
2014ರ ಸಂಸತ್ ಚುನಾವಣೆಯ ಹೊತ್ತಿಗೆ ಮೋದಿ ರಾಷ್ಟ್ರೀಯ ರಾಜಕಾರಣದಲ್ಲಿ ಯಾವ ಮಟ್ಟಿಗೆ ಛಾಪು ಮೂಡಿಸಿಬಿಟ್ಟಿದ್ದರು ಎಂದರೆ ಬಿಜೆಪಿ ಅಡ್ವಾಣಿಯವರನ್ನೂ ಮೂಲೆಗೆ ಸರಿಸಿ, ಮೋದಿಯವರನ್ನು ಪ್ರಧಾನಿ ಅಭ್ಯರ್ಥಿಯಾಗಿ ಬಿಂಬಿಸಿತು. ಕಾಲಿಗೆ ಚಕ್ರ ಕಟ್ಟಿಕೊಂಡವರಂತೆ ದೇಶ ಸುತ್ತಿ ಬಿಜೆಪಿ ಅಲೆ ಏಳುವಂತೆ ಮಾಡಿದರು. ಪರಿಣಾಮ 2014ರ ಚುನಾವಣೆಯಲ್ಲಿ ಭರ್ಜರಿ ಬಹುಮತದಿಂದ ಬಿಜೆಪಿ ಅಧಿಕಾರಕ್ಕೆ ಬಂತು. ಮೋದಿ ವಾರಾಣಸಿಯಿಂದ ಸಂಸದರಾಗಿ ಆರಿಸಿಬಂದರು. ಸಂಸದೀಯ ಪಕ್ಷದ ನಾಯಕನಾಗಿ, ಸಂಸತ್ತಿನ ಮೆಟ್ಟಿಲಿಗೆ ಹಣೆ ಇಟ್ಟು ವಂದಿಸಿ, ಸಂಸತ್ತನ್ನು ಪ್ರವೇಶಿಸಿ, 2014 ಮೇ 26ರಂದು ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಪ್ರಧಾನಿಯಾಗಿ ಮೋದಿ ಗೆಲುವಿನ ನಾಗಾಲೋಟ ಇಷ್ಟಕ್ಕೇ ಮುಗಿಯಲಿಲ್ಲ. 5 ವರ್ಷಗಳ ಆಳ್ವಿಕೆ ಸಂದರ್ಭದಲ್ಲಿ ಮೋದಿ ಹಲವು ಸುಧಾರಣೆ, ಯೋಜನೆಗಳನ್ನು ಜಾರಿ ತಂದಿದ್ದ ಪರಿಣಾಮ 2019ರ ಸಾರ್ವತ್ರಿಕ ಚುನಾವಣೆಯಲ್ಲಿ ಅಭೂತಪೂರ್ವ ಬಹುಮತದೊಂದಿಗೆ ಮತ್ತೊಮ್ಮೆ ದೇಶದ ಪ್ರಧಾನಿಯಾದರು. 303 ಸ್ಥಾನಗಳೊಂದಿಗೆ ಬಿಜೆಪಿ ಭರ್ಜರಿ ಜಯಗಳಿಸಿತು. 2019 ಮೇ 30ರಂದು ಮೋದಿ 2ನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದರು.
ಇದನ್ನೂ ಓದಿ: HBD Narendra Modi: ಜಗತ್ತನ್ನೇ ಭಾರತದತ್ತ ತಿರುಗಿಸಿದ ಗುಜರಾತಿನ ಸಾಮಾನ್ಯ ಕುಟುಂಬದಿಂದ ಬಂದ ಸಾಧಕ!
ಮೋದಿ ಹೆಜ್ಜೆ ಗುರುತು
ಸೆ.7, 1950: ನರೇಂದ್ರ ಮೋದಿ ಜನನ
1958: ಆರ್‌ಎಸ್‌ಎಸ್‌ಗೆ ಬಾಲ ಸ್ವಯಂ ಸೇವಕನಾಗಿ ಸೇರ್ಪಡೆ
1963: ಜಶೋದಾಬೆನ್ ಅವರೊಂದಿಗೆ ವಿವಾಹ
1965: ಮನೆ ಬಿಟ್ಟು ದೇಶ ಪರ್ಯಟನೆ
1972: ಅಧಿಕೃತವಾಗಿ ಆರ್‌ಎಸ್‌ಎಸ್‌ಗೆ ಸೇರ್ಪಡೆ
1975: ತುರ್ತು ಪರಿಸ್ಥಿತಿ ವೇಳೆ ಭೂಗತರಾಗಿ ಹೋರಾಟ
1985: ಬಿಜೆಪಿಗೆ ಸೇರ್ಪಡೆ, ರಾಜಕೀಯಕ್ಕೆ ಪಾದಾರ್ಪಣೆ
1987: ಗುಜರಾತ್ ಬಿಜೆಪಿ ಸಂಘಟನಾ ಕಾರ‍್ಯದರ್ಶಿಯಾಗಿ ನೇಮಕ
1990: ಅಡ್ವಾಣಿ ಅವರ ರಾಮರಥ ಯಾತ್ರ ಸಂಘಟನೆ ಹೊಣೆ
1998: ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ‍್ಯದರ್ಶಿಯಾಗಿ ನೇಮಕ
2001: ಗುಜರಾತ್ ಮುಖ್ಯಮಂತ್ರಿಯಾಗಿ ನೇಮಕ
2002: 2ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿ ಹುದ್ದೆ
2007: 3ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಪ್ರಮಾಣ
2012: 4ನೇ ಬಾರಿಗೆ ಗುಜರಾತ್ ಮುಖ್ಯಮಂತ್ರಿಯಾಗಿ ಸೇವೆ
2014: ಲೋಕಸಭಾ ಚುನಾವಣೆ ಗೆಲುವು. ಮೇ 26ಕ್ಕೆ ಪ್ರಧಾನಿ
2019: ಮತ್ತೆ ಬಿಜೆಪಿಗೆ ಬಹುಮತ, ಪ್ರಧಾನಿಯಾಗಿ ಪುನರಾಯ್ಕೆ
ಇದನ್ನೂ ಓದಿ: ಪ್ರಧಾನಿ ಮೋದಿ ಹುಟ್ಟುಹಬ್ಬಕ್ಕೆ ಶುಭಕೋರಲು 2,000 ಕಿ.ಮೀ ಕಾಲ್ನಡಿಗೆ, ಸಂಚಲನ ಸೃಷ್ಟಿಸಿದ ಆಂಧ್ರದ ರೈತ
ಪ್ರಶಸ್ತಿ, ಗೌರವಗಳು:
- 2016ರಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಟೈಮ್ ವರ್ಷದ ವ್ಯಕ್ತಿಯಾಗಿ ಓದುಗರಿಂದ ಆಯ್ಕೆ
- ಅದಕ್ಕೂ ಹಿಂದೆ ಫೋಬ್ಸ್‌ರ್, ಟೈಮ್ ನಿಯತಕಾಲಿಕೆಗಳಿಂದ ಅತ್ಯಂತ ಪ್ರಭಾವಿ ನಾಯಕನೆಂಬ ಮನ್ನಣೆ
- 2016ರಲ್ಲಿ ಸೌದಿ ಅರೇಬಿಯಾ ಸರ್ಕಾರವು ಮುಸ್ಲಿಮೇತರ ಗಣ್ಯರಿಗೆ ನೀಡುವ ಅತ್ಯುನ್ನತ ಗೌರವ
- ಅದೇ ವರ್ಷದ ಜೂನ್ ತಿಂಗಳಲ್ಲಿ ಅಷ್ಘಾನಿಸ್ತಾನ ಸರ್ಕಾರದಿಂದ ಅತ್ಯುನ್ನತ ನಾಗರಿಕ ಗೌರವ ಪ್ರದಾನ
- 2018ರ ಫೆಬ್ರವರಿ 10ರಂದು ಪ್ಯಾಲೆಸ್ತೀನ್ ಸರ್ಕಾರದಿಂದ ಅತ್ಯುನ್ನತ ನಾಗರಿಕ ಗೌರವಕ್ಕೆ ಆಯ್ಕೆ
- 2018ರ ಅ.3ರಂದು ವಿಶ್ವಸಂಸ್ಥೆಯ ವಾರ್ಷಿಕ ‘ಚಾಂಪಿಯನ್ಸ್ ಆಫ್ ಅಥ್‌ರ್’ ಪ್ರಶಸ್ತಿಗೆ ಆಯ್ಕೆ
- ಅದೇ ವರ್ಷದ ಅ.24ರಂದು ದಕ್ಷಿಣ ಕೊರಿಯಾದ ‘ಸೋಲ್ ಶಾಂತಿ ಪ್ರಶಸ್ತಿ’ಯ ಗೌರವ
- 2019ರ ಏ.4ರಂದು ಸಂಯುಕ್ತ ಅರಬ್ ಸಂಸ್ಥಾನದ (ಯುಎಇ) ಅತ್ಯುನ್ನತ ನಾಗರಿಕ ಗೌರವ
- ಅದೇ ವರ್ಷದ ಏಪ್ರಿಲ್ 12ರಂದು ರಷ್ಯಾ ಸರ್ಕಾರದಿಂದಲೂ ಅತ್ಯುನ್ನತ ನಾಗರಿಕ ಗೌರವಕ್ಕೆ ಆಯ್ಕೆ
- ಅದೇ ವರ್ಷದ ಜೂನ್ 8ರಂದು ಮಾಲ್ಡೀವ್ಸ್ ನಿಂದ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿ
- ಆ ವರ್ಷದ ಆಗಸ್ಟ್ 24ರಂದು ಬಹ್ರೈನ್‌ನಿಂದ ವಿದೇಶಿ ಗಣ್ಯರಿಗೆ ನೀಡುವ ಅತ್ಯುನ್ನತ ಪ್ರಶಸ್ತಿಗೆ ಆಯ್ಕೆ
- 2019ರ ಸೆ.24ಕ್ಕೆ ಬಿಲ್-ಮೆಲಿಂಡಾ ಗೇಟ್ಸ್ ಪ್ರತಿಷ್ಠಾನದ ‘ಗ್ಲೋಬಲ್ ಪೀಸ್ ಕೀಪರ್’ ಪುರಸ್ಕಾರ
- 2020ರ ಡಿ.21ರಂದು ಅಮೆರಿಕದ ಪ್ರತಿಷ್ಠಿತ ‘ಲೆಜನ್ ಆಫ್ ಮೆರಿಟ್’ ಪುರಸ್ಕಾರಕ್ಕೆ ಆಯ್ಕೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ