಕಾಂಬೋಡಿಯಾ ಮಧ್ಯೆ ಯುದ್ಧಕ್ಕೆ ಕಾರಣವಾದ ಶಿವ ದೇಗುಲದ ಹಿನ್ನೆಲೆ ಏನು? ನಿರ್ಮಿಸಿದ್ದು ಯಾರು?

ಗಡಿಯಲ್ಲಿರುವ ಹಿಂದೂ ದೇವಸ್ಥಾನದ ಮೇಲಿನ ಅಧಿಕಾರದ ವಿಚಾರವಾಗಿ ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವಿನ ಸಂಘರ್ಷ ವಿಕೋಪಕ್ಕೆ ತಿರುಗಿದೆ. ಈ ಹಿನ್ನೆಲೆಯಲ್ಲಿ ಆ ದೇಗುಲದ ಹಿನ್ನೆಲೆಯ ಬಗ್ಗೆ ಇಲ್ಲಿದೆ ಮಾಹಿತಿ

Read Full Story

11:53 AM (IST) Jul 25

120 ರೂಪಾಯಿ ಟೂಲ್‌ ಶುಲ್ಕ ಈಗ ಬರೀ 15 ರೂಪಾಯಿಗೆ ಇಳಿಕೆ, ಆ.15 ರಿಂದ ವಾಹನ ಮಾಲೀಕರಿಗೆ ಜಾಕ್‌ಪಾಟ್‌!

ಕೇಂದ್ರ ಸರ್ಕಾರವು ಖಾಸಗಿ ವಾಹನಗಳಿಗೆ ಫಾಸ್ಟ್‌ಟ್ಯಾಗ್ ಆಧಾರಿತ ವಾರ್ಷಿಕ ಪಾಸ್ ವ್ಯವಸ್ಥೆಯನ್ನು ಆಗಸ್ಟ್ 15 ರಿಂದ ಜಾರಿಗೆ ತರುತ್ತಿದೆ. ಇದರಿಂದ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಪ್ರಯಾಣಿಸುವವರಿಗೆ ಟೋಲ್ ಶುಲ್ಕದಲ್ಲಿ ಗಣನೀಯ ರಿಯಾಯಿತಿ ದೊರೆಯಲಿದೆ. 

Read Full Story

11:25 AM (IST) Jul 25

ಏರಿಂಡಿಯಾ ವಿಮಾನದ ಒಳಗೇ ಗಂಡು ಮಗು ಹೆತ್ತ ಮಹಿಳೆ!

ಮಸ್ಕತ್‌ನಿಂದ ಮುಂಬೈಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದಲ್ಲಿ ಥಾಯ್ಲೆಂಡ್ ಮಹಿಳೆಯೊಬ್ಬರು ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಿಮಾನದ ಸಿಬ್ಬಂದಿ ಹೆರಿಗೆಗೆ ಸಹಾಯ ಮಾಡಿದರು ಮತ್ತು ಮುಂಬೈನಲ್ಲಿ ಬಂದಿಳಿದ ನಂತರ ತಾಯಿ ಮತ್ತು ಮಗುವನ್ನು ಆಸ್ಪತ್ರೆಗೆ ಸಾಗಿಸಲಾಯಿತು.
Read Full Story

10:56 AM (IST) Jul 25

ಕಾರ್ಯಕ್ರಮಕ್ಕೆ ಬರೋದಿಲ್ಲವೆಂದು ಸೋನಿಯಾ ಗಾಂಧಿ ಬರೆದ ಪತ್ರವನ್ನೇ, ತನ್ನ'ಆಸ್ಕರ್‌ ಅವಾರ್ಡ್‌' ಎಂದು ಕರೆದ ರೇವಂತ್‌ ರೆಡ್ಡಿ!

ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ ಅವರು ಸೋನಿಯಾ ಗಾಂಧಿಯವರ ಪತ್ರವನ್ನು ತಮ್ಮ "ಆಸ್ಕರ್, ನೊಬೆಲ್ ಮತ್ತು ಜೀವಮಾನ ಸಾಧನೆ ಪ್ರಶಸ್ತಿ" ಎಂದು ಕರೆದಿದ್ದು, ಇದು ವಿಪಕ್ಷ ಬಿಆರ್‌ಎಸ್‌ನಿಂದ ಅಪಹಾಸ್ಯಕ್ಕೆ ಕಾರಣವಾಗಿದೆ.

 

Read Full Story

10:09 AM (IST) Jul 25

ರಾಜಸ್ಥಾನದಲ್ಲಿ ಶಾಲಾ ಕಟ್ಟಡ ಕುಸಿತ - ಕನಿಷ್ಟ 4 ಸಾವು, 40 ಮಕ್ಕಳು ಅವಶೇಷಗಳಡಿ ಸಿಲುಕಿರುವ ಶಂಕೆ

ರಾಜಸ್ಥಾನದ ಝಲಾವರ್‌ನಲ್ಲಿ ಶಾಲಾ ಕಟ್ಟಡ ಕುಸಿತದಿಂದ ಕನಿಷ್ಠ ನಾಲ್ವರು ಮಕ್ಕಳು ಸಾವನ್ನಪ್ಪಿದ್ದಾರೆ.  40ಕ್ಕೂ ಹೆಚ್ಚು ಮಕ್ಕಳು ಅವಶೇಷಗಳಡಿ ಸಿಲುಕಿರುವ ಶಂಕೆ ಇದ್ದು, ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ.

Read Full Story

07:54 AM (IST) Jul 25

ದೇಶದ 2ನೇ ಅತಿ ಸುದೀರ್ಘ ಪ್ರಧಾನಿ : ಇಂದಿರಾ ಮೀರಿಸಿದ ಮೋದಿ

ನರೇಂದ್ರ ಮೋದಿಯವರು ಪ್ರಧಾನಮಂತ್ರಿಯಾಗಿ ಅಧಿಕಾರ ಸ್ವೀಕರಿಸಿ ಶುಕ್ರವಾರ 4,078 ದಿನಗಳು ಪೂರ್ಣಗೊಳ್ಳುತ್ತಿದ್ದು, 4,077 ದಿನಗಳ ಕಾಲ ಸೇವೆ ಸಲ್ಲಿಸಿದ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರ ದಾಖಲೆಯನ್ನು ಮುರಿಯಲಿದ್ದಾರೆ.

 

Read Full Story

07:54 AM (IST) Jul 25

ಗೋವಾದಲ್ಲಿ ಕನ್ನಡಿಗರಿನ್ನು ವಾಹನ ಖರೀದಿಸುವಂತಿಲ್ಲ: ಹೊಸ ಕಾನೂನಿಗೆ ಸರ್ಕಾರ ಸಿದ್ಧತೆ

ಕಡಲ ಕಿನಾರೆಯ ಪುಟ್ಟ ರಾಜ್ಯವನ್ನು ಸುಂದರವಾಗಿ ಕಟ್ಟಿ ಬೆಳೆಸಿದ ಕನ್ನಡಿಗರು ಇನ್ನು ಮುಂದೆ ಇಲ್ಲಿ ಯಾವುದೇ ವಾಹನ ಖರೀದಿಸುವಂತಿಲ್ಲ!

 

Read Full Story

07:54 AM (IST) Jul 25

ಮಹದಾಯಿ ವಿಷಯ ಕುರಿತು ಗೋವಾ ಸಿಎಂ ಹೇಳಿಕೆ ವೈಯಕ್ತಿಕ: ಪ್ರಲ್ಹಾದ್ ಜೋಶಿ

ಮಹದಾಯಿ ವಿಷಯ ಕುರಿತು ಗೋವಾ ಸಿಎಂ ವಿಧಾನಸಭೆಯಲ್ಲಿ ನೀಡಿರುವ ಹೇಳಿಕೆ ಭಾರತ ಸರ್ಕಾರದ ಹೇಳಿಕೆಯಲ್ಲ. ಅದು ಅವರ ವೈಯುಕ್ತಿಕ ಹೇಳಿಕೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.

 

Read Full Story

07:53 AM (IST) Jul 25

ದರ್ಶನ್‌ಗೆ ಹೈಕೋರ್ಟ್‌ ಜಾಮೀನು ಕೊಟ್ಟಿದ್ದು ಹೇಗೆ?: ಸುಪ್ರೀಂ ತರಾಟೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ನಟ ದರ್ಶನ್‌ ಮತ್ತು ಇತರೆ 6 ಆರೋಪಿಗಳಿಗೆ ಜಾಮೀನು ನೀಡಿದ ಕರ್ನಾಟಕ ಹೈಕೋರ್ಟ್‌ನ ತೀರ್ಪಿನ ಒಂದೇ ವಾರದಲ್ಲಿ ಎರಡನೇ ಬಾರಿ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್‌

 

Read Full Story

07:53 AM (IST) Jul 25

ಕರ್ನಾಟಕ ಚುನಾವಣೆ ಅಕ್ರಮಕ್ಕೆ 100% ಸಾಕ್ಷ್ಯ ಇದೆ: ರಾಹುಲ್‌ ಬಾಂಬ್‌

ಕರ್ನಾಟಕದ ಲೋಕಸಭಾ ಕ್ಷೇತ್ರವೊಂದರಲ್ಲಿ ಭಾರೀ ಅಕ್ರಮ ನಡೆದಿದೆ ಎಂಬ ಆರೋಪದ ಪ್ರಕರಣ ಇದೀಗ ಲೋಕಸಭೆಯ ವಿಪಕ್ಷ ನಾಯಕ ರಾಹುಲ್‌ ಗಾಂಧಿ ಮತ್ತು ಕೇಂದ್ರ ಚುನಾವಣಾ ಆಯೋಗದ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿದೆ.

 

Read Full Story

07:52 AM (IST) Jul 25

ಆಸ್ಟ್ರೇಲಿಯಾ ದೇಗುಲ ಮೇಲೆ ಜನಾಂಗೀಯ ನಿಂದನೆ ಬರೆದು ವಿಕೃತಿ

ಆಸ್ಟ್ರೇಲಿಯಾದಲ್ಲಿ ಭಾರತೀಯರು ಮತ್ತು ಹಿಂದೂಗಳ ಮೇಲಿನ ಜನಾಂಗೀಯ ಹಿಂಸೆ ಮುಂದುವರಿದಿದ್ದು, ಗುರುವಾರ ಹಿಂದೂ ದೇಗುಲದ ಮೇಲೆ ಅನಾಮಿಕರು ಜನಾಂಗೀಯ ನಿಂದನೆಯ ಅಸಭ್ಯ ಪದಗಳನ್ನು ಬರೆದು ವಿಕೃತಿ ಮೆರೆದಿದ್ದಾರೆ.

 

Read Full Story

07:52 AM (IST) Jul 25

ಭಾರತ - ಬ್ರಿಟನ್ ಐತಿಹಾಸಿಕ ವ್ಯಾಪಾರ ಒಪ್ಪಂದ : ಯಾವ ವಸ್ತು ಅಗ್ಗ

ಪರಸ್ಪರ ಮುಕ್ತ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಬ್ರಿಟನ್‌, ಗುರುವಾರ ಇಲ್ಲಿ ಸಹಿ ಹಾಕಿವೆ. ಭಾರತದ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರಿಟನ್‌ ಪ್ರಧಾನಿ ಕೇರ್ ಸ್ಟಾರ್ಮರ್ ಸಮ್ಮುಖದಲ್ಲಿ ಒಪ್ಪಂದಕ್ಕೆ ಅಂಕಿತ ಬಿದ್ದಿದೆ.

 

Read Full Story

07:52 AM (IST) Jul 25

ಫೋಟೋ, ಫಾರಿನ್‌ ಟೂರ್‌, ಬೆನ್ಜ್‌ ಕಾರಿಗಾಗಿ ಧನಕರ್‌ ಪಟ್ಟು, ಬಿಕ್ಕಟ್ಟು

ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಉಪರಾಷ್ಟ್ರಪತಿ ಜಗದೀಪ್‌ ಧನ್‌ಕರ್‌ ಅವರ ರಾಜೀನಾಮೆ ದಿಢೀರ್‌ ಎಂದು ಆಗಿದ್ದಲ್ಲ. ಸರ್ಕಾರ ಮತ್ತು ಧನಕರ್ ನಡುವೆ ಸುದೀರ್ಘ ಸಮಯದಿಂದ ನಾನಾ ವಿಷಯಗಳ ಬಗ್ಗೆ ಭಿನ್ನಾಭಿಪ್ರಾಯ ಮೂಡಿತ್ತು.

 

Read Full Story

07:51 AM (IST) Jul 25

ಹಲಸು ತಿಂದ ಚಾಲಕರು ಡ್ರಿಂಕ್‌ ಆ್ಯಂಡ್‌ ಡ್ರೈವ್‌ ಟೆಸ್ಟಲ್ಲಿ ಫೇಲ್‌!

ಬೆಳಗ್ಗೆದ್ದು ಹುರುಪಲ್ಲಿ ಕೆಲಸಕ್ಕೆ ಹಾಜರಾದ ಡ್ರೈವರ್‌ಗಳು ಎಂದಿನಂತೆ ಮದ್ಯಪತ್ತೆ ಪರೀಕ್ಷೆ ಮಾಡಿಸಿಕೊಂಡಾಗ, ಆ ಯಂತ್ರವು ಅವರನ್ನು ಪಾನಮತ್ತರೆಂದು ಘೋಷಿಸಿದ ಘಟನೆ ಇಲ್ಲಿನ ಪಂಡಾಲಂ ಡಿಪೋದಲ್ಲಿ ನಡೆದಿದೆ. ಆದರೆ ಅಸಲಿಗೆ ಅವರ್ಯಾರೂ ಮದ್ಯವನ್ನೇ ಸೇವಿಸಿರಲಿಲ್ಲ.

 

Read Full Story

07:51 AM (IST) Jul 25

ಅನಿಲ್‌ ಅಂಬಾನಿ ಕಂಪನಿಗಳಿಂದ ₹14,000 ಕೋಟಿ ವಂಚನೆ?

ಕಳೆದ ಕೆಲವು ವರ್ಷಗಳಿಂದ ಹಲವು ವಂಚನೆ ಪ್ರಕರಣಗಳಲ್ಲಿ ಗಂಭೀರ ಆರೋಪ ಎದುರಿಸುತ್ತಿರುವ ಉದ್ಯಮಿ ಅನಿಲ್‌ ಅಂಬಾನಿ, ಅವರು ಎಸಗಿರಬಹುದಾದ ಅಕ್ರಮದ ಮೊತ್ತ 14000 ಕೋಟಿ ರು.ಗೂ ಹೆಚ್ಚಿರಬಹುದು ಎಂದು ವರದಿಯೊಂದು ತಿಳಿಸಿದೆ.

 

Read Full Story

07:50 AM (IST) Jul 25

2006 Mumbai train blasts: ಆರೋಪಿಗಳ ಖುಲಾಸೆಗೆ ಸುಪ್ರೀಂ ಕೋರ್ಟ್ ತಡೆ

2006ರ ಮುಂಬೈ ರೈಲು ಸ್ಫೋಟ ಪ್ರಕರಣದ 12 ಆರೋಪಿಗಳ ಖುಲಾಸೆಗೆ ಬಾಂಬೆ ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆ ನೀಡಿದೆ. ಬಿಡುಗಡೆಯಾದ ಆರೋಪಿಗಳನ್ನು ಪುನಃ ಬಂಧಿಸುವ ಅಗತ್ಯವಿಲ್ಲ ಎಂದೂ ಸ್ಪಷ್ಟಪಡಿಸಿದೆ.

 

Read Full Story

More Trending News