ಭೂಕಂಪನಕ್ಕೆ ತರ ತರ ನಡುಗಿದ ಉತ್ತರ: ನೇಪಾಳದಲ್ಲೂ ಕಂಪಿಸಿದ ಧರಣಿ

By Anusha Kb  |  First Published Nov 9, 2022, 10:09 AM IST

 ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದೆ.  ದೆಹಲಿ, ನೋಯ್ಡಾ ಸೇರಿದಂತೆ ಎನ್‌ಸಿಆರ್ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ.


ದೆಹಲಿ/ನೇಪಾಳ: ನಿನ್ನೆ ಮಧ್ಯರಾತ್ರಿ ಎರಡು ಗಂಟೆ ಸುಮಾರಿಗೆ ರಾಷ್ಟ್ರ ರಾಜಧಾನಿ ದೆಹಲಿ ಸುತ್ತಮುತ್ತ ಭೂಮಿ ಕಂಪಿಸಿದ ಅನುಭವವಾಗಿದೆ.  ದೆಹಲಿ, ನೋಯ್ಡಾ ಸೇರಿದಂತೆ ಎನ್‌ಸಿಆರ್ ಪ್ರದೇಶಗಳಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ಕಂಪನದ ಕೇಂದ್ರ ಬಿಂದು ಭೂಮಿಯಿಂದ 10 ಕಿಲೋ ಮೀಟರ್ ಕೆಳಭಾಗದಲ್ಲಿ ಕಂಡು ಬಂದಿದೆ ಎಂದು ಭೂಕಂಪನಶಾಸ್ತ್ರ ಸಂಸ್ಥೆ ಹೇಳಿದೆ. 

ಹಾಗೆಯೇ ಉತ್ತರಾಖಂಡ್‌ನಲ್ಲಿಯೂ ಇಂದು ಮುಂಜಾನೆ ಭೂಮಿ ಕಂಪಿಸಿದ ಅನುಭವವಾಗಿದೆ. ಬೆಳಗ್ಗೆ 6.27ರ ಸುಮಾರಿಗೆ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ  4.3 ತೀವ್ರತೆ ದಾಖಲಾಗಿದೆ. ಈ ಕಂಪನದ ಕೇಂದ್ರ ಬಿಂದು ಭೂಮಿಯ ಒಳಗೆ ನಾಲ್ಕು ಕಿಲೋ ಮೀಟರ್ ಕೆಳಭಾಗದಲ್ಲಿ ಎಂದು ಕಂಡು ಬಂದಿದೆ.

Tap to resize

Latest Videos

ಇತ್ತ ನೇಪಾಳದಲ್ಲಿ(Nepal) ಸಂಭವಿಸಿದ ಭೂಕಂಪನದ (earthquake) ಪರಿಣಾಮ ಮನೆಯೊಂದು ಕುಸಿದು ಆರು ಜನ ಸಾವಿಗೀಡಾಗಿದ್ದಾರೆ. ನೇಪಾಳದ ದೋತಿ (Doti) ಜಿಲ್ಲೆಯಲ್ಲಿ ಈ ಅವಘಡ ಸಂಭವಿಸಿದೆ. 
 

| Search and rescue operation underway at the house that collapsed in Doti district of Nepal after the earthquake last night that killed six people.

(Source: Nepal Army) pic.twitter.com/iPY0e8qSMK

— ANI (@ANI)

 

Nepal | Visuals from Doti where buildings were reduced to debris in wake of the 3rd earthquake with a magnitude of 6.6 (as per National Seismological Center,Nepal) that occurred late last night

2 other earthquakes with magnitudes 5.7 & 4.1 occurred there y'day

(Pic: Nepal Army) pic.twitter.com/qqlQ14LkLO

— ANI (@ANI)


 

click me!