National Herald Case ವಿಚಾರಣೆಗೆ ಹಾಜರಾಗಲು ಸೋನಿಯಾ ಗಾಂಧಿಗೆ ದಿನಾಂಕ ಸೂಚಿಸಿದ ಇಡಿ!

By Suvarna NewsFirst Published Jun 23, 2022, 9:02 PM IST
Highlights
  • ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ವಿಚಾರಣೆ ಹಾಜರಾಗಲು ನೋಟಿಸ್
  • ಆರೋಗ್ಯ ಸಮಸ್ಯೆಯಿಂದ ದಿನಾಂಕ ವಿಸ್ತರಿಸಲು ಮನವಿ ಮಾಡಿದ್ದ ಸೋನಿಯಾ
  • ಸೋನಿಯಾ ಗಾಂಧಿ ವಿಚಾರಣೆಗೆ ಹೊಸ ದಿನಾಂಕ ಘೋಷಣೆ

ನವದೆಹಲಿ(ಜೂ.23): ನ್ಯಾಷನಲ್ ಹೆರಾಲ್ಡ್ ಅಕ್ರಮ ಹಣ ವರ್ಗಾವಣೆ ಪ್ರಕರಣ ಕಾಂಗ್ರೆಸ್ ತಲೆನೋವು ಹೆಚ್ಚಿಸುತ್ತಿದೆ. ನಾಯಕ ರಾಹುಲ್ ಗಾಂಧಿಯನ್ನು ಸತತ ವಿಚಾರಣೆ ನಡೆಸಿದ ಇಡಿ ಅಧಿಕಾರಿಗಳು ಇದೀಗ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಚಾರಣೆಗೆ ಸಜ್ಜಾಗಿದ್ದಾರೆ. ಆರೋಗ್ಯ ಸಮಸ್ಯೆ ಕಾರಣ ದಿನಾಂಕ ವಿಸ್ತರಿಸಲು ಸೋನಿಯಾ ಗಾಂಧಿ ಮನವಿ ಮಾಡಿದ್ದರು. ಈ ಮನವಿ ಪುರಸ್ಕರಿಸಿದ ಇಡಿ, ಜುಲೈ ಅಂತಿಮ ವಾರದಲ್ಲಿ ವಿಚಾರಣೆ ಹಾಜರಾಗಲು ಸೂಚಿಸಿದೆ.

75 ವರ್ಷದ ಸೋನಿಯಾ ಗಾಂಧಿಗೆ ನೀಡಿದ್ದ ವಿಚಾರಣಾ ದಿನಾಂಕವನ್ನು ಈಗಾಗಲೇ ಎರಡು ಬಾರಿ ಮುಂದೂಡಲಾಗಿದೆ. ಮೊದಲ ಬಾರಿ ನೋಟಿಸ್ ನೀಡಿದಾಗ ಸೋನಿಯಾ ಗಾಂಧಿ ಕೊರೋನಾಗೆ ತುತ್ತಾಗಿದ್ದರು. ಎರಡನೇ ಬಾರಿ ಕೊರೋನೋತ್ತರ ಆರೋಗ್ಯ ಸಮಸ್ಯೆಯಿಂದ ಆಸ್ಪತ್ರೆ ದಾಖಲಾಗಿದ್ದರು. ಆಸ್ಪತ್ರೆಯಿಂದ ಬಿಡುಗಡೆಯಾದ ಬೆನ್ನಲ್ಲೇ ಅಂದರೆ ಜೂನ್ 23ಕ್ಕೆ ವಿಚಾರಣೆ ಹಾಜರಾಗಬೇಕಿತ್ತು. ಆದರೆ ಆರೋಗ್ಯ ಚೇತರಿಸಿಕೊಳ್ಳುತ್ತಿರುವ ಕಾರಣ ವಿಚಾರಣೆ ದಿನಾಂಕ ವಿಸ್ತರಿಸಲು ಸೋನಿಯಾ ಗಾಂಧಿ ಮನವಿ ಮಾಡಿದ್ದರು.

 

 

ರಾಹುಲ್ ವಿಚಾರಣೆಗೆ ಪ್ರತಿಭಟನೆ, ಪೊಲೀಸರ ಮೇಲೆ ಉಗುಳಿದ ಮಹಿಳಾ ಕಾಂಗ್ರೆಸ್ ಘಟಕದ ಅಧ್ಯಕ್ಷೆ!

ಸೋನಿಯಾ ಗಾಂಧಿ ಆರೋಗ್ಯದ ದೃಷ್ಟಿಯಿಂದ ಇದೀಗ ಇಡಿ ಅಧಿಕಾರಿಗಳು ಜುಲೈ ಅಂತಿಮ ವಾರದಲ್ಲಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಇದೀಗ ಹೊಸ ನೋಟಿಸ್ ಹೊರಡಿಸಿದ್ದು, ಸೋನಿಯಾ ಗಾಂಧಿಗೆ ನೀಡಲಾಗಿದೆ. ಜೂನ್ 8 ಹಾಗೂ ಜೂನ್ 23ರ ಬಳಿಕ ಇದೀಗ ಜುಲೈ ಅಂತಿಮ ವಾರಕ್ಕೆ ವಿಚಾರಣೆ ಮುಂದೂಡಲಾಗಿದೆ.

ಇತ್ತ ರಾಹುಲ್ ಗಾಂಧಿಯನ್ನು ಇಡಿ ಅಧಿಕಾರಿಗಳು 5 ದಿನ ವಿಚಾರಣೆ ನಡೆಸಿದ್ದಾರೆ. ಸರಿಸುಮಾರು 54 ಗಂಟೆಗಳ ಕಾಲ ರಾಹುಲ್ ಗಾಂಧಿಯನ್ನು ವಿಚಾರಣೆ ನಡೆಸಲಾಗಿತ್ತು. ರಾಹುಲ್ ಗಾಂಧಿ ಇಡಿ ವಿಚಾರಣೆ ವಿರೋಧಿಸಿ ದೆಹಲಿ ಹಾಗೂ ದೇಶದ ಹಲವು ಭಾಗಗಳಲ್ಲಿ ಭಾರಿ ಪ್ರತಿಭಟನೆ ನಡೆಸಲಾಗಿದೆ. ಕಾಂಗ್ರೆಸ್ ನಾಯಕರು ಬಿಜೆಪಿ ಸರ್ಕಾರ ಇಡಿ ದುರ್ಬಳೆಕೆ ಮಾಡಿಕೊಳ್ಳುತ್ತಿದೆ. ರಾಹುಲ್ ಗಾಂಧಿ ಹಾಗೂ ಸೋನಿಯಾ ಗಾಂಧಿಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಭಾರಿ ಪ್ರತಿಭಟನೆ ನಡೆಸುತ್ತಿದೆ.

ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನಡೆ ಖಂಡಿಸಿ ಕಾಂಗ್ರೆಸ್‌ ಪ್ರತಿಭಟನೆ
ತರೀಕೆರೆ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಮಂಗಳವಾರ ಪಟ್ಟಣದಲ್ಲಿ ರಾಜಕೀಯ ಪ್ರೇರಿತ ಸೇಡು ಮತ್ತು ದ್ವೇಷದಿಂದ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಕೇಂದ್ರ ಬಿಜೆಪಿ ಸರ್ಕಾರದ ಪ್ರಜಾಪ್ರಭುತ್ವ ವಿರೋಧಿ ನೀತಿಯನ್ನು ಖಂಡಿಸಿ ಪ್ರತಿಭಟನೆ ಏರ್ಪಡಿಸಲಾಗಿತ್ತು.

ಹೆರಾಲ್ಡ್ ವಿಚಾರಣೆಗೆ ಟ್ವಿಸ್ಟ್ ಕೊಟ್ಟರಾ ರಾಹುಲ್ ಗಾಂಧಿ? ಸುದೀರ್ಘ ವಿಚಾರಣೆ, ಏನಿದರ ಗುಟ್ಟು?

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಎಚ್‌.ಯು. ಫಾರೂಕ್‌ ಮಾತನಾಡಿ ರಾಷ್ಟ್ರೀಯ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂದಿ ಅವರು ಅಧಿಕಾರಕ್ಕೆ ಆಸೆ ಪಟ್ಟಿಲ್ಲ. ಪ್ರಧಾನಿ ಹುದ್ದೆಯನ್ನು ತ್ಯಜಿಸಿದರು. ಇಂತಹವರ ಮೇಲೆ ಇಡಿ ವಿಚಾರಣೆ ನೆಡೆಸುತ್ತಿರುವುದು ಸರಿಯಲ್ಲ. ವಿಚಾರಣೆಯನ್ನು ಕೈಬಿಡಬೇಕು ಎಂದು ಒತ್ತಾಯಿಸಿದರು.ಕೆಪಿಸಿಸಿ ಸದಸ್ಯ ಟಿ.ವಿ.ಶಿವಶಂಕರಪ್ಪ ಮಾತನಾಡಿ ಜವಾಹರ್‌ಲಾಲ್‌ ನೆಹರು ಅವರ ತಂದೆ ಕಾಲದಿಂದಲೂ ಶ್ರೀಮಂತ ಕುಟುಂಬವಾಗಿದೆ. ಬಿಜೆಪಿ ರಾಜಕೀಯ ಪ್ರೇರಿತವಾಗಿ ಇವರಿಗೆ ಕಿರುಕುಳ ನೀಡುತ್ತಿರುವುದು ಸರಿಯಲ್ಲ ಎಂದರು.

ಮಾಜಿ ಶಾಸಕ ಜಿ.ಎಚ್‌.ಶ್ರೀನಿವಾಸ್‌ ಮಾತನಾಡಿ ಆರ್‌ಎಸ್‌ಎಸ್‌ ಅವರÜನ್ನು ಕೆಲಸಕ್ಕೆ ಸೇರಿಸಿಕೊಳ್ಳಬೇಕು ಎಂದು ಈ ಹುನ್ನಾರ ನೆಡೆಯುತ್ತಿದೆ. ಬಿಜಿಪಿ ಆಡಳಿತದಲ್ಲಿ ಪೆಟ್ರೋಲ್‌, ಡೀಸಲ್‌ ಗ್ಯಾಸ್‌ ಎಲ್ಲದರ ಬೆಲೆ ಹೆಚ್ಚು ಮಾಡಿದೆ. ಇದು ಖಂಡನೀಯ ಎಂದರು.

click me!