ಮೋದಿ ಪ್ರಧಾನಿಯಾಗಿ ಮೇ 26ಕ್ಕೆ 8 ವರ್ಷ: ಬಿಜೆಪಿ ಅದ್ಧೂರಿ ಆಚರಣೆ

By Girish Goudar  |  First Published May 12, 2022, 6:44 AM IST

*   ಮೇ. 30ರಿಂದ 15 ದಿನಗಳ ಕಾಲ ದೇಶಾದ್ಯಂತ ಜನಸಂಪರ್ಕ ಅಭಿಯಾನಕ್ಕೆ ಸಿದ್ಧತೆ
*  ಬೈಕ್‌ ರ್‍ಯಾಲಿ, ಸುದ್ದಿಗೋಷ್ಠಿ, ಪಾಕೆಟ್‌ ಡೈರಿ ಬಿಡುಗಡೆ ಸೇರಿ ಹಲವು ಕಾರ್ಯಕ್ರಮ
*  ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಸಾಧನೆ ಪ್ರಸ್ತಾಪ 
 


ನವದೆಹಲಿ(ಮೇ.12): ನರೇಂದ್ರ ಮೋದಿ(Narendra Modi) ಅವರು ದೇಶದ ಪ್ರಧಾನಿಯಾಗಿ(Prime Minister) ಮೇ. 26ಕ್ಕೆ ಎಂಟು ವರ್ಷಗಳು ಪೂರ್ಣಗೊಳ್ಳಲಿವೆ. ಈ ದಿನವನ್ನು ಅದ್ಧೂರಿಯಾಗಿ ಆಚರಿಸಲು ಬಿಜೆಪಿ(BJP) ಭರ್ಜರಿ ಸಿದ್ಧತೆಯಲ್ಲಿ ತೊಡಗಿದೆ.

ಮೋದಿ ಸರ್ಕಾರದ(Modi Government) 8ನೇ ವರ್ಷಾಚರಣೆ ನಿಮಿತ್ತ ಮೇ 30ರಿಂದ ಜೂ.15ರವರೆಗೆ ದೇಶಾದ್ಯಂತ 15 ದಿನಗಳ ಕಾಲ ಜನಸಂಪರ್ಕ ಅಭಿಯಾನ ನಡೆಸಿ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವುದು, ಸರ್ಕಾರದ ಸಾಧನೆಗಳ ರಿಪೋರ್ಟ್‌ ಕಾರ್ಡ್‌ ಹೆಸರಲ್ಲಿ ವಿವಿಧ ಕಾರ್ಯಕ್ರಮ ಆಯೋಜಿಸುವುದು, ಹಲವಾರು ಸುದ್ದಿಗೋಷ್ಠಿ ನಡೆಸಿ ಸಾಧನೆ ತಿಳಿಸುವುದು, ಬೈಕ್‌ ರಾರ‍ಯಲಿ ಏರ್ಪಾಟು, ಸರ್ಕಾರದ ಸಾಧನೆಗಳನ್ನು ವಿವರಿಸುವ ಗೀತೆ, ವೆಬ್‌ಸೈಟ್‌ ಹಾಗೂ ಪಾಕೆಟ್‌ ಡೈರಿಗಳನ್ನು ಬಿಡುಗಡೆ ಮಾಡುವ ಉದ್ದೇಶವನ್ನು ಪಕ್ಷ ಹೊಂದಿದೆ.

Latest Videos

ಲಂಚಾವತಾರ: ಪ್ರಧಾನಿಗೆ ದೂರು ನೀಡಿದ್ದ ಕಂಟ್ರಾಕ್ಟರ್‌ ಮೇಲೇ ಕೇಸ್‌..!

ಜನರು ಅದರಲ್ಲೂ ವಿಶೇಷವಾಗಿ ಬಡವರು ಹಾಗೂ ದುರ್ಬಲ ವರ್ಗದವರನ್ನು ಮೇಲೆತ್ತಲು ಮೋದಿ ಸರ್ಕಾರ ಕೈಗೊಂಡ ಕ್ರಮಗಳ ಕುರಿತು ಜನರಿಗೆ ತಿಳಿಸಬೇಕು. ಇದಕ್ಕಾಗಿ ‘8 ವರ್ಷಗಳು: ಸೇವೆ, ಉತ್ತಮ ಆಡಳಿತ, ಬಡವರ ಕಲ್ಯಾಣ’ ಹೆಸರಿನಲ್ಲಿ ಮೇ 30ರಿಂದ ಜೂ.15ರವರೆಗೆ ಸಾರ್ವಜನಿಕ ಸಂಪರ್ಕ ಅಭಿಯಾನ(Public Relation Campaign) ನಡೆಸಬೇಕು. ಬಿಜೆಪಿ ಕಾರ್ಯಕರ್ತರು ಈ 15 ದಿನಗಳ ಅವಧಿಯಲ್ಲಿ ಸಾರ್ವಜನಿಕರ ಜತೆ 75 ತಾಸುಗಳ ಕಾಲ ಸಂವಹನ ನಡೆಸಬೇಕು ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ(JP Nadda) ಅವರು ಈಗಾಗಲೇ ಕಾರ್ಯಕರ್ತರೂ ಸೇರಿದಂತೆ ರಾಜ್ಯ ಘಟಕಗಳ ಅಧ್ಯಕ್ಷರಿಗೆ ಸೂಚನೆ ರವಾನಿಸಿದ್ದಾರೆ.

ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಕಾರ್ಯಕ್ರಮಗಳ ಬಗ್ಗೆ ಪ್ರಚಾರ ಪಡಿಸಬೇಕು. ಸಾಮಾಜಿಕ ಜಾಲತಾಣಗಳು ಹಾಗೂ ಸಿನಿಮಾ ಮಂದಿರಗಳನ್ನು ಇದಕ್ಕೆ ಬಳಸಿಕೊಳ್ಳಬೇಕು. ‘ರಿಪೋರ್ಚ್‌ ಟು ನೇಷನ್‌’ (ರಾಷ್ಟ್ರಕ್ಕೆ ಪ್ರಗತಿ ವರದಿ) ಹೆಸರಿನಲ್ಲಿ ಪರಿಶಿಷ್ಟಜಾತಿ, ಪರಿಶಿಷ್ಟಪಂಗಡ ಹಾಗೂ ಮಹಿಳೆಯರೂ ಸೇರಿದಂತೆ ವಿವಿಧ ಯೋಜನೆಗಳ ಫಲಾನುಭವಿಗಳ ಜತೆ ಸಂವಾದ ನಡೆಸಬೇಕು. ಈ ಕಾರ್ಯಕ್ರಮಕ್ಕೆ ಜೆ.ಪಿ. ನಡ್ಡಾ ಅವರು ಚಾಲನೆ ನೀಡಲಿದ್ದಾರೆ ಎಂದು ಪಕ್ಷ ತಿಳಿಸಿದೆ.

ಇದೇ ವೇಳೆ, ಜೂ.7ರಿಂದ 13ರವರೆಗೆ ಬಿಜೆಪಿ ಯುವ ಘಟಕ ‘ವಿಕಾಸ ತೀರ್ಥ’ ಹೆಸರಿನಲ್ಲಿ ದೇಶದ ವಿವಿಧ ಜಿಲ್ಲೆಗಳಲ್ಲಿ ಬೈಕ್‌ ರಾರ‍ಯಲಿ ನಡೆಸಲಿದ್ದು, ಸಚಿವರು ಕೂಡ ಅದರಲ್ಲಿ ಭಾಗವಹಿಸಲಿದ್ದಾರೆ. ಇದಲ್ಲದೆ, ಸರ್ಕಾರದ ಸಾಧನೆಗಳನ್ನು ವಿವರಿಸಲು ಗೀತೆ, ವೆಬ್‌ಸೈಟ್‌ ಹಾಗೂ ಇಲ್ಲಿವರೆಗೂ ಸರ್ಕಾರ ಸಾಧಿಸಿರುವ ಸಾಧನಾ ವಿವರವನ್ನು ಒಳಗೊಂಡ ಪಾಕೆಟ್‌ ಡೈರಿಯನ್ನು ಹೊರತರುವ ಯೋಜನೆಯನ್ನೂ ಹಾಕಿಕೊಂಡಿದೆ.

ಮೋದಿ ಸೂಚನೆ ಮೇಲೆ ನಿಲುವು ಬದಲು: ದೇಶದ್ರೋಹ ಕಾನೂನು ಮರುಪರಿಶೀಲನೆ

ಮತ್ತೊಂದೆಡೆ, ಜನರ ಮನೆಗೇ ತೆರಳಿ, ಸರ್ಕಾರ ಈವರೆಗೆ ಕೈಗೊಂಡಿರುವ ಕಾರ್ಯಗಳನ್ನು ವಿವರಿಸುವಂತೆ ಸಂಸದರಿಗೆ ಸೂಚಿಸಲಾಗಿದೆ. ಜೂ.6ರಿಂದ 8ರವರೆಗೆ ಅಲ್ಪಸಂಖ್ಯಾತ ಸಮುದಾಯದ ಜತೆಗೂ ಸಂವಾದ ಆಯೋಜಿಸಬೇಕು. ಜೂ.1ರಿಂದ 13ರವರೆಗೆ ಗರೀಬ್‌ ಕಲ್ಯಾಣ ಜನಸಭೆಗಳನ್ನು ಆಯೋಜಿಸಬೇಕು ಎಂದು ಪಕ್ಷವು ಸೂಚಿಸಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರದ ಸಾಧನೆ ಪ್ರಸ್ತಾಪ 

15 ದಿನಗಳ ಅವಧಿಯಲ್ಲಿ ಹಲವಾರು ಪತ್ರಿಕಾಗೋಷ್ಠಿ ನಡೆಸಿ, ಈಶಾನ್ಯ ರಾಜ್ಯಗಳು, 370ನೇ ವಿಧಿ ರದ್ದತಿ ಹಾಗೂ ಇನ್ನಿತರೆ ಕ್ರಮಗಳ ಕುರಿತು ವಿವರಣೆ ನೀಡಬೇಕು. ರಾಜ್ಯ ಘಟಕಗಳ ಅಧ್ಯಕ್ಷರು ರಾಜಧಾನಿ ಮಟ್ಟದಲ್ಲಿ ತ್ರಿಸದಸ್ಯ ಸಮಿತಿ ರಚಿಸಬೇಕು. ಇದಲ್ಲದೆ ಜಿಲ್ಲಾ ಮಟ್ಟದಲ್ಲೂ ಸಮಿತಿಗಳನ್ನು ರಚನೆ ಮಾಡಬೇಕು ಎಂದು ಸೂಚಿಸಿದೆ.
 

click me!