ಪಶು ಆಸ್ಪತ್ರೆ ಸಿಬ್ಬಂದಿ ಮೇಲೆ ನಸೀರುದ್ದೀನ್ ಶಾ ಪುತ್ರಿಯಿಂದ ಹಲ್ಲೆ!

Suvarna News   | Asianet News
Published : Jan 25, 2020, 07:22 PM ISTUpdated : Jan 25, 2020, 07:30 PM IST
ಪಶು ಆಸ್ಪತ್ರೆ ಸಿಬ್ಬಂದಿ ಮೇಲೆ ನಸೀರುದ್ದೀನ್ ಶಾ ಪುತ್ರಿಯಿಂದ ಹಲ್ಲೆ!

ಸಾರಾಂಶ

ಪಶು ಆಸ್ಪತ್ರೆಯಲ್ಲಿ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ ನಸೀರುದ್ದೀನ್ ಶಾ ಪುತ್ರಿ| ನಟಿ ಹೀಬಾ ಶಾ ವಿರುದ್ಧ ದೂರು ದಾಖಲಿಸಿದ ಆಸ್ಪತ್ರೆ ಸಿಬ್ಬಂದಿ| ತಮ್ಮ ಬೆಕ್ಕುಗಳನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆತಂದಿದ್ದ ಹೀಬಾ| ಸಿಬ್ಬಂದಿ ಮೇಲೆ ಹೀಬಾ ಹಲ್ಲೆ ಮಾಡುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆ| ಸಿಬ್ಬಂದಿ ವಿರುದ್ಧ ಅಸಭ್ಯ ವರ್ತನೆ ಆರೋಪ ಹೊರಿಸಿದ ಹೀಬಾ|

ನವದೆಹಲಿ(ಜ.25): ಇಬ್ಬರು ಪ್ರಾಣಿ ಕಲ್ಯಾಣ ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ, ನಟ ನಸೀರುದ್ದೀನ್ ಶಾ ಪುತ್ರಿ ಹೀಬಾ ಶಾ ವಿರುದ್ಧ ದೂರು ದಾಖಲಿಸಲಾಗಿದೆ.

ಕಳೆದ ಜ.16 ರಂದು ನಟಿ ಹೀಬಾ ಶಾ ಕ್ರಿಮಿನಾಶಕ ಸೇವಿಸಿದ್ದ ತಮ್ಮ ಎರಡು ಬೆಕ್ಕುಗಳನ್ನು ಪಶುವೈದ್ಯಕೀಯ ಚಿಕಿತ್ಸಾಲಯಕ್ಕೆ ದಾಖಲಿಸಿದ್ದರು.

ಈ ವೇಳೆ ಚಿಕಿತ್ಸೆ ಮುಗಿಯುವವರೆಗೂ ಹೊರಗೆ ಕಾಯುವಂತೆ ಹೀಬಾಳಿಗೆ ಆಸ್ಪತ್ರೆಯ ಸಿಬ್ಬಂದಿ ಹೇಳಿದ್ದಾರೆ. ಅಲ್ಲದೇ ಚಿಕಿತ್ಸೆಗೂ ಮೊದಲು ಒಪ್ಪಂದ ಪತ್ರಕ್ಕೆ ಸಹಿ ಹಾಕುವಂತೆ ಮನವಿ ಮಾಡಿದ್ದಾರೆ.

ಇದರಿಂದ ಕೆರಳಿದ ಹೀಬಾ,  ಏಕಾಏಕಿ ಸಿಬ್ಬಂದಿ ಮೇಲೆ  ಹಲ್ಲೆ ಮಾಡಿದ್ದಾರೆ. ಹೀಬಾ ಸಿಬ್ಬಂದಿ ಮೇಲೆ ಹಲ್ಲೆ ಮಾಡುತ್ತಿರುವ ದೃಶ್ಯ ಆಸ್ಪತ್ರೆಯ ಸಿಸಿಟಿವಿಯಲ್ಲಿ ದಾಖಲಾಗಿದೆ.

ಇದನ್ನು ಆಧರಿಸಿ ಹೀಬಾ ವಿರುದ್ಧ ಪೊಲೀಸ್ ಠಾಣೆಯಲ್ಲಿ ಎರಡು ದೂರು ದಾಖಲಾಗಿವೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಧರ್ಮದ ಸೋಗಿನಲ್ಲಿ ಮಾನವ ಹಕ್ಕುಗಳ ಹರಣ: ಸರ್ಕಾರದ ವಿರುದ್ಧ ಶಾ ವಿವಾದಿತ ಹೇಳಿಕೆ

ಆದರೆ ತಮ್ಮ ಮೇಲಿನ ಆರೋಪ ನಿರಾಕರಿಸಿರುವ ಹೀಬಾ, ಸಿಬ್ಬಂದಿ ತಮ್ಮೊಂದಿಗೆ ಅಸಭ್ಯ ವರ್ತಿಸಿದ್ದರಿಂದ ಹಲ್ಲೆ ಮಾಡಿದ್ದಾಗಿ ಸ್ಪಷ್ಟಪಡಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

ನನ್ನ ತಂಗಿಯರಿಗಾಗಿ ಅವರನ್ನು ಬಿಟ್ಟುಬಿಡಿ: ತನ್ನ ಕೊಲ್ಲಲೆತ್ನಿಸಿದ ತಂದೆಯ ಬಿಡುಗಡೆಗೆ ಬೇಡಿದ ಬಾಲಕಿ
25 ಜನರ ಬಲಿ ಪಡೆದ ಗೋವಾ ಕ್ಲಬ್ ಬೆಂಕಿ ದುರಂತ ಸಂಭವಿಸಿದ ಕೆಲ ಗಂಟೆಗಳಲ್ಲೇ ಥೈಲ್ಯಾಂಡ್‌ಗೆ ಹಾರಿದ ಕ್ಲಬ್ ಮಾಲೀಕ