ಒಂದೇ ದಿನ 13 ಸಾವಿರ ಕೇಸ್, 38 ಸಾವು, ತುರ್ತು ಕೋವಿಡ್ ಸಭೆ ಕರೆದ ಆರೋಗ್ಯ ಸಚಿವ!

By Suvarna NewsFirst Published Jun 23, 2022, 8:16 PM IST
Highlights
  • ಕೊರೋನಾ ಸಾವಿನ ಪ್ರಕರಣದಲ್ಲಿ ಗಣನೀಯ ಏರಿಕೆ
  • ಕಳೆದ 24 ಗಂಟೆಯಲ್ಲಿ 13,313 ಕೋವಿಡ್ ಪ್ರಕರಣ ಪತ್ತೆ
  • ಕೋವಿಡ್ ಸಾವಿನ ಸಖ್ಯೆಯಲ್ಲಿ ಗಣನೀಯ ಏರಿಕೆ

ನವದೆಹಲಿ(ಜೂ.23): ಕೊರೋನಾ ವೈರಸ್ ಪ್ರಕರಣ ಮತ್ತೆ ಭಾರತದ ಆತಂಕ ಹೆಚ್ಚಿಸುತ್ತಿದೆ. ಕಡಿಮೆಯಾಗುತ್ತಿದೆ ಅನ್ನುವಷ್ಟರಲ್ಲೇ ಮತ್ತೆ ಹೊಸ ಕೇಸ್ ಸಂಖ್ಯೆ ಹೆಚ್ಚಾಗಿದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ 13,313 ಹೊಸ ಕೋವಿಡ್ ಪ್ರಕರಣಗಳು ದಾಖಲಾಗಿದೆ. ಇಷ್ಟೇ ಅಲ್ಲ ಒಂದೇ ದಿನ 38 ಮಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ. ಹೀಗಾಗಿ ಕೇಂದ್ರ ಆರೋಗ್ಯ ಸಚಿವ ಮನ್ಸುಕ್ ಮಾಂಡವಿಯಾ ಕೋವಿಡ್ ಸಭೆ ಕರೆದಿದ್ದಾರೆ.

ಬುಧವಾರ(ಜೂ.22)ಭಾರತದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ 12,000ಕ್ಕೆ ಇಳಿದಿತ್ತು. ಇದೀಗ ಏಕಾಏಕಿ 13 ಸಾವಿರಕ್ಕಿಂತಲೂ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಹೀಗಾಗಿ ನಾಳೆ(ಜೂ.24) ಮನ್ಸುಕ್ ಮಾಂಡವಿಯಾ ಕೋವಿಡ್ ಪರಿಶೀಲನಾ ಸಭೆ ನಡೆಸಲಿದ್ದಾರೆ.

ಕರ್ನಾಟಕದಲ್ಲಿ ಓಮಿಕ್ರಾನ್ ಆತಂಕ, ಯುಕೆಯಲ್ಲಿ 2 ಲಕ್ಷ ಕೋವಿಡ್ ಕೇಸ್ ದಾಖಲು!

ಕೋವಿಡ್ ಮಾದರಿಗಳನ್ನು ಜೆನೋಮ್ ಸೀಕ್ವೆನ್ಸ್ ಕೇಂದ್ರಕ್ಕೆ ಕಳುಹಿಸಬೇಕು. ಈ ಮೂಲಕ ಕೋವಿಡ್ ಹಾಗೂ ಉಪತಳಿಗಳ ಹರಡುವಿಕೆಯನ್ನು ಪತ್ತೆ ಹೆಚ್ಚಬೇಕು ಎಂದು ಸೂಚಿಸಿದ್ದಾರೆ. ಹೆಚ್ಚು ಮಾದರಿಗಳನ್ನು ಜೆನೋಮ್ ಸೀಕ್ವೆನ್ಸ್‌ ಕೇಂದ್ರಕ್ಕೆ ಕಳುಹಿಸಲು ಸೂಚಿಸಲಾಗಿದೆ.

ಕೋವಿಡ್ ತಜ್ಞರು, ಹಿರಿಯ ಅಧಿಕಾರಿಗಳ ಜೊತೆ ಮನ್ಸುಕ್ ಮಾಂಡವಿಯಾ ನಾಳೆ ಸಭೆ ನಡೆಸಲಿದ್ದಾರೆ. ಕೋವಿಡ್ ಹೆಚ್ಚಾಗುತ್ತಿರುವ ರಾಜ್ಯಗಳಿಗೆ ಮಹತ್ವದ ಸೂಚನೆ ನೀಡವು ಸಾಧ್ಯತೆ ಇದೆ. ಇಷ್ಟೇ ಅಲ್ಲ ಮಾಸ್ಕ್ ಹಾಗೂ ಸಾಮಾಜಿಕ ಅಂತರ ಕಡ್ಡಾಯ ಮಾಡುವ ಸಾಧ್ಯತೆಗಳಿವೆ.

ಇದೇ ವೇಳೆಯಲ್ಲಿ 38 ಸೋಂಕಿತರು ಸಾವನ್ನಪ್ಪಿದ್ದಾರೆ. ಕೇರಳದಲ್ಲಿ 20, ಉತ್ತರಪ್ರದೇಶದಲ್ಲಿ 4, ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ 3, ಪಂಜಾಬ್‌ ಹಾಗೂ ಪಶ್ಚಿಮ ಬಂಗಾಳದಲ್ಲಿ ತಲಾ 2 ಹಾಗೂ ಹರಾರ‍ಯಣ, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಮಿಜೋರಾಂನಲ್ಲಿ ತಲಾ ಒಂದು ಸೋಂಕಿತರು ಸಾವನ್ನಪ್ಪಿದ್ದಾರೆ. ಇದರೊಂದಿಗೆ ಸಕ್ರಿಯ ಪ್ರಕರಣಗಳ ಸಂಖ್ಯೆಯು 83,990ಕ್ಕೆ ಏರಿಕೆಯಾಗಿದೆ.

ಯೂರೋಪ್, ಅಮೆರಿಕ, ಕೆನಡಾ ಒಟ್ಟು ವ್ಯಾಕ್ಸಿನೇಷನ್ ಹಿಂದಿಕ್ಕುವತ್ತ ಭಾರತ, ಲಸಿಕೆ ಮೈಲಿಗಲ್ಲು!

ದೈನಂದಿನ ಪಾಸಿಟಿವಿಟಿ ದರವು ಶೇ. 2.03ರಷ್ಟಿದ್ದು, ವಾರದ ಪಾಸಿಟಿವಿಟಿ ದರವು ಶೇ. 2.81ರಷ್ಟಿದೆ. ಇದು ಬುಧವಾರದ ಶೇ.3.94ಕ್ಕಿಂತ ಶೇ.1ರಷ್ಟುಕಮ್ಮಿ. ಕೋವಿಡ್‌ ಚೇತರಿಕೆ ದರವು ಶೇ. 98.60ರಷ್ಟಿದೆ. ದೇಶದಲ್ಲಿ ಈವರೆಗೆ 196.62 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ. 

ಮಂಗಳವಾರ 9 ಸಾವಿರದಲ್ಲಿದ್ದ ಕೇಸ್ ಎರಡೇ ದಿನಕ್ಕೆ 13 ಸಾವಿರ!
ಮಂಗಳವಾರ 9,923ಕ್ಕೆ ಇಳಿದಿದ್ದ ಕೋವಿಡ್‌ ಪ್ರಕರಣಗಳ ಸಂಖ್ಯೆ ಬುಧವಾರ ಮತ್ತೆ ಏರಿಕೆ ಕಂಡಿತ್ತು. ಗುರುವಾರ ಮತ್ತೆ ಏರಿಕೆಯಾಗಿದೆ. ಬುಧವಾರ ಬೆಳಗ್ಗೆ 8 ಗಂಟೆಗೆ ಅಂತ್ಯಗೊಂಡ 24 ತಾಸಿನ ಅವಧಿಯಲ್ಲಿ 12,249 ಕೋವಿಡ್‌ ಪ್ರಕರಣಗಳು ದಾಖಲಾಗಿತ್ತು. ಇದೇ ವೇಳೆ, 9862 ಮಂದಿ ಮಾತ್ರ ಗುಣಮುಖರಾಗಿದ್ದಾರೆ. ಸಕ್ರಿಯ ಪ್ರಕರಣಗಳ ಸಂಖ್ಯೆ 2300ರಷ್ಟುಏರಿಕೆ ಕಂಡಿದ್ದು, ಒಟ್ಟಾರೆ ಸಕ್ರಿಯ ಕೇಸು ಸಂಖ್ಯೆ 81,697ಕ್ಕೆ ಹೆಚ್ಚಿದೆ. ಕೇರಳದಲ್ಲಿ 8 ಮಂದಿ ಸೇರಿ 13 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ.ಈ ನಡುವೆ, ಪಾಸಿಟಿವಿಟಿ ದರ ಮಂಗಳವಾರದ ಶೇ.2.55ರಿಂದ ಶೇ.3.94ಕ್ಕೆ ಏರಿದೆ. ಈ ದಿನ 3.10 ಲಕ್ಷ ಟೆಸ್ಟ್‌ಗಳನ್ನು ಮಾಡಲಾಗಿದೆ. ಕೋವಿಡ್‌ ಚೇತರಿಕೆ ದರವು ಶೇ.98.6ರಷ್ಟಿದೆ. ದೇಶದಲ್ಲಿ ಈವರೆಗೆ ಒಟ್ಟು 196.45 ಕೋಟಿ ಡೋಸು ಕೋವಿಡ್‌ ಲಸಿಕೆಯನ್ನು ವಿತರಿಸಲಾಗಿದೆ.

click me!