* 2014ರ ಮೇ 26ರಂದು ಪ್ರಧಾನಿಯಾಗಿದ್ದ ಮೋದಿ
* ನಂತರ 2019ರಲ್ಲೂ ಗೆದ್ದಿದ್ದರು ನರೇಂದ್ರ ಮೋದಿ
* ಇಂದು ಚೆನ್ನೈ, ಹೈದರಾಬಾದ್‌ಗೆ ಪ್ರಧಾನಿ
ನವದೆಹಲಿ(ಮೇ.26): ನರೇಂದ್ರ ಮೋದಿ ಅವರು, ದೇಶದ ಪ್ರಧಾನಿಯಾಗಿ ಇಂದು (ಮೇ.26ರಂದು) 8 ವರ್ಷ ಪೂರ್ಣಗೊಳ್ಳಲಿದೆ. ಈ ದಿನದಂದು ಅವರು ಚೆನ್ನೈ ಹಾಗೂ ಹೈದರಾಬಾದ್‌ನಲ್ಲಿ ವಿವಿಧ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಭಾಗಿಯಾಗಲಿದ್ದಾರೆ. ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಹೆದ್ದಾರಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಮೋದಿ ಅವರು ಮೊದಲ ಬಾರಿ 2014ರ ಮೇ 26ರಂದು ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಅದಾದ ನಂತರ 2019ರಲ್ಲಿ ಪುನಃ ಅಧಿಕಾರಕ್ಕೆ ಬಂದಿದ್ದರು. 2ನೇ ಅವಧಿಯಲ್ಲಿ ಅವರು ಮೇ 30ರಂದು ಪ್ರಮಾಣವಚನ ಸ್ವೀಕಾರ ಮಾಡಿದ್ದರು.
ಮೋದಿ ಅಧಿಕಾರಕ್ಕೆ ಬಂದು 8 ವರ್ಷ ತುಂಬಿದ ಸಂಭ್ರಮಾಚರಣೆ ಮೇ 26ರ ಬದಲು, ಅವರು 2ನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ದಿನಾಂಕವಾದ ಮೇ 30ರಿಂದ ಏರ್ಪಾಟಾಗಿದೆ. ಬಿಜೆಪಿ ಮೇ 30ರಿಂದ 15 ದಿನ ಕಾಲ ದೇಶಾದ್ಯಂತ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
Fact Check: ಕ್ವಾಡ್ ಶೃಂಗದಲ್ಲಿ ಪ್ರಧಾನಿ ಮೋದಿ ಕಡೆಗಣಿಸಿದ ಜೋ ಬೈಡೆನ್? ವೈರಲ್ ವಿಡಿಯೋ ಸತ್ಯಾಸತ್ಯತೆ ಏನು?
ಚೆನ್ನೈ, ಹೈದರಾಬಾದ್‌ಗೆ ಇಂದು ಮೋದಿ:
ಗುರುವಾರ ಬೆಂಗಳೂರು ಮತ್ತು ಚೆನ್ನೈ ನಡುವಿನ 262 ಕಿ.ಮೀ. ದೂರದ ಎಕ್ಸ್‌ಪ್ರೆಸ್ ವೇ ಸೇರಿದಂತೆ 31,400 ಕೋಟಿ ಮೌಲ್ಯದ 11 ಯೋಜನೆಗಳಿಗೆ ಮೇ 26ರಂದು ಪ್ರಧಾನಿ ನರೇಂದ್ರ ಮೋದಿ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಈ ನಡುವೆ, ಹೈದರಾಬಾದ್‌ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‌ನ 20ನೇ ವರ್ಷದ ಕಾರ್ಯಕ್ರಮದಲ್ಲಿ ಕೂಡ ಅವರು ಅಂದು ಭಾಗಿಯಾಗಲಿದ್ದಾರೆ.
ಈ 8 ವರ್ಷಗಳಲ್ಲಿ ಪ್ರಧಾನಿ ಮೋದಿ ನೇತೃತ್ವ ದ ಸರ್ಕಾರವು ಆರ್ಥಿಕ, ಆರೋಗ್ಯ ಮತ್ತು ಸಾಮಾಜಿಕ ಭದ್ರತೆಯ ವಿಭಾಗದಲ್ಲಿ ದೇಶದ ಜನರಿಗೆ ನೇರವಾಗಿ ಅನುಕೂಲವಾಗುವಂತಹ ಹಲವು ಯಶಸ್ವಿ ಯೋಜನೆಗಳನ್ನು ಜಾರಿಗೆ ತಂದಿದೆ. ಈ ಅಧಿಕಾರದ ಅವಧಿಯನ್ನು ದೇಶದ ಸಮತೋಲಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆಗೆ ಮೀಸಲಿಡಲಾಗಿದೆ ಎಂದು ಮೋದಿ ಇತ್ತೀಚೆಗೆ ಹೇಳಿದ್ದರು.