
ಪುಣೆ(ಮಾ.20): ದೇಶದ ಅತೀ ಶ್ರೀಮಂತ ನಗರ ಪಾಲಿಕೆಗಳಲ್ಲಿ ಒಂದಾಗಿರುವ ಮಹಾರಾಷ್ಟ್ರದ ಪುಣೆ ನಗರ ಪಾಲಿಕೆಯು ತನ್ನ ವ್ಯಾಪ್ತಿಯ ಶಾಲೆಯೊಂದಕ್ಕೆ ಮಧ್ಯಾಹ್ನದ ಊಟ ಕಳಿಸುವ ಬದಲಿಗೆ ದನದ ಪೌಷ್ಠಿಕಾಂಶ ಆಹಾರ ರವಾನಿಸಿ ಎಡವಟ್ಟು ಮಾಡಿದೆ.
ಈ ಬಗ್ಗೆ ಶುಕ್ರವಾರ ಮಾತನಾಡಿದ ಪುಣೆ ಮೇಯರ್ ಮುರಳೀಧರ್ ಮೊಹಲ್, ‘ವಿದ್ಯಾರ್ಥಿಗಳ ಮಧ್ಯಾಹ್ನದ ಊಟಕ್ಕೆ ದನದ ಮೇವು ಕಳಿಸಿರುವುದು ಅಕ್ಷಮ್ಯ. ಈ ಘಟನೆಗೆ ಕಾರಣರಾದವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ’ ಎಂದು ಹೇಳಿದ್ದಾರೆ.
ಆಗಿದ್ದೇನು?: ಕೊರೋನಾ ಲಾಕ್ಡೌನ್ ಹಿನ್ನೆಲೆಯಲ್ಲಿ ಮಹಾರಾಷ್ಟ್ರದಾದ್ಯಂತ ಇರುವ ಶಾಲೆಗಳನ್ನು ಮುಚ್ಚಲಾಗಿದೆ. ಆದಾಗ್ಯೂ, ಶಾಲಾ ಮಕ್ಕಳಿಗೆ ಮಧ್ಯಾಹ್ನದ ಊಟ ಸರಬರಾಜು ಆಗುವಂತೆ ನೋಡಿಕೊಳ್ಳುವ ಜವಾಬ್ದಾರಿಯನ್ನು ಶಾಲೆಗಳಿಗೆ ವಹಿಸಲಾಗಿದೆ. ಈ ಪ್ರಕಾರ ರಾಜ್ಯದೆಲ್ಲೆಡೆ ಎಲ್ಲಾ ಮಕ್ಕಳಿಗೂ ಮಧ್ಯಾಹ್ನದ ಊಟಕ್ಕಾಗಿ ಆಹಾರ ಧಾನ್ಯಗಳನ್ನು ಪೂರೈಸಲಾಗುತ್ತಿದೆ. ಅದೇ ರೀತಿ ಪುಣೆ ನಗರ ಪಾಲಿಕೆ ವ್ಯಾಪ್ತಿಗೆ ಬರುವ 58 ವಿದ್ಯಾರ್ಥಿಗಳನ್ನು ಒಳಗೊಂಡ ಪಾಲಿಕೆ ಶಾಲೆಗೆ ಇತ್ತೀಚೆಗಷ್ಟೇ ದನಗಳಿಗೆ ಇಡಬಹುದಾದ ಪೋಷ್ಠಿಕಾಂಶದ ಆಹಾರಗಳನ್ನು ಪೂರೈಸಲಾಗಿದೆ.
ಈ ಆಹಾರದ ಪೊಟ್ಟಣಗಳನ್ನು ಕಂಡು ಶಾಲಾ ಸಿಬ್ಬಂದಿಯೇ ಒಂದು ಕ್ಷಣ ದಂಗಾಗಿದ್ದಾರೆ. ಈ ವಿಚಾರ ಭಾರತೀಯ ಆಹಾರ ಗುಣಮಟ್ಟಮತ್ತು ಸುರಕ್ಷತಾ ಪ್ರಾಧಿಕಾರ(ಎಪ್ಎಸ್ಎಸ್ಎಐ)ಕ್ಕೆ ಮುಟ್ಟಿದ್ದು, ದನದ ಆಹಾರವನ್ನು ವಶಕ್ಕೆ ಪಡೆದುಕೊಂಡಿದೆ
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ