
ನವದೆಹಲಿ(ಏ.08): ಕೊರೋನಾ ವೈರಸ್ ನಿಯಂತ್ರಿಸುವ ಸಲುವಾಗಿ ದೇಶದಾದ್ಯಂತ ಇಪ್ಪತ್ತೊಂದು ದಿನಗಳ ಲಾಕ್‌ಡೌನ್ ಹೇರಲಾಗಿದೆ. ಹೀಗಿರುವಾಗ ಜನರನ್ನು ಮನೆಯಲ್ಲೇ ಇರುವಂತೆ ಪಿಎಂ ಮೋದಿ ಮನವಿ ಮಾಡಿಕೊಂಡಿದ್ದಾರೆ. ಹೀಗಿದ್ದರೂ ಅನೇಕ ಮಂದಿ ಲಾಕ್‌ಡೌನ್ ಉಲ್ಲಂಘಿಸುತ್ತಿದ್ದಾರೆ. ಇಂತವರ ವಿರುದ್ಧ ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳ್ಳಲಾರಂಭಿಸಿದೆ.
ಹೌದು ಪಿಎಂ ಮೋದಿ ಖುದ್ದು ಜನರ ಬಳಿ ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಇದರಿಂದ ಮಾತ್ರ ಕೊರೋನಾ ನಿಯಂತ್ರಿಸಲು ಸಾಧ್ಯ ಎಂದಿದ್ದಾರೆ. ಹೀಗಿದ್ದರೂ ಗಂಭೀತೆ ಅರಿಯದ ಜನರ ತಂಡವೊಂದು ಮನೆಯ ಟೆರೇಸ್ ಮೇಲೆ ಗುಂಪು ಕಟ್ಟಿ ಇಸ್ಪೀಟ್ ಆಟ ಆಡಲಾರಂಭಿಸಿದ್ದಾರೆ. ಆದರೆ ಪೊಲೀಸರು ಕೂಡಾ ಇಂತಹವರನ್ನು ತಡೆಯಲು ಉಪಾಯ ಕಂಡುಕೊಂಡಿದ್ದಾರೆ.
ಟಿಕ್‌ಟಾಕ್‌ನಲ್ಲಿ ವಿಡಿಯೋ ಒಂದು ಭಾರೀ ವೈರಲ್ ಆಗುತ್ತಿದ್ದು, ಇದರಲ್ಲಿ ಜನರ ತಂಡವೊಂದು ಇಸ್ಪೀಟ್ ಆಡುತ್ತಿರುವ ದೃಶ್ಯಗಳು ಕಂಡು ಬಂದಿವೆ. ಜನರುಉ ಮನೆಯಿಂದ ಹೊರ ಬಂದಿಲ್ಲ ಆದರೆ, ಟೆರೇಸ್ ಮೇಲೆ ಗುಂಪು ಕಟ್ಟಿಕೊಂಡು ನಿಯಮಗಳನ್ನು ಉಲ್ಲಂಘಿಸುತ್ತಿದ್ದಾರೆ. ಇವರಿಗಗೆ ಆಠ ಕಲಿಸಲು ಉಪಾಯ ಕಂಡುಕೊಂಡ ಪೊಲೀಸರು ಡ್ರೋನ್ ಕ್ಯಾಮರಾ ಮೂಲಕ ಅಂತಹವರನ್ನು ಪತ್ತೆಹಚ್ಚಿದೆ.
ಇನ್ನು ಡ್ರೋನ್ ಕ್ಯಾಮೆರಾ ಕಂಡಿದ್ದೇ ತಡ ಜನರು ದಿಕ್ಕಾಪಾಲಾಗಿ ಓಡಿ ಹೋಗಿ ತಮ್ಮ ಮನೆ ಸೇರಿಕೊಂಡಿದ್ದಾರೆ. ಇದೇ ವೇಳೆ ಪೊಲೀಸರು ಮೈಕ್ ಮೂಲಕ ಡ್ರೋನ್‌ನಲ್ಲಿ ನಿಮ್ಮ ಮೇಲೆ ನಿಗಾ ಇಡಲಾಗುತ್ತಿದೆ. ಹೀಗೆ ಗುಂಪುಉ ಕಟ್ಟಿ ನಿಯಮ ಉಲ್ಲಂಘಿಸುವವರನ್ನು ಗುರುತಿಸಿ ಶಿಕ್ಷೆಗೊಳಪಡಿಸುವುದಾಗಿಯೂ ಹೇಳಿದ್ದಾರೆ.
"
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ