ಮುಸ್ಲಿಂ ಸ್ತ್ರೀಯರ ಮಸೀದಿ ಪ್ರವೇಶ ನಿರ್ಬಂಧವಿಲ್ಲ, ಆದರೆ ಕೆಲವು ಶಿಸ್ತು ಪಾಲಿಸಬೇಕು:: ಮುಸ್ಲಿಂ ಮಂಡಳಿ

Kannadaprabha News   | Kannada Prabha
Published : Apr 25, 2026, 04:41 AM IST
Muslim women mosque entry rules No Restrictio saysn Muslim Personal Law Board rav

ಸಾರಾಂಶ

Muslim women mosque entry rules ಮುಸ್ಲಿಂ ಮಹಿಳೆಯರು ನಮಾಜ್‌ಗಾಗಿ ಮಸೀದಿ ಪ್ರವೇಶಿಸಲು ಯಾವುದೇ ನಿರ್ಬಂಧವಿಲ್ಲ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಸುಪ್ರೀಂ ಕೋರ್ಟ್‌ಗೆ ಸ್ಪಷ್ಟಪಡಿಸಿದೆ. ಕೆಲವು ಶಿಸ್ತುಗಳನ್ನು ಪಾಲಿಸಬೇಕು ಎಂದು ಮಂಡಳಿ ತಿಳಿಸಿದೆ.

- ಮುಖ್ಯ ದ್ವಾರದಿಂದ ಪ್ರವೇಶಕ್ಕೆ ಒತ್ತಾಯಿಸುವಂತಿಲ್ಲ: ಮಂಡಳಿ

ನವದೆಹಲಿ (ಏ.25): ‘ಮುಸ್ಲಿಂ ಮಹಿಳೆಯರು ನಮಾಜ್‌ ಪ್ರಾರ್ಥನೆಗಾಗಿ ಮಸೀದಿ ಪ್ರವೇಶಿಸುವುದಕ್ಕೆ ನಿರ್ಬಂಧವಿಲ್ಲ. ಆದರೆ ಮಹಿಳೆಯರು ನಿರ್ದಿಷ್ಟ ದ್ವಾರದ ಮೂಲಕ ಪ್ರವೇಶಿಸಬೇಕು ಎಂದು ಒತ್ತಾಯಿಸುವಂತಿಲ್ಲ ಅಥವಾ ಪುರುಷ ಮತ್ತು ಮಹಿಳೆಯರ ನಡುವಿನ ಪರದೆಯನ್ನು ತೆಗೆದು ಹಾಕುವಂತೆ ಪಟ್ಟು ಹಿಡಿಯುವಂತಿಲ್ಲ’ ಎಂದು ಅಖಿಲ ಭಾರತೀಯ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ (ಐಎಂಪಿಎಲ್‌ಬಿ) ಸುಪ್ರೀಂ ಕೋರ್ಟ್‌ಗೆ ಸ್ಪಷ್ಟನೆ ನೀಡಿದೆ.

ಶಬರಿಮಲೆ ಸೇರಿ ಧಾರ್ಮಿಕ ಸಂಸ್ಥೆಗಳಲ್ಲಿ ಮಹಿಳೆಯರ ಪ್ರವೇಶ ಕುರಿತಂತೆ ನಡೆಯುತ್ತಿರುವ ವ್ಯಾಜ್ಯದ ವೇಳೆ ಮಂಡಳಿ ಈ ಹೇಳಿಕೆ ನೀಡಿದೆ.

ವಿಚಾರಣೆ ವೇಳೆ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್ ಮಹಿಳೆಯರಿಗೆ ‘ಮಸೀದಿಗಳಿಗೆ ಪ್ರವೇಶಿಸಲು ಅವಕಾಶವಿದೆಯೇ?’ ಎಐಎಂಪಿಎಲ್‌ಬಿ ಪರ ವಕೀಲರನ್ನು ಪ್ರಶ್ನಿಸಿದರು.

ಆಗ ಅವರು 'ಇಸ್ಲಾಂ ಲಿಖಿತ ಧರ್ಮವಾಗಿದೆ. ಇಲ್ಲಿ ಸ್ಪಷ್ಟವಾಗಿ ಮತ್ತು ವಿಸ್ತಾರವಾಗಿ ಯಾವುದನ್ನು ನಿಷೇಧ, ಕಡ್ಡಾಯ, ಶಿಫಾರಸು ಮಾಡಲಾಗಿದೆ ಎನ್ನುವ ಮಾರ್ಗದರ್ಶನವಿದೆ. ಮುಸ್ಲಿಂ ಮಹಿಳೆಯರು ಮಸೀದಿಗಳಿಗೆ ಪ್ರವೇಶಿಸಲು ಮತ್ತು ಪ್ರಾರ್ಥನೆ ಸಲ್ಲಿಸಲು ಅನುಮತಿಯಿದೆ. ಆದರೆ ಕೆಲವು ಶಿಸ್ತುಗಳನ್ನು ಅನುಸರಿಸಬೇಕು. ಮುಖ್ಯದ್ವಾರದ ಮೂಲಕ ಪ್ರವೇಶಿಸಲು ಒತ್ತಾಯಿಸಬಾರದು. ಮಸೀದಿಗಳ ಒಳಗೆ ಪುರುಷರು, ಮಹಿಳೆಯರನ್ನು ಬೇರ್ಪಡಿಸುವಿಕೆಯನ್ನು ತೆಗೆದು ಹಾಕುವಂತೆ ಒತ್ತಾಯಿಸುವಂತಿಲ್ಲ’ ಎಂದು ಕೋರ್ಟ್‌ ಗಮನಕ್ಕೆ ತಂದರು.

ಇದೇ ವೇಳೆ ‘ಪುರುಷರಿಗೆ ಮಸೀದಿಗಳಲ್ಲಿ ಸಾಮೂಹಿಕ ಪ್ರಾರ್ಥನೆ ಕಡ್ಡಾಯವಾಗಿದ್ದರೂ ಮಹಿಳೆಯರಿಗೆ ಕಡ್ಡಾಯವಲ್ಲ’ ಎಂದು ಎಐಎಂಪಿಎಲ್‌ಬಿ ಹೇಳಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

500 ಕೋಟಿ ಊಟ ದಾನ ಮಾಡಿದ ಅಕ್ಷಯಪಾತ್ರ: ಗೌರವಾನ್ವಿತ ರಾಷ್ಟ್ರಪತಿ ದೌಪದಿ ಮುರ್ಮು ಅವರಿಂದ ಶ್ಲಾಘನೆ
ಇದು ನನ್ನ ಮಗು, ನಿಮ್ಗೆ ಕೊಡಲ್ಲ: ಮನೆಗೆ ನುಗ್ಗಿ 3 ತಿಂಗಳ ಕಂದನ ಹಿಡಿದಿಟ್ಟುಕೊಂಡ ಕೋತಿ- ವಿಡಿಯೋ ವೈರಲ್​