* ಕೊರೋನಾ ಅಬ್ಬರದ ನಡುವೆಯೂ ಭಾರತದಲ್ಲಿ ನಡೆಯುತ್ತಿದೆ ಲಸಿಕಾ ಅಭಿಯಾನ
* ಲಸಿಕಾ ಅಭಿಯಾನದ ಬಗ್ಗೆ ಸುಳ್ಳು ಸುದ್ದಿ ಹರಡುತ್ತಿವೆ ವಿಪಕ್ಷಗಳು
* ಏಳು ಸುಳ್ಳುಗಳಿಗೆ ಉತ್ತರಿಸಿದ ಕೇಂದ್ರ
ನವದೆಹಲಿ(ಮೇ.27):ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಿಸುವ ಸಲುವಾಗಿ ವಿಶ್ವದ ಬಹದುದೊಡ್ಡ ಲಸಿಕಾ ಅಭಿಯಾನ ಆರಂಭಿಸಲಾಗಿದೆ. ಈವರೆಗೂ ಸುಮಾರು 20 ಕೋಟಿ ಲಸಿಕೆ ಡೋಸ್‌ಗಳನ್ನು ನೀಡಲಾgiದೆ. ಹೀಗಿರುವಾಗ ಕೆಲ ರಾಜ್ಯಗಳು ಲಸಿಕೆ ಕೊರತೆ ಇದೆ ಎಂದು ದೂರಿವೆ. ಇನ್ನು ಕೆಲ ರಾಜ್ಯಗಳು ಲಸಿಕೆ ಕೊರತೆ, ವಿದೇಶಗಳಿಂದ ಲಸಿಕೆ ಖರೀದಿಸದ್ದಕ್ಕೆ ಕೇಂದ್ರವೇ ಹೊಣೆ ಎಂದು ದೂರಿವೆ. ಹೀಗಿರುವಾಗ ನೀತಿ ಆಯೋಗದ ಸದಸ್ಯರು ಹಾಗೂ ನ್ಯಾಷನಲ್ ಗ್ರೂಪ್ ಆಫ್ ವ್ಯಾಕ್ಸಿನ್ ಅಡ್ಮಿನಿಸ್ಟ್ರೇಷನ್ ಅಧ್ಯಕ್ಷ ಡಾ. ವಿನೋದ್ ಪಾಲ್ ಮಿಥ್ಯಗಳು ಹಾಗೂ ಅದರ ಹಿಂದಿನ ಸತ್ಯವನ್ನು ಅನಾವರಣಗೊಳಿಸಿದ್ದಾರೆ.
2 ವರ್ಷ ಫೈಝರ್, ಮಾಡೆರ್ನಾ ಲಸಿಕೆ ಡೌಟ್!
undefined
1 ಕೇಂದ್ರ ಸರ್ಕಾರ ವಿದೇಶಗಳಿಂದ ಲಸಿಕೆ ಖರೀದಿಸಲು ಬೇಕಾದ ಸೂಕ್ತ ಹೆಜ್ಜೆ ಇರಿಸುತ್ತಿಲ್ಲ
ನಿಜವೇನು?: ಕೇಂದ್ರ ಸರ್ಕಾರ 2020ರಿಂದಲೇ ಬಹುತೇಕ ಎಲ್ಲಾ ಅಂತಾರಾಷ್ಟ್ರೀಯ ಲಸಿಕಾ ಉತ್ಪಾದಕರೊಂದಿಗೆ ಸಂಪರ್ಕದಲ್ಲಿದೆ. ಫೈಝರ್, ಜಾನ್ಸನ್ ಆಂಡ್ ಜಾನ್ಸನ್ ಹಾಗೂ ಮಾಡೆರ್ನಾ ಜೊತೆ ಅನೇಕ ಸುತ್ತಿನ ಮಾತುಕತೆಯೂ ನಡೆದಿದೆ. ಅಲ್ಲದೇ ಸರ್ಕಾರ ಈ ಉತ್ಪಾದಕರಿಗೆ ಭಾರತಕ್ಕೆ ಲಸಿಕೆ ಪೂರೈಸಲು ಅಥವಾ ಇಲ್ಲೇ ಉತ್ಪಾದನಾ ಘಟಕ ಆರಂಭಿಸಲು ಬೇಕಾದ ಎಲ್ಲಾ ರೀತಿಯ ಸಹಾಯ ಮಾಡುವುದಾಗಿಯೂ ಭರವಸೆ ನೀಡಿದೆ. ಇದರರ್ಥ ವಿದೇಶೀ ಲಸಿಕೆಗಳು ಉಚಿತವಾಗಿ ಸಿಗುತ್ತವೆ ಎಂದಲ್ಲ. ಹೀಗಿರುವಾಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿದೇಶಗಳಿಂದ ಲಸಿಕೆ ಖರೀದಿಸುವುದು ಮಾರುಕಟ್ಟೆಗೆ ಹೋಗಿ ಸಾಮಗ್ರಿ ಖರೀದಿಸಿದಂತಲ್ಲ ಎಂದು ಅರ್ಥೈಸಿಕೊಳ್ಳಬೇಕಿದೆ.
ಅಲ್ಲದೇ ವಿದೇಶೀ ಲಸಿಕೆಗಳ ಪೂರೈಕೆಯೂ ಸೀಮಿತವಾಗಿರುತ್ತದೆ. ಜೊತೆಗೆ ಕಂಪನಿಗಳಿಗೂ ತಮ್ಮದೇ ಆದ ಒಪ್ಪಂದಗಳಿರುತ್ತವೆ. ಉದಾಹರಣೆಗೆ ನಮ್ಮ ದೆಶದ ಕೋವ್ದಯಾಕ್ಸಿನ್ ಹಾಗೂ ಕೋವಿಶೀಲ್ಡ್ ಲಸಿಕೆ ಪೂರೈಕೆ ಮೊದಲ ಆದ್ಯತೆ ನಮ್ಮ ದೇಶವಾಗಿದೆ. ಇದೇ ರೀತಿ ವಿದೇಶೀ ಲಸಿಕೆಗಳು ಮೊದಲು ತಮ್ಮ ದೇಶಕ್ಕೆ ನೀಡಬೇಕು. ಫೈಝರ್ ಕಂಪನಿಯು ತನ್ನ ಬಳಿ ಲಸಿಕೆ ಇದೆ ಎಂಬ ಸಂಕೇತ ನೀಡಿತ್ತು. ಇದರ ಬೆನ್ನಲ್ಲೇ ಭಾರತ ಸರ್ಕಾರ ಕಂಪನಿ ಜೊತೆ ಸಂಪರ್ಕ ಬೆಳೆಸಿ, ಶೀಘ್ರದಲ್ಲೇ ಭಾರತಕ್ಕೆ ಈ ಲಸಿಕೆ ತರಿಸುವ ಯತ್ನ ನಡೆಯುತ್ತಿದೆ. ಜೊತೆಗೆ ಸ್ಪುಟ್ನಿಕ್ ಪ್ರಯೋಗವೂ ಮುಂದುವರೆದಿದೆ. ಶೀಘ್ರದಲ್ಲೇ ಈ ಲಸಿಕೆಯೂ ಭಾರತಕ್ಕೆ ಬರಲಿದೆ.
2 ಕೇಂದ್ರ ವಿಶ್ವಾದ್ಯಂತ ಇರುವ ಲಸಿಕೆಗಳಿಗೆ ಪರವಾನಿಗೆ ನೀಡಿಲ್ಲ.
ಕೇಂದ್ರ ಸರ್ಕಾರ ಮಾರ್ಚ್‌ನಲ್ಲೇ ಅಮೆರಿಕದ ಎಫ್‌ಡಿಎ, ಇಎಂಎ, ಯುಕೆ ಎಂಹೆಚ್ಆರ್‌ಎ ಮತ್ತು ಜಪಾನ್‌ನ ಪಿಎಂಡಿಎ ಮತ್ತು ಡಬ್ಲ್ಯೂಎಚ್ಒ ತುರ್ತು ಪಟ್ಟಿಯಲ್ಲಿರುವ ಲಸಿಕೆಗಳ ಬಳಕೆಯನ್ನು ಮತ್ತಷ್ಟು ಸುಲಭಗೊಳಿಸಿದೆ. ಭಾರತದಲ್ಲಿ ಈ ಲಸಿಕೆಗಳ ತುರ್ತು ಬಳಕೆಗೆ ಪ್ರಯೋಗಗದ ಅಗತ್ಯವಿಲ್ಲ. ಇತರ ದೇಶಗಳಲ್ಲಿ ಅಭಿವೃದ್ಧಿಪಡಿಸಿ, ಉತ್ಪಾದಿಸಲಾದ ಲಸಿಕೆಗಳನ್ನು ಪ್ರಯೋಗವಿಲ್ಲದೇ ಬಳಸುವಂತೆ ಸರ್ಕಾರ ತಿದ್ದುಪಡಿಸಿ ತಂದಿದೆ. ಅಲ್ಲದೇ ಭಾರತ
3 ಕೇಂದ್ರ ಸ್ವದೇಶೀ ಲಸಿಕೆಗಳ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ
ಕೇಂದ್ರ ಸರ್ಕಾರ 2020ರ ಆರಂಭದಿಂದಲೇ ಕಂಪನಿಗಳು ಲಸಿಕೆ ಉತ್ಪಾದನೆ ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಪಾತ್ರ ವಹಿಸಿದೆ. ಸದ್ಯ ಭಾರತದಲ್ಲಿ ಭಾರತ್ ಬಯೋಟೆಕ್ ಬಳಿಯಷ್ಟೇ ಐಪಿ ಇದೆ. ಆದರೀಗ ಭಾರತ ಸರ್ಕಾರ ಇನ್ನೂ ಮೂರು ಕಂಪನಿಗಳು ಕೋವ್ಯಾಕ್ಸಿನ್ ಉತ್ಪಾದಿಸಲಿವೆ ಎಂದಿದೆ, ಇದನ್ನು ಹೊರತುಪಡಿಸಿ ಭಾರತ್ ಬಯೋಟೆಕ್ ಕೂಡಾ ತನ್ನ ಮೂರು ನೂತನ ಲಸಿಕೆ ಉತ್ಪಾದನಾ ಘಟಕಗಳನ್ನು ಸ್ಥಾಪಿಸಿದೆ. ಹೀಗಾಗಿ ಈ ಲಸಿಕೆ ಒಂದರ ಬದಲು ನಾಲ್ಕು ಪ್ಲಾಂಟ್‌ಗಳಲ್ಲಿ ಉತ್ಪಾದನೆಯಾಗಲಿದೆ. ಪ್ರತಿ ತಿಂಗಳು ಒಂದು ಕೋಟಿ ಲಸಿಕೆ ಉತ್ಪಾದನೆ ಹೆಚ್ಚಾಗಿ ಅಕ್ಟೋಬರ್ ವೇಳೆಗೆ ಹತ್ತು ಕೋಟಿಗೇರಲಿದೆ. ಅತ್ತ ಪ್ರತಿ ತಿಂಗಳು 6.5 ಡೋಸ್ ಲಸಿಕೆ ಉತ್ಪಾದನೆಯಾಘುತ್ತಿರುವ ಕೋವಿಶೀಲ್ಡ್ ಲಸಿಕೆಯನ್ನೂ ಹೆಚ್ಚಿಸಿ 11 ಕೋಟಿಗೇರಿಸುವ ಉದ್ದೇಶ ಭಾರತ ಸರ್ಕಾರದ್ದಾಗಿದೆ.
4 ರಾಜ್ಯಗಳ ಜವಾಬ್ದಾರಿಯಿಂದ ಹಿಂದೆ ಸರಿದ ಕೇಂದ್ರ
ಕೇಂದ್ರ ಸರ್ಕಾರ ಲಸಿಕೆ ಉತ್ಪಾದಕರಿಗೆ ಅನುದಾನ ನೀಡುವುದರಿಂದ ಹಿಡಿದು ದೇಶಕ್ಕೆ ವಿದೇಶೀ ಲಸಿಕೆಗಳಿಗೆ ಅನುಮತಿ ನೀಡುವವರೆಗೆ ಎಲ್ಲಾ ವಿಚಾರದಲ್ಲೂ ಮಹತ್ವದ ಹೆಜ್ಜೆ ಇರಿಸುತ್ತಿದೆ. ಅಲ್ಲದೇ ಉಚಿತ ಲಸಿಕೆ ನೀಡಲು ರಾಜ್ಯಗಳಿಗೆ ವ್ಯಾಕ್ಸಿನ್ ಪೂರೈಕೆ ಕೂಡಾ ಮಾಡುತ್ತಿದೆ. ಈ ಮಾಹಿತಿ ರಾಜ್ಯಗಳಿಗೂ ಇದೆ. ಹೀಗಿದ್ದರೂ ರಾಜ್ಯಗಳ ಒತ್ತಾಯದ ಮೇರೆಗೆ ಲಸಿಕೆ ಖುದ್ದು ಖರೀದಿಸಲು ಅವಕಾಶ ನೀಡಿದೆ. ಈ ವಿಚಾರದಲ್ಲಿ ಅದೆಷ್ಟು ಸಮಸ್ಯೆಗಳಿವೆ ಎಂಬುವುದು ರಾಜ್ಯಗಳಿಗೂ ತಿಳಿದಿದೆ. ಇನ್ನು ಭಾರತ ಸರ್ಕಾರ ಕೂಡಾ ಜನವರಿಯಿಂದ ಏಪ್ರಿಲ್‌ವರೆಗೆ ಲಸಿಕೆ ಅಭಿಯಾನವನ್ನು ಸಂಪೂರ್ಣವಾಗಿ ನಡೆಸಿದೆ., ಮೇ ತಿಂಗಳಿಗೆ ಹೋಲಿಸಿದರೆ ಬಹಳ ಚೆನ್ನಾಗಿ ಕೇಂದ್ರ ಈ ಅಭಿಯಾನವನ್ನು ನಿರ್ವಹಿಸಿತ್ತು.
'ಮಳೆಗಾಲಕ್ಕೂ ಮುನ್ನ ಮಕ್ಕಳಿಗೆ ಶೀತಜ್ವರದ ಲಸಿಕೆ ನೀಡಿ'
5. ಕೇಂದ್ರ ರಾಜ್ಯಗಳಿಗೆ ಪರ್ಯಾಪ್ತ ಲಸಿಕೆ ನೀಡುತ್ತಿಲ್ಲ
ಕೇಂದ್ರ ತನ್ನ ಒಪ್ಪಂದದಂತೆ ಪಾರದರ್ಶಕ ರೀತಿಯಲ್ಲಿ ರಾಜ್ಯಗಳಿಗೆ ಸಾಕಷ್ಟು ಲಸಿಕೆಗಳನ್ನು ಹಂಚುತ್ತಿದೆ. ವಾಸ್ತವವಾಗಿ, ಲಸಿಕೆ ಲಭ್ಯತೆಯ ಬಗ್ಗೆ ರಾಜ್ಯಗಳಿಗೆ ಮುಂಚಿತವಾಗಿ ತಿಳಿಸಲಾಗುತ್ತಿದೆ. ಮುಂದಿನ ವರ್ಷಗಳಲ್ಲಿ ಲಸಿಕೆಯ ಲಭ್ಯತೆಯು ಹೆಚ್ಚಾಗಲಿದೆ ಮತ್ತು ಹೆಚ್ಚು ದೊಡ್ಡ ಮಟ್ಟದಲ್ಲಿ ಪೂರೈಕೆಯೂ ಆಗಲಿದೆ.
'ಕೊರೋನಾ ಗೆಲ್ಲಲು ಇನ್ನೆರಡು ವರ್ಷ : ಜೈವಿಕ ಲಸಿಕೆ ಜತೆ ಸಾಮಾಜಿಕ ಲಸಿಕೆ ಬೇಕು'
6 ಮಕ್ಕಳ ಲಸಿಕಾ ಅಭಿಯಾನಕ್ಕೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ
ಈವರೆಗೂ ವಿಶ್ವದ ಯಾವುದೇ ದೇಶ ಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಆರಂಭಿಸಿಲ;್ಲ. ಜೊತೆಗೆ ವಿಶ್ವಸಂಸ್ಥೆಗೂ ಮಕ್ಕಳ ವ್ಯಾಕ್ಸಿನೇಷನ್ ಬಗ್ಗೆ ಯಾವುದೇ ಶಿಫಾರಸ್ಸಿಲ್ಲ. ಈವರೆಗೂ ಕೇವಲ ಮಕ್ಕಳೋ ಲಸಿಕೆ ಅಭಿಯಾನದ ಬಗ್ಗೆ ಅಧ್ಯಯನವಷಷ್ಟೇ ನಡೆದಿದೆ,. ಇನ್ನು ಶೀಘ್ರದಲ್ಲೇ ಭಾರತವೂ ಮಕ್ಕಳ ಲಸಿಕೆಯ ಪ್ರಯೋಈಗ ನಡೆಸಲಿದೆ.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona