ನನಗಿನ್ನೂ ಮದುವೆಯಾಗಿಲ್ಲ. ನನ್ನ ರಾತ್ರಿಗಳು ವ್ಯರ್ಥವಾಗುತ್ತಿದೆ. ನನಗೆ ಹುಡುಗಿ ಹುಡುಕಿಕೊಡಿ.ಮೊದಲು ನಾನು ಮದುವೆಯಾಗುತ್ತೇನೆ. ಆಮೇಲೆ ಚುನಾವಣೆ ಡ್ಯೂಟಿ ಮಾಡುತ್ತೇನೆ ಎಂದು ಶಿಕ್ಷಕ ಜಿಲ್ಲಾಧಿಕಾರಿಗೆ ಉತ್ತರ ನೀಡಿದ್ದಾನೆ. ಚುನಾವಣಾ ಕರ್ತವ್ಯ ನಿರಾಕರಿಸಿದ ಈ ಶಿಕ್ಷನನ್ನು ಇದೀಗ ಅಮಾನತು ಮಾಡಲಾಗಿದೆ.
ಭೋಪಾಲ್(ನ.04) ಚುನಾವಣೆ ವೇಳೆ ಟೀಚರ್ಸ್ ಸೇರಿದಂತೆ ಹಲವರಿಗೆ ಚುನಾವಣಾ ಕರ್ತವ್ಯ ಜವಾಬ್ದಾರಿ ನೀಡಲಾಗುತ್ತದೆ. ಲೋಕಸಭೆ, ವಿಧಾನಸಭೆ ಚುನಾವಣೆಯಲ್ಲಿ ಇದು ಸಾಮಾನ್ಯ. ಆದರೆ ಇಲ್ಲೊಬ್ಬ ಶಿಕ್ಷಕ ಚುನಾವಣಾ ಕರ್ತವ್ಯದ ತರಬೇತಿಗೆ ಗೈರಾಗಿದ್ದಾನೆ. ಇಷ್ಟೇ ಆಗಿದ್ದರೆ ಹೆಚ್ಚಿನ ಸಮಸ್ಯೆ ಆಗುತ್ತಿರಲಿಲ್ಲ. ಈ ಕುರಿತು ಜಿಲ್ಲಾಡಳಿತ ಸ್ಪಷ್ಟನೆ ಕೇಳಿತ್ತು. ಈ ಶೋಕಾಸ್ ನೋಟಿಸ್‌ಗೆ ನೀಡಿದ ಉತ್ತರ ಇದೀಗ ಭಾರಿ ವೈರಲ್ ಆಗಿದೆ. ನನ್ನ ಜೀವನ ಮದುವೆಯಾಗದೇ ಕಳೆದುಹೋಗಿದೆ. ನನ್ನ ರಾತ್ರಿಗಳು ವ್ಯರ್ಥವಾಗಿದೆ. ಮೊದಲು ನಾನು ಮದುವೆಯಾಗುತ್ತೇನೆ. ಬಳಿಕ ತರಬೇತಿಗೆ ಹಾಜರಾಗುತ್ತೇನೆ ಎಂದು ಶಿಕ್ಷಕ ಉತ್ತರ ನೀಡಿದ್ದಾನೆ. ಈ ಉತ್ತರ ನೋಡಿ ಕೆರಳಿದ ಜಿಲ್ಲಾಡಳಿತ ಶಿಕ್ಷಕನ ಅಮಾನತು ಮಾಡಿದೆ. ಈ ಘಟನೆ ನಡೆದಿರುವುದು ಮಧ್ಯಪ್ರದೇಶದ ಮಹದೂರ್‌ನ ಅಮರಪಟನದಲ್ಲಿ ನಡೆದಿದೆ.
ಸಾತ್ನ ಸರ್ಕಾರಿ ಶಾಲಾ ಶಿಕ್ಷಕ 25 ವರ್ಷದ ಅಖಿಲೇಶ್ ಕುಮಾರ್ ತಿವಾರಿ ಉತ್ತರ ಇದೀಗ ಚರ್ಚೆಯಾಗುತ್ತಿದೆ. ಮಧ್ಯಪ್ರದೇಶ ಸೇರಿದಂತೆ ಪಂಚ ರಾಜ್ಯಗಳ ಚುನಾವಣೆ ಗೆ ಕೆಲ ದಿನಗಳು ಮಾತ್ರ ಬಾಕಿ. ಚುನಾವಣಾ ಆಯೋಗ ಸುಸೂತ್ರವಾಗಿ ಮತದಾನ ನಡೆಸಲು ಎಲ್ಲಾ ತಯಾರಿ ಮಾಡಿಕೊಳ್ಳುತ್ತಿದೆ. ಇತ್ತ ಚುನಾವಣಾ ಕರ್ತವ್ಯ ಜವಾಬ್ದಾರಿಯನ್ನು ಹಂಚಲಾಗಿದೆ. ಶಿಕ್ಷಕ-ಶಿಕ್ಷತಿಯರು ಸೇರಿದಂತೆ ಹಲವು ಸರ್ಕಾರಿ ನೌಕರರಿಗೆ ಚುನಾವಣಾ ಜವಾಬ್ದಾರಿ ನೀಡಲಾಗಿದೆ. ಯಾವುದೇ ಸಮಮಸ್ಯೆಯಾಗದಂತೆ ನೋಡಿಕೊಳ್ಳಲು ಜಿಲ್ಲಾಡಳಿತ ತರಬೇತಿ ಕಾರ್ಯಾಗರವನ್ನು ಆಯೋಜಿಸಿತ್ತು.
ಪತ್ನಿ ಸಾರಾಗೆ ವಿಚ್ಛೇದನ ನೀಡಿರುವ ಸಚಿನ್ ಪೈಲಟ್, ನಾಮಪತ್ರದಿಂದ ಬಯಲಾಯ್ತು ರಹಸ್ಯ!
ಈ ಕಾರ್ಯಾಗಾರಕ್ಕೆ ಶಿಕ್ಷಕ ಅಖಿಲೇಶ್ ಕುಮಾರ್ ತಿವಾರಿ ಗೈರಾಗಿದ್ದಾರೆ. ಎಲ್ಲಾ ದಿನ ಕಾರ್ಯಾಗಾರದಿಂದ ಗೈರಾದ ಅಖಿಲೇಶ್ ಕುಮಾರ್ ತಿವಾರಿಗೆ ಜಿಲ್ಲಾಡಳಿತ ಶೋಕಾಸ್ ನೋಟಿಸ್ ನೀಡಿತ್ತು. ಇದೇ ವೇಳೆ ಗೈರಾಗಿರುವುದಕ್ಕೆ ಕಾರಣ ನೀಡುವಂತೆಯೂ ಸೂಚಿಸಿತ್ತು. ಈ ಶೋಕಾಸ್ ನೋಟಿಸ್‌ಗೆ ಅಖಿಲೇಶ್ ನೀಡಿದ ಉತ್ತರದಿಂದ ಇದೀಗ ಅಮಾನತು ಶಿಕ್ಷೆ ಎದುರಿಸುವಂತಾಗಿದೆ.
ನನ್ನ ಸಂಪೂರ್ಣ ಬದುಕು ಪತ್ನಿಯಿಲ್ಲದೆ ಏಕಾಂಗಿಯಾಗಿ ಸವೆಸುವಂತಾಗಿದೆ.ನನ್ನ ರಾತ್ರಿಗಳು ವ್ಯರ್ಥವಾಗುತ್ತಿದೆ. ನನಗೆ ಹುಡುಗಿ ಹುಡುಕಿಕೊಡಿ. ಮೊದಲು ನಾನು ಮದುವೆಯಾಗುತ್ತೇನೆ. ಬಳಿಕ ತರಬೇತಿಗೆ ಹಾಜರಾಗುತ್ತೇನೆ ಎಂದು ಶೋಕಾಸ್ ನೋಟಿಸ್‌ಗೆ ಉತ್ತರ ನೀಡಿದ್ದಾನೆ. ಈ ಉತ್ತರ ನೋಡಿದ ಜಿಲ್ಲಾಡಳಿತ ಕೆರಳಿದೆ. ಜಿಲ್ಲಾಧಿಕಾರಿ ಅನುರಾಗ್ ವರ್ಮಾ ಶಿಕ್ಷಕ ಅಖಿಲೇಶ್‌ನ ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.
ಶಿಕ್ಷಕ ಅಖಿಲೇಶ್ ಕುಮಾರ್ ತಿವಾರಿ 35 ವರ್ಷವಾದರೂ ಮದುವೆಯಾಗದ ಕಾರಣ ಖಿನ್ನತೆ ಒಳಗಾಗಿದ್ದಾರೆ. ಕಳೆದೊಂದು ವರ್ಷದಿಂದ ಫೋನ್ ಕೂಡ ಬಳಕೆ ಮಾಡುತ್ತಿಲ್ಲ. ಶೋಕಾಸ್ ನೋಟಿಸ್‌ಗೆ ಈ ರೀತಿ ಯಾರ ಉತ್ತರ ನೀಡಿಲ್ಲ. ಶಿಕ್ಷಕರು ಮಾನಸಿಕವಾಗಿ ದುರ್ಬಲರಾಗಿದ್ದಾರೆ ಎಂದು ಸಹ ಶಿಕ್ಷಕರು ಹೇಳಿದ್ದಾರೆ.
ವೃದ್ಧೆಯನ್ನು ತೊಡೆ ಮೇಲೆ ಕೂರಿಸಿಕೊಂಡು ತೋಳುಗಳಲ್ಲಿ ಎತ್ತಿಕೊಂಡ ಸಚಿವ: ವಿಡಿಯೋ ವೈರಲ್