
Indian Railways Loco Pilot: ಎಲ್ಲಾ ವರ್ಗದ ಜನರು ರೈಲು ಪ್ರಯಾಣ ಇಷ್ಟಪಡಲು ಪ್ರಮುಖ ಕಾರಣ ಅದರಲ್ಲಿರುವ ಸೌಲಭ್ಯಗಳು. ರೈಲು ಪ್ರಯಾಣ ಆರಾಮದಾಯಕದ ಜೊತೆಯಲ್ಲಿ ಶೌಚಾಲಯದ ವ್ಯವಸ್ಥೆಯನ್ನು ಹೊಂದಿರುತ್ತವೆ. ಪ್ರಮುಖವಾಗಿ ಹಿರಿಯ ನಾಗರೀಕರು ರೈಲು ಪ್ರಯಾಣಕ್ಕೆ ಮೊದಲ ಆದ್ಯತೆಯನ್ನು ನೀಡುತ್ತಾರೆ. ಇಷ್ಟು ಮಾತ್ರವಲ್ಲ ದೀರ್ಘ ಪ್ರಯಾಣದ ರೈಲುಗಳು' 'ಅಡುಗೆ ಕೋಚ್' ಹೊಂದಿರುತ್ತವೆ. ಇಲ್ಲಿ ನಿಮಗೆ ಬೇಕಾದ ಆಹಾರ ಸಿಗುತ್ತದೆ. ಆದರೆ ಈ ವಿಷಯ ಕೇಳಿದ್ರೆ ನಿಮಗೆ ಒಂದು ಕ್ಷಣ ಅಚ್ಚರಿಯಾಗಬಹುದು. ನಮ್ಮೆಲ್ಲರನ್ನು ಸುರಕ್ಷಿತವಾಗಿ ಮನೆ ತಲುಪಿಸುವ ರೈಲು ಚಾಲಕರಿಗೆ (ಲೋಕೋ ಪೈಲಟ್) ಇಂತಹ ಯಾವುದೇ ಸೌಲಭ್ಯವಿರಲ್ಲ. ಮೂತ್ರ ಅಥವಾ ಶೌಚಕ್ಕಾಗಿ ಮಾರ್ಗ ಮಧ್ಯೆ ರೈಲು ನಿಲ್ಲಿಸಲು ಆಗಲ್ಲ. ದೀರ್ಘ ಪ್ರಯಾಣದ ಸಂದರ್ಭದಲ್ಲಿ ಲೋಕೋ ಪೈಲಟ್‌ಗಳು ಏನು ಮಾಡ್ತಾರೆ ಎಂಬುದರ ಮಾಹಿತಿಯನ್ನು ಈ ಲೇಖನ ಒಳಗೊಂಡಿದೆ.
ಎಲ್ಲರೂ ರೈಲು ಇಂಜಿನ್‌ಗಳನ್ನು ನೋಡಿರುತ್ತೀರಿ. ಮುಂಭಾಗದ ಇಂಜಿನ್‌ನಲ್ಲಿ ಇಬ್ಬರು ಲೋಕೋ ಪೈಲಟ್‌ಗಳು ಕಾರ್ಯ ನಿರ್ವಹಿಸುತ್ತಿರುತ್ತಾರೆ. ಇಂಜಿನ್ ಬಳಿ ತೆರಳುತ್ತಿದ್ದಂತೆ ಬಿಸಿಯಾದ ಹಬೆ ಬರುತ್ತಿದೆ. ಇಂತಹ ಬಿಸಿಯಾದ ಜಾಗದಲ್ಲಿ ಲೋಕೋಪೈಲಟ್‌ಗಳು ಕುಳಿತಿರುತ್ತಾರೆ. ಆದರೆ ರೈಲುಗಳಲ್ಲಿ ಪ್ರಯಾಣಿಕರಿಗೆ ಸಿಗುವ ಶೌಚಾಲಯದ ಸೌಲಭ್ಯ ಇವರಿಗೆ ಸಿಗಲ್ಲ. ಹಾಗಾದ್ರೆ ಲೋಕೋ ಪೈಲಟ್‌ಗಳು ನೈಸರ್ಗಿಕ ಕ್ರಿಯೆಯಾಗಿ ಏನು ಮಾಡುತ್ತಾರೆ ಗೊತ್ತಾ?
ಸಾಮಾನ್ಯವಾಗಿ ಲೋಕೋ ಪೈಲಟ್‌ಗಳು ಕನಿಷ್ಠ ಅಂದ್ರೂ 10 ರಿಂದ 12 ಗಂಟೆ ಚಾಲಕರಾಗಿ ಕೆಲಸ ಮಾಡುತ್ತಾರೆ. ರೈಲು ಚಾಲನೆಯಲ್ಲಿದ್ದಾಗ ಲೋಕೋ ಪೈಲಟ್‌ಗಳು ತಮ್ಮ ಸ್ಥಾನದಿಂದ ಒಂದು ಕ್ಷಣವೂ ಎದ್ದೇಳುವಂತಿರಲ್ಲ. ಶೌಚಕ್ಕಾಗಿ ಮಾರ್ಗ ಮಧ್ಯೆಯೂ ರೈಲು ನಿಲುಗಡೆ ಮಾಡುವಂತಿರಲಿಲ್ಲ. ಶೌಚಕ್ಕಾಗಿ ಮುಂದಿನ ನಿಲ್ದಾಣ ಬರೋವರೆಗೂ ಲೋಕೋ ಪೈಲಟ್‌ಗಳು ಕಾಯಬೇಕಾಗುತ್ತದೆ. ಇನ್ನು ಕೆಲ ಲೋಕೋ ಪೈಲಟ್‌ಗಳು ಸಿಗ್ನಲ್ ಸಿಗದೇ ರೈಲು ನಿಂತಾಗ ಈ ಸಂದರ್ಭದಲ್ಲಿ ಕೆಳಗಿಳಿದು ಮೂತ್ರ ವಿಸರ್ಜನೆಗೆ ತೆರಳುತ್ತಾರೆ.
ಇದನ್ನೂ ಓದಿ: 30 ನಿಮಿಷದಲ್ಲಿ 100 km ಪ್ರಯಾಣ; ಈ ರೈಲು ವಂದೇ ಭಾರತ್‌ಗಿಂತಲೂ ಸೂಪರ್ ಫಾಸ್ಟ್
ಇಂಜಿನ್‌ನಲ್ಲಿ ಶೌಚಾಲಯವಿಲ್ಲದ ಕಾರಣ ಲೋಕೋ ಪೈಲಟ್‌ಗಳು ಅನೇಕ ಸಮಸ್ಯೆಗಳನ್ನು ಎದುರಿಸುತ್ತಾರೆ. ಇನ್ನೊಂದು ಪ್ರಮುಖ ವಿಷಯವಂದ್ರೆ ರೈಲು ಚಾಲನೆ ವೇಳೆ ಲೋಕೋ ಪೈಲಟ್‌ಗಳು ಆಹಾರವನ್ನು ಸೇವಿಸುವಂತಿಲ್ಲ ಎಂಬ ಕಠಿಣ ನಿಯಮವಿದೆ. ಲೋಕೋ ಪೈಲಟ್‌ಗಳು ರಾಜಧಾನಿ ಎಕ್ಸ್‌ಪ್ರೆಸ್ ಅಥವಾ ಸೂಪರ್‌ಫಾಸ್ಟ್ ರೈಲನ್ನು ಚಲಾಯಿಸುತ್ತಿದ್ದರೆ ಅವರ ಸ್ಥಿತಿ ಏನಾಗಬಹುದು ಎಂದು ಒಂದು ಕ್ಷಣ ಊಹಿಸಿಕೊಳ್ಳಿ. ಈ ರೀತಿಯ ರೈಲುಗಳು ದೀರ್ಘ ಪ್ರಯಾಣ ಹೊಂದಿದ್ದು ಮತ್ತು ಕಡಿಮೆ ನಿಲುಗಡೆಯನ್ನು ಹೊಂದಿರುತ್ತವೆ. ಈ ತರಹದ ರೈಲು ಚಾಲಕರು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.
ಇಂಜಿನ್‌ನಲ್ಲಿ ಶೌಚಾಲಯದ ಕೊರತೆಯಿಂದಾಗಿ ಮಹಿಳಾ ಲೋಕೋ ಪೈಲಟ್‌ಗಳು ಸಹ ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಬಹುತೇಕ ಮಹಿಳಾ ಲೋಕೋ ಪೈಲಟ್‌ಗಳು ಡ್ಯುಟಿಯಲ್ಲಿ ಸ್ಯಾನಿಟರಿ ನ್ಯಾಪ್‌ಕಿನ್ ಬಳಸುತ್ತಾರೆ. ಎಷ್ಟೋ ಜನರು ನೀರು ಕುಡಿಯೋದನ್ನು ಕಡಿಮೆ ಮಾಡುತ್ತಾರೆ. ಯಾವುದೇ ನಿಲ್ದಾಣದಲ್ಲಿ ರೈಲು ನಿಲುಗಡೆಯಾದ್ರೂ ಶೌಚಾಲಯಗಳು ದೂರದಲ್ಲಿರುತ್ತವೆ.
ಇದನ್ನೂ ಓದಿ: ರೈಲುಗಳು ಗಂಟೆಗಟ್ಟಲೇ ನಿಂತರೂ ಇಂಜಿನ್ ಯಾಕೆ ಆಫ್ ಮಾಡಲ್ಲ?
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ