
ಮುಂಬೈ(ಫೆ.04) ಭಾರತದಲ್ಲಿ ಕಳೆದ ಹಲವು ದಿನಗಳಿಂದ ನೌಕರರು ಎಷ್ಟು ಗಂಟೆ ಕೆಲಸ ಮಾಡಬೇಕು ಅನ್ನೋ ಚರ್ಚೆ ನಡೆಯುತ್ತಿದೆ. ಪ್ರಮುಖವಾಗಿ ಇನ್ಫೋಸಿಸ್ ನಾರಾಯಣ ಮೂರ್ತಿ ಹೇಳಿದ 70 ಗಂಟೆ ಹಾಗೂ ಎಲ್ ಆ್ಯಂಡ್ ಟಿ ಮುಖ್ಯಸ್ಥ ಎಸ್ ಎನ್ ಸುಬ್ರಹ್ಮಣ್ಯನ್ ಹೇಳಿದ 90 ಗಂಟೆ ಕೆಲಸ ಹೇಳಿಕೆಗೆ ಕೋಲಾಹಲ ಸೃಷ್ಟಿಸಿದೆ. ಈ ಚರ್ಚೆ, ಟ್ರೋಲ್ ತಣ್ಣಗಾಗುವಷ್ಟರಲ್ಲೇ ಇದೀಗ ಮತ್ತೆ ಇನ್ಫೋಸಿಸ್ ಸಹ ಸಂಸ್ಥಾಪಕ ನಾರಾಯಣ ಮೂರ್ತಿ ಟ್ರೋಲ್ ಆಗಿದ್ದಾರೆ. ಭಾರತ ಹಾಗೂ ಇಂಗ್ಲೆಂಡ್ ನಡುವಿನ ಕೊನೆಯ ಟಿ20 ಪಂದ್ಯ ನಾರಾಯಣ ಮೂರ್ತಿ ತಮ್ಮ ಅಳಿಯ ರಿಷಿ ಸುನಕ್ ಜೊತೆ ಸೇರಿ ಹಾಜರಾಗಿದ್ದರು. ನಾರಾಯಣ ಮೂರ್ತಿ ತಮ್ಮ ನೌಕರರಿಗೆ 70 ಗಂಟೆ ಕೆಲಸ ಮಾಡಲು ಹೇಳಿದ್ದಾರೆ. ನೌಕರರು ವೀಕೆಂಡ್‌ನಲ್ಲೂ ಕೆಲಸ ಮಾಡುತ್ತಿದ್ದರೆ, ಬಾಸ್ ಮಾತ್ರ ಟಿ20 ಮನರಂಜನೆ ಪಡೆಯುತ್ತಿದ್ದಾರೆ ಎಂದು ಟ್ರೋಲ್ ಮಾಡಿದ್ದಾರೆ.
ಮುಂಬೈನಲ್ಲಿ ನಡೆದ ಭಾರತ ಹಾಗೂ ಇಂಗ್ಲೆಂಡ್ ನಡುವಿನ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನದ ಮೂಲಕ 150 ರನ್ ಗೆಲುವು ದಾಖಲಿಸಿತ್ತು. ಜೊತೆಗೆ 4-1 ಅಂತರದಲ್ಲಿ ಟ್ರೋಫಿ ಗೆದ್ದುಕೊಂಡಿತ್ತು. ಈ ಪಂದ್ಯ ವೀಕ್ಷಿಸಲು ಹಲವು ದಿಗ್ಗಜರು ಹಾಜರಾಗಿದ್ದರು. ಈ ಪೈಕಿ ಇನ್ಫೋಸಿಸ್ ನಾರಾಯಣ ಮೂರ್ತಿ, ಅಳಿಯ, ಬ್ರಿಟನ್ ಮಾಜಿ ಪ್ರಧಾನಿ ರಿಷಿ ಸುನಕ್, ಉದ್ಯಮಿ ಮುಕೇಶ್ ಅಂಬಾನಿ ಸೇರಿದಂತೆ ಹಲವು ಗಣ್ಯರು ಹಾಜರಾಗಿದ್ದರು. ನಾರಾಯಣ ಮೂರ್ತಿ ಫೋಟೋ ವಿಡಿಯೋಗಳು ಎಲ್ಲೆಡೆ ಹರಿದಾಡಿತ್ತು.
70 ಗಂಟೆ ಕೆಲಸ ವಿವಾದ ಕುರಿತು ಹೊಸ ವಿಚಾರ ಮುಂದಿಟ್ಟ ನಾರಾಯಣ ಮೂರ್ತಿ!
ಮುಂಬೈನ ವಾಂಖೆಡೆ ಕ್ರೀಡಾಂಗಣದ ಗ್ಯಾಲರಿಯಲ್ಲಿ ಕುಳಿತು ನಾರಾಯಣ ಮೂರ್ತಿ, ರಿಷಿ ಸುನಕ್ ಸೇರಿದಂತೆ ಗಣ್ಯರು ಪಂದ್ಯ ವೀಕ್ಷಿಸಿದ್ದಾರೆ. ಇದರ ಜೊತೆಗೆ ರಿಷಿ ಸುನಕ್, ನಾರಾಯಣ ಮೂರ್ತಿ ಜೊತೆ ಸೆಲ್ಫಿ ಕ್ಲಿಕ್ಕಿಸಿದ್ದಾರೆ. ಈ ಫೋಟೋಗಳನ್ನು ಮುಂದಿಟ್ಟುಕೊಂಡು ಹಲವರು ಟ್ರೋಲ್ ಮಾಡಿದ್ದಾರೆ. ನಾರಾಯಣ ಮೂರ್ತಿ ಭಾನುವಾರ ಸಂಜೆಯ ಕ್ಷಣಗಳನ್ನು ಆನಂದಿಸುತ್ತಿದ್ದಾರೆ. ಆದರೆ ಎಲ್ ಆ್ಯಂಡ್ ಟಿ ಮುಖ್ಯಸ್ಥರು ಸಂಡೆಯಲ್ಲೂ ಕೆಲಸ ಮಾಡುತ್ತಿದ್ದಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ನಾರಾಯಣ ಮೂರ್ತಿ ಹೇಳುತ್ತಾರೆ, ನೌಕರರು ವೀಕೆಂಡ್‌ನಲ್ಲೂ ಕೆಲಸ ಮಾಡಬೇಕು ಎಂದು. ಆದರೆ ನಾರಾಯಣ ಮೂರ್ತಿ ವೀಕೆಂಡ್‌ನಲ್ಲಿ ಏನು ಮಾಡುತ್ತಿದ್ದಾರೆ ಎಂದು ವಾಂಖೆಡೆ ಕ್ರೀಡಾಂಗಣದಲ್ಲಿ ಸೆಲ್ಫಿ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಒಂದಷ್ಟು ಮಂದಿ ಎಲ್ ಆ್ಯಂಡ್ ಟಿ ಚೇರ್ಮೆನ್ ಸುಬ್ರಹ್ಮಣ್ಯಮ್ ಅವರನ್ನು ಟ್ರೋಲ್ ಮಾಡಿದ್ದಾರೆ. ನಾರಾಯಣ ಮೂರ್ತಿ ಸಂಡೆ ಕೆಲಸ ಮಾಡುತ್ತಿಲ್ಲ ಎಂದು ಟಾಂಗ್ ನೀಡಿದ್ದಾರೆ.
ಪಂದ್ಯ ಮುಗಿದ ದಿನಗಳು ಉರುಳಿದರೂ ಇದೀಗ ನಾರಾಯಣ ಮೂರ್ತಿ ಹಾಗೂ ಸುಬ್ರಹ್ಮಣ್ಯ ಟ್ರೋಲ್ ಆಗುತ್ತಿದ್ದಾರೆ. ಪದೇ ಪದೆ ಇವರಿಬ್ಬರ ಕುರಿತು ಮೀಮ್ಸ್ ಹರಿದಾಡುತ್ತಿದೆ.
ನಾರಾಯಣ ಮೂರ್ತಿ ಸಂದರ್ಶನ ಒಂದರಲ್ಲಿ ನೌಕರರು ವಾರದಲ್ಲಿ 70 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಇದು ಭಾರಿ ವಿವಾದಕ್ಕೆ ಕಾರಣವಾಗಿತ್ತು. ತಾನು ಬೆಳಗ್ಗೆ 8 ಗಂಟೆಗೂ ಮೊದಲೇ ಕಚೇರಿಯಲ್ಲಿ ಹಾಜರಾಗುತ್ತಿದ್ದೆ. ರಾತ್ರಿ 8.30ರ ತನಕ ಕಚೇರಿಯಲ್ಲಿ ಕೆಲಸ ಮಾಡುತ್ತಿದ್ದೆ. ಯಶಸ್ಸು ಬೇಕಾದರೆ 70 ಗಂಟೆ ಕೆಲಸ ಅನಿವಾರ್ಯವಾಗಿದೆ ಎಂದಿದ್ದರು. ಎರಡು ದಿನ ರಜೆ, ಇತರ ಹೆಚ್ಚುವರಿ ರಜೆಗಳಿಂದ ಸರಿಯಾದ ಪ್ರಮಾಣದಲ್ಲಿ ಉತ್ಪಾದನೆ ಆಗುತ್ತಿಲ್ಲ ಎಂದು ನಾರಾಯಣ ಮೂರ್ತಿ ಹೇಳಿದ್ದರು. ಆದರೆ ಎಸ್ ಎನ್ ಸುಬ್ರಹ್ಮಣ್ಯನ್ ಮತ್ತೊಂದು ಹೆಜ್ಜೆ ಮುಂದೆ ಹೋಗಿದ್ದರು. ಸುಬ್ರಹ್ಮಣ್ಯನ್ 90 ಗಂಟೆ ಕೆಲಸ ಮಾಡಬೇಕು ಎಂದಿದ್ದರು. ಇಷ್ಟೇ ಅಲ್ಲ ಭಾನುವಾರ ಮನೆಯಲ್ಲಿ ಹೆಂಡ್ತಿ ಮುಖ ಎಷ್ಟು ನೋಡುತ್ತೀರಿ. ಕಚೇರಿಗೆ ಬಂದು ಕೆಲಸ ಮಾಡಿ ಎಂದು ಸೂಚಿಸಿದ್ದರು. ಇಷ್ಟೇ ಅಲ್ಲ ನೌಕಕರನ್ನು ಭಾನುವಾರ ಕೆಲಸ ಮಾಡಿಸಿಲ್ಲ ಅನ್ನೋ ತಪ್ಪಿತಸ್ಥ ಭಾವ ಕಾಡುತ್ತಿದೆ ಎಂದಿದ್ದರು.
70 ಗಂಟೆ ಕೆಲಸ ಚರ್ಚೆ ನಡುವೆ 1800 ಕೋಟಿ ರೂ ಕಳೆದುಕೊಂಡ ನಾರಾಯಣ ಮೂರ್ತಿ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ