ಪೈಲಟ್‌ಗಳಿಗೆ ತೊಂದರೆ 'ಬುರ್ಜ್ ಖಲೀಫಾ' ಲೇಸರ್ ಶೋ ರದ್ದು!

By Suvarna NewsFirst Published Oct 13, 2021, 8:30 PM IST
Highlights

* ಪೈಲಟ್ ಗಳಿಗೆ ತೊಂದರೆ ಕೊಟ್ಟ ಲೇಸರ್ ಶೋ
* ದುರ್ಗಾಪೂಜೆ ನಿಮಿತ್ತ ನಿರ್ಮಿಸಿದ್ದ ಬುರ್ಜ್ ಖಲೀಫಾ ಹೋಲುವ ಪೆಂಡಾಲ್
* ವಿಮಾನ ಲ್ಯಾಂಡಿಂಗ್ ಗೆ ತೊಂದರೆ ಆಗುತ್ತಿದೆ

ಕೋಲ್ಕತ್ತಾ(ಅ. 13)   ದುಬೈನ ಬುರ್ಜ್ ಖಲೀಫಾ(Burj Khalifa) ಮಾದರಿಯ ಪೆಂಡಾಲ್ ಕೋಲ್ಕತ್ತಾದಲ್ಲಿಯೂ(Kolkata) ಇದ್ದು ಲೇಸರ್ ಶೋ (Laser show) ಮೂಲಕ ರಂಗು ಹೆಚ್ಚಿಸಾಗಿತ್ತು. ಆದರೆ ವಿಮಾನದ ಪೈಲಟ್ ಗಳು ಕಂಪ್ಲೆಂಟ್ ಮಾಡಿದ ಕಾರಣ ಲೇಸರ್ ಶೋ ಸ್ಥಗಿತಗೊಳಿಸಲಾಗಿದೆ.

ನೇತಾಜಿ ಸುಭಾಷ್ ಚಂದ್ರ ಬೋಸ್‌ ವಿಮಾನ(Netaji Subhash Chandra Bose Airport) ನಿಲ್ದಾಣಕ್ಕೆ ಲ್ಯಾಂಡಿಂಗ್‌ ಮಾಡಲು ಕಷ್ಟವಾಗುತ್ತಿದೆ ಎಂದು ಮೂವರು ಪೈಲಟ್ ಗಳು ದೂರು ನೀಡಿದ್ದರು.  ದುರ್ಗಾ ಪೂಜೆ ಕಾರಣಕ್ಕೆ ಮಾಡಿಕೊಂಡಿರುವ ಲೈಟಿಂಗ್ ಗಳು ತೊಂದರೆ ಕೊಟ್ಟಿದ್ದವು.  ಈ ಬಗ್ಗೆಯೂ ಪೈಲಟ್ ಗಳು ಆತಂಕ ತೋಡಿಕೊಂಡಿದ್ದರು.

ನವರಾತ್ರಿ ವೇಳೆ ದೇವಿ ಮೆಚ್ಚಿಸಲು ಏನು ಮಾಡಬೇಕು?

ದುರ್ಗಾಪೂಜೆಯ(Durga Poja)  ಪೆಂಡಾಲ್ ನ್ನು ದುಬೈ ಬುರ್ಜ್ ಖಲೀಫಾ ಮಾದರಿಯಲ್ಲಿ ನಿರ್ಮಾಣ ಮಾಡಲಾಗಿತ್ತು.  ಕೋಲ್ಕತ್ತಾ ವಿಮಾನ ನಿಲ್ದಾಣ ಸಹ ಸನಿಹದಲ್ಲಿಯೇ ಇದೆ. ವಿಮಾನ ನಿಲ್ದಾಣಗಳ ಪ್ರಾಧಿಕಾರ ಹೇಳಿದ ಎತ್ತರಕ್ಕೆ ಇದು ಸಮನಾಗಿದ್ದರೂ ಲೇಸರ್ ಶೋ ತೊಂದರೆ ಕೊಟ್ಟಿದೆ.  ಸಿಎಂ ಮಮತಾ ಬ್ಯಾನರ್ಜಿ ಪೆಂಡಾಲ್ ಮತ್ತು ಶೋ ಉದ್ಘಾಟನೆ ಮಾಡಿದ್ದರು. ದುಬೈಗೆ ಹೋಗಿ ಮಾಹಿತಿ ಪಡೆದುಕೊಂಡು ಬಂದ ಸಂಘಟಕರು ಹೊಸ ಸಾಹಸ ಮಾಡಿದ್ದರು. 

ಪಶ್ಚಿಮ ಬಂಗಾಳದಲ್ಲಿ ದುರ್ಗಾಪೂಜೆಗೆ ವಿಶಿಷ್ಟ ಸ್ಥಾನ. ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ. ವಿಮಾನ ನಿಲ್ದಾಣದ ಸಮೀಪದಲ್ಲಿಯೇ ಲೇಸರ್ ಶೋ ಇದ್ದ ಕಾರಣ ಸಮಸ್ಯೆಯಾಗಿದ್ದು  ಈಗ ಪರಿಹಾರ ಸಿಕ್ಕಂತೆ ಆಗಿದೆ. 

click me!