ನಮ್ಮ ಪೋಷಕರು ಮದ್ವೆ ಮಾಡೋದಾಗಿ ನಂಬಿಸಿ ದ್ರೋಹ ಮಾಡಿದ್ರು: ಪ್ರಿಯಕರನ ಶವವನ್ನೇ ಮದ್ವೆಯಾದ ಯುವತಿಯ ಗೋಳು

Published : Dec 02, 2025, 02:10 PM IST
Woman Marries Lovers Body

ಸಾರಾಂಶ

Girl marries dead boyfriend: ಮಹಾರಾಷ್ಟ್ರದಲ್ಲಿ, ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಯುವತಿಯ ತಂದೆ ಮತ್ತು ಸಹೋದರರು ಆತನನ್ನು ಕೊಲೆ ಮಾಡಿದ ಘಟನೆ ನಡೆದಿತ್ತು. ಆದರೆ ಕೊಲೆಗೂ ಕೆಲ ತಿಂಗಳು ಮುನ್ನ ಯುವತಿಯ ತಂದೆ ಯುವಕನೊಂದಿಗೆ ನೃತ್ಯ ಮಾಡಿದ್ದ ವೀಡಿಯೋವೊಂದು ವೈರಲ್ ಆಗಿದೆ.

ಮದುವೆ ಮಾಡುವುದಾಗಿ ಕೊನೆ ಕ್ಷಣದಲ್ಲಿ ವಂಚಿಸಿದ್ರು:

ಕಳೆದ ಗುರುವಾರ ಮಹಾರಾಷ್ಟ್ರದಲ್ಲಿ ಹದಿಹರೆಯದ ಯುವತಿಯೊಬ್ಬಳು ಬೇರೆ ಜಾತಿಯ ಯುವಕನನ್ನು ಪ್ರೀತಿಸಿದ್ದಕ್ಕೆ ಆಕೆಯ ತಂದೆ ಹಾಗೂ ಸಹೋದರರು ಸೇರಿ ಆಕೆಯ ಪ್ರಿಯಕರನ ಕೊಲೆ ಮಾಡಿದ ಘಟನೆ ನಡೆದಿತ್ತು. ಘಟನೆಯ ಬಳಿಕ ಯುವತಿ ರೋಧಿಸುತ್ತಲೇ ಯುವಕನ ಶವವನ್ನೇ ಮದುವೆಯಾಗಿ ಆತನ ಕುಟುಂಬದ ಜೊತೆಯೇ ಸೊಸೆಯಾಗಿ ವಾಸ ಮಾಡುವುದಕ್ಕೆ ನಿರ್ಧರಿಸಿದ್ದಳು. ಜಾತಿಯ ಕಾರಣಕ್ಕೆ ಯುವಕನ್ನು ಕೊಲೆ ಮಾಡಿದ್ದರಿಂದ ಈ ಘಟನೆ ದೇಶಾದ್ಯಂತ ದೊಡ್ಡ ಸುದ್ದಿಯಾಗಿದೆ. ಘಟನೆಗೆ ಸಂಬಂಧಿಸಿದ ಯುವತಿಯ ಸಹೋದರರು ಹಾಗೂ ತಂದೆಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಮಧ್ಯೆ ಘಟನೆ ನಡೆಯುವುದಕ್ಕೂ 7 ತಿಂಗಳು ಮೊದಲು ಯುವತಿಯ ತಂದೆ ಆಕೆಯ ಪ್ರಿಯಕರನ ಜೊತೆ ಡಾನ್ಸ್ ಮಾಡುತ್ತಿರುವ ವೀಡಿಯೋವೊಂದು ಈಗ ವೈರಲ್ ಆಗಿದೆ. ಘಟನೆಗೆ ಸಂಬಂಧಿಸಿದಂತೆ ಮಾತನಾಡಿದ ಯುವತಿ ಅಂಚಲ್ ಮಾಮಿದ್ವರ್ ತಮ್ಮ ಪೋಷಕರು ತಮಗೆ ಮದುವೆ ಮಾಡುವುದಾಗಿ ಹೇಳಿ ಕೊನೆಕ್ಷಣದಲ್ಲಿ ಮೋಸ ಮಾಡಿದರು ಎಂದು ಕಣ್ಣೀರಿಟ್ಟಿದ್ದಾರೆ.

ಜಾತಿಯ ಕಾರಣಕ್ಕೆ ನಡೆದಿತ್ತು ಮರ್ಯಾದಾ ಹತ್ಯೆ:

21 ವರ್ಷದ ಅಂಚಲ್ ಮಾಮಿದ್ವರ್ ಹಾಗೂ 20 ಸಕ್ಷಮ್ ಟೇಟ್ ಅವರು ಕಳೆದ ಮೂರು ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಸಕ್ಷಮ್ ಟೇಟ್ ಅಂಚಲ್‌ನ ಸೋದರರ ಸ್ನೇಹಿತನೇ ಆಗಿದ್ದು, ಇಬ್ಬರ ಮಧ್ಯೆ ಪ್ರೇಮ ಮೊಳಕೆಯೊಡೆದಿತ್ತು.ಸಕ್ಷಮ್ ಟೇಟ್ ದಲಿತರಾಗಿದ್ದರೆ, ಆಂಚಲ್ ಮಾಮಿದ್ವಾರ್ ವಿಶೇಷ ಹಿಂದುಳಿದ ವರ್ಗಕ್ಕೆ ಸೇರಿದವರಾಗಿದ್ದರು. ಹೀಗಾಗಿ ಜಾತಿಯ ಕಾರಣಕ್ಕೆ ಅಂಚಲ್‌ನ ಪೋಷಕರು ಈ ಸಂಬಂಧವನ್ನು ವಿರೋಧಿಸುತ್ತಾ ಬಂದಿದ್ದರು. ಆತನನ್ನು ಬಿಟ್ಟು ಬಿಡುವಂತೆ ಅಂಚಲ್‌ಗೆ ಬುದ್ಧಿ ಹೇಳಿದ್ದರು. ಆದರೆ ಆಕೆ ಆತನನ್ನು ಮದುವೆಯಾಗುವುದಾಗಿ ಧೃಡ ನಿರ್ಧಾರ ಮಾಡಿದಾಗ ಇವರು ಆತನ ಕೊಲೆಯ ಸಂಚು ರೂಪಿಸಿದ್ದಾರೆ. ಆತನನ್ನು ಸ್ಥಳವೊಂದಕ್ಕೆ ಕರೆಸಿ ಆತನ ಮೇಲೆ ಹಲ್ಲೆ ಮಾಡಿ ಗುಂಡು ಹಾರಿಸಿ ಕೊಲೆ ಮಾಡಿ ಆತನ ಮುಖದ ಮೇಲೆ ಆರೋಪಿಗಳು ಕಲ್ಲಿನಿಂದ ಜಜ್ಜಿದ್ದರು.

ಇದನ್ನೂ ಓದಿ: ಪತಿಯ ಲೀವಿಂಗ್ ಪಾರ್ಟನರ್ ಹತ್ಯೆಗೆ ಸಹಾಯ: ಪತ್ನಿ, ಬಾಮೈದನ ಬಂಧಿಸಿದ ಪೊಲೀಸರು

ಘಟನೆಗೆ ಸಂಬಂಧಿಸಿದಂತೆ ಅಂಚಲ್ ಮಾಮಿದ್ವರ್ ಅವರ ತಂದೆ ಗಜಾನನ್ ಬಾಲಾಜಿ ಮಾಮಿದ್ವರ್ ಹಾಗೂ ಆಕೆಯ ಇಬ್ಬರು ಸೋದರರು ಸೇರಿದಂತೆ ಒಟ್ಟು ಆರು ಜನರನ್ನು ಪೊಲೀಸರು ಬಂಧಿಸಿದ್ದಾರೆ. ಅಂಚಲ್‌ಳ ತಂದೆ ಮತ್ತು ಸಹೋದರ ಬಲಿಪಶುವಿನ ವಿಶ್ವಾಸ ಗಳಿಸಲು ಆತನನ್ನು ಕೊಲ್ಲುವ ಮೊದಲು ಸಂಚು ರೂಪಿಸಿದ್ದರು ಎಂದು ತಿಳಿದು ಬಂದಿದೆ. ಕೊಲೆ ನಡೆಯುವುದಕ್ಕೂ ಕೆಲ ಗಂಟೆಗಳ ಮೊದಲು ಅಮೊದಲು, ಅಂಚಲ್ ಅವರ ಕಿರಿಯ ಸಹೋದರ, ಸಕ್ಷಮ್‌ನ ವಿರುದ್ಧ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಆಕೆಯನ್ನು ಕರೆದೊಯ್ದರು ಆದರೆ ಆಕೆ ನಿರಾಕರಿಸಿದಾಗ, ಇಬ್ಬರು ಪೊಲೀಸರು ತಮ್ಮ ಸಹೋದರನನ್ನು ಸಕ್ಷಮ್ ಟೇಟ್ ಅವರನ್ನು ಕೊಲ್ಲುವಂತೆ ಪ್ರಚೋದಿಸಿದರು ಎಂದು ಅಂಚಲ್ ಆರೋಪಿಸಿದ್ದಾರೆ.

ಸಕ್ಷಮ್‌ನನ್ನು ಕೊಂದ ನಂತರವೇ ಪೊಲೀಸ್ ಠಾಣೆಗೆ ಬರುವುದಾಗಿ ಹೇಳಿದ್ದ ಸೋದರರು

ನಂತರ ನಮ್ಮ ಸಹೋದರರು ಕೋಪದಿಂದ, ಸಕ್ಷಮ್‌ನನ್ನು ಕೊಂದ ನಂತರವೇ ಪೊಲೀಸ್ ಠಾಣೆಗೆ ಬರುವುದಾಗಿ ಅಧಿಕಾರಿಗಳಿಗೆ ಹೇಳಿದ್ದರು ಅದರಂತೆ ಅವರು ಅವನನ್ನು ಕೊಂದರು ಎಂದು ಯುವತಿ ಅಂಚಲ್ ಕಣ್ಣೀರಿಟ್ಟಿದ್ದಾರೆ. ಘಟನೆಯ ಬಳಿಕ ಮಾತನಾಡಿದ ಅಂಚಲ್, ನನ್ನ ಕುಟುಂಬ ಸದಸ್ಯರು ಸಕ್ಷಮ್ ಜೊತೆ ನಿಯಮಿತವಾಗಿ ಸಮಯ ಕಳೆಯುತ್ತಿದ್ದರು, ಅವರು ಅವನೊಂದಿಗೆ ಚೆನ್ನಾಗಿ ವರ್ತಿಸುತ್ತಿದ್ದರು, ಒಟ್ಟಿಗೆ ಊಟ ಮಾಡುತ್ತಿದ್ದರು. ಎಲ್ಲವೂ ಚೆನ್ನಾಗಿದೆ ಎಂದು ಅವರು ಅವನಿಗೆ ಮನವರಿಕೆ ಮಾಡಿ ಕೊಲೆ ಮಾಡಿದ್ದಾರೆ. ಈ ರೀತಿ ಆಗಬಹುದು ಎಂದು ನಮಗೆ ತಿಳಿದಿರಲಿಲ್ಲ ಎಂದು ಹೇಳಿದ್ದಾರೆ. ಅವರು ನಮಗೆ ಮದುವೆ ಮಾಡುವುದಾಗಿ ಭರವಸೆ ನೀಡಿದರು. ಆದರೆ ಅವರು ನಮಗೆ ಕೊನೆಕ್ಷಣದಲ್ಲಿ ಮೋಸ ಮಾಡಿದ್ದಾರೆ ಎಂದು ಹೇಳಿದ್ದಾರೆ.

ಇದನ್ನೂ ಓದಿ: ಮೃಗಾಲಯದ 20 ಅಡಿ ಎತ್ತರದ ತಡೆಬೇಲಿ ಹಾರಿ ಬೋನಿಗಿಳಿದ19 ವರ್ಷದ ಯುವಕನ ಕತೆ ಮುಗಿಸಿದ ಸಿಂಹ

ಈ ನಡುವೆ ಏಪ್ರಿಲ್ 14ರಂದು ನಡೆದ ಅಂಬೇಡ್ಕರ್ ಜಯಂತಿಯ ವೇಳೆ , ಆಂಚಲ್ ಮಾಮಿದ್ವರ್ ಅವರ ತಂದೆ ಗಜಾನನ್ ಬಾಲಾಜಿ ಮಾಮಿದ್ವರ್ ಅವರು ತಮ್ಮ 21 ವರ್ಷದ ಮಗಳು, ಆಕೆಯ 20 ವರ್ಷದ ಗೆಳೆಯ ಮತ್ತು ಅವರ ಸ್ನೇಹಿತರೊಂದಿಗೆ ನೃತ್ಯ ಮಾಡುತ್ತಿರುವ ವೀಡಿಯೋವೊಂದು ಈಗ ಸಕ್ಷಮ್ ಅವರ ಕೊಲೆಯ ನಂತರ ವೈರಲ್ ಆಗಿದೆ. ಈ ವೇಳೆ ಜೋಡಿ ಬಹಳ ಖುಷಿಯಿಂದ ಇದ್ದರು, ಅವರಿಗೆ ಮುಂದಾಗಬಹುದಾದ ಅನಾಹುತದ ಬಗ್ಗೆ ಅರಿವಿರಲಿಲ್ಲ. ವೀಡಿಯೋದಲ್ಲಿ ಸಕ್ಷಮ್‌ನ ಸ್ನೇಹಿತರು ಆರೋಪಿಯನ್ನು ಹೆಗಲ ಮೇಲೆ ಹೊತ್ತುಕೊಂಡು ಹೋಗುತ್ತಿರುವುದು ಕಾಣುತ್ತಿದೆ. ಮಹಾರಾಷ್ಟ್ರದಲ್ಲಿ ಅಂಬೇಡ್ಕರ್ ಜಯಂತಿಯನ್ನು ದಲಿತರು, ಆದಿವಾಸಿಗಳು ಮತ್ತು ಅವರು ಹೋರಾಡಿದ ಎಲ್ಲಾ ಇತರ ಸಮುದಾಯಗಳ ಜನರು ಆಚರಿಸುತ್ತಾರೆ. ಆದರೆ ಅಂಬೇಡ್ಕರ್ ಜಯಂತಿ ಆಚರಿಸಿದರು ಈ ಜನರು ತಮ್ಮ ಜಾತಿಯೆಂಬ ಭೂತದಿಂದ ಹೊರ ಬಂದಿಲ್ಲ, ಪರಿಣಾಮ ಈ ಕೊಲೆ ನಡೆದಿದೆ.

ಪ್ರಿಯಕರನ ಕೊಲೆಯ ಬಳಿಕ ಅಂಚಲ್ ಆತನ ಶವಕ್ಕೆ ಅರಿಶಿಣ ಹಚ್ಚಿ ತನ್ನ ಹಣೆಗೆ ಸಿಂಧೂರವಿಟ್ಟು ಅವನ ಶವವನ್ನೇ ಮದುವೆಯಾಗಿದ್ದಳು. ಅಲ್ಲದೇ ಸೊಸೆಯಂತೆ ಸಕ್ಷಮ್ ಮನೆಯಲ್ಲಿ ಇರಲು ನಿರ್ಧರಿಸಿದ್ದಾಳೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ
ಸೆಂಟ್ರಲ್ ಮೆಟ್ರೋ ಮತ್ತು ಹೈಕೋರ್ಟ್ ನಿಲ್ದಾಣಗಳ ನಡುವೆ ನೀಲಿ ಮಾರ್ಗದ ಸುರಂಗದಲ್ಲಿ ಹಠಾತ್ ನಿಂತ ಮೆಟ್ರೋ ರೈಲು