ಕೋವಿಡ್‌ ದೇಣಿಗೆ ದುರ್ಬಳಕೆ: ಪತ್ರಕರ್ತೆ ರಾಣಾ ಅಯ್ಯುಬ್‌ ಬ್ಯಾಂಕ್‌ ಖಾತೆ ಜಪ್ತಿ!

By Suvarna News  |  First Published Feb 11, 2022, 7:37 AM IST

"ಹಿಂದೂ ಐಟಿ ಸೆಲ್" ಎಂಬ ಎನ್‌ಜಿಒ ಸ್ಥಾಪಕ ಮತ್ತು ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ ವಿಕಾಸ್ ಸಾಂಕೃತ್ಯಾಯನ್ ಅವರು ದಾಖಲಿಸಿದ ಎಫ್‌ಐಆರ್ ಅನ್ನು ಆಧರಿಸಿ ರಾಣಾ ಅಯೂಬ್ ವಿರುದ್ಧ ಪ್ರಕರಣವನ್ನು ಮಾಡಲಾಗಿದೆ.


ನವದೆಹಲಿ (ಫೆ. 11) : ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪತ್ರಕರ್ತೆ ರಾಣಾ ಅಯ್ಯುಬ್‌ (Rana Ayyub) ಅವರ 1.77 ಕೋಟಿ ರು. ಮೌಲ್ಯದ ನಿಧಿಯನ್ನು ಜಾರಿ ನಿರ್ದೇಶನಾಲಯ(Enforcement Directorate) ಜಪ್ತಿ ಮಾಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ(PMLA)ಯಡಿ ಪತ್ರಕರ್ತೆಯ ಬ್ಯಾಂಕ್‌ ಠೇವಣಿ ಮತ್ತು ಆಕೆಯ ಕುಟುಂಬ ಸದಸ್ಯರ ಬ್ಯಾಂಕ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗಿದೆ ಎಂದು ಗುರುವಾರ ಇ.ಡಿ ತಿಳಿಸಿದೆ. ಸೇವೆಗಾಗಿ ನೀಡಲಾಗಿದ್ದ ನಿಧಿಯನ್ನು ಅವರು ತಮ್ಮ ಸ್ವಂತಕ್ಕೆ ಬಳಸಿದ್ದಾರೆ ಎಂಬ ಆರೋಪದ ಮೇರೆಗೆ 2021ರ ಸೆಪ್ಟೆಂಬರ್‌ನಲ್ಲಿ ಅವರ ವಿರುದ್ಧ ಉತ್ತರಪ್ರದೇಶದಲ್ಲಿ ಕೇಸ್‌ ದಾಖಲಾಗಿತ್ತು.

ರಾಣಾ ಅಯ್ಯೂಬ್ ವಿರುದ್ಧದ ಹಣ ವರ್ಗಾವಣೆ ಪ್ರಕರಣವು ಸೆಪ್ಟೆಂಬರ್‌ನಲ್ಲಿ ಉತ್ತರ ಪ್ರದೇಶದ ಗಾಜಿಯಾಬಾದ್ ಪೊಲೀಸರು ದಾಖಲಿಸಿದ ಪ್ರಥಮ ಮಾಹಿತಿ ವರದಿ ಅಥವಾ ಎಫ್‌ಐಆರ್ ಅನ್ನು ಆಧರಿಸಿದೆ. "ಹಿಂದೂ ಐಟಿ ಸೆಲ್" ಎಂಬ ಎನ್‌ಜಿಒ ಸ್ಥಾಪಕ ಮತ್ತು ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಿ ವಿಕಾಸ್ ಸಾಂಕೃತ್ಯಾಯನ್ ಅವರು ದಾಖಲಿಸಿದ ಎಫ್‌ಐಆರ್ ಅನ್ನು ಆಧರಿಸಿ ರಾಣಾ ಅಯೂಬ್ ವಿರುದ್ಧ ಪ್ರಕರಣವನ್ನು ಮಾಡಲಾಗಿದೆ.  

Tap to resize

Latest Videos

undefined

ಇದನ್ನೂ ಓದಿMoney Declaration ಸರ್ಕಾರಿ ನೌಕರರು ತಮ್ಮಲ್ಲಿನ ಹಣ ಘೋಷಿಸುವುದು ಕಡ್ಡಾಯ, ಹೆಚ್ಚಿದ್ದರೆ ಅಕ್ರಮ ಸಂಪಾದನೆ!

₹2.69 ಕೋಟಿಗೂ ಹೆಚ್ಚು ಹಣ ಸಂಗ್ರಹ:  ದಾಖಲೆಯೊಂದರ ಪ್ರಕಾರ 2020 ಮತ್ತು 2021 ರ ನಡುವೆ ಚಾರಿಟಬಲ್ ಉದ್ದೇಶಗಳಿಗಾಗಿ ಕೆಟ್ಟೋ (Ketto) ಎಂಬ ಆನ್‌ಲೈನ್ ಕ್ರೌಡ್‌ಫಂಡಿಂಗ್ ಪ್ಲಾಟ್‌ಫಾರ್ಮ್ ಮೂಲಕ ರಾಣಾ ₹2.69 ಕೋಟಿಗೂ ಹೆಚ್ಚು ಹಣವನ್ನು ಸಂಗ್ರಹಿಸಿದ್ದಾರೆ ಎಂದು  ತಿಳಿದುಬಂದಿದೆ.

ಒಟ್ಟು ₹ 2,69,44,680 ಹಣವನ್ನು ರಾಣಾ ಅಯೂಬ್ ಅವರು ಕೆಟ್ಟೋನಲ್ಲಿ (Ketto) ಸಂಗ್ರಹಿಸಿದ್ದಾರೆ. ಈ ಹಣವನ್ನು ಅವರ ಸಹೋದರಿ ಮತ್ತು ತಂದೆಯ ಬ್ಯಾಂಕ್ ಖಾತೆಗಳಲ್ಲಿ ಹಿಂಪಡೆಯಲಾಗಿದೆ," ಎಂದು ಜಾರಿ ನಿರ್ದೇಶನಾಲಯದ ಟಿಪ್ಪಣಿಯಲ್ಲಿ ತಿಳಿಸಲಾಗಿದೆ, ನಂತರ ಸಂಪೂರ್ಣ ಮೊತ್ತವನ್ನು ಅಯ್ಯೂಬ್ ಅವರ ಸ್ವಂತ ಖಾತೆ "ವರ್ಗಾವಣೆ" ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ ರಾಣಾ ಅಯ್ಯೂಬ್ ಅವರು "ಕೆಟ್ಟೋ ಮೂಲಕ ಪಡೆದ ಸಂಪೂರ್ಣ ದೇಣಿಗೆಗೆ ಲೆಕ್ಕ ಹಾಕಲಾಗಿದೆ ಮತ್ತು ಒಂದು ಪೈಸೆಯೂ ದುರುಪಯೋಗವಾಗಿಲ್ಲ" ಎಂದು ಹೇಳಿಕೆ ನೀಡಿದ್ದರು.

₹31 ಲಕ್ಷ ವೆಚ್ಚದ ದಾಖಲೆ ಸಲ್ಲಿಕೆ:  ರಾಣಾ ಅಯ್ಯೂಬ್ ಸುಮಾರು ₹31 ಲಕ್ಷ ವೆಚ್ಚದ ದಾಖಲೆಗಳನ್ನು ಜಾರಿ ನಿರ್ದೇಶನಾಲಯಕ್ಕೆ ಸಲ್ಲಿಸಿದ್ದಾರೆ, ಆದಾಗ್ಯೂ, ಕ್ಲೈಮ್ ಮಾಡಿದ ವೆಚ್ಚಗಳ ಪರಿಶೀಲನೆಯ ನಂತರ, ವಾಸ್ತವಿಕ ವೆಚ್ಚಗಳು ₹ 17.66 ಲಕ್ಷ ಎಂದು ಕಂಡುಬಂದಿದೆ ಎಂದು ಸಂಸ್ಥೆ ಹೇಳಿದೆ.

"ಪರಿಹಾರ ಕಾರ್ಯದ ವೆಚ್ಚವನ್ನು (relief work) ಪಡೆಯಲು ಕೆಲವು ಘಟಕಗಳ ಹೆಸರಿನಲ್ಲಿ ನಕಲಿ ಬಿಲ್‌ಗಳನ್ನು ರಾಣಾ ಅಯ್ಯೂಬ್ ಸಿದ್ಧಪಡಿಸಿರುವುದು ಕಂಡುಬಂದಿದೆ. ವಿಮಾನದಲ್ಲಿ ವೈಯಕ್ತಿಕ ಪ್ರಯಾಣಕ್ಕಾಗಿ ಮಾಡಿದ ವೆಚ್ಚವನ್ನು ಪರಿಹಾರ ಕಾರ್ಯದ ವೆಚ್ಚವೆಂದು ಹೇಳಲಾಗಿದೆ" ಎಂದು ಅದು ಆರೋಪಿಸಿದೆ.

ಇದನ್ನೂ ಓದಿ: Haveri: ಅಕ್ರಮ ದಾಸೋಹಕ್ಕೆ ಕಳಪೆ ಆಹಾರ ಪೂರೈಕೆ ಪ್ರಕರಣ: ಎಚ್ಚೆತ್ತ ಸರ್ಕಾರ

ಸಂಗ್ರಹಿಸಿದ ಉದ್ದೇಶಕ್ಕಾಗಿ ಬಳಸಲಾಗಿಲ್ಲ:  ಸಂಸ್ಥೆಯು ತನ್ನ ತನಿಖೆಯು "ಸಂಪೂರ್ಣ ಪೂರ್ವ ಯೋಜಿತ ಮತ್ತು ವ್ಯವಸ್ಥಿತ ರೀತಿಯಲ್ಲಿ ಚಾರಿಟಿಯ ಹೆಸರಿನಲ್ಲಿ ಹಣವನ್ನು ಸಂಗ್ರಹಿಸಲಾಗಿದೆ ಮತ್ತು ಹಣವನ್ನು ಸಂಗ್ರಹಿಸಿದ ಉದ್ದೇಶಕ್ಕಾಗಿ ಸಂಪೂರ್ಣವಾಗಿ ಬಳಸಲಾಗಿಲ್ಲ ಎಂದು ಸ್ಪಷ್ಟಪಡಿಸುತ್ತದೆ" ಎಂದು ತಿಳಿಸಿದೆ.

ಅಯ್ಯೂಬ್, ಆನ್‌ಲೈನ್ ಪ್ಲಾಟ್‌ಫಾರ್ಮ್‌ನಲ್ಲಿ ಸಂಗ್ರಹಿಸಿದ ನಿಧಿಯಿಂದ ₹ 50 ಲಕ್ಷದ ಸ್ಥಿರ ಠೇವಣಿ ರಚಿಸಿದ್ದಾರೆ ಮತ್ತು ತರುವಾಯ ಪರಿಹಾರ ಕಾರ್ಯಕ್ಕಾಗಿ "ಬಳಸಲಿಲ್ಲ. ಪಿಎಂ ಕೇರ್ಸ್ ನಿಧಿ ಮತ್ತು ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಒಟ್ಟು ₹ 74.50 ಲಕ್ಷವನ್ನು ಠೇವಣಿ ಮಾಡಿದ್ದಾರೆ" ಎಂದು ಸಂಸ್ಥೆಯು ತಿಳಿಸಿದೆ.

click me!