ಪರೀಕ್ಷಾ ಸುಧಾರಣೆಗೆ ಮೋದಿ ರಚಿಸಿದ ನೀಲೆಕಿಣಿ ನೇತೃತ್ವದ ಟಾಸ್ಕ್ ಫೋರ್ಸ್‌ನಲ್ಲಿ ಯಾರಿದ್ದಾರೆ?

Published : Jul 26, 2026, 09:04 PM IST
Nilekani Led Exam Reform Task Force

ಸಾರಾಂಶ

ನೀಟ್ ಅಕ್ರಮದಿಂದ ಶುರುವಾದ ವಿದ್ಯಾರ್ಥಿಗಳ ಹೋರಾಟ ಇದೀಗ ದೇಶದ ಪರೀಕ್ಷಾ ಸುಧಾರಣೆಗೆ ನಾಂದಿ ಹಾಡಿದೆ. ಪ್ರಧಾನಿ ನರೇಂದ್ರ ಮೋದಿ ಇದೀಗ ಪರೀಕ್ಷಾ ಸುಧಾರಣೆಗೆ ಟಾಸ್ಕ್ ಫೋರ್ಸ್ ರಚಿಸಿದ್ದಾರೆ. ಈ ತಂಡದಲ್ಲಿ ಯಾರೆಲ್ಲಾ ಇದ್ದಾರೆ.

ನವದೆಹಲಿ (ಜು.26) ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ, ವಿದ್ಯಾರ್ಥಿಗಳ ಹೋರಾಟ, ಕಾಕ್ರೋಚ್ ಜನತಾ ಪಾರ್ಟಿಯ ಆಂದೋಲನ, ಸಚಿವ ಧರ್ಮೇದ್ರ ಪ್ರಧಾನ್ ರಾಜೀನಾಮೆ ಸೇರಿದಂತೆ ಹಲವು ಘಟನೆಗಳು ಕಳೆದ ಕೆಲ ದಿನಗಳಲ್ಲಿ ನಡೆದಿದೆ. ಕೇಂದ್ರ ಬಿಜೆಪಿ ಸರ್ಕಾರಕ್ಕೂ ತೀವ್ರ ಮುಜುಗರ ಸೃಷ್ಟಿಸಿದ ಈ ಪ್ರಕರಣಕ್ಕೆ ಮತ್ತೆ ಮರುಕಳಿಸದಂತೆ ತಡೆಯಲು ಮಹತ್ವದ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಹೊಸ ಬಿಲ್ ಮಂಡನೆಯಾಗಲಿರುವ ಬೆನ್ನಲ್ಲೇ ಇತ್ತ ಪ್ರಧಾನಿ ನರೇಂದ್ರ ಮೋದಿ ಪರೀಕ್ಷಾ ಸುಧಾರಣೆ ಹಾಗೂ ಪಾರದರ್ಶಕತೆಗೆ ಹೈಪವರ್ ಟಾಸ್ಕ್ ಫೋರ್ಸ್ ಕಮಿಟಿ ರಚಿಸಿದ್ದಾರೆ. ಇನ್ಫೋಸಿಸ್  ಮಾಜಿ ಚೇರ್ಮನ್, ಐಟಿ ದಿಗ್ಗಜ ನಂದನ್ ನೀಲೆಕಣಿ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚಿಸಲಾಗಿದೆ.

ಪರೀಕ್ಷಾ ಸುಧಾರಣಾ ಟಾಸ್ಕ್ ಫೋರ್ಸ್ ತಂಡದ ಸದಸ್ಯರು

ಪರೀಕ್ಷಾ ಸುಧಾರಣೆಗಾಗಿ ರಚಿಸಿದ ಟಾಸ್ಕ್ ಫೋರ್ಸ್ ತಂಡದ ನಂದನ್ ನೀಲೆಕಿಣಿ ಜೊತೆ ಹಲವು ಪ್ರಮುಖರಿದ್ದಾರೆ. ಇಸ್ರೋ ಮಾಜಿ ಮುಖ್ಯಸ್ಥ ಎಸ್ ಸೋಮನಾಥ್ ಮಾಜಿ ಗುಪ್ತಚರ ಇಲಾಖೆ ನಿರ್ದೇಶಕ ತಪನ್ ದೆಕಾ ಸೇರಿದಂತೆ ಪ್ರಮುಖರನ್ನು ಈ ಟಾಸ್ಕ್ ಫೋರ್ಸ್ ತಂಡಕ್ಕೆ ಸೇರಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ವಿಶೇಷ ಮುತುವರ್ಜಿ ವಹಿಸಿ ಪರೀಕ್ಷಾ ಪಾರದರ್ಶಕತೆ, ಸುಧಾರಣೆಗೆ ತಂತ್ರಜ್ಞಾನ ಬಳಕೆಗೆ ಮಹತ್ವ ನೀಡಿದ್ದಾರೆ.

ಟಾಸ್ಕ್ ಫೋರ್ಸ್ ತಂಡದ ಸದಸ್ಯರ ಲಿಸ್ಟ್

  • ನಂದನ್ ನೀಲೆಕಿಣಿ, ಇನ್ಫೋಸಿಸ್ ಸಹ ಸಂಸ್ಥಾಪಕ
  • ಎಸ್ ಸೋಮನಾಥ್, ಇಸ್ರೋ ಮಾಜಿ ಚೇರ್ಮನ್
  • ವಿ ಕಾಮಕೋಟಿ, ಚೆನ್ನೈ ಐಐಟಿ ನಿರ್ದೇಶಕ
  • ತಪನ್ ದೇಕಾ, ಐಬಿ ಮಾಜಿ ನಿರ್ದೇಶಕ
  • ಅನಿತಾ ಕರ್ವಾಲ್, ಮಾಜಿ ಶಿಕ್ಷಣ ಕಾರ್ಯದರ್ಶಿ
  • ಅಮ್ರಿತ್ ಲಾಲ್ ಮೀನಾ, ಲಾಜಿಸ್ಟಿಕ್ ಎಕ್ಸ್‌ಪರ್ಟ್

ಹೈಪವರ್ ಟಾಸ್ಕ್ ಫೋರ್ಸ್ ಕಮಿಟಿ ಶೀಘ್ರದಲ್ಲೇ ಸಭೆ ಸೇರಲಿದೆ. ಹೊಸ ಕಮಿಟಿ ರಾಷ್ಟ್ರೀಯ ಎಲ್ಲಾ ಪರೀಕ್ಷೆಗಳಲ್ಲಿ ಸುಧಾರಣೆ ತರಲು ಶಿಫಾರಸ್ಸು ಮಾಡಲಿದೆ. ಪೇಪರ್ ಲೀಕ್ ಸೇರಿದಂತೆ ಯಾವುದೇ ಅಕ್ರಮ ನಡೆಯದಂತೆ ತಡೆಯಲು ಈ ಕಮಿಟಿ ಚರ್ಚೆ ನಡೆಸಲಿದೆ. ಹೊಸ ಮಾದರಿ, ಕಂಪ್ಯೂಟರ್ ಆಧಾರಿತ, ಹೆಚ್ಚು ಪಾರದರ್ಶಕ ರೀತಿಯಲ್ಲಿ ಪರೀಕ್ಷೆ ಹಾಗೂ ಫಲಿತಾಂಶ ನೀಡಲು ನೆರವಾಗುವ ಮಾದರಿ ಜಾರಿಗೆ ಬರಲಿದೆ.

ಇತ್ತ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ಬಳಿಕ ಶಿಕ್ಷಣ ಸಚಿವರಾಗಿ ಪ್ರಲ್ಹಾದ್ ಜೋಶಿ ಹೆಚ್ಚುವರಿ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಅಧಿಕಾರಿಗಳ ಜೊತೆ ಸಭೆ ನಡೆಸಿರುವ ಪ್ರಲ್ಹಾದ್ ಜೋಶಿ ಇದೀಗ ಶಿಕ್ಷಣ ಇಲಾಖೆಯ ಸುಧಾರಣೆಯಲ್ಲಿ ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

3ನೇ ಬಾರಿ ದಿಢೀರ್​ ಲೈವ್​ನಲ್ಲಿ ಕಾಣಿಸಿಕೊಂಡು ಇನ್ನೊಂದು ದೊಡ್ಡ ಘೋಷಣೆ ಮಾಡಿದ ಪ್ರಧಾನಿ ಮೋದಿ
ನಟಿ ಶ್ವೇತಾ ತಿವಾರಿ ಕೊಟ್ಟ ಸವಾಲಿಗೆ ಜಿರಳೆಗಳು ತಲ್ಲಣ : ಸವಾಲು ಸ್ವೀಕರಿಸ್ತಾರಾ ಅಥ್ವಾ ನಿಜ ಒಪ್ಪಿಕೊಳ್ತಾರಾ