
ಕೊಚ್ಚಿ: ಸಂತಾನ ಪಡೆಯುವ ಮುನ್ನವೇ ಗಂಭೀರ ಆರೋಗ್ಯ ಸಮಸ್ಯೆಯಿಂದಾಗಿ ಹಾಸಿಗೆ ಹಿಡಿದಿರುವ ಪತಿಯ ವೀರ್ಯವನ್ನು ವೈದ್ಯಕೀಯ ವಿಧಾನದಲ್ಲಿ ಪಡೆದು, ಕೃತಕ ಗರ್ಭಧಾರಣೆ ಉದ್ದೇಶಕ್ಕಾಗಿ ಅದನ್ನು ಸಂಗ್ರಹಿಸಿಡಲು ಅನುಮತಿ ನೀಡಬೇಕೆಂಬ ಪತ್ನಿಯ ಬೇಡಿಕೆಗೆ ಕೇರಳ ಹೈಕೋರ್ಟ್ ಅನುಮತಿ ನೀಡಿದೆ. ತನ್ಮೂಲಕ ಮರಣಶಯ್ಯೆಯಲ್ಲಿರುವ ಪತಿಯಿಂದಲೇ ಸಂತಾನಭಾಗ್ಯ ಹೊಂದಲು ಬಯಸುತ್ತಿರುವ ಮಹಿಳೆಯ ನೆರವಿಗೆ ಧಾವಿಸಿದೆ. ಪತಿಯ ವೈದ್ಯಕೀಯ ಸ್ಥಿತಿ ಗಂಭೀರವಾಗಿದೆ. ದಿನೇ ದಿನೇ ಪರಿಸ್ಥಿತಿ ಬಿಗಡಾಯಿಸುತ್ತಿದೆ. ಹೀಗಾಗಿ ಪತಿಯ ಅನುಮತಿ ಇಲ್ಲದೆಯೂ ವೀರ್ಯ ಪಡೆಯಲು ಕೋರ್ಟ್ ಅನುಮತಿ ನೀಡಿದೆ.
ನೆರವಿನಿಂದ ಕೂಡಿದ ಸಂತಾನಭಾಗ್ಯ ತಂತ್ರಜ್ಞಾನ ನಿಯಂತ್ರಣ ಕಾಯ್ದೆಯಡಿ ವೀರ್ಯ ಪಡೆಯಲು ಪತಿಯ ಒಪ್ಪಿಗೆ ಬೇಕು. ಆದರೆ ಪತಿ ಒಪ್ಪಿಗೆ ನೀಡುವ ಸ್ಥಿತಿ ಇಲ್ಲ. ಈ ವಿಷಯದಲ್ಲಿ ವಿಳಂಬ ಮಾಡಿದಷ್ಟೂ ತೊಂದರೆಯಾಗುತ್ತದೆ ಎಂದು ಮಹಿಳೆಯ ಪರ ವಕೀಲರು ವಾದಿಸಿದರು. ಅದರಂತೆ ಮರಣಶಯ್ಯೆಯಲ್ಲಿರುವ ಪತಿಯ ದೇಹದಿಂದ ವೀರ್ಯವನ್ನು ಸಂಗ್ರಹಿಸಿ ಅದನ್ನು ಶೇಖರಿಸಿಡಲು ನ್ಯಾಯಾಲಯ ಒಪ್ಪಿಗೆ ನೀಡಿದೆ. ಆದರೆ ಕೃತಕ ಗರ್ಭಧಾರಣೆ ಪ್ರಕ್ರಿಯೆಯಡಿ ಮುಂದಿನ ಯಾವುದೇ ಕ್ರಮವನ್ನು ತನ್ನ ಒಪ್ಪಿಗೆ ಇಲ್ಲದೆ ನಡೆಸಕೂಡದು ಎಂದು ಹೇಳಿ ವಿಚಾರಣೆಯನ್ನು ಸೆ.9ಕ್ಕೆ ಮುಂದೂಡಿದೆ.
ಮಹಿಳೆಯರನ್ನು ಗರ್ಭಿಣಿಯನ್ನಾಗಿಸಿ ಲಕ್ಷಾಂತರ ರೂಪಾಯಿ ನಿಮ್ಮದಾಗಿಸಿಕೊಳ್ಳಿ; ಜಾಹೀರಾತು ವೈರಲ್
ನ್ಯಾಯಾಲಯದ ಅನುಮತಿಯಿಂದಾಗಿ ಸಾವು-ಬದುಕಿನ ನಡುವೆ ಹೋರಾಡುತ್ತಿರುವ ಪತಿಯ ವೀರ್ಯವನ್ನು ಸಂಗ್ರಹಿಸಿಟ್ಟುಕೊಂಡು, ಭವಿಷ್ಯದಲ್ಲಿ ನ್ಯಾಯಾಲಯದ ಅನುಮತಿ ಪಡೆದು ಮಗು ಪಡೆಯಲು ಮಹಿಳೆಗೆ ಅನುಕೂಲವಾಗಿದೆ.
ಸಂತಾನ ಭಾಗ್ಯವಿಲ್ಲದ್ದಕ್ಕೆ ಐವಿಫ್ ಮತ್ತು ಸರೋಗಸಿ ಮೂಲಕ ಮಕ್ಕಳನ್ನು ಪಡೆದ ತಾರೆಯರು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ