ಫೆ.9ಕ್ಕೆ ನಾಗೌರ್‌ನ ಖಿನ್ವ್ಸಾರ್ ಕೋಟೆಯಲ್ಲಿ ಕೇಂದ್ರ ಸಚಿವೆ ಸ್ಮೃತಿ ಇರಾನಿ ಪುತ್ರಿಯ ಅದ್ದೂರಿ ವಿವಾಹ!

By Santosh NaikFirst Published Feb 7, 2023, 10:08 PM IST
Highlights

ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿಯ ವಿವಾಹ ನಾಗೌರ್‌ ಖಿನ್ವ್ಸಾರ್ ಕೋಟೆಯಲ್ಲಿ ನಡೆಯಲಿದೆ. ಫೆ. 9ಕ್ಕೆ ವಿವಾಹ ಸಮಾರಂಭ ನಡೆಯಲಿದ್ದು, 2021ರಲ್ಲಿ ಎನ್‌ಆರ್‌ಐ ಜೊತೆ ನಿಶ್ಚಿತಾರ್ಥ ನೆರವೇರಿತ್ತು. ಮೆಹಂದಿ  ಹಾಗೂ ಸಂಗೀತ ಕಾರ್ಯಕ್ರಮ ನಾಳೆ ನಡೆಯಲಿದೆ.

ನವದೆಹಲಿ (ಫೆ.7): ಬಾಲಿವುಡ್‌ನಲ್ಲಿ ಸಿದ್ಧಾರ್ಥ್‌ ಮಲ್ಹೋತ್ರಾ ಹಾಗೂ ಕಿಯಾರಾ ಅಡ್ವಾಣಿ ವಿವಾಹದ ಮಾಧ್ಯಮಗಳಲ್ಲಿ ಸಾಕಷ್ಟು ಸುದ್ದಿಯಾಗುತ್ತಿದೆ. ಈ ನಡುವೆ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರ ಪುತ್ರಿ ಶನೇಲ್‌ ಅವರ ವಿವಾಹ ಸಮಾರಂಭ ಕೂಡ ನಡೆಯಲಿದೆ. ಈ ಅದ್ದೂರಿ ವಿವಾಹ ಸಮಾರಂಭ ಕೂಡ ರಾಜಸ್ಥಾನದಲ್ಲಿಯೇ ನಡೆಯಲಿದೆ. ನಾಗೌರ್‌ ಜಿಲ್ಲೆಯ ಖಿನ್ವ್ಸಾರ್ ಕೋಟೆಯಲ್ಲಿ ಫೆಬ್ರವರಿ 9 ರಂದು ನಡೆಯಲಿರುವ ವಿವಾಹ ಸಮಾರಂಭದಲ್ಲಿ ಅರ್ಜುನ್‌ ಭಲ್ಲಾ ಅವರನ್ನು ವರಿಸಲಿದ್ದಾರೆ. ಫೆಬ್ರವರಿ 7 ರಿಂದ ಕೋಟೆಯನ್ನು ಬುಕ್ಕಿಂಗ್‌ ಮಾಡಲಾಗಿದ್ದು, ಮೂರು ದಿನಗಳ ಕಾಲ ಇದು ಬುಕ್‌ ಆಗಿ ಇರಲಿದೆ. ಸ್ಮೃತಿ ಅವರ ಪತಿ ಜುಬಿನ್ ಇರಾನಿ ಅವರು ಮಂಗಳವಾರ ಮಧ್ಯಾಹ್ನ 12.30 ರ ಸುಮಾರಿಗೆ ಜೋಧ್‌ಪುರ ವಿಮಾನ ನಿಲ್ದಾಣಕ್ಕೆ ಬಂದು ಮಗಳ ಮದುವೆಗೆ ಸಿದ್ಧತೆ ನಡೆಸಿದ್ದಾರೆ. ಅವರ ಜೊತೆ ಸ್ಮೃತಿ ಇರಾನಿ ಕೂಡ ಬರಬೇಕಿತ್ತು. ಆದರೆ, ಅವರ ಕಾರ್ಯಕ್ರಮ ಕೊನೇ ಕ್ಷಣದಲ್ಲಿ ರದ್ದಾಗಿದೆ. ಮೂಲಗಳನ್ನು ಆಧರಿಸಿ ಹೇಳುವುದಾದರೆ, ಬುಧವಾರದ ವೇಳೆಗೆ ಅವರು ಖಿನ್ವ್ಸಾರ್ ಕೋಟೆಗೆ ಬರುವ ಸಾಧ್ಯತೆ ಇದೆ. ಶನೆಲ್, ಜುಬಿನ್ ಇರಾನಿಯ ಮೊದಲ ಪತ್ನಿ ಮೋನಾ ಅವರ ಮಗಳು.

ಖಿನ್ವ್ಸಾರ್ ಕೋಟೆಯಲ್ಲಿ ಮದುವೆಗೆ ಸಿದ್ಧತೆಗಳು ಪೂರ್ಣಗೊಂಡಿವೆ. ಸ್ಮೃತಿ ಇರಾನಿ ಬುಧವಾರ ಜೋಧ್‌ಪುರ ವಿಮಾನ ನಿಲ್ದಾಣಕ್ಕೆ ಬರಲಿದ್ದಯ, ಇಲ್ಲಿಂದ ರಸ್ತೆ ಮೂಲಕ ಕೋಟೆಗೆ ತೆರಳಲಿದ್ದಾರೆ ಎಂದು ಹೇಳಲಾಗುತ್ತಿದೆ. ಮೆಹೆಂದಿ ಮತ್ತು ಹಲ್ದಿ ಸಮಾರಂಭ ಬುಧವಾರವೇ ನಡೆಯಲಿದೆ. ರಾತ್ರಿ ಸಂಗೀತ ರಾತ್ರಿ ಕಾರ್ಯಕ್ರಮ ನಡೆಯಲಿದೆ. ಫೆಬ್ರವರಿ 9 ಗುರುವಾರದಂದು ಸಂಪ್ರದಾಯಗಳೊಂದಿಗೆ ಮದುವೆ ಇರುತ್ತದೆ.

2021 ಶನೆಲ್ ಮತ್ತು ಅರ್ಜುನ್ ದುಬೈನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ನಂತರ ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರು ತಮ್ಮ ಇನ್ಸ್‌ಟಾಗ್ರಾಮ್‌ ಪೋಸ್ಟ್ ಅನ್ನು ಹಂಚಿಕೊಳ್ಳುವಾಗ ಅರ್ಜುನ್ ಭಲ್ಲಾ ಅವರನ್ನು ತಮ್ಮ ಕುಟುಂಬಕ್ಕೆ ಸ್ವಾಗತಿಸಿದ್ದರು. ಆಗ ನೀವು ಮಾವನನ್ನಾಗಿ ಕ್ರೇಜಿ ಮ್ಯಾನ್‌ ಅನ್ನು ಎದುರಿಸಬೇಕಾಗುತ್ತದೆ ಹಾಗೂ ನನ್ನನ್ನು ಅತ್ತೆಯನ್ನಾಗಿ ಎದುರಿಸಬೇಕಾಗುತ್ತದೆ ಎಂದು ತಮಾಷೆಯಾಗಿ ಹೇಳಿದ್ದರು.

ಅರ್ಜುನ್‌ ಭಲ್ಲಾ ಕೆನಡಾದಲ್ಲಿ ವಾಸ ಮಾಡುತ್ತಿದ್ದಾರೆ. ಅವರು ಅನಿವಾಸಿ ಭಾರತೀಯರಾಗಿದ್ದಾರೆ. ಭಲ್ಲಾ ಅವರು ಕಾನೂನು ತಜ್ಞರಾಗಿದದ್ದು, ಕೆನಡಾದಲ್ಲಿ ಹಲವಾರು ಪ್ರಮುಖ ಕಂಪನಿಗಳಿಗೆ ಕಾನೂನು ಸಲಹೆಗಾರರಾಗಿ ಕೆಲಸ ಮಾಡಿದ್ದಾರೆ, ಆದರೆ ಶನೆಲ್ ವಕೀಲರಾಗಿ ಕೆಲಸ ಮಾಡುತ್ತಿದ್ದಾರೆ.

 

ಕುಣಿಯಲಷ್ಟೇ ಸ್ಮೃತಿ ಅಮೇಥಿಗೆ ಬರ್ತಾರೆ: ಕಾಂಗ್ರೆಸ್ ನಾಯಕನಿಂದ ವಿವಾದಿತ ಹೇಳಿಕೆ

ಸೀಮಿತ ಅತಿಥಿಗಳಿಗೆ ಆಹ್ವಾನ: ವಿವಾಹ ಕಾರ್ಯಕ್ರಮಕ್ಕೆ ಕೋಟೆಗೆ ಸರ್ವಾಲಂಕಾರ ಮಾಡಲಾಗಿದೆ. ಸೀಮಿತ ಅತಿಥಿಗಳಿಗೆ ಆಹ್ವಾನ ನೀಡಲಾಗಿದೆ. ಮೂಲಗಳ ಪ್ರಕಾರ, 50 ಅತಿಥಿಗಳ ಪಟ್ಟಿ ಈಗಾಗಲೇ ಸಿದ್ಧ ಮಾಡಲಾಗಿದೆ. ಅವರು ಕೂಡ ಹೋಟೆಲ್‌ಗೆ ಈಗಾಗಲೇ ಆಗಮಿಸಿದ್ದಾರೆ. ಈ ಮದುವೆಯಲ್ಲಿ ಎರಡೂ ಕುಟುಂಬದ ಸದಸ್ಯರು ಮಾತ್ರ ಇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಮದುವೆಯಲ್ಲಿ ಯಾವುದೇ ವಿಐಪಿ ಭಾಗವಹಿಸುವುದಿಲ್ಲ.

Pathaan ಹಾಡು ವಿವಾದದ ಬೆನ್ನಲ್ಲೇ ಸ್ಮೃತಿ ಇರಾನಿ ಈಜುಡುಗೆಯ ಹಳೆ ವಿಡಿಯೋ ವೈರಲ್‌..!

ಮರಳು ಹಾಗೂ ಒಳಾಂಗಣ ವಿನ್ಯಾಸಕ್ಕೆ ಹೆಸರುವಾಸಿ:  ಖಿನ್ವ್ಸಾರ್ ಕೋಟೆ ಆಕರ್ಷಕ ಒಳಾಂಗಣ ವಿನ್ಯಾಸ ಹೊಂದಿದ್ದು, ಮರಳಿನ ದಿಬ್ಬಗಳ ನಡುವೆ ಇದೆ. ಇದು 500 ವರ್ಷಗಳ ಇತಿಹಾಸ ಕೋಟೆ ಇದಾಗಿದೆ. ಖಿನ್ವ್ಸರ್ ಕೋಟೆಯ ಬಹುಭಾಗವನ್ನು ಈಗ ಹೋಟೆಲ್ ಆಗಿ ಪರಿವರ್ತಿಸಲಾಗಿದೆ. ಇದರೊಂದಿಗೆ ಮರಳು ದಿಬ್ಬಗಳೂ ಪ್ರವಾಸಿಗರನ್ನು ಆಕರ್ಷಿಸುತ್ತಿವೆ. ಖಿನ್ವ್ಸಾರ್ ನಲ್ಲಿ ಅನೇಕ ದೊಡ್ಡ ಮದುವೆಗಳು ನಡೆದಿವೆ. ಈ ಹೋಟೆಲ್ ಮಾಜಿ ಕ್ಯಾಬಿನೆಟ್ ಸಚಿವ ಗಜೇಂದ್ರ ಸಿಂಗ್ ಖಿನ್ವ್ಸಾರ್ ಅವರಿಗೆ ಸೇರಿದ್ದಾಗಿದೆ. ಇರಾನಿ ಮತ್ತು ಖಿನ್ವ್ಸಾರ್ ಕುಟುಂಬ ನಿಕಟ ಸಂಬಂಧವನ್ನು ಹೊಂದಿದೆ. ಇರಾನಿ ಕುಟುಂಬ ಈ ಹಿಂದೆ ಹಲವು ಬಾರಿ ಈ ಕೋಟೆಗೆ ಬಂದಿತ್ತು.

click me!