ಮೂರು ಕೊಂಬು, ಮೂರು ಕಣ್ಣು ಹೊಂದಿದ್ದ ನಂದಿ ನಿಧನ!

By Santosh NaikFirst Published Nov 19, 2022, 6:24 PM IST
Highlights

ಮಧ್ಯಪ್ರದೇಶದ ಛತ್ತರ್‌ಪುರದ ಜಟಾಶಂಕರ ಧಾಮದ ಪ್ರಸಿದ್ಧ ಮೂರು ಕೊಂಬು ಹಾಗೂ ಮೂರು ಕಣ್ಣು ಹೊಂದಿದ್ದ ನಂದಿ ಕಳೆದ ಗುರುವಾರ ನಿಧನವಾಗಿದೆ. ಸಾಕಷ್ಟು ಭಕ್ತಾದಿಗಳು ನಂದಿಯ ಅಂತ್ಯ ಸಂಸ್ಕಾರದ ವೇಳೆ ಹಾಜರಿದ್ದರು.

ಛತ್ತರ್‌ಪುರ (ನ.19): ವಸುಧೈವ ಕುಟುಂಬಕಂ ಸನಾತನ ಧರ್ಮದ ಮೂಲ ಸಂಸ್ಕೃತಿ ಮತ್ತು ಕಲ್ಪನೆ. ಕೇವಲ ಮನುಷ್ಯರನ್ನು ಮಾತ್ರವಲ್ಲದೆ ಈ ಭೂಮಿಯ ಮೇಲಿನ ಎಲ್ಲಾ ಜೀವಿಗಳನ್ನು ಪ್ರೀತಿಸುವ ಸಂಸ್ಕೃತಿ ನಮ್ಮದು. ಮಧ್ಯಪ್ರದೇಶದ ಛತ್ತರ್‌ಪುರದಲ್ಲಿ ಈ ಶ್ರೇಷ್ಠ ಸಂಸ್ಕೃತಿ ಮತ್ತು ಪ್ರೀತಿಯ ಒಂದು ನೋಟ ಕಂಡುಬಂದಿದೆ.  ಛತ್ತರ್‌ಪುರದ ಜಟಾಶಂಕರ ಧಾಮದ ಪ್ರಸಿದ್ಧ ಮೂರು ಕಣ್ಣು ಮತ್ತು ಮೂರು ಕೊಂಬಿನ ನಂದಿ ಮಹಾರಾಜನಿಗೆ (ಗೂಳಿ) ಶುಕ್ರವಾರ ಅಂತಿಮ ವಿದಾಯ ನೀಡಲಾಯಿತು. ನಂದಿಯನ್ನು ವೈದಿಕ ವಿಧಿವಿಧಾನಗಳು ಮತ್ತು ಪಠಣಗಳ ವಿಧಿ ವಿಧಾನದೊಂದಿಗೆ ಅಂತ್ಯಸಂಸ್ಕಾರ ಮಾಡಲಾಯಿತು. ಬುಂದೇಲ್‌ಖಂಡ್, ವಿಂಧ್ಯ, ಮಾಳ್ವಾದಿಂದ ಉತ್ತರ ಪ್ರದೇಶದ ಭಕ್ತರು ಅವರ ಅಂತಿಮ ದರ್ಶನಕ್ಕೆ ಆಗಮಿಸಿದರು. ನಂದಿ ಮಹಾರಾಜರ ಸ್ಮರಣಾರ್ಥ ಮಾರುಕಟ್ಟೆಗಳೂ ಕೂಡ ಮುಚ್ಚಲ್ಪಟ್ಟಿದ್ದವು. ದೇವಸ್ಥಾನದ ಆವರಣದಲ್ಲಿ ನಂದಿ ವಾಸವಿದ್ದ ಜಾಗದಲ್ಲಿಯೇ ಸುಮಾರು 5 ರಿಂದ 8 ರವರೆಗೆ 6 ಅಡಿ ಆಳದ ಗುಂಡಿ ತೋಡಿ ಹೂಳಲಾಯಿತು. ದೇವಾಲಯದ ಸಮಿತಿಯು ಈಗ ನದಿಯ ಪ್ರತಿಮೆಯನ್ನು ಇಲ್ಲಿ ಸ್ಥಾಪಿಸಲು ಸುಮಾರು 2 ಲಕ್ಷ ರೂಪಾಯಿ ಖರ್ಚು ಮಾಡಲಿದೆ. ಇಲ್ಲಿ ನಂದಿ ದೇವಾಲಯವನ್ನೂ ನಿರ್ಮಿಸಲಾಗುತ್ತದೆ. ಇದು ಬಹುಶಃ ರಾಜ್ಯ ಮತ್ತು ದೇಶದ ಮೊದಲ ನಂದಿ ದೇವಾಲಯ ಎನಿಸಿಕೊಳ್ಳಲಿದೆ.

ವೇದ ಮಂತ್ರ ಪಠಣದೊಂದಿಗೆ ಅಂತಿಮ ವಿಧಿವಿಧಾನ: ಲೋಕನ್ಯಾಸ್ ಧಾಮದ ಅಧ್ಯಕ್ಷ ಅರವಿಂದ್ ಅಗರ್ವಾಲ್ ಈ ಕುರಿತಾಗಿ ಮಾತನಾಡಿದ್ದು, ಜಟಾಶಂಕರ ಧಾಮದಲ್ಲಿ ಪ್ರಸಿದ್ಧವಾಗಿದ್ದ ಮೂರು ಕಣ್ಣುಗಳು ಮತ್ತು ಮೂರು ಕೊಂಬಿನ ನಂದಿ ಬಾಬಾ ಗುರುವಾರ ಸಂಜೆ ನಿಧನವಾಗಿತ್ತು. ಶುಕ್ರವಾರ ಬೆಳಗ್ಗೆ ಪಂಡಿತ್ ಖಿಲಾನಂದ್ ಗೌತಮ್ ಮತ್ತು ಪ್ರದೀಪ್ ಶಾಸ್ತ್ರಿ ನೇತೃತ್ವದಲ್ಲಿ ಐವರು ಆಚಾರ್ಯರು ಮಂತ್ರ ಪಠಣದೊಂದಿಗೆ ನಂದಿಯ ಸಮಾಧಿಯನ್ನು ನೆರವೇರಿಸಿದರು. ಧಾರ್ಮಿಕ ವಿಧಿ ವಿಧಾನಗಳನ್ನು ನೆರವೇರಿಸಿದ ಪ್ರದೀಪ್ ಶಾಸ್ತ್ರಿ'ನಂಬಿಕೆಯ ಕೇಂದ್ರವಾಗಿದ್ದ ನಂದಿ ಮಹಾರಾಜರಿಗೆ ಮಂತ್ರಘೋಷದೊಂದಿಗೆ ಅಂತಿಮ ವಿದಾಯ ನೀಡಲಾಯಿತು' ಎಂದು ಹೇಳಿದ್ದಾರೆ. ಸ್ಥಳೀಯ ಜನರಿಂದ ಅದ್ಭುತ ಎನಿಸಿಕೊಂಡಿದ್ದ ತ್ರಿನೇತ್ರಧಾರಿ ನಂದಿ ಮಹಾರಾಜನ ಅಂತ್ಯಕ್ರಿಯೆ ಶುಕ್ರವಾರ ಬೆಳಗ್ಗೆ ನೆರವೇರಿತು. ಒಂದು ಸಾವಿರಕ್ಕೂ ಅಧಿಕ ಮಂದಿ ಭಕ್ತರು ಅಂತ್ಯ ಸಂಸ್ಕಾರ ಕಾರ್ಯಕ್ರಮದಲ್ಲಿದ್ದರು. ಛತ್ತರ್‌ಪುರವಲ್ಲದೆ, ಮಾಳವ-ವಿಂಧ್ಯ, ಬುಡೇಲ್‌ಖಂಡ ಮತ್ತು ನೆರೆಯ ರಾಜ್ಯಗಳಿಂದಲೂ ಭಕ್ತರು ಅಂತಿಮ ದರ್ಶನಕ್ಕೆ ಆಗಮಿಸಿದ್ದರು.

6ನೇ ವರ್ಷಕ್ಕೆ ದೇವಸ್ಥಾನಕ್ಕೆ ಬಂದಿದ್ದ ನಂದಿ: ನಂದಿಬಾಬಾ ಅಥವಾ ನಂದಿ ಮಹಾರಾಜ ಎನ್ನುವ ಹೆಸರಿನಿಂದ ಕರೆಸಿಕೊಳ್ಳುತ್ತಿದ್ದ ನಂದಿ,  15 ವರ್ಷಗಳ ಹಿಂದೆ ತನ್ನ 6ನೇ ವಯಸ್ಸಿನಲ್ಲಿ ಅಲೆದಾಡುತ್ತಿದ್ದಾಗ ಆಕಸ್ಮಿಕವಾಗಿ ಶ್ರೀ ಜಟಾಶಂಕರ ಧಾಮಕ್ಕೆ ಬಂದಿತ್ತು ಎಂದು ಅಗರ್ವಾಲ್ ಹೇಳಿದ್ದಾರೆ. ಅಂದಿನಿಂದ ಈ ಧಾಮವೇ ನಂದಿಯ ವಾಸಸ್ಥಾನವಾಗಿತ್ತು. ಧಾಮಕ್ಕೆ ಬರುವ ಪ್ರತಿ ಭಕ್ತರು ಕೂಡ ನಂಬಿ ಮಹಾರಾಜನನ್ನು ನೋಡಿಕೊಂಡೇ ಹೋಗುತ್ತಿದ್ದರು. ನಂದಿ ಈ ಧಾಮದ ಹೊರತಾಗಿ ಬೇರೆಲ್ಲೂ ಹೋಗುತ್ತಿರಲಿಲ್ಲ. ಮೂರು ಕೊಂಬು ಹಾಗೂ ಹಣೆಯ ಮೇಲಿದ್ದ ಮೂರನೇ ಕಣ್ಣಿನ ಕಾರಣದಿಂದಾಗಿ ಭಕ್ತರ ಆಕರ್ಷಣೆ ಹಾಗೂ ನಂಬಿಕೆಯ ಕೇಂದ್ರ ಬಿಂದುವಾಗಿತ್ತು.

ಬ್ಯಾಂಕ್‌ನಲ್ಲೇ ₹ 53 ಕೋಟಿ ಇದ್ದರೂ ದೇಗುಲ ಅಭಿವೃದ್ಧಿಗೆ ಬಳಸುವಂತಿಲ್ಲ!

ಸ್ಮಾರಕವಾಗಲಿದೆ ಸಮಾಧಿ: ಅರವಿಂದ್ ಅಗರ್ವಾಲ್ ಪ್ರಕಾರ, ನಂದಿ ಬಾಬಾ ಅವರು ವಾಸಿಸುತ್ತಿದ್ದ ಸ್ಥಳದಲ್ಲೇ ಅದರ ಸಮಾಧಿ ಮಾಡಲಾಗಿದೆ. ಈಗ ಈ ಸಮಾಧಿ ಸ್ಥಳವನ್ನು ಸ್ಮಾರಕವನ್ನಾಗಿ ಅಭಿವೃದ್ಧಿಪಡಿಸುವ ಯೋಜನೆ ಇದೆ. ಅದರೊಂದಿಗೆ ಭವ್ಯವಾದ ದೇವಾಲಯ ಕೂಡ ನಿರ್ಮಾಣವಾಗಲಿದೆ. ಅದರೊಂದುಗೆ ಮೂರು ಕೊಂಬಿನ ನಂಬಿ ಬಾಬಾನನನ್ನೇ ಹೋಲುವ ವಿಗ್ರಹ ಕೂಡ ಸ್ಥಾಪನೆಯಾಗಲಿದೆ ಎಂದಿದ್ದಾರೆ.

Kukke Subramanya ChampaShashti: ಸುಬ್ರಹ್ಮಣ್ಯದಲ್ಲಿ ನಾಳೆ ಬೆಳಗ್ಗೆ ದೇವರ ದರ್ಶನ ಇಲ್ಲ

ನಂದಿ ಮಹಾರಾಜ ಸಾವು ಕಂಡ ಬೆನ್ನಲ್ಲಿಯೇ ಆತನಿದ್ದ ಸ್ಥಳದಲ್ಲಿಯೇ ಸಮಾಧಿ ಮಾಡಿ ಅಲ್ಲಿಯೇ ವಿಗ್ರಹ ಸ್ಥಾಪನೆ ನಿರ್ಧಾರ ಮಾಡಲಾಗಿತ್ತು ಎಂದು ದೇವಸ್ಥಾನದ ಟ್ರೆಸ್ಟ್‌ನ ಅಧ್ಯಕ್ಷರು ಹೇಳಿದ್ದಾರೆ. ಅಂತ್ಯಸಂಸ್ಕಾರ ಮುಗಿದ ಬೆನ್ನಲ್ಲಿಯೇ ನಂದಿಯ ವಿಗ್ರಹ ಕೆತ್ತನೆ ಕಾರ್ಯ ಆರಂಭಿಸಲಾಗಿದೆ. ಸುಮಾರು ಎರಡು ಲಕ್ಷ ರೂಪಾಯಿಯಲ್ಲಿ ವಿಗ್ರಹ ಹಾಗೂ ದೆವಸ್ಥಾನ ನಿರ್ಮಾಣವಾಗಲಿದೆ. ಜನರು ನಂದಿಯ ಕಿವಿಯಲ್ಲಿ ತಮ್ಮ ಮಾತುಗಳನ್ನು ಹೇಳುವ ಮೂಲಕ ಜಟಾಶಂಕರನನ್ನು ತಲುಪಬಹುದು ಎಂದು ಹೇಳಿದ್ದಾರೆ.

click me!