ಪ್ರಧಾನಿ ಮೋದಿ ಕಳೆದ ವರ್ಷ ಸೆಪ್ಟೆಂಬರ್ ತಿಂಗಳಲ್ಲಿ ಸೌತ್ ಆಫ್ರಿಕಾದಿಂದ ಚೀತಾ ತಂದಿದ್ದರು. ಕುನೋ ರಾಷ್ಟ್ರೀಯ ಪಾರ್ಕ್‌ನಲ್ಲಿ ಈ ಚೀತಾಗಳನ್ನು ಬಿಡಲಾಗಿದೆ. ಆದರೆ ಇದು ಬಿಜೆಪಿಯ ಅತೀ ದೊಡ್ಡ ಷಡ್ಯಂತ್ರ ಎಂದು ಕಾಂಗ್ರೆಸ್ ನಾಯಕ ಹೇಳಿದ್ದಾರೆ. ಈ ಷಡ್ಯಂತ್ರವನ್ನು ಕಾಂಗ್ರೆಸ್ ನಾಯಕ ಎಳೆಎಳೆಯಾಗಿ ವಿವರಿಸಿದ್ದಾರೆ. ಇಷ್ಟೇ ಅಲ್ಲ ಈ ಉತ್ತರ ನಿಮ್ಮನ್ನು ಬೆರಗುಗೊಳಿಸಲಿದೆ.
ಶಿವಪುರಿ(ಫೆ.07): ಭಾರತದಲ್ಲಿ ಅಳಿದು ಹೋಗಿದ್ದ ಚೀತಾ ಸಂತತಿಗಳನ್ನು ಬೆಳೆಸಲು ಕೇಂದ್ರ ಸರ್ಕಾರ ಕಳೆದ ವರ್ಷ ಸೌತ್ ಆಫ್ರಿಕಾದಿಂದ ಚೀತಾಗಳನ್ನು ತರಲಾಗಿದೆ. ಈ ಚೀತಾಗಳನ್ನು ಪ್ರಧಾನಿ ನರೇಂದ್ರ ಮೋದಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಪಾರ್ಕ್‌ಗೆ ಬಿಟ್ಟಿದ್ದರು. ಇಡೀ ದೇಶವೇ ಈ ಯೋಜನೆಗೆ ಸಂಭ್ರಮಿಸಿತ್ತು. ಮೋದಿ ಸರ್ಕಾರಕ್ಕೆ ಮೆಚ್ಚುಗೆ ಸುರಿಮಳೆ ವ್ಯಕ್ತವಾಗಿತ್ತು. ಆದರೆ ಇದು ಬಿಜೆಪಿ ಮಾಡಿರುವ ಅತೀ ದೊಡ್ಡ ಷಡ್ಯಂತ್ರ ಎಂದು ಮಧ್ಯಪ್ರದೇಶದ ಕಾಂಗ್ರೆಸ್ ನಾಯಕ ಪ್ರಗಿಲಾಲ್ ಜಾಟವ್ ಆರೋಪಿಸಿದ್ದಾರೆ. ಇದಕ್ಕೆ ಕಾಂಗ್ರೆಸ್ ನಾಯಕ ನೀಡಿದ ಕಾರಣ ಎಲ್ಲರನ್ನು ಚಕಿತಗೊಳಿಸಿದೆ. ಪ್ರಧಾನಿ ಮೋದಿ ಹಾಗೂ ಬಿಜೆಪಿ ಉದ್ದೇಶಪೂರ್ವಕವಾಗಿ ಚೀತಾಗಳನ್ನು ತರಿಸಿದ್ದಾರೆ. ಈ ಚೀತಾಗಳು ಸದ್ಯ ವಯಸ್ಸಿನಲ್ಲಿ ಗಾತ್ರದಲ್ಲಿ ಸಣ್ಣದಾಗಿದೆ. ಆದರೆ ಮುಂದಿನ ದಿನಗಳಲ್ಲಿ ಈ ಚೀತಾ ದೊಡ್ಡದಾಗಿ ಬೆಳೆಯಲಿದೆ. ಬಳಿಕ ಕಾಂಗ್ರೆಸ್ ಮತದಾರರನ್ನು ತಿಂದು ತೇಗಲಿದೆ. ಇದರಿಂದ ಚುನಾವಣೆಯಲ್ಲಿ ಬಿಜೆಪಿ ಸುಲಭ ಗೆಲುವು ಸಾಧಿಸಲಿದೆ ಎಂದು ಪ್ರಗಿಲಾಲ್ ಜಾಟವ್ ಹೇಳಿದ್ದಾರೆ.
ಕಾಂಗ್ರೆಸ್ ನಾಯಕನ ಕಾರಣ ಒಂದು ಕ್ಷಣ ಎಲ್ಲರನ್ನು ಬೆರಗಾಗಿಸಿದೆ. ಮಧ್ಯಪ್ರದೇಶದ ಶಿವಪುರಿ ಜಿಲ್ಲೆಯ ಕರೆರಾ ವಿಧಾಸಭಾ ಕ್ಷೇತ್ರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪ್ರಗಿಲಾಲ್ ಜಾಟವ್ ಈ ಮಾತು ಹೇಳಿದ್ದಾರೆ. ಪ್ರಗಿಲಾಲ್ ಜಾಟವ್ ಈ ಹೇಳಿಕ ನೀಡುತ್ತಿದ್ದಂತ ಚಪ್ಪಾಳೆ, ಶಿಳ್ಳೆ ಹೊಡೆದು ಹುರಿದುಂಬಿಸಿದ್ದಾರೆ. ತಮ್ಮ ಕ್ಷೇತ್ರದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಪಕ್ಷದ ಕಾರ್ಯಕರ್ತರು, ಕ್ಷೇತ್ರಜ ಜನರನ್ನುದ್ದೇಶಿ ಈ ಮಾತು ಆಡಿದ್ದಾರೆ.
ಮೊದಲ ಬಾರಿ ನೀಲ್ಗಾಯ್ ಬೇಟೆಯಾಡಿದ ಚೀತಾ
ಕಾಂಗ್ರೆಸ್ ಮತದಾರರನ್ನು ಮುಗಿಸಲು ಮೋದಿ ಹಾಗೂ ಬಿಜೆಪಿ ಮಾಡಿದ ಪ್ಲಾನ್ ಇದು. ಸೌತ್ ಆಫ್ರಿಕಾದಿಂದ ಚೀತಾ ತರಲು ಬಿಜೆಪಿ 117 ಕೋಟಿ ರೂಪಾಯಿ ಖರ್ಚು ಮಾಡಿದೆ. ಕಾಂಗ್ರೆಸ್ ಪಕ್ಷ ಬಡವರ ಪಕ್ಷ. ದೀನದಲಿತರ ಪಕ್ಷ. ಬಿಜೆಪಿಗಿಂತ ಹೆಚ್ಚಿನ ಜನಪ್ರತಿಧಿನಿಗಳನ್ನು ಹೊಂದಿರುವ ಪಕ್ಷವಾಗಿದೆ. ಆದರೆ ಕಾಂಗ್ರೆಸ್ ಮತದಾರರು ಹಾಗೂ ಜನಪ್ರತಿನಿಧಿಗಳನ್ನು ಮುಗಿಸಲು ಬಿಜೆಪಿ ಚೀತಾಗಳನ್ನು ಛೂಬಿಟ್ಟಿದೆ ಎಂದು ಪ್ರಗಿಲಾಲ್ ಜಾಟವ್ ಹೇಳಿದ್ದಾರೆ.
ಚೀತಾಗಳನ್ನು ಮುಂದಿಟ್ಟು ಬಿಜೆಪಿ ಚುನಾವಣೆ ಗೆಲ್ಲಲು ಪ್ಲಾನ್ ಮಾಡಿದೆ. ಈ ಚೀತಾಗಳು ಕಾಂಗ್ರೆಸ್ ಮತದಾರರನ್ನು ತಿಂದು ಮುಗಿಸುವ ಕಾರಣ ನಮ್ಮ ಮತದಾರರ ಸಂಖ್ಯೆ ಕಡಿಮೆಯಾಗಲಿದೆ. ಇದರಿಂದ ಬಿಜೆಪಿ ಗೆಲುವು ದಾಖಲಿಸಿದೆ. ಇವೆಲ್ಲವೂ ಸುದೀರ್ಘ ವರ್ಷಗಳ ಪ್ಲಾನ್ ಆಗಿದೆ ಎಂದು ಪ್ರಗಿಲಾಲ್ ಜಾಟವ್ ಹೇಳಿದ್ದಾರೆ. ಜಾಟವ್ ಕ್ಷೇತ್ರಕ್ಕೆ ಕಾಂಗ್ರೆಸ್ ಅಧ್ಯಕ್ಷ ಕಮಲ್ ನಾಥ್ ಆಗಮಿಸುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ ಕಾರ್ಯಕರ್ತರು ಮತದಾರರು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕು. ಇಷ್ಟೇ ಅಲ್ಲ ಕಮಲ್ ನಾಥ್ ಆಗಮಿಸುವ ದಿನ ಚೆಂದದ ಡ್ರೆಸ್ ಹಾಕಿ ಬನ್ನಿ ಎಂದು ಪ್ರಗಿಲಾಲ್ ಯಾದವ್ ಮನವಿ ಮಾಡಿದ್ದಾರೆ.
ಕುನೋ ಉದ್ಯಾನಕ್ಕೆ ಹೊಂದಿಕೊಂಡ ಚೀತಾಗಳು: ವಿಡಿಯೋ ಟ್ವಿಟ್ ಮಾಡಿದ ಮೋದಿ
ಮತ್ತೆ 12 ಚೀತಾ ತರಲು ಭಾರತದ ಒಪ್ಪಂದ
ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನಕ್ಕೆ ಮತ್ತೆ 12 ಚೀತಾಗಳನ್ನು ತರಲು ಭಾರತ ಆಫ್ರಿಕಾದೊಂದಿಗೆ ಒಪ್ಪಂದ ಮಾಡಿಕೊಂಡಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ತಿಳಿಸಿದೆ. ಫೆಬ್ರವರಿ 15ರೊಳಗೆ 7 ಗಂಡು ಹಾಗೂ 5 ಹೆಣ್ಣು ಚೀತಾಗಳು ಭಾರತಕ್ಕೆ ಬರುವ ನಿರೀಕ್ಷೆ ಇದೆ. ಪ್ರತಿ ವರ್ಷ 12 ಚೀತಾಗಳನ್ನು 10 ವರ್ಷ ಕಾಲ ಭಾರತಕ್ಕೆ ಕಳುಹಿಸುವುದಾಗಿ ಆಫ್ರಿಕಾದ ಪರಿಸರ ಇಲಾಖೆ ತಿಳಿಸಿದೆ. ಹೀಗಾದಲ್ಲಿ 10 ವರ್ಷಗಳ ಅವಧಿಯಲ್ಲಿ 120 ಚೀತಾಗಳು ಆಗಮಿಸಲಿವೆ. ಆದರೆ ಭಾರತ ಈ ಕುರಿತು ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ.