'ಪಾಕ್‌ಗೆ ವಲಸೆ  ಹೋದ ಮುಸ್ಲಿಮರಿಗೆ ಗೌರವ-ಸ್ಥಾನ ಸಿಗಲೇ ಇಲ್ಲ'

By Suvarna NewsFirst Published Oct 13, 2021, 10:25 PM IST
Highlights

* ವೀರ ಸಾವರ್ಕರ್ ಪುಸ್ತಕ ಬಿಡುಗಡೆ
* ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಮಾತು
* ಎಲ್ಲರೂ ಒಂದಾಗಿ ಯೋಚನೆ ಮಾಡಿದಿದ್ದರೆ ದೇಶ ವಿಭಜನೆ ಆಗುತ್ತಿರಲಿಲ್ಲ
* ಭಾರತದಿಂದ ತೆರಳಿದ  ಮುಸ್ಲಿಮರಿಗೆ ಗೌರವ ಆದ್ಯತೆ ಸಿಕ್ಕಿಲ್ಲ

ನವದೆಹಲಿ(ಅ. 13)  ಹಿಂದು(Hindu) ಮತ್ತು ಮುಸಲ್ಮಾನರ(Muslim) ಪೂರ್ವಜರು ಒಂದೇ ಎಂಬ ಚಿಂತನೆ ಸ್ವಾತಂತ್ರ್ಯ ಸಂಗ್ರಾಮದ ವೇಳೆ ಇರುತ್ತಿದ್ದರೆ ಭಾರತ ಇಬ್ಭಾಗವಾಗುವುದನ್ನು ತಡೆಯಬಹುದಾಗಿತ್ತು ಎಂದು ಆರ್ ಎಸ್ ಎಸ್(RSS) ಮುಖ್ಯಸ್ಥ ಮೋಹನ್ ಭಾಗವತ್ (Mohan Bhagavat)ಹೇಳಿದ್ದಾರೆ.

ಭಾರತ ಇಬ್ಭಾಗವಾದ ನಂತರ ಇಲ್ಲಿಂದ  ಪಾಕಿಸ್ತಾನಕ್ಕೆ (Pakistan) ವಲಸೆ (Migration,) ಹೋದ ಮುಸಲ್ಮಾನರಿಗೆ ಹೆಚ್ಚಿನ ಗೌರವ ಸಿಕ್ಕಿಲ್ಲ. ಸ್ಥಾನಮಾನ ಸಿಕ್ಕಿಲ್ಲ.  ಇಲ್ಲಿ ಆದರೆ ಇಲ್ಲಿ ಉಳಿದುಕೊಂಡವರು ತಮ್ಮ ಧಾರ್ಮಿಕ ಆಚರಣೆ-ವಿಧಿ ವಿಧಾನಗಳನ್ನು ಲೆಕ್ಕಿಸದೆ ಭಾರತಕ್ಕೆ ಸೇರಿದವರಾಗಿದ್ದಾರೆ ಎಂದು ಉಚ್ಚರಿಸಿದರು. ಸಾಮರಸ್ಯದ ಸಮಾಜ ನಿರ್ಮಾಣ ಇಲ್ಲಿದೆ ಎಂದರು.

ಭಾರತದ ಸನಾತನ ಧರ್ಮ ಉದಾರವಾಗಿದೆ. ನಮ್ಮ ಪೂರ್ವಜರು ಒಂದೇ ಆಗಿದ್ದಾರೆ.  ಆರಾಧನಾ ವಿಧಾನದಿಂದ ಯಾರನ್ನೂ ಹಿಂದು ಮುಸ್ಲಿಮರನ್ನು ಪ್ರತ್ಯೇಕಿಸಲು ಸಾಧ್ಯವಿಲ್ಲ ಎಂದರು.

'ಬ್ರಿಟಿಷರಿಗೆ ಕ್ಷಮಾದಾನದ ಅರ್ಜಿ ಸಲ್ಲಿಸಲು ಸಾವರ್ಕರ್ ಗೆ ಹೇಳಿದ್ದು ಗಾಂಧೀಜಿ'

ವೀರ ಸಾವರ್ಕರ್  (Vinayak Damodar Savarkar)ಜೀವನಕ್ಕೆ ಸಂಬಂಧಿಸಿದ   ಪುಸ್ತಕ ಬಿಡುಗಡೆ ಕಾರ್ಯಕ್ರಮ ನವದೆಹಲಿಯಲ್ಲಿ(Newdelhi) ನಡೆಯಿತು.  ಇಂದಿನ ಯುಗ ಅಂದರೆ ಅದು ಸಾವರ್ಕರ್ ಯುಗ ಭಾರತೀಯ ಸಮಾಜದಲ್ಲಿ ಹಿಂದುತ್ವ ಮತ್ತು ಏಕತೆಯ ಬಗ್ಗೆ ಹಲವರು ಮಾತನಾಡಿದ್ದರು, ಸಾವರ್ಕರ್ ಅದರ ಬಗ್ಗೆ ಗಟ್ಟಿಯಾಗಿ ಮಾತನಾಡಿದ್ದರು. ಆ ಸಂದರ್ಭದಲ್ಲಿ ಇನ್ನಷ್ಟು ನಾಯಕರು ಮಾತನಾಡಿದ್ದರೆ ಭಾರತ ಹೋಳಾಗುತ್ತಿರಲಿಲ್ಲ ಎಂದರು.

ವಿಭಜನೆ ನಂತರ ಪಾಕಿಸ್ತಾನಕ್ಕೆ ತೆರಳಿದ ಮುಸ್ಲಿಮರಿಗೆ ಗೌರವ ಆದ್ಯತೆ  ಸಿಕ್ಕಿಲ್ಲ. ಭಾರತೀಯ ಮೂಲದವರು ಎಂಬ ಭಾವನೆ ಹಾಗೆ ಇಟ್ಟುಕೊಂಡಿದ್ದಾರೆ. ನಮ್ಮ ಉದಾರವಾದಿ ಸನಾತನ ಪರಂಪರೆಯ ಬಗ್ಗೆ ಹೆಮ್ಮೆ ಬೆಳಸಿಕೊಳ್ಳಬೇಕು. ಅದಕ್ಕೆ ಬೇಕಾದ ಮಾರ್ಗದರ್ಶನವನ್ನು  ಮಕ್ಕಳಿಗೆ ನೀಡಬೇಕು ಎಂದು ತಿಳಿಸಿದರು.

ಜನರನ್ನು ಸಂಸ್ಕೃತಿ ಮತ್ತು ಸಂಪ್ರದಾಯಗಳ ಮೂಲಕ ಒಂದುಗೂಡಿಸಲು ಸಾವರ್ಕರ್ ಬಯಸಿದ್ದರು.  ಒಂದೇ ತಾಯಿಯ ಮಕ್ಕಳಾಗಿರುವ ನಮ್ಮ ನಡುವೆ  ಭಿನ್ನಾಭಿಪ್ರಾಯಗಳು ಏಕೆ? ಎಂದು ಸದಾ ಪ್ರಶ್ನೆ ಮಾಡುತ್ತಿದ್ದರು.  ನಾವೆಲ್ಲರೂ ದೇಶಕ್ಕಾಗಿ ಒಂದಾಗಿ ಹೋರಾಟ ಮಾಡೋಣ ಎಂಬುದೇ ಸಾವರ್ಕರ್ ಹಿಂದುತ್ವವಾಗಿತ್ತು ಎಂದು ಭಾಗವತ್ ಹೇಳಿದರು.

ಯಾವ ಸಂದರ್ಭದಲ್ಲಿಯೂ ಸಾವರ್ಕರ್ ಮುಸ್ಲಿಮರ ವೈರಿಯಾಗಿ ನಡೆದುಕೊಳ್ಳಲಿಲ್ಲ. ಉರ್ದು ಭಾಷೆಯಲ್ಲಿ ಅವರು ಅನೇಕ ಗಝಲ್ ಬರೆದಿದ್ದಾರೆ. ಮುಸ್ಲಿಮರನ್ನು, ಉರ್ದುವನ್ನು ದ್ವೇಷ ಮಾಡುತ್ತಿರಲಿಲ್ಲ.  ದೇಶಕ್ಕಾಗಿ ಹೋರಾಟ ಮಾಡಿದ ಗಾಂಧೀಜಿ , ಅಂಬೇಡ್ಕರ್ ಅವರನ್ನು ಎಲ್ಲರೂ ಆರಾಧಿಸುತ್ತಾರೆ. ಅದೇ ರೀತಿ ದೇಶಕ್ಕೆ ಕೊಡುಗೆ ನೀಡಿದ ಸಾವರ್ಕರ್  ಅವರನ್ನು ಟೀಕೆ ಮಾಡುತ್ತಾರೆ ಎಂದು ಭಾಗವತ್ ಹೇಳಿದರು.

 

click me!