ಕರ್ನಾಟಕದ ಮೈಸೂರು, ಕಾರವಾರ ನಗರಗಳು ಹಾಗೂ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ಭಾರತದ ಸ್ವಚ್ಛ ನಗರಗಳ ಪಟ್ಟಿಯಲ್ಲಿ ವಿವಿಧ ವಿಭಾಗಗಳಲ್ಲಿ ಟಾಪ್-10 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ನವದೆಹಲಿ (ಡಿ.02) : 2019ನೇ ಸಾಲಿನ ಮೊದಲ 2 ತ್ರೈಮಾಸಿಕ ಸ್ವಚ್ಛ ನಗರಗಳ ಸರ್ವೇಕ್ಷಣಾ ಪಟ್ಟಿಯನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈ ಎರಡೂ ತ್ರೈಮಾಸಿಕದಲ್ಲಿ ಮಧ್ಯಪ್ರದೇಶದ ಇಂದೋರ್ ಮೊದಲ ಸ್ಥಾನ ಪಡೆದಿದೆ. ಕರ್ನಾಟಕದ ಮೈಸೂರು, ಕಾರವಾರ ನಗರಗಳು ಹಾಗೂ ಚಿತ್ರದುರ್ಗ ಜಿಲ್ಲೆ ಹೊಸದುರ್ಗ ವಿವಿಧ ವಿಭಾಗಗಳಲ್ಲಿ ಟಾಪ್-10 ಪಟ್ಟಿಯಲ್ಲಿ ಸ್ಥಾನ ಗಿಟ್ಟಿಸಿಕೊಂಡಿದೆ.
ಎರಡನೇ ತ್ರೈಮಾಸಿಕದ ಪಟ್ಟಿಯಲ್ಲಿ 1ರಿಂದ 10 ಲಕ್ಷ ಜನಸಂಖ್ಯೆಯ ನಗರಗಳಲ್ಲಿ ಮೈಸೂರು ದೇಶದಲ್ಲೇ 9ನೇ ಸ್ಥಾನ ಪಡೆದಿದೆ. ಇನ್ನು ಮೊದಲ ಹಾಗೂ 2ನೇ ತ್ರೈಮಾಸಿಕದ ದಕ್ಷಿಣ ಭಾರತದ ಟಾಪ್ 3 ಸ್ವಚ್ಛ ಪಟ್ಟಣಗಳ (25 ಸಾವಿರ-50 ಸಾವಿರ ಜನಸಂಖ್ಯೆ) ಪಟ್ಟಿಯಲ್ಲಿ ಹೊಸದುರ್ಗ 2ನೇ ಸ್ಥಾನ ಪಡೆದಿದೆ. 50 ಸಾವಿರದಿಂದ 1 ಲಕ್ಷ ಜನಸಂಖ್ಯೆಯ ನಗರಗಳಲ್ಲಿ ಎರಡನೇ ತ್ರೈಮಾಸಿಕದಲ್ಲಿ ಕಾರವಾರ 2ನೇ ಸ್ಥಾನ ಪಡೆದಿದೆ. ಆದರೆ ಇಂದೋರ್ ಮೊದಲ ಸ್ಥಾನ ಪಡೆದಿರುವ ಸಮಗ್ರ ಪಟ್ಟಿಯ ಟಾಪ್ 150ರಲ್ಲಿ ಕರ್ನಾಟಕದ ಯಾವ ನಗರಗಳೂ ಇಲ್ಲ. ಮೈಸೂರು 154 ನೇ ಸ್ಥಾನ ಪಡೆದಿದ್ದರೆ ಬಳಿಕ ತುಮಕೂರು ಸ್ಥಾನ 188ನೇ ಸ್ಥಾನ ಪಡೆದಿದೆ. ಆನಂತರದ ಸ್ಥಾನ ಹೊಸದುರ್ಗದ್ದು. ಅದು 272ನೇ ಸ್ಥಾನ ಹೊಂದಿದೆ.
undefined
ತಲೆ ಎತ್ತಲಿದೆ ಹೊಸ ಸಂಸತ್ ಭವನ: 75ನೇ ಸ್ವಾತಂತ್ರ್ಯ ದಿನಕ್ಕೆ ಉಡುಗೊರೆ!...
ಇನ್ನು 10 ಲಕ್ಷಕ್ಕಿಂತ ಹೆಚ್ಚು ಜನಸಂಖ್ಯೆಯ ನಗರಗಳಲ್ಲಿ ಬೆಂಗಳೂರು 43ನೇ ಸ್ಥಾನ ಪಡೆದಿದೆ. 1 ಲಕ್ಷದಿಂದ 10 ಲಕ್ಷ ಜನಸಂಖ್ಯೆಯ ನಗರಗಳ ಸ್ವಚ್ಛತಾ ರಾರಯಂಕಿಂಗ್‌ಲ್ಲಿ ರಾಜ್ಯದ ನಗರಗಳು ಪಡೆದಿರುವ ಸ್ಥಾನ ಹೀಗಿದೆ:. ತುಮಕೂರು 28, ಮಂಗಳೂರು 101, ಚಿತ್ರದುರ್ಗ 104ನೇ ಸ್ಥಾನ, ವಿಜಯಪುರ 115. ಹುಬ್ಬಳ್ಳಿ-ಧಾರವಾಡ 124, ಬಾಗಲಕೋಟೆ 132, ಮಂಡ್ಯ 162, ಉಡುಪಿ 201, ಹೊಸಪೇಟೆ, 233, ದಾವಣಗೆರೆ 239, ಕಲಬುರಗಿ 240, ಗದಗ ಬೆಟಗೇರಿ 244, ಹಾವೇರಿ 259, ಶಿವಮೊಗ್ಗ 260, ಬೆಳಗಾವಿ 277, ಬೀದರ್ 284, ಹಾಸನ 285, ರಾಬರ್ಟ್‌ಸನ್‌ಪೇಟೆ 288, ಚಿಕ್ಕಮಗಳೂರು 312, ಬಳ್ಳಾರಿ 317, ರಾಯಚೂರು 319, ಗಂಗಾವತಿ 342, ಭದ್ರಾವತಿ 243ನೇ ರಾರಯಂಕ್.