ನನ್ನ ತಲೆ ಹಗುರಾಗಿದೆ: ಹೊಸ ಹುದ್ದೆ ಕುರಿತು ಸಿಡಿಎಸ್ ರಾವತ್ ಅಭಿಮತ!

Suvarna News   | Asianet News
Published : Jan 01, 2020, 06:20 PM IST
ನನ್ನ ತಲೆ ಹಗುರಾಗಿದೆ: ಹೊಸ ಹುದ್ದೆ ಕುರಿತು ಸಿಡಿಎಸ್ ರಾವತ್ ಅಭಿಮತ!

ಸಾರಾಂಶ

ಹೊಸ ಹುದ್ದೆ ಹಾಗೂ ಸಮವಸ್ತ್ರದ ಕುರಿತು ಬಿಪಿನ್ ರಾವತ್ ಹೇಳಿದ್ದೇನು?| ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್) ಜನರಲ್ ಬಿಪಿನ್ ರಾವತ್| 'ಗೋರ್ಖಾ ರೆಜಿಮೆಂಟ್‌ನ ಹ್ಯಾಟ್ ಇಲ್ಲದಿರುವುದರಿಂದ ನನ್ನ ತಲೆ ಹಗುರವಾಗಿದೆ'| ಪತ್ರಕರ್ತರ ಪ್ರಶ್ನೆಗೆ ಹಾಸ್ಯ ಚಟಾಕಿ ಹಾರಿಸಿದ ಬಿಪಿನ್ ರಾವತ್| ನಿನ್ನೆ(ಡಿ.31)ಯಷ್ಟೇ ಭಾರತೀಯ ಭೂಸೇನೆಯ ಮುಖ್ಯಸ್ಥರ ಹುದ್ದೆಯಿಂದ ನಿವೃತ್ತರಾಗಿದ್ದ ರಾವತ್|

ನವದೆಹಲಿ(ಜ.01): ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ(ಸಿಡಿಎಸ್)ರಾಗಿ ಅಧಿಕಾರ ಸ್ವೀಕರಿಸಿರುವ ಜನರಲ್ ಬಿಪಿನ್ ರಾವತ್, ಹೊಸ ಹುದ್ದೆ ಹಾಗೂ ಸಮವಸ್ತ್ರದ ಕುರಿತು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.

ಸಿಡಿಎಸ್ ನೇಮಕದಿಂದಾಗಿ ಸೇನೆಯ ಮೂರು ಪಡೆಗಳಲ್ಲಿ ಸಮನ್ವಯ ಸಾಧಿಸುವುದು ಇನ್ನು ಸುಲಭ ಎಂದಿರುವ ಬಿಪಿನ್ ರಾವತ್, ಮೂರೂ ಪಡೆಗಳ ಬೇಕು-ಬೇಡಗಳ ಕುರಿತು ಸರ್ಕಾರದೊಂದಿಗೆ ಚರ್ಚಿಸಿ ನಿರ್ಣಯ ಕೈಗೊಳ್ಳಲು ಸಿಡಿಎಸ್ ಸಹಾಯಕಾರಿ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಾಜಕೀಯದಿಂದ ದೂರ ಇರ್ತಿವಿ: ಸಿಡಿಎಸ್ ಬಿಪಿನ್ ರಾವತ್!

ಇದೇ ವೇಳೆ ಹೊಸ ಸಮವಸ್ತ್ರದ ಕುರಿತು ಮತನಾಡಿರುವ ಬಿಪಿನ್ ರಾವತ್, '41 ವರ್ಷಗಳ ಕಾಲ ಬಳಿಸಿದ್ದ ಗೋರ್ಖಾ ರೆಜಿಮೆಂಟ್‌ನ ಹ್ಯಾಟ್ ಇಲ್ಲದಿರುವುದರಿಂದ ನನ್ನ ತಲೆ ಹಗುರವಾಗಿದೆ..' ಎಂದು ಹಾಸ್ಯ ಚಟಾಕಿ ಹಾರಿಸಿದರು.

ಹೊಸ ಮೆಡಲ್‌ಗಳು, ಹೊಸ ಟೋಪಿ ಹಾಗೂ ಹೊಸ ಸಮವಸ್ತ್ರದಿಂದ ನಾನು ಹಗುರವಾಗಿದ್ದೇನೆ ಎಂದು ಪತ್ರಕರ್ತರ ಪ್ರಶ್ನೆಗೆ ಬಿಪಿನ್ ರಾವತ್ ಮಾರ್ಮಿಕವಾಗಿ ಉತ್ತರಿಸಿದರು.

ಭೂಸೇನಾ ಮುಖ್ಯಸ್ಥರಾಗಿ ಜನರಲ್ ಮುಕುಂದ್ ನಾರವಾನೆ ಅಧಿಕಾರ ಸ್ವೀಕಾರ!

ನಿನ್ನೆ(ಡಿ.31)ಯಷ್ಟೇ ಭಾರತೀಯ ಭೂಸೇನೆಯ ಮುಖ್ಯಸ್ಥರ ಹುದ್ದೆಯಿಂದ ನಿವೃತ್ತರಾಗಿದ್ದ ಜನರಲ್ ಬಿಪಿನ್ ರಾವತ್, ದೇಶದ ಮೊದಲ ರಕ್ಷಣಾ ಸಿಬ್ಬಂದಿ ಮುಖ್ಯಸ್ಥರಾಗಿ ಅಧಿಕಾರ ಸ್ವೀಕರಿಸಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

click me!

Recommended Stories

Vande Mataram ಎರಡು ಪದಗಳ ಅರ್ಥ ವಿವರಿಸಿದ ಇಕ್ರಾ ಹಸನ್: ಸಂಸದೆಯ ಮಾತು ವೈರಲ್
ವಿದೇಶಗಳಿಗೆ ಭಾರತೀಯ ಪ್ರತಿಭೆ : ನಷ್ಟವೋ ? ಪ್ರಭಾವವೋ?