ಲಾಕ್‌ಡೌನ್ ವಿಸ್ತರಣೆ?: IRCTC ಬುಕಿಂಗ್‌ 30ರವರೆಗೂ ರದ್ದು!

By Suvarna News  |  First Published Apr 8, 2020, 11:18 AM IST

ಐಆರ್‌ಸಿಟಿಸಿ ಬುಕಿಂಗ್‌ 30ರವರೆಗೂ ರದ್ದು| ವಿಸ್ತರಣೆಯಾಗುತ್ತಾ ಲಾಕ್‌ಡೌನ್?| ‘ತೇಜಸ್‌ ಎಕ್ಸ್‌ಪ್ರೆಸ್‌’ ಹಾಗೂ ಅಹಮದಾಬಾದ್‌ ಮುಂಬೈ ‘ತೇಜಸ್‌ ಎಕ್ಸ್‌ಪ್ರೆಸ್‌’ ರೈಲುಗಳೇ ರದ್ದು


ನವದೆಹಲಿ(ಏ.08): ಕೊರೋನಾ ವೈರಸ್‌ ಹರಡುವಿಕೆ ಹಿನ್ನೆಲೆಯಲ್ಲಿ ರೈಲ್ವೆಯ ಅಂಗಸಂಸ್ಥೆ ‘ಐಆರ್‌ಸಿಟಿಸಿ’ ಓಡಿಸುತ್ತಿರುವ 3 ಪ್ರವಾಸಿ ರೈಲು ಸಂಚಾರ ರದ್ದತಿಯನ್ನು ಏಪ್ರಿಲ್‌ 30ರವರೆಗೆ ವಿಸ್ತರಿಸಲಾಗಿದೆ. ಇದರಿಂದಾಗಿ ಕೊರೋನಾ ಲಾಕ್‌ಡೌನ್‌ ಮಾಸಾಂತ್ಯದವರೆಗೆ ಮುಂದುವರಿಯುತ್ತಾ ಎಂಬ ಅನುಮಾನ ಮೂಡಿದೆ.

ವಾರಾಣಸಿ-ಇಂದೋರ್‌ ‘ಕಾಶಿ ಮಹಾಕಾಲ ಎಕ್ಸ್‌ಪ್ರೆಸ್‌’, ಲಖನೌ-ದೆಹಲಿ ‘ತೇಜಸ್‌ ಎಕ್ಸ್‌ಪ್ರೆಸ್‌’ ಹಾಗೂ ಅಹಮದಾಬಾದ್‌ ಮುಂಬೈ ‘ತೇಜಸ್‌ ಎಕ್ಸ್‌ಪ್ರೆಸ್‌’ ರೈಲುಗಳೇ ರದ್ದಾದವು. ಈ ಹಿಂದೆಯೇ ಮಾಚ್‌ರ್‍ 25ರಿಂದ ಏಪ್ರಿಲ್‌ 14ರವರೆಗೆ ಈ ರೈಲು ಸಂಚಾರ ರದ್ದುಗೊಳಿಸಲಾಗಿತ್ತು. ಏ.14ರ ನಂತರ ಬುಕ್ಕಿಂಗ್‌ಗೆ ಅವಕಾಶ ಕಲ್ಪಿಸಲಾಗಿತ್ತು.

Tap to resize

Latest Videos

ಹೀಗಾಗಿ ಏ.14ರಿಂದ 30ರವರೆಗೆ ಬುಕ್ಕಿಂಗ್‌ ಮಾಡಿದವರ ಹಣ ವಾಪಸು ಮರಳಿಸುವುದಾಗಿ ಐಆರ್‌ಸಿಟಿಸಿ ಹೇಳಿದೆ.

"

click me!